ಐಸಿಸಿಯ 105ನೇ ಸದಸ್ಯ ರಾಷ್ಟ್ರವಾಗಿ ಅಮೆರಿಕ
Team Udayavani, Jan 10, 2019, 12:30 AM IST
ದುಬಾೖ: ಅಮೆರಿಕ ಕ್ರಿಕೆಟಿಗೆ ಐಸಿಸಿ ಮಾನ್ಯತೆ ಲಭಿಸಿದೆ. ಇದು ಐಸಿಸಿಯ 105ನೇ ಸದಸ್ಯ ರಾಷ್ಟ್ರವಾಗಿದೆ.
ಯುನೈಟೆಡ್ ಸ್ಟೇಟ್ಸ್ನಲ್ಲಿ ಕ್ರಿಕೆಟ್ ಅಭಿವೃದ್ಧಿಗಾಗಿ 2017ರಲ್ಲಿ ಅಮೆರಿಕ ಕ್ರಿಕೆಟ್ ಮಂಡಳಿಯನ್ನು ಸ್ಥಾಪಿಸಲಾಗಿತ್ತು. ಐಸಿಸಿಯ ಸದಸ್ಯ ರಾಷ್ಟ್ರವಾಗಲು ಅಮೆರಿಕ ಸಲ್ಲಿಸಿದ ಅರ್ಜಿಯನ್ನು ಐಸಿಸಿ ಅನುಮೋದಿಸಿದೆ. ಐಸಿಸಿ ಸದಸ್ಯ ರಾಷ್ಟ್ರವಾದ ಬಳಿಕ, ಐಸಿಸಿ ಅಭಿವೃದ್ಧಿ ಹಣಕಾಸು ನೀತಿಗೆ ಅನುಗುಣವಾಗಿ ಅಮೆರಿಕ ಕ್ರಿಕೆಟ್ ಮಂಡಳಿ ಆರ್ಥಿಕ ನೆರವು ಪಡೆಯಲಿದೆ. ಜತೆಗೆ ಅಮೆರಿಕದಲ್ಲಿ ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಅಯೋಜನೆಗೆ ಅನುಮತಿಯನ್ನೂ ನೀಡಲಾಗುವುದು.
“ಕಠಿನ ಪರಿಶ್ರಮದ ಫಲವಾಗಿ ಅಮೆರಿಕ ಕ್ರಿಕೆಟ್ ಮಂಡಳಿಗೆ ಅತ್ಯುನ್ನತ ಸ್ಥಾನ ದೊರಕಿದೆ. ಇದಕ್ಕಾಗಿ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಪರಾಗ್ ಮರಾಠೆ ಹಾಗೂ ಕ್ರಿಕೆಟ್ ಮಂಡಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅಮೆರಿಕ ಕ್ರಿಕೆಟಿನಲ್ಲಿ ಇದೊಂದು ಮೈಲುಗಲ್ಲಾಗಿದೆ. ನನ್ನ ಶುಭ ಹಾರೈಕೆಗಳು’ ಎಂದು ಐಸಿಸಿ ಮುಖ್ಯ ಕಾರ್ಯದರ್ಶಿ ಡೇವಿಡ್ ರಿಚರ್ಡ್ಸನ್ ಈ ಸಂದರ್ಭದಲ್ಲಿ ಹೇಳಿದರು.
ವಿಶ್ವ ಕ್ರಿಕೆಟಿನ ಅಭಿವೃದ್ಧಿ
“ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದಲ್ಲಿ ಕ್ರಿಕೆಟ್ ಅಭಿವೃದ್ಧಿಗಾಗಿ ಯುಸ್ಎ ಕ್ರಿಕೆಟ್ ಮಂಡಳಿಯನ್ನು ಸ್ಥಾಪಿಸಲಾಗಿದೆ. ಅಮೆರಿಕದಲ್ಲಿ ಕ್ರಿಕೆಟಿನ ನೂತನ ಪಯಣ ಆರಂಭವಾಗಲಿದೆ. ಅಮೆರಿಕವನ್ನು ಐಸಿಸಿ ಸದಸ್ಯ ರಾಷ್ಟ್ರವನ್ನಾಗಿ ಮಾಡಲು ನಿರ್ಧರಿಸಿದ ಕಳೆದ 18 ತಿಂಗಳು ಶ್ರಮಪಟ್ಟ ಸಾವಿರಾರು ಸ್ವಯಂಸೇವಕರ ಸಮಯ ಹಾಗೂ ತ್ಯಾಗಕ್ಕೆ ಸಿಕ್ಕ ಫಲವಿದು. ಈ ಮೂಲಕ ವಿಶ್ವ ಕ್ರಿಕೆಟಿನ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂಬ ಪ್ರತಿಜ್ಞೆ ಮಾಡುತ್ತೇವೆ’ ಎಂದು ಯುಎಸ್ಎ ಕ್ರಿಕೆಟಿನ ಅಧ್ಯಕ್ಷ, ಭಾರತೀಯ ಮೂಲದ ಪರಾಗ್ ಮರಾಠೆ ಆತ್ಮವಿಶ್ವಾಸದಿಂದ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.