ರಾಜ್ಯಕ್ಕೂ ಕಾಲಿಟ್ಟ ಜುಂದ್‌-ಅಲ್‌ -ಅಕ್ಸಾ

Team Udayavani, Jan 11, 2019, 12:30 AM IST

terrorist-ss.jpg

ಬೆಂಗಳೂರು: ಸಿರಿಯಾದ ಜುಂದ್‌ -ಅಲ್‌ – ಅಕ್ಸಾ  ಅಥವಾ ಅಲ್‌- ನುಸ್ರಾ – ಫ್ರಂಟ್‌ ಉಗ್ರಸಂಘಟನೆ ಸೇರಿದ್ದಾರೆ ಎನ್ನಲಾದ ಕೇರಳ ಹಾಗೂ ರಾಜ್ಯದ ಯುವಕರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ರಾಷ್ಟ್ರೀಯ ಭದ್ರತಾ ತನಿಖಾ ದಳ( ಎನ್‌ಐಎ) ತನಿಖೆ ಚುರುಕುಗೊಳಿಸಿದ ಬೆನ್ನಲ್ಲೇ, ರಾಜ್ಯದಲ್ಲಿ ಉಗ್ರ ಸಂಘಟನೆ ಬೇರುಗಳಿರುವುದಕ್ಕೆ ಪುಷ್ಠಿ ದೊರೆತಂತಾಗಿದೆ.

ಉದ್ಯೋಗ ಸಲುವಾಗಿ ಕತಾರ್‌ ಸೇರಿದ ಯುವಕರು ಬಳಿಕ ಐಸಿಸ್‌ ಹಾಗೂ ಜುಂದ್‌ ಅಲ್‌ ಅಕ್ಸಾ ಸಂಘಟನೆಯಲ್ಲಿ ಸಕ್ರಿಯವಾಗಿರುವ ಹಲವರ ಸಂಪರ್ಕಕ್ಕೆ ಬಂದಿದ್ದು, ಅಂತಿಮವಾಗಿ 2013ರಲ್ಲಿ ಸಿರಿಯಾ ಪ್ರವೇಶಿಸಿ  ಜುಂದ್‌ ಅಲ್‌ ಅಕ್ಸಾ ಸಂಘಟನೆಗೆ ಸೇರಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. 

ಯವಕರ ಹೆಸರನ್ನು ಎನ್‌ಐಎ ಬಹಿರಂಗಪಡಿಸದಿದ್ದರೂ, ಕರಾವಳಿ ಭಾಗದ ಕೆಲವು ಯುವಕರೇ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

2016ರಲ್ಲಿ ಐಸಿಸ್‌ ಸಂಘಟನೆ ಸೇರಲು ಸಜ್ಜಾಗಿದ್ದ ಆರು ಮಂದಿ ಆರೋಪಿಗಳನ್ನು ಎನ್‌ಐಎ ಬಂಧಿಸಿದ ಬಳಿಕ ಮತ್ತೂಮ್ಮೆ, ಕತಾರ್‌ನಲ್ಲಿದ್ದುಕೊಂಡೇ ರಾಜ್ಯದ ಹಲವು ಯುವಕರನ್ನು ಉಗ್ರಸಂಘಟನೆಗೆ ಸೇರಲು ಪ್ರೇರೇಪಿಸಿದ ಅಂಶ ತನಿಖೆಯಲ್ಲಿ ಗೊತ್ತಾಗಿದೆ. ಹೀಗಾಗಿ, ಆರೋಪಿ ಯುವಕರ ಹಿನ್ನೆಲೆ ಅವರ ಬೆಂಬಲಿಗರು, ರಾಜ್ಯದಲ್ಲಿ ಉಗ್ರ ಚಟುವಟಿಕೆಗೆ ಬೆಂಬಲ ನೀಡುತ್ತಿದ್ದರೇ ಎಂಬ ಶಂಕೆ ವ್ಯಕ್ತವಾಗಿದೆ. ಜತೆಗೆ ಆರೋಪಿತ ಯುವಕರು ಬಳಸುತ್ತಿದ್ದ ಫೇಸ್‌ಬುಕ್‌, ವ್ಯಾಟ್ಸಾಪ್‌ ಗ್ರೂಪ್‌ಗ್ಳ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದೆ ಎಂದು ಹೇಳಲಾಗುತ್ತಿದೆ.

ಮತ್ತೂಂದೆಡೆ ಎನ್‌ಐಎ ತನಿಖೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸುತ್ತಲೇ ಎಚ್ಚೆತ್ತುಕೊಂಡಿರುವ ರಾಜ್ಯ ಪೊಲೀಸ್‌ ಇಲಾಖೆಯೂ ರಾಜ್ಯದಲ್ಲಿರಬಹುದಾದ ಉಗ್ರರ ಸ್ಲಿàಪರ್‌ಸೆಲ್‌ಗ‌ಳ ಬಗ್ಗೆ ಆಂತರಿಕ ತನಿಖೆ ಆರಂಭಿಸಿದೆ. ಜತೆಗೆ, ಈ ಹಿಂದೆ ಬಂಧನವಾಗಿದ್ದ ಉಗ್ರರನ್ನು ವಿಚಾರಣೆಗೊಳಪಡಿಸಲಿದೆ ಎಂದು ತಿಳಿದು ಬಂದಿದೆ.

ಇತರೆ ಉಗ್ರರ ಜತೆ ನಂಟು?
ದುಬೈನಲ್ಲಿದ್ದು ಐಸಿಸ್‌ ಉಗ್ರ ಸಂಘಟನೆ ಪರ ಫೇಸ್‌ಬುಕ್‌, ವ್ಯಾಟ್ಸಾಪ್‌, ಟ್ವಿಟರ್‌ ಸೇರಿದಂತೆ ವ್ಯಾಪಕ ಪ್ರಚಾರ ನಡೆಸಿ ಸಾವಿರಾರು ಮಂದಿ ಯುವಕರನ್ನು ಐಸಿಸ್‌ ಸೇರಲು ಪ್ರೇರೆಪಿಸಿದ ಆರೋಪದಲ್ಲಿ 2016ರಲ್ಲಿ ಬಂಧಿತನಾಗಿರುವ ಶಂಕಿತ ಉಗ್ರ ಭಟ್ಕಳದ ಅದ್ನಾನ್‌ ಹಸ್ಸನ್‌ ಜತೆ ಜುಂದ್‌ ಅಲ್‌ ಅಕ್ಸಾ ಸಂಘಟನೆ ಸೇರಿರುವ ಯುವಕರಿಗೆ ನಂಟಿರುವ ಸಾಧ್ಯತೆಯಿದೆ.

ದುಬೈನಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅದ್ನಾನ್‌, ಸೌದಿಅರೆಬಿಯಾ, ಫಿಲಿಡೆಲ್ಫಿಯಾ, ಶ್ರೀಲಂಕಾ ಸೇರಿ ವಿವಿಧ ದೇಶಗಳ ಸಾವಿರಾರು ಯುವಕರ ಜತೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದ. ಆತ ರಚಿಸಿದ್ದ ವ್ಯಾಟ್ಸಾಪ್‌ ಗ್ರೂಪ್‌ನಲ್ಲಿ ಕರ್ನಾಟಕದ ಹಲವು ಯುವಕರು ಇರುವ ಶಂಕೆಯನ್ನು ಎನ್‌ಐಎ ವ್ಯಕ್ತಪಡಿಸಿತ್ತು. ಅದೇ ಯುವಕರು ಮತ್ತೂಂದು ಜುಂದ್‌ ಅಲ್‌ ಅಕ್ಸಾ ಸೇರಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ವಿದೇಶಿ ಯುವಕರೇ ಟಾರ್ಗೆಟ್‌ 
ಐಸಿಸ್‌ ಉಗ್ರ ಸಂಘಟನೆಗೆ ಪರ್ಯಾಯವಾಗಿ ಸಲಾಫಿ ಜಿಹಾದಿಗಳು ಕಟ್ಟಿಕೊಂಡ ಸಂಘಟನೆ  ಜುಂದ್‌- ಅಲ್‌- ಅಕ್ಸಾ ಸಿರಿಯಾ ನಾಗರಿಕ ಯುದ್ಧದ ವೇಳೆ ಬೆಳಕಿಗೆ ಬಂದಿತ್ತು. ಈ ಹಿಂದೆ ಇದೇ ಸಂಘಟನೆಯನ್ನು ಶರಿಯತ್‌ ಅಲ್‌ ಕೈದಾ ಎಂದು ಕರೆಯಲಾಗುತ್ತಿದ್ದು,ಅದರ ಅಂಗ ಸಂಸ್ಥೆಯಾಗಿ ಅಲ್‌- ನುಸ್ರಾ – ಫ್ರಂಟ್‌ ಕಾರ್ಯನಿರ್ವಹಿಸುತ್ತಿತ್ತು. ಸಿರಿಯಾದಲ್ಲಿ ಷರಿಯತ್‌ ಕಾನೂನು ಜಾರಿಗೊಳಿಸುವ ಗುರಿ ಸಂಘಟನೆಯದ್ದಾಗಿತ್ತು. ಈ ಸಂಘಟನೆ ವಿದೇಶಗಳ ಯುವಕರನ್ನು ಪ್ರಭಾವಿಸಿ ಅವರನ್ನು ತನ್ನ ಗುಂಪಿಗೆ ಸೇರಿಸಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ. 

– ಮಂಜುನಾಥ್‌ ಲಘುಮೇನಹಳ್ಳಿ

ಟಾಪ್ ನ್ಯೂಸ್

Bangla–Pak

Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!

Basavaraj-horatti

Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ

Kannada-Replica

Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!

ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ 

ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ 

ಶೀಘ್ರವೇ ದೇಶದ ಬುಲೆಟ್‌; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್‌ ಬುಲೆಟ್‌ ರೈಲು ಯೋಜನೆ

ಶೀಘ್ರವೇ ದೇಶದ ಬುಲೆಟ್‌; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್‌ ಬುಲೆಟ್‌ ರೈಲು ಯೋಜನೆ

Rajbhavana

Derogatory Term: ರಾಜಭವನ ಅಂಗಳಕ್ಕೆ ತಲುಪಿದ ಲಕ್ಷ್ಮೀ ಹೆಬ್ಬಾಳ್ಕರ್‌- ಸಿ.ಟಿ.ರವಿ ವಾಗ್ವಾದ

Horoscope:‌ ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ

Horoscope:‌ ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Basavaraj-horatti

Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ

Kannada-Replica

Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!

Rajbhavana

Derogatory Term: ರಾಜಭವನ ಅಂಗಳಕ್ಕೆ ತಲುಪಿದ ಲಕ್ಷ್ಮೀ ಹೆಬ್ಬಾಳ್ಕರ್‌- ಸಿ.ಟಿ.ರವಿ ವಾಗ್ವಾದ

MB-Patil-Minister

Session: ಹೊಸ ವರ್ಷಕ್ಕೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್‌ “ಕೈ’ ಹಾಕಲಿದೆಯೇ?

Belagavi-Sess

Legislative House: ಶಾಸನಸಭೆಯೊಳಗೆ ಪೊಲೀಸ್‌ ಪ್ರವೇಶಕ್ಕಿಲ್ಲ ಅವಕಾಶ: ತಜ್ಞರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bangla–Pak

Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!

Basavaraj-horatti

Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ

Kannada-Replica

Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!

ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ 

ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ 

ಶೀಘ್ರವೇ ದೇಶದ ಬುಲೆಟ್‌; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್‌ ಬುಲೆಟ್‌ ರೈಲು ಯೋಜನೆ

ಶೀಘ್ರವೇ ದೇಶದ ಬುಲೆಟ್‌; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್‌ ಬುಲೆಟ್‌ ರೈಲು ಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.