ಸಮಯಸಾಧಕತೆಯ ಕೋಟಾ ಬಿಲ್ ಮಂಡನೆಯನ್ನು ಪ್ರಶ್ನಿಸಿದ ವಿಪಕ್ಷ
Team Udayavani, Jan 9, 2019, 12:54 PM IST
ಹೊಸದಿಲ್ಲಿ : ಆರ್ಥಿಕವಾಗಿ ಹಿಂದುಳಿದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10ರ ಮೀಸಲಾತಿಯನ್ನು ಕಲ್ಪಿಸುವ ಮಸೂದಯನ್ನು ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಸರಕಾರ ಮಂಡಿಸಿದ್ದು ಇದು ಬಿಜೆಪಿಯ ಚುನಾವಣಾ ರಾಜಕೀಯವಾಗಿದೆ ಎಂದು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ರಾಜ್ಯ ಸಭೆಯಲ್ಲಿ ಇಂದು ಬುಧವಾರ ಎನ್‌ಡಿಎ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡವು.
ದೇಶದ ಅತ್ಯುನ್ನತ ಸಂಸ್ಥೆಯಾಗಿರುವ ಪ್ರಜಾಸತ್ತೆಗೆ ತೋರಿರುವ ಅಗೌರವ ಇದಾಗಿದೆ ಎಂದು ವಿರೋಧ ಪಕ್ಷಗಳು ಬೊಬ್ಬಿಟ್ಟವು.
ಸಂವಿಧಾನದ 124ನೇ ತಿದ್ದುಪಡಿಯಾಗಿ ಶೇ.10ರ ಮೀಸಲಾತಿ ಮಸೂದೆಯನ್ನು ಆರ್ಥಿಕವಾಗಿ ದುರ್ಬಲರಿರುವ ಜನರಿಗಾಗಿ ಲೋಕಸಭೆಯಲ್ಲಿ ಮಂಡಿಸಿ ಪಾಸು ಮಾಡಿಸಿಕೊಂಡಿರುವ ಸರಕಾರದ ಕ್ರಮವು ಚುನಾವಣಾ ಗಿಮಿಕ್ ಆಗಿದೆ ಎಂದು ಕಾಂಗ್ರೆಸ್ ಆರೋಪಿಸಿತು.
ರಾಜ್ಯಸಭೆಯಲ್ಲಿಂದು ಬುಧವಾರ ಶೇ.10ರ ಮೀಸಲಾತಿ ಮಸೂದೆಯನ್ನು ತೀವ್ರ ಗದ್ದಲ, ಗಲಾಟೆಯ ನಡುವೆ ಮಂಡಿಸಲಾಯಿತು. ವಿರೋಧ ಪಕ್ಷಗಳು ಈ ಮಸೂದೆಯನ್ನು ಪರಿಶೀಲನೆಗಾಗಿ ಆಯ್ಕೆ ಸಮಿತಿಗೆ ಕಳುಹಿಸುವಂತೆ ಆಗ್ರಹಿಸಿದವು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.