ಎಂದೂ ಮರೆಯದ ಪಾಠಗಳು


Team Udayavani, Jan 11, 2019, 4:44 AM IST

anubhava.jpg

ನನ್ನ ಮೂರು ದಶಕಗಳಿಗಿಂತ ಹೆಚ್ಚಿನ ಅವಧಿಯ ವೈದ್ಯಕೀಯ ಜೀವನದಲ್ಲಿ, ರೋಗಿ, ಅವರ ಸಂಬಂಧಿಕರು ಹಾಗೂ ನಮ್ಮ ನಡುವೆ ನಡೆದ ಹಲವು ಸಂತೋಷದ, ತೃಪ್ತಿದಾಯಕ ಘಟನೆಗಳನ್ನೂ, ಮತ್ತೆ ಮನಸ್ಸನ್ನು ಘಾಸಿಗೊಳಿಸುವ ಕೆಲವು ವಿದ್ಯಮಾನಗಳನ್ನೂ ಕಂಡಿದ್ದೇನೆ. ಜೊತೆಗೆ ಕೆಲವೊಮ್ಮೆ ಏನೂ ಅರಿಯದ ಮುಗ್ಧರೆಂದು ನಾನು ಭಾವಿಸಿಕೊಂಡ ರೋಗಿಗಳು, ಮತ್ತವರ ಸಂಬಂಧಿಕರು ನನಗೆ “ಮರೆಯಲಾಗದ (ಮರೆಯಬಾರದ) ಪಾಠ’ ಕಲಿಸಿದ ಘಟನೆಗಳು ಜರುಗಿವೆ. ನಾನು ಒಂದಿಷ್ಟು ಭಾವಜೀವಿಯಾದ್ದರಿಂದ ಅವೆಲ್ಲವೂ ನನ್ನ ಮನಃಪಟಲದಲ್ಲಿ ಅಚ್ಚಳಿಯದೆ ಉಳಿದುಕೊಂಡಿವೆ. ಅಂಥವುಗಳಲ್ಲಿ “ಮುಟ್ಟಿ ನೋಡಿಕೊಳ್ಳುವಂಥ’ ಎರಡು ಮಾತ್ರ ಇಲ್ಲಿ. 
ಸುಮಾರು ಹನ್ನೆರಡು ವರ್ಷಗಳ ಹಿಂದಿನ ಮಾತು, ನಮ್ಮ ಭಾಗದಲ್ಲಿ ನಿರಂತರ ಮೂರು ವರ್ಷದ ಬರಗಾಲ ಕಾಡಿತು. ತೋಟಗಳಲ್ಲಿದ್ದ ಎಲ್ಲ ಬೆಳೆ ಒಣಗಿ, ಜನರ ಕೈಯಲ್ಲಿ ದುಡ್ಡಿಲ್ಲದಂತಾಗಿ ಕಷ್ಟಪಡುವಂತಾಯ್ತು. ಮೊದಲೇ ನಮ್ಮ ಜನ ಆರೋಗ್ಯಕ್ಕಾಗಿ ಖರ್ಚು ಮಾಡಲು ಹಿಂದೆ ಮುಂದೆ ನೋಡುವಂಥವರು. ತಮ್ಮ ದಿನ ನಿತ್ಯದ ಖರ್ಚು ವೆಚ್ಚಗಳನ್ನೆಲ್ಲ ತೂಗಿಸಿದ ನಂತರವೇ ಆರೋಗ್ಯಕ್ಕಾಗಿ ವೆಚ್ಚ ಮಾಡಲು ಮನಸು ಮಾಡುತ್ತಾರೆ. ಅಂಥದರಲ್ಲಿ ಬರಗಾಲ ಬಿದ್ದರಂತೂ ತೀರಿತು, ಇನ್ನಷ್ಟು ನೆಪ ಸಿಕ್ಕಂತೆ. ಹೀಗಾಗಿ ಅನೇಕ ಬಾರಿ ರೋಗ ಉಲ್ಬಣಿಸಿದ ನಂತರ ಆಸ್ಪತ್ರೆಗೆ ಬರುವುದು ಸಾಮಾನ್ಯ. ಕೆಲವೊಮ್ಮೆ ಯಾವ ಸ್ಥಿತಿಯಲ್ಲಿ ಬರುತ್ತಿದ್ದರೆಂದರೆ ರೋಗಿಗಳನ್ನು ಉಳಿಸುವುದು ಕಷ್ಟಸಾಧ್ಯವಾಗುತ್ತಿತ್ತು. ನಾನು ಸರಕಾರೀ ವೈದ್ಯಕೀಯ ವಿದ್ಯಾಲಯದಲ್ಲಿ ಸರಕಾರದ ಖರ್ಚಿನಿಂದ ವೈದ್ಯಕೀಯ ಕಲಿತದ್ದು, ಅಲ್ಲದೆ ಹದಿನೈದು ವರ್ಷ ಸರಕಾರೀ ವೈದ್ಯನಾಗಿ ಸೇವೆ ಸಲ್ಲಿಸಿದ್ದರಿಂದ ಸಾಮಾನ್ಯ ಜನರಿಗೆ ಉಪಯುಕ್ತವಾದುದನ್ನು ಏನಾದರೂ ಮಾಡುತ್ತಲೇ ಇರಬೇಕೆಂಬ ವಿಚಾರ ಯಾವಾಗಲೂ ನನ್ನಲ್ಲಿ ಜಾಗೃತವಾಗಿರುತ್ತದೆ. ಜನರ ದುಡ್ಡಿನಿಂದ ಕಲಿತ ಈ ವಿದ್ಯೆ ಸ್ವಲ್ಪವಾದರೂ ಜನೋಪಯೋಗಿಯಾಗಬೇಕಲ್ಲ. ಅಲ್ಲದೆ ಉಚಿತ ಸೇವೆಗಳು, ರಿಯಾಯತಿ ಸೇವೆಗಳು ಇತ್ಯಾದಿಗಳನ್ನೆಲ್ಲ ಆಗಾಗ್ಗೆ ಬಳಸುತ್ತಿರುತ್ತೇನೆ, ಹಾಗೆ ಮಾಡುತ್ತಲೇ ರೋಗಿಗಳಿಗೆ ಆರ್ಥಿಕ ತೊಂದರೆ ಇ¨ಗಲೆಲ್ಲ ನಾನು ಸ್ಪಂದಿಸಿದ್ದೇನೆ, ಎಂಬ ತೃಪ್ತಿ ನನಗಿದೆ. ಹೀಗಾಗಿ ಜನ ಕೈಯಲ್ಲಿ ದುಡ್ಡಿಲ್ಲದೆ ಕಷ್ಟಪಡುತ್ತಿರುವುದನ್ನು ನೋಡಿ ನನಗೆ ಸುಮ್ಮನೆ ಇರುವುದಾಗಲಿಲ್ಲ. ಅದಕ್ಕೆಂದೇ ಯೋಜನೆ ಯೊಂದನ್ನು ಸಿದ್ಧಪಡಿಸಿದೆ

“”ನಿಮ್ಮ ಕ್ಷೇತ್ರಗಳಲ್ಲಿ ನಿಜವಾಗಿಯೂ ಬಡವರಾದ ಯಾರಿಗಾದರೂ ರಿಯಾಯತಿ ದರದಲ್ಲಿ ಅಥವಾ ಉಚಿತವಾದ ವೈದ್ಯಕೀಯ ಸೇವೆಯ ಅವಶ್ಯಕತೆಯಿದೆ, ಎಂಬುದು ನಿಮ್ಮ ಗಮನಕ್ಕೆ ಬಂದರೆ, ನಮ್ಮ ಆಸ್ಪತ್ರೆಗೆ ಕಳಿಸಿರಿ. ಅವರ ಜೊತೆಗೆ ನಿಮ್ಮ ಶಿಫಾರಸು ಪತ್ರ ಕಳಿಸಿಕೊಡಿ. ಅವರವರ ಪರಿಸ್ಥಿತಿಗೆ ಅನುಸಾರವಾಗಿ ಉಚಿತ ಅಥವಾ ರಿಯಾಯತಿ ದರದ ವೈದ್ಯಕೀಯ ಸೇವೆ ನೀಡಲು ನಾನು ಉತ್ಸುಕನಾಗಿದ್ದೇನೆ…” ಎಂಬರ್ಥದ ಒಕ್ಕಣೆಯಿರುವ “ಹ್ಯಾಂಡ್‌ ಬಿಲ್‌’ಗಳನ್ನು ಪ್ರಿಂಟ್‌ ಹಾಕಿಸಿ, ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರಿಗೂ, ತಾಲೂಕಾ ಪಂಚಾಯಿತಿ ಸದಸ್ಯರಿಗೂ ತಲುಪಿಸಿದೆ. ಅದು ನಿಜವಾಗಿಯೂ ಕೆಲಸ ಮಾಡಿತು. ಜನಮೆಚ್ಚುಗೆಯನ್ನೂ ಪಡೆಯಿತು. ಅನೇಕ ಜನ ಆಸ್ಥೆವಹಿಸಿ ರೋಗಿಗಳನ್ನು ಕಳಿಸತೊಡಗಿದರು. ನನ್ನ “ಸಮೀಪವರ್ತಿ’ಗಳನೇಕರು ನನ್ನನ್ನು ನೋಡಿ ನಗುತ್ತಿದ್ದರಾದರೂ, ಇದು ನಾನು ನಮ್ಮ ಸಮಾಜಕ್ಕೆ ಮಾಡಲೇಬೇಕಾದ ಕರ್ತವ್ಯವೆಂದು ಭಾವಿಸಿ ಸುಮ್ಮನಾಗುತ್ತಿ¨ªೆ. ಅದರಲ್ಲಿ ಆತ್ಮತೃಪ್ತಿಯ “ಸ್ವಾರ್ಥ’ ಕೂಡ ಇತ್ತಲ್ಲ

ಹೀಗಿರುವಾಗ ಒಂದು ದಿನ ಶಸ್ತ್ರಚಿಕಿತ್ಸೆಯಾದ ಒಬ್ಬ  ಮಹಿಳೆಯನ್ನು ಡಿಸಾcರ್ಜ್‌ ಮಾಡಬೇಕಿತ್ತು. ಒಟ್ಟು ಬಿಲ್ಲಿನಲ್ಲಿ ಸುಮಾರು ಅರ್ಧದಷ್ಟು ರಿಯಾಯತಿ ಮಾಡಿ, ಅಷ್ಟೇ ದುಡ್ಡನ್ನು ಮಾತ್ರ ಕಟ್ಟುವಂತೆ ನಮ್ಮ ಸಿಬ್ಬಂದಿಯವರು ಅವಳ ತಂದೆಗೆ ತಿಳಿಸಿದ್ದರು. ಅಷ್ಟೆಲ್ಲ ರಿಯಾಯತಿ ಮಾಡಿದರೂ ಸಮಾಧಾನ ವಾಗದೇ ಅವನು ಮತ್ತೆ ಇನ್ನಷ್ಟು ಕಡಿಮೆ ಮಾಡುವಂತೆ ನನ್ನೆದುರಿಗೆ ಬಂದು ನಿಂತ. ನನಗೆ ವಿಚಿತ್ರವೆನಿಸಿತು. ಯಾಕೆಂದರೆ ಅವನೇನೂ ಬಡವನಲ್ಲ ಎಂದು ನನಗೆ ಗೊತ್ತಿತ್ತು. ಎಷ್ಟು ಕಡಿಮೆ ಮಾಡಿದರೂ ಇನ್ನೂ ಕಡಿಮೆ ಮಾಡಲಿ’ ಎಂಬ ನಮ್ಮ ಜನರ ಸ್ವಭಾವಕ್ಕೆ ಬೇಸರವೂ ಆಯಿತು. ಆದರೂ ಬೇಸರ ತೋರ್ಪಡಿಸದೆ ಅವನಿಗೆ ತಿಳಿ ಹೇಳತೊಡಗಿದೆ
“ನೋಡಪಾ, ನಿನಗೂ ಗೊತ್ತೈತಿ. ಎಲ್ಲಾ ಕಡೆ ಬರಗಾಲ ಬಿದ್ದ ಸಲುವಾಗಿ ನಾನss ಮೊದಲಿನಕಿಂತ ಬಿಲ್‌ ಕಡಿಮಿ ಮಾಡೀನಿ, ಅಷ್ಟss ಅಲ್ಲದ ನಿಮ್ಮಲ್ಲಿನ ಪೇಶಂಟ್‌ ಕಳಸರಿ, ಯಾರರ ಬಡವರ ಇದ್ದರ ಕಡಿಮಿ ರೇಟ್‌ನ್ಯಾಗ ಅಥವಾ ಫ್ರೀ ಆಪರೇಶನ್‌ ಮಾಡ್ತೀನಿ, ಅಂತ ಎಲ್ಲಾ ಪಂಚಾಯಿತಿಗಿ ಪತ್ರ ಸಹಿತ ಬರದ ತಿಳಿಸಿನಿ, ನಿನಗೂ ಗೊತ್ತಿರಬೇಕಲ್ಲ…’
“ಹೌದ್ರಿ, ನಾನೂ ಆ ಪತ್ರ ಓದಿನಿ ಬಿಡ್ರಿ ಸಾಹೇಬ್ರ..’
“ಮತ್ತ, ಅದು ಗೊತ್ತಿದ್ದೂ ಇನ್ನss ಕಡಿಮಿ ಮಾಡಾಕ ಕೇಳ್ತಿಯಲ್ಲಪಾ.’
“ನೋಡ್ರಿ ಸಾಹೇಬ್ರ, ನನಗೂ ಎಲ್ಲ ಗೊತಾಕ್ಕೆ„ತಿ. ಈಗಿನ ಕಾಲದಾಗ ಯಾರರ ಸುಮ್ನss ಬಿಲ್‌ ಕಡಿಮಿ ಮಾಡ್ತಾರೇನ್ರಿ…? ನಿಮ್ಮಲ್ಲಿ ಮೊದಲಿನಕ್ಕಿಂತ ಈಗ ಪೇಶಂಟ್‌ ಕಡಿಮಿ ಆಗಿರಬೇಕು, ಅದಕ್ಕss ಪೇಶಂಟ್‌ ಹೆಚ್ಚ ಬರಲಿ ಅಂತ ಆ ಪತ್ರ ಎಲ್ಲಾ ಕಡೆ ಕೊಟ್ಟಕಳಿಸಿರಿ, ಬಿಡ್ರೀ… ಅಷ್ಟೂ ತಿಳೆಂಗಿÇÉೇನ್‌ ನನಗ……!’
ನಾನು ಒಂದು ಕ್ಷಣ ಆವಾಕ್ಕಾದೆ. ಜೊತೆಗೆ ಒಂದಿಷ್ಟು ಅಸಮಾಧಾನವೂ ಆಯಿತು. ಜನರಿಗೆ, ಅದರಲ್ಲೂ ಬಡವರಿಗೆ ಅನುಕೂಲವಾಗಲಿ ಎಂದು ಪ್ರಾಮಾಣಿಕವಾಗಿ ಪ್ರಯತ್ನಿಸಿದ ನನಗೆ ಅವನು ಕೊಟ್ಟ “ಬಹುಮಾನ’ ಎತ್ತಿಕೊಳ್ಳಲು ಸಾಧ್ಯವಾಗಷ್ಟು ಭಾರವಾಯಿತು. ಎಲ್ಲ ಸಂಗತಿಗಳಿಗೂ ಇರುವಂತೆ ಇದಕ್ಕೂ ಎರಡು ಮುಖಗಳಿರಬಹುದು ಎಂಬ ವಿಚಾರ ನನಗೆ ಹೊಳೆದೇ ಇರಲಿಲ್ಲ. “ರಿಯಾಯತಿ ಅಥವಾ ಉಚಿತ ಸೇವೆ ನೀಡುತ್ತೇವೆ’ ಎಂದ ತಕ್ಷಣ ಜನ ನಮ್ಮೆಡೆಗೆ ಗೌರವದಿಂದ, ಮೆಚ್ಚುಗೆಯಿಂದ ಅಷ್ಟೇ ಅಲ್ಲದೇ, ಅನುಮಾನದಿಂದಲೂ ನೋಡಬಹುದಲ್ಲ ಎಂಬುದು ನನಗೆ ಹೊಳೆದೇ ಇರಲಿಲ್ಲ. ಅದು ಅಂದು ಮನದಟ್ಟಾಯಿತು. ವರದಕ್ಷಿಣೆ ಇಲ್ಲದೆ ಮದುವೆಯಾದ ಹುಡುಗನೆಡೆ ಸಮಾಜ ಸಂಶಯದಿಂದ ನೋಡಿದಂತಾಗಿತ್ತು, ನನ್ನ ಅಂದಿನ ಸ್ಥಿತಿ. ಜೀವನದಲ್ಲಿ ಮರೆಯದ ಪಾಠ ಕಲಿಸಿದ ಆತನಿಗೆ ಮನದಲ್ಲಾ ಕೃತಜ್ಞತೆ ಸಲ್ಲಿಸಿದೆ. ಅದಾದ ನಂತರ ಉಚಿತ ಹಾಗೂ ರಿಯಾಯತಿ ಸೇವೆಗಳ “ರೀತಿ’ಯನ್ನು ಬದಲಿಸಿದೆ, ನಿಲ್ಲಿಸಿಲ್ಲ.

ಮೊದಲು ಸರಕಾರೀ ಸೇವೆಯಲ್ಲಿದ್ದ ನಾನು, ಆ ಕೆಲಸದಿಂದ ಸ್ವಯಂ ನಿವೃತ್ತಿ ಪಡೆದು ಕೈತುಂಬ ಸಾಲ ಮಾಡಿ ಮುಧೋಳದಲ್ಲಿ ಅದೇ ಹೊಸದಾಗಿ ಆಸ್ಪತ್ರೆ ಕಟ್ಟಿ¨ªೆ. ನಮ್ಮ ಸೇವೆ “ರೋಗಿಸ್ನೇಹಿ’ ಆಗಿರಲೆಂಬ ನನ್ನ ಧ್ಯೇಯ ಹಾಗೂ ಉದ್ದೇಶಕ್ಕೆ ಅನುಸಾರವಾಗಿ ಸಾಧ್ಯವಿದ್ದಷ್ಟೂ  ರೋಗಿಗಳಿಗೆ ಅನಾನುಕೂಲವಾಗದಂತೆ ಎಚ್ಚರವಹಿಸಿ ಕೆಲಸ ನಿರ್ವಹಿಸತೊಡಗಿದೆ. ರೋಗಿಗಳು ಯಾವುದೇ ಸಂದರ್ಭದಲ್ಲೂ ಪರದಾಡದಂತಿರಲೆಂದು ನನ್ನ ಸೆಲ್‌ ನಂಬರನ್ನು ದೊಡ್ಡದಾಗಿ ಪ್ರಿಂಟ್‌ ಹಾಕಿಸಿ ರಿಷೆಪ್ಶನ್‌ನಲ್ಲಿ ಅಂಟಿಸಿದೆ. ಅಲ್ಲದೆ ನಾನು ಎಂದೂ ಮೊಬೈಲ್‌ ಸ್ವಿಚ್‌ ಆಫ್ ಮಾಡುವುದಿಲ್ಲ. ಇಷ್ಟೆಲ್ಲ ಮಾಡಿದರೂ “ಯಾವುದೋ ಮಾಯ’ದಲ್ಲಿ ಕೆಲವರು ಪರದಾಡುತ್ತಾರೆ, ಆ ಮಾತು ಬೇರೆ ಹೀಗಿರುತ್ತಿರುವಾಗ ಒಂದು ದಿನ ಸಮೀಪದ ಹಳ್ಳಿಯ “ವಿ.ಐ.ಪಿ.’ಯೊಬ್ಬ ದ್ವಿಚಕ್ರ ವಾಹನದಿಂದ ಬಿದ್ದು ಸಣ್ಣ ಪುಟ್ಟ ಗಾಯಗಳಾಗಿ ಬಂದ. ಅಷ್ಟೊಂದು ಗಂಭೀರ ಗಾಯಗಳೇನೂ ಇರದಿದ್ದರೂ ಬಿದ್ದು ಬಂದವರು ವಿ.ಐ.ಪಿ. ಇದ್ದದ್ದೇ ಒಂದು ಗಂಭೀರ ವಿಷಯವಲ್ಲವೇ? ಗಾಯಗಳನ್ನೆಲ್ಲ ಪರೀಕ್ಷಿಸಿ, ತೊಳೆದು, ಔಷಧಿ ಹಚ್ಚಿ, ಡ್ರೆಸ್ಸಿಂಗ್‌ ಮಾಡಿ, ಚಂದನೆಯ ಮಾತಾಡಿ, ಡಿಲಕÕ… ರೂಮಿನಲ್ಲಿ ಅಡ್ಮಿಟ್‌ ಮಾಡಿ, ಸಾಂತ್ವನ ಹೇಳಿ ಬರಬೇಕಾದರೆ ಒಂದು ಗಂಟೆಯ ಅಮೂಲ್ಯ ವೇಳೆ ವ್ಯಯವಾಗಿತ್ತು. ಆದರೆ ಅದು ಇಂಥವರಿ¨ªಾಗ ಅನಿವಾರ್ಯ. ವಿ.ಐ.ಪಿ. ಅಲ್ಲದ ರೋಗಿಯಾಗಿದ್ದರೆ ಇಷ್ಟೇ ಕೆಲಸ ಮಾಡಲು ಹತ್ತು ನಿಮಿಷ ಸಾಕು. ಮತ್ತೆ ಅವರು ತೋರುವ ಕೃತಜ್ಞತೆಯಂತೂ ಬೆಲೆ ಕಟ್ಟಲಾಗದ್ದು. ಗಮನಿಸುವ ಇನ್ನೊಂದು ವಿಷಯವೆಂದರೆ ಕೆಲವು ವಿ.ಐ.ಪಿ.ಗಳು ಬಿಲ್ಲು ಆಮೇಲೆ ಕಳಿಸುತ್ತೇನೆಂದು ಬಿರಬಿರನೆ ಹೊರಟು ಬಿಡುತ್ತಾರೆ. ಪೆಚ್ಚಾಗಿ ಅವರೆಡೆಗೆ ನೋಡುತ್ತಾ ನಿಲ್ಲುವುದಷ್ಟೇ ನಮ್ಮ ಹಕ್ಕು. ಅದೇ ಬಡವರಾದರೆ ಬಿಲ್ಲಿನಲ್ಲಿ ಸ್ವಲ್ಪವೇ ಕಡಿಮೆ ಮಾಡಿದರೂ, ಸಾಲ ಮಾಡಿಯಾದರೂ ತಂದುಕೊಟ್ಟು ಖುಷಿಯಿಂದ ಹರಸುತ್ತಾರೆ. 

ಅವನು ನಮ್ಮಲ್ಲಿ ಅಡ್ಮಿಟ್‌ ಆದ ದಿನವೇ ನನ್ನ ಮಗಳಿಗೆ ಅದೇಕೋ ತಲೆನೋವು, ತಲೆತಿರುಗುವುದು ಪ್ರಾರಂಭವಾಯಿತು. ಅಷ್ಟಿಟ್ಟು ನೋವಿಗೆಲ್ಲ ಜಪ್ಪೆನ್ನದ ನನ್ನ ಮಗಳು ತಲೆ ನೋಯುತ್ತದೆ ಎಂದಾಗ ನನಗೆ ಸ್ವಲ್ಪ ಗಾಬರಿಯಾಯಿತು. ವೈದ್ಯರಾದ ನಮಗೆ ತಲೆನೋವಿನ ನೂರೆಂಟು ಕಾರಣಗಳೂ, ಅದರಿಂದಾಗಬಹುದಾದ ಅಪಾಯಗಳೂ ಗೊತ್ತಿರುತ್ತವಾದ್ದರಿಂದ, ಮನೆಯಲ್ಲಿ ಯಾರಿಗೆ ಏನೇ ಆಗಲಿ ಚಿಂತೆ ಶುರುವಾಗಿಬಿಡುತ್ತದೆ. ಮನಸ್ಸು ಹರದಾರಿ ಮುಂದೆ ಓಡುತ್ತದೆ. ಏನೇನೋ ವಿಚಾರಗಳು ಬರಲಾರಂಭಿಸುತ್ತವೆ. ಆಗಲೂ ಹಾಗೆಯೇ ಆಯಿತು. ನನ್ನ ಅತ್ಯಂತ ಪ್ರೀತಿಯ ಮಗಳು ತಲೆನೋವು ಎಂದಾಗ ಆಗಿಂದಾಗೆ ಅವಳನ್ನು ಕರೆದುಕೊಂಡು ಬೆಳಗಾವಿಯಲ್ಲಿ ನ್ಯುರೋಸರ್ಜನ್‌ಗೆ ತೋರಿಸಿ ಸಿ.ಟಿ. ಸ್ಕಾನ್‌ ಮಾಡಿದರೆ, ಅವರು ಸ್ವಲ್ಪ ಸಮಸ್ಯೆಯಿದೆಯೆಂದೂ ಅದಕ್ಕಾಗಿ ಅವಳನ್ನು ಬೆಂಗಳೂರಿಗೆ ಹೆಚ್ಚಿನ ಪರೀಕ್ಷೆಗಾಗಿ ಕರೆದುಕೊಂಡು ಹೋಗಲೇಬೇಕೆಂದೂ ಹೇಳಿದಾಗ ಚಿಂತೆ ಹಾಗೂ ಆತಂಕ ಹೆಚ್ಚಾಯಿತು. ಅದೇ ಆತಂಕ ಹಾಗೂ ಚಿಂತೆಯನ್ನು ತಲೆಯೆಲ್ಲಾ ತುಂಬಿಕೊಂಡು ಮರುದಿನ ಬೆಳಿಗ್ಗೆ ನಮ್ಮ ಆಸ್ಪತ್ರೆಗೆ ಹೋದರೆ ಈ ವಿ.ಐ.ಪಿ. ಮಹಾಶಯ ನನ್ನ ಮೇಲೆ ಗರಂ ಆಗಿ ಕುಳಿತುಬಿಟ್ಟಿದ್ದ…”

“ಏನ್ರೀ, ನನ್ನ ಅಡ್ಮಿಟ್‌ ಮಾಡಿ ನೀವು ಚೈನಿ(ಶೋಕಿ) ಮಾಡಾಕ ಹೋಗಿದ್ರೇನು..?’ ಅಂದ ನನಗೆ ಸ್ವಲ್ಪ ಬೇಸರವಾಯಿತು. ನಮ್ಮ ಕಷ್ಟ ನಮಗೆ, ಇವನು ಮಾತಾಡುವ ರೀತಿ ಎಂಥದ್ದಿದೆಯಲ್ಲ ಎಂದುಕೊಳ್ಳುತ್ತ, “ಇಲಿ, ಸ್ವಲ್ಪ ಪರ್ಸನಲ್‌ ಕೆಲಸ ಇತ್ತು, ಅದೂ ಒಂದss ದಿನ ಹೊಗೀನಿ’ “ಮತ್ತ ನಮ್ಮನ್ನ ಇಲ್ಲಿ ಒಗದ್‌ ಹೊಗೂದೇನ್ರಿ?’
“ನಮ್ಮ ಸಿಬ್ಬಂದಿ ಹಾಗೂ ಅಸಿಸ್ಟಂಟ್‌ ಡಾಕ್ಟರು ನಿಮ್ಮ ವ್ಯವಸ್ಥಾ ಮಾಡ್ಯಾರಲಿ.. ವ್ಯಾಳಾಕ್‌(ಸಮಯಕ್ಕೆ) ಸರಿಯಾಗಿ ಇಂಜೆಕ್ಷನ್‌, ಡ್ರೆಸ್ಸಿಂಗ್‌ ಎಲ್ಲಾ ಮಾಡಾಕ ನಾ ಹೇಳೇ ಹೋಗಿ¨ªೆ..’ “ಹೌದ್ರಿ, ಅದೆಲ್ಲಾ ಖರೆ. ನಮ್ಮಂಥವರು ಅಡ್ಮಿಟ್‌ ಆದಾಗ ನೀವು ಸೀನಿಯರ್‌ ಡಾಕ್ಟರ್‌ ಆಗಿ ಇಲ್ಲಿರಬೇಕಾಗಿತ್ತು. ನನಗೇನರ ಆಗಿತ್ತಂದ್ರ ಹ್ಯಾಂಗ್ರೀ. ಇಷ್ಟು ಬೇಜವಾಬ್ದಾರಿ ಆದ್ರ ಹ್ಯಾಂಗ್‌..’ “ನಿಮಗ ಏನರ ಆಗೂವಂಥದ್ದು ಏನೂ ಇಲ್ಲ, ಅನ್ನೂದು ಗೊತ್ತ ಮಾಡಿಕೊಂಡ ಹೊಗೀನ್ರೀ’ “ಆದರೂ ಉಪಯೋಗ್‌ ಇಲ್ಲ ಬಿಡ್ರೀ. ನೀವು ಭಾಳ ಬೇಜವಾಬ್ದಾರಿ ಮಾಡಿದ್ರಿ..’ ಮೊದಲೇ ಮನಸ್ಸು ಸರಿಯಿಲ್ಲದ ನನಗೆ ಸ್ವಲ್ಪ ಸಿಟ್ಟು ಬರತೊಡಗಿತ್ತು. ಏನೂ ಅನಾನುಕೂಲವಾಗದೆ ಎಲ್ಲ ಆರೈಕೆಗಳನ್ನು ಸರಿಯಾಗಿ ಪಡೆದ ಇವನ ಬಾಯಿಂದ ಇಂಥ ಮಾತುಗಳನ್ನು ನಾನು ನಿರೀಕ್ಷಿಸಿರಲಿಲ್ಲ. ಅಲ್ಲದೆ, ಆಗಿನ ನನ್ನ ಮನಸ್ಥಿತಿ ಯಾರ¨ªಾದರೂ ಸಹಾನುಭೂತಿಯನ್ನು ಬಯಸುವಂಥದಾಗಿತ್ತು. ಅದಕ್ಕೇ “ಕೇಳಬಾರದ’ಒಂದು ಪ್ರಶ್ನೆಯನ್ನು ಅವನಿಗೆ ಕೇಳಿದೆ. ಅಂತಹ ಪ್ರಶ್ನೆಯನ್ನು ಕೇಳಿ ಅವನಿಂದ ಸಾಂತ್ವನದಾಯಕ ಉತ್ತರ ಅಪೇಕ್ಷಿಸಬಾರದಾಗಿತ್ತೆಂದು ಆ ಮೇಲೆ ಪಶ್ಚಾತ್ತಾಪಪಟ್ಟಿದ್ದೇನೆ.

“ಬರುವಾಗ ಹಾದಿಯೊಳಗ ನನಗ ಏನರ ಆಗಿತ್ತಂದರ ಎನ್ಮಾಡ್ತಿದ್ರಿ….?’ ಎಂದು ಕೇಳಿದೆ. (ನಾನಿಲ್ಲಿ ಅವನಿಂದ ನಿರೀಕ್ಷಿದ ಉತ್ತರ: “ಸಾಹೇಬ್ರ, ಹಂಗ್ಯಾಕ ಅಂತೀರಿ, ಬಿಡು ಅನ್ರಿ’) ಆದರೆ ಅವನು ನೀಡಿದ ಉತ್ತರ ಅನಿರೀಕ್ಷಿತವೂ, ಆಘಾತಕರವೂ ಆಗಿತ್ತು. ಅದು ನನ್ನ ಕಿವಿಯಲ್ಲಿ ಅನೇಕ ದಿನ ರಿಂಗಣಿಸಿತು. ಅವನು ಶಾಂತನಾಗಿ, ಅವನಿಗೂ ನನಗೂ ಏನೂ ಸಂಬಂಧವೇ ಇಲ್ಲದಂತೆ ಉತ್ತರಿಸಿದ: “ನೀ ಸತ್ತಿ¨ªೆಂದ್ರ ಇನ್ನೊಬ್ಬ ಡಾಕ್ಟರ್‌ ಕಡೆ ಹೋಗ್ತಿ¨ªೆ…’
ಒಂದು ಕ್ಷಣ ನಾನು ದಿಗ್ಭ್ರಾಂತನಾದೆ. ಸಾವರಿಸಿಕೊಂಡು ಹೊರಬಂದೆ. ನನ್ನ ಚೇಂಬರ್‌ ನಲ್ಲಿ ಕುಳಿತು ಮನಸ್ಸನ್ನು ಶಾಂತಗೊಳಿಸಿಕೊಂಡು ನನಗೆ ನಾನೇ ಸಮಾಧಾನಿಸಿಕೊಂಡೆ. ಎಂಥಾ ಕಟುಸತ್ಯವನ್ನು ಅವನು ಎಷ್ಟು ಸರಳವಾಗಿ, ನಿರ್ಭಿಡೆಯಿಂದ, ನಿರ್ಭಾವುಕನಾಗಿ ಹೇಳಿಬಿಟ್ಟನಲ್ಲ’, ಅನಿಸಿತು.

ಇಲ್ಲಿ ಯಾರೂ ಅನಿವಾರ್ಯರಲ್ಲ. ನೀನಿರದಿದ್ದರೆ ಇನ್ನೊಬ್ಬ ನಿನ್ನ ಕೆಲಸ ನೋಡಿಕೊಳ್ಳುತ್ತಾನೆ.. ಎಂಬ ಸತ್ಯವನ್ನು ಅರ್ಥವಾಗುವ’ ಹಾಗೆ ಮನದಟ್ಟು ಮಾಡಿದ್ದ. ಜೀವನವೆಂಬ ಶಾಲೆಯಲ್ಲಿ  ಪಾಠ ಮಾಡಲು ಇಂಥವರೇ ಗುರುವಾಗಬೇಕೆಂಬುದಿಲ್ಲವಲ್ಲ…!

ಡಾ. ಶಿವಾನಂದ ಕುಬಸದ

ಟಾಪ್ ನ್ಯೂಸ್

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

58758

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

7-gundlupete

Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

8-uv-fusion

Kannada: ಕನ್ನಡ ನಾಡಲ್ಲಿ ಪ್ರತಿದಿನವೂ ನಿತ್ಯೋತ್ಸವವಿರಲಿ

58758

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.