ಹಲವು ವರ್ಷಗಳ ಕನಸು ನನಸಾದ ಸಂಭ್ರಮ
Team Udayavani, Jan 10, 2019, 9:27 AM IST
ಕಾಸರಗೋಡು : ಸಂಕಷ್ಟಗಳ ಸುರಿಮಳೆಯ ನಡುವೆ ರಾಜೀವ್ ಅವರಿಗೆ ಭೂಹಕ್ಕು ಪತ್ರ ವಿತರಣೆ ಮೇಳದಲ್ಲಿ ಸಿಕ್ಕಿದ 4 ಸೆಂಟ್ಸ್ ಜಾಗ ನಿರೀಕ್ಷೆಯ ಬೆಳಕಾಗಿದೆ. ಲಾಟರಿ ಮಾರಾಟ ಮೂಲಕ ಇತರರಿಗೆ ಭಾಗ್ಯದ ಅವಕಾಶಗಳನ್ನು ವಿತರಿಸುತ್ತಿದ್ದ ರಾಜೀವ್ ಅವರ ಪಾಲಿಗೆ ಸೌಭಾಗ್ಯ ಹತ್ತಿರಕ್ಕೂ ಸುಳಿಯುತ್ತಿರಲಿಲ್ಲ. ಅನೇಕ ವರ್ಷಗಳಿಂದ ಭೂಹಕ್ಕಿಗಾಗಿ ಕಾಯುತ್ತಿದ್ದ ರಾಜೀವ್ ಅವರಿಗೆ ಇಂದು ಭಾಗ್ಯ ಈ ಮೂಲಕ ಒಲಿದು ಬಂದಿದೆ.
ಪಿಲಿಕೋಡ್ ಚಂದೇರ ನಿವಾಸಿಯಾದ ರಾಜೀವ್ ಅಂಗವಿಕಲರಾಗಿದ್ದಾರೆ. ಪುಟ್ಟ ಇಬ್ಬರು ಮಕ್ಕಳು ಇನ್ನೂ ವಿದ್ಯಾರ್ಥಿ ದೆಸೆಯಲ್ಲೇ ಇದ್ದಾರೆ. ಅಂಗವಿಕಲ ಪುತ್ರನನ್ನೆತ್ತಿ ಎದೆಗಾನಿಸಿಕೊಂಡು ಬಂದ ಪಳ್ಳಿಕ್ಕರೆ ನಿವಾಸಿ ವಿನೀತಾ ಭೂಹಕ್ಕು ಪತ್ರ ಪಡೆಯುತ್ತಿದ್ದಂತೆ ಕಣ್ಣೀರೆಗರೆದರು. ಬದುಕಿನಲ್ಲಿ ಅನೇಕ ಸಂಘರ್ಷಗಳ ನಡುವೆಯೂ 8 ವರ್ಷಗಳಿಂದ ತುಂಡು ಭೂಮಿ ಸ್ವಂತವಾಗಿಬೇಕು ಎಂಬ ತೀವ್ರ ಬಯಕೆಯೊಂದಿಗೆ ಸತತ ಹೋರಾಡುತ್ತಲೇ ಬಂದವರು ವಿನೀತಾ. ಇದರ ಫಲವಾಗಿ 4 ಸೆಂಟ್ಸ್ ಜಾಗ ಹಕ್ಕಿನ ರೂಪದಲ್ಲಿ ಪಡೆದ ಸಂತಸದಲ್ಲಿ ಅವರಿದ್ದಾರೆ.
ತೇಕಾನಂಮೊಟ್ಟ ಪ್ರದೇಶದಲ್ಲಿ 9 ಸೆಂಟ್ಸ್ ಜಾಗದ ಹಕ್ಕುಪತ್ರ ಗೋವಿಂದನ್ ವಾರ್ಯರ್ ಅವರಿಗೆ ಲಭಿಸಿದೆ.6 ವರ್ಷಗಳ ಸತತ ಯತ್ನದ ಅನಂತರ ತಮಗೆ, ಪತ್ನಿ ಜಯಂತಿಗೆ ಸ್ವಂತ ಜಾಗ ಒಲಿದುಬಂದಿದೆ ಎಂಬುದು ಅವರ ನುಡಿಗಳಲ್ಲಿ ವ್ಯಕ್ತವಾದ ಸಾರ್ಥಕ ಭಾವ. ತಮ್ಮ 62ನೇ ವರ್ಷದಲ್ಲಿ ಹಿಡಿ ಮಣ್ಣು ಸ್ವಂತವಾಗಿದೆ ಎಂಬ ಧನ್ಯತೆ ಅವರಲ್ಲಿ ಮೂಡಿದೆ.
ಸಾಂತ್ವನ ಸ್ಪರ್ಶ
ಭೂಹಕ್ಕು ಪತ್ರ ವಿತರಣೆ ಮೇಳದಲ್ಲಿ ಸ್ವಂತ ಜಾಗ ಲಭಿಸಿರುವುದು ಈ ಬಡ ಕುಟುಂಬಕ್ಕೆ ಒಂದು ಸಾಂತ್ವನ ಸ್ಪರ್ಶವಾಗಿದೆ. ಹಲವು ವರ್ಷಗಳ ಕನಸು ನನಸಾದ ತೃಪ್ತಿ ಇವದ್ದಾಗಿದೆ.ಇದಕ್ಕಾಗಿ ಈ ಕುಟುಂಬಗಳು ಸರಕಾರಕ್ಕೆ ಹೃದಯ ತುಂಬಿ ವಂದನೆ ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Manipur: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.