ದೀಪಿ ಕಮಾಲ್ ರಾಗ ಈಗ !
Team Udayavani, Jan 11, 2019, 12:30 AM IST
ದೀಪಿಕಾ ಪಡುಕೋಣೆಗೆ ಸಂಬಂಧಿಸಿದಂತೆ ಈ ವಾರ ಎರಡು ಸಂಗತಿಗಳು ಸಂಭವಿಸಿವೆ. ಒಂದು ದೀಪಿಕಾ ಪಡುಕೋಣೆ ಮದುವೆಯಾದ ಬಳಿಕ ತನ್ನದೇ ಆದ ಒಂದು ವೆಬ್ಸೈಟ್ ಪ್ರಾರಂಭಿಸಿದ್ದು. ಇದು ಮದುವೆ ನಂತರದ ಮೊದಲ ಹುಟ್ಟುಹಬ್ಬ ಆಚರಿಸಿಕೊಂಡ ಸಂದರ್ಭದಲ್ಲಿ ದೀಪಿಕಾ ತನಗೆ ತಾನೇ ಕೊಟ್ಟುಕೊಂಡ ಉಡುಗೊರೆ ಎನ್ನಬಹುದು.
ವೆಬ್ಸೈಟ್ನಲ್ಲಿ ದೀಪಿಕಾಳ ವೃತ್ತಿ ಬದುಕಿನ ಒಂದು ಝಲಕ್ ಇದೆ. ಅಂತೆಯೇ ಬಾಲಿವುಡ್ನಲ್ಲಿ ಅವಳು ನಡೆಸಿದ ಹೋರಾಟದ ಮೇಲೂ ಒಂದು ಕ್ಷಕಿರಣ ಬೀರಲಾಗಿದೆ. ದೀಪಿಕಾ ಕಾಣಿಸಿಕೊಂಡ ಜಾಹೀರಾತುಗಳು, ಪತ್ರಿಕೆಗಳ ಮುಖಪುಟಗಳು, ಫೊಟೊಶೂಟ್ಗಳು, ಅಂತೆಯೇ ಆಕೆಯ ಸಮಾಜ ಸೇವೆಗೆ ಸಂಬಂಧಿಸಿದ ಮಾಹಿತಿಗಳೂ ಇವೆ. www.deepikapadukone ಯಲ್ಲಿ ನಿಮಗೆ ಈ ಎಲ್ಲ ಮಾಹಿತಿಗಳು ಸಿಗುತ್ತವೆ. ಇದು ವೆಬ್ಸೈಟ್ ವಿಚಾರವಾದರೆ, ಕುತೂಹಲ ಕೆರಳಿಸುವ ಇನ್ನೊಂದು ಸಂಗತಿಯೆಂದರೆ ಒಂದು ದೋಸೆಗೆ ದೀಪಿಕಾ ಪಡುಕೋಣೆ ಹೆಸರಿಟ್ಟಿರುವುದು!
ಇದು ಆಗಿರುವುದು ದೂರದ ಟೆಕ್ಸಾಸ್ನ ಆಸ್ಟಿನ್ ಎಂಬಲ್ಲಿ. ಸೋಷಿಯಲ್ ಮೀಡಿಯಾದಲ್ಲಿ ದೀಪಿಕಾ ಪಡುಕೋಣೆ ದೋಸೆ ಈಗ ಸಖತ್ ವೈರಲ್ ಆಗಿದೆ. ಇದಾದ ಕೆಲವೇ ತಾಸುಗಳಲ್ಲಿ ಪುಣೆಯ ಒಂದು ಹೊಟೇಲ್ ದೀಪಿಕಾ ಹೆಸರಿನಲ್ಲಿ ಪರಾಟ ಥಾಲಿ ಇಟ್ಟಿರುವ ಮಾಹಿತಿಯೂ ಬಹಿರಂಗವಾಗಿದೆ. ಹಾಗೆಂದು ಸಿನೆಮಾ ತಾರೆಯರ ಹೆಸರುಗಳನ್ನು ತಿಂಡಿ-ಪಾನೀಯಗಳಿಗೆ ಇಡುವುದು ಹೊಸದೇನೂ ಅಲ್ಲ. ಸಂಜೂ ಬಾಬಾ ಚಿಕನ್, ಸಲ್ಮಾನ್ ಖಾನ್ ಬಿರಿಯಾನಿ ಇವೆಲ್ಲ ಸಖತ್ ಫೇಮಸ್ ಆಗಿವೆ. ಈ ಸಾಲಿಗೆ ದೀಪಿಕಾ ಸೇರಿದ್ದಾಳೆ. ಆದರೆ ಈ ಎಲ್ಲ ಖ್ಯಾತಿ ದೀಪಿಕಾಗೆ ಮದುವೆ ಬಳಿಕ ಬಂದಿದೆ ಎನ್ನುವುದೇ ವಿಶೇಷತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.