ಬುದ್ಧಿವಂತ ನಾಣ್ಯ
Team Udayavani, Jan 10, 2019, 12:30 AM IST
ಪ್ರದರ್ಶನ:
ಒಂದು ಕಾರ್ಡ್‌ನಲ್ಲಿ ನಾಣ್ಯಕ್ಕಿಂತ ಚಿಕ್ಕದಾದ ಒಂದು ರಂಧ್ರ ಮಾಡಿ ನಾಣ್ಯವನ್ನು ಅದರಿಂದ ತೂರಿಸಲು ಪ್ರಯತ್ನಿಸುತ್ತಾನೆ. ಸಾಧ್ಯವಾಗುವುದಿಲ್ಲ. ಪ್ರೇಕ್ಷಕರಿಗೂ ಕೂಡ ಪ್ರಯತ್ನಿಸಲು ಕೊಡುತ್ತಾನೆ. ಕತ್ತರಿಸಿರುವ ರಂಧ್ರ ನಾಣ್ಯಕ್ಕಿಂತ ಚಿಕ್ಕದಾದ ಕಾರಣ ನಾಣ್ಯ, ಒಂದು ಕಡೆ ತೂರಿ ಇನ್ನೊಂದು ಕಡೆ ಬರಲು ಸಾಧ್ಯವಾಗುವುದಿಲ್ಲ. ಈಗ ಜಾದೂಗಾರ ಅದೇ ಕಾರ್ಡನ್ನು ಮತ್ತೆ ಕೈಗೆತ್ತಿಕೊಂಡು ತನ್ನ ಯಕ್ಷಿಣಿ ಶಕ್ತಿಯಿಂದ ಆ ಚಿಕ್ಕದಾದ ರಂಧ್ರದಿಂದಲೇ ನಾಣ್ಯವನ್ನು ಸಲೀಸಾಗಿ ಹೊರಗೆಳೆಯುತ್ತಾನೆ!
ಬೇಕಾಗುವ ವಸ್ತುಗಳು:
ಒಂದು ಇಸ್ಪೀಟ್ ಕಾರ್ಡ್ ಅಥವಾ ವಿಸಿಟಿಂಗ್ ಕಾರ್ಡ್, ನಾಣ್ಯ, ಕತ್ತರಿ (ರಂಧ್ರವನ್ನು ಕತ್ತರಿಸಲು ದೊಡ್ಡವರ ಸಹಾಯ ಪಡೆದುಕೊಳ್ಳಿ)
ಮಾಡುವ ವಿಧಾನ:
ಒಂದು ಕಾರ್ಡನ್ನು ಮಧ್ಯ ಭಾಗದಲ್ಲಿ ಮಡಚಿ, ಅರ್ಧ ಚಂದ್ರಾಕೃತಿಯಲ್ಲಿ ಕತ್ತರಿಸಿ. (ಚಿತ್ರವನ್ನು ಗಮನಿಸಿ) ಮಡಚಿರುವ ಕಾರ್ಡನ್ನು ಬಿಡಿಸಿದರೆ ಮಧ್ಯಭಾಗದಲ್ಲಿ ಒಂದು ರಂಧ್ರವಾಗಿರುತ್ತದೆ. ಈ ರಂಧ್ರ ನಾಣ್ಯಕ್ಕಿಂತಲೂ ಚಿಕ್ಕದಾಗಿರಬೇಕೆಂಬುದನ್ನು ನೆನಪಿನಲ್ಲಿಡಿ. ಈಗ ಆ ಕತ್ತರಿಸಿದ ವೃತ್ತದ ಕೆಳಗೆ ಕಾರ್ಡಿನ ಒಂದು ಭಾಗದಲ್ಲಿ, ನಾಣ್ಯ ತೂರುವಷ್ಟುದ್ದದ ಗೆರೆಯನ್ನು ಹಾಕಿಕೊಂಡು, ಕತ್ತರಿ ಅಥವಾ ಬ್ಲೇಡಿನ ಸಹಾಯದಿಂದ ಕತ್ತರಿಸಿ. ಪುನಃ ಕಾರ್ಡನ್ನು ಮಡಚಿ ಗೆರೆ ಹಾಕಿದ ಭಾಗವನ್ನು ಹಿಂದಕ್ಕೆ ಬರುವಂತೆ ಹಿಡಿದು, ನಾಣ್ಯವನ್ನು ಮಡಚಿದ ಭಾಗದಿಂದ ತೂತಿನೆಡೆಗೆ ತೂರಿಸಲು ಕಾರ್ಡ್ ಒಳಗೆ ಸೇರಿಸುವ ಹಾಗೆ ನಟಿಸುತ್ತಾ ನಾಣ್ಯವನ್ನು ಕತ್ತರಿಸಿದ ಗೆರೆಯೊಳಗಿಂದ ತೂರಿಸಿ ಕಾರ್ಡಿನ ಹಿಂಭಾಗಕ್ಕೆ ಎಳೆದೊಯ್ದು ನಾಣ್ಯವನ್ನು ಕತ್ತರಿಸಿದ ರಂಧ್ರದ ಪಕ್ಕದಿಂದ ಹೊರತೆಗೆಯಿರಿ. ಪ್ರೇಕ್ಷಕರಿಗೆ ನಾಣ್ಯ ರಂಧ್ರದಿಂದಲೇ ಹೊರ ಬಂದಿತೆನಿಸುತ್ತದೆ. ಈ ಟ್ರಿಕ್ಕನ್ನು ಸುಲಭವಾಗಿ ಕಲಿಯಲು ಗಾಯತ್ರಿ ಯತಿರಾಜ್ ಯೂಟ್ಯೂಬ್ ಚಾನಲ್‌ಗೆ ಭೇಟಿ ಕೊಡಿ.
ವೀಡಿಯೊ ಕೊಂಡಿ- goo.gl/Xt66Ha
ಗಾಯತ್ರಿ ಯತಿರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.