ಟ್ವಿನ್ ಶರ್ಟ್, ಈಗ ಹೊಸ ಟ್ರೆಂಡ್
Team Udayavani, Jan 11, 2019, 7:16 AM IST
ಫ್ಯಾಶನ್ ಲೋಕದಲ್ಲಿ ಹೊಸ ಟ್ರೆಂಡ್ ಹುಟ್ಟಿಕೊಳ್ಳುತ್ತಲೇ ಇರುತ್ತದೆ. ಒಬ್ಬರಿಗೆ ಇಷ್ಟವಾಗಿದ್ದು ನಾಳೆ 10 ಜನರಿಗೆ ಇಷ್ಟವಾಗಿರುತ್ತದೆ. ಇದೇ ರೀತಿ ಫ್ಯಾಶನ್ ಲೋಕಕ್ಕೆ ಲಗ್ಗೆ ಇಟ್ಟಿರುವುದು ಟ್ವಿನ್ ಶರ್ಟ್ ಇದರ ವಿಶೇಷತೆಯೇ ಹಾಗೇ ಒಂದೇ ರೀತಿಯ ಕಲರ್ ಬೇರೆ ಬೇರೆ ಸ್ಲೋಗನ್‌ಗಳಿರುವ ಶರ್ಟ್ ಈಗ ಯುವಜನರ ಫೆವರೆಟ್.
ಟ್ವಿನ್ ಶರ್ಟ್ ಎಂದೇ ಪ್ರಸಿದ್ಧಿ ಪಡೆದಿದ್ದು, ಎಲ್ಲ ವಯಸ್ಸಿನವರೆಗೂ ಒಪ್ಪುತ್ತದೆ. ಹುಟ್ಟಿದ ಹಬ್ಬ, ಪಾರ್ಟಿ, ಹೀಗೆ ವಿವಿಧ ಸನ್ನಿವೇಶಕ್ಕೆ ತಕ್ಕಂತೆ ಇದನ್ನು ಧರಿಸಬಹುದಾಗಿದ್ದು ಕಡಿಮೆ ಬೆಲೆಯಲ್ಲಿ ಇದು ದೊರೆಯುತ್ತದೆ.
ವಿಭಿನ್ನ ಸ್ಲೋಗನ್
ಹತ್ತು ಹಲವು ಸ್ಲೋಗನ್‌ಗಳನ್ನು ಹೊತ್ತ ಶರ್ಟ್‌ಗಳು ಮಾರುಕಟ್ಟೆಗಳಿಗೆ ಲಗ್ಗೆ ಇಟ್ಟಿದ್ದು, ಪ್ಲೇನ್ ಶರ್ಟ್‌ಗಳ ಮೇಲೆ ನಮಗೆ ಬೇಕಾದ ವಿನ್ಯಾಸಗಳನ್ನು ಮಾಡಿಸಿಕೊಳ್ಳಬಹುದು. ಪ್ರೇಮಿಗಳು ಹೆಸರಿನ ಮೊದಲ ಅಕ್ಷರಕ್ಕೆ, ಇನ್ನು ಕೆಲವರು ಹುಟ್ಟಿದ ದಿನಕ್ಕನುಗುಣವಾಗಿ ಶರ್ಟ್ ಹಾಕಿಕೊಳ್ಳುತ್ತಿದ್ದಾರೆ ಅದಲ್ಲದೆ ಸಮಾರಂಭಗಳಲ್ಲಿ ಇಡೀ ಕುಟುಂಬ ಒಂದೇ ರೀತಿಯಲ್ಲಿ ಶರ್ಟ್ ತೊಡುವುದು ಫ್ಯಾಶನ್ ಆಗಿದೆ.
ಫೋಟೋ ಶೂಟ್‌ಗೆ ಬೆಸ್ಟ್
ಹೆಚ್ಚುತ್ತಿರುವ ಫೋಟೋ ಶೂಟ್ಗಳಿಗೆ ಒಂದೇ ಬಣ್ಣದ ಟೀ ಶರ್ಟ್ ಉತ್ತಮ ಆಯ್ಕೆ. ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಶೂಟ್ಗಳಿಗೆ ಇದನ್ನು ಹೆಚ್ಚು ಬಳಸುತ್ತಿದ್ದಾರೆ. ಅದಲ್ಲದೆ ದೂರ ಪ್ರಯಾಣ ಮಾಡುವಾಗ, ಹಾಗೂ ಪಾರ್ಟಿಗಳಿಗೂ ಇದನ್ನು ಧರಿಸುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಟ್ವಿನ್ಸ್‌ಗೆ ಟ್ವಿನ್ ಶರ್ಟ್
ಮನೆಯಲ್ಲಿ ಟ್ವಿನ್ಸ್ ಮಕ್ಕಳಿದ್ದರೆ ಅಥವಾ ಅಣ್ಣ -ತಂಗಿ, ಅಕ್ಕ-ತಂಗಿ ಫ್ರೆಂಡ್ಸ್ ಅವರಿಗೆ ಒಂದೇ ರೀತಿಯ ಬಟ್ಟೆ ಹಾಕುವುದು ಟ್ರೆಂಡ್ ಆಗಿದೆ. ವಿಶೇಷವೆನೆಂದರೆ ಅಜ್ಜ-ಅಜ್ಜಿ ಮಗ-ಸೊಸೆ ಮೊಮ್ಮಕ್ಕಳು ಒಂದೇ ರೀತಿಯ ಶರ್ಟ್ ಧರಿಸುವುದು ಕೂಡ ಹೆಚ್ಚಾಗಿದೆ. ಹೀಗೆ ಮಾರುಕಟ್ಟೆಯಲ್ಲಿ 300 ರೂ. ನಿಂದ ಶೂರುವಾಗಿ 1000 ರೂ.ವರೆಗೂ ಇದರ ಬೆಲೆಯಿದ್ದು ಬೆಟ್ಟೆಯ ಗುಣಮಟ್ಟಕ್ಕೆ ತಕ್ಕಂತೆ ದರಗಳನ್ನು ನಿಗದಿಪಡಿಸಲಾಗಿದೆ.
ವಿವಿಧ ರೀತಿಯ ಬಟ್ಟೆ, ವಿನ್ಯಾಸ
ಕಾಟನ್, ನೈಲಾನ್, ಸಿಂಥೆಟಿಕ್ ಬಟ್ಟೆಗಳಲ್ಲಿ ಇವು ಲಭ್ಯವಿದ್ದು ವಿವಿಧ ಬಟ್ಟೆಗಳಿಗೆ ಅದಕ್ಕೆ ತಕ್ಕಂತೆ ಬೆಲೆ ನಿಗದಿಪಡಿಸಲಾಗಿರುತ್ತದೆ. ಕೆಲವು ಶರ್ಟ್ ತುಂಬಾ ಸಿಂಪಲ್ ಆಗಿದ್ದು ಗೊಂಬೆಗಳು ಅಥವಾ ಸ್ಲೋಗನ್‌ಗಳಿರುತ್ತವೆ. ಇನ್ನು ಕೆಲವು ವಿಭಿನ್ನ ಕಲರ್ ಕಾಂಬಿನೇಷನ್ ಹೊಂದಿದ್ದು ವಿಭಿನ್ನ ಡಿಸೈನ್‌ಗಳಿಂದ ಮತ್ತು ಸ್ಟೋನ್‌ಗಳಿಂದ ಮಾಡಿರಲಾಗುತ್ತದೆ. ಪ್ಲೇನ್ ಟೀ ಶರ್ಟ್ ಮೇಲೆ ಕಸೂತಿ ಹಾಕಿದವುಗಳಿಗೂ ಕೂಡ ತುಂಬಾ ಬೇಡಿಕೆ ಇದ್ದು ಹೆಚ್ಚಿನ ವರ್ಕ್‌ಗಳಿಗೆ ಹೆಚ್ಚಿನ ಬೆಲೆ ನಿಗದಿಪಡಿಸಲಾಗುತ್ತವೆ.
•ಪ್ರೀತಿ ಭಟ್ ಗುಣವಂತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.