ಕೊಹ್ಲಿ, ಶಾಸ್ತ್ರಿಗೆ ಎಸ್‌ಸಿಜಿ ಸದಸ್ಯತ್ವ
Team Udayavani, Jan 12, 2019, 12:30 AM IST
ಸಿಡ್ನಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ ಅವರಿಗೆ ಸಿಡ್ನಿ ಕ್ರಿಕೆಟ್ ಗ್ರೌಂಡ್ (ಎಸ್‌ಸಿಜಿ) ಜೀವಮಾನ ಸದಸ್ಯತ್ವವನ್ನು ನೀಡಿ ಗೌರವಿಸಿದೆ.
ಶುಕ್ರವಾರ ಎಸ್‌ಸಿಜಿ ಕೊಹ್ಲಿ ಹಾಗೂ ರವಿಶಾಸ್ತ್ರಿಯವರು ಕ್ರಿಕೆಟಿಗೆ ಹಾಗೂ ಸ್ಟೇಡಿಯಂನ ಇತಿಹಾಸ ನೀಡಿರುವ ಕೊಡುಗೆಯ ಆಧಾರದ ಮೇಲೆ ಸದಸ್ಯತ್ವ ನೀಡಿದೆ. ಉಳಿದಂತೆ ಈ ಗೌರವಕ್ಕೆ ಪಾತ್ರರಾದವರೆಂದರೆ ಸಚಿನ್ ತೆಂಡುಲ್ಕರ್ ಹಾಗೂ ಬ್ರಿಯನ್ ಲಾರಾ.
ಈ ವಿಚಾರವನ್ನು ರವಿಶಾಸ್ತ್ರಿ ಕೊಹ್ಲಿಯೊಂದಿಗಿನ ಫೋಟೊ ಸಹಿತ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ವಿರಾಟ್ ಕೊಹ್ಲಿಯೊಂದಿಗೆ ಸಿಡ್ನಿ ಗ್ರೌಂಡ್‌ನ ಸದಸ್ಯತ್ವ ಸಿಕ್ಕಿರುವುದು ಬಹುದೊಡ್ಡ ಗೌರವ’ ಎಂದು ಬರೆದುಕೊಂಡಿದ್ದಾರೆ.
“ಆಸ್ಟ್ರೇಲಿಯಾ ನೆಲದಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿ ಜಯಿಸಿದ ಭಾರತ ತಂಡಕ್ಕೆ ಅಭಿನಂದನೆಗಳು. ಕ್ರಿಕೆಟ್ ರಾಷ್ಟ್ರವಾಗಿರುವ ಭಾರತ ಟೆಸ್ಟ್ ಕ್ರಿಕೆಟಿಗೆ ಹೆಚ್ಚಿನ ಗಮನಹರಿಸುತ್ತಿರುವುದನ್ನು ನೋಡಲು ಭಾರೀ ಖುಷಿಯಾಗುತ್ತಿದೆ. ವಿರಾಟ್ ಹಾಗೂ ರವಿ ಈ ವಿಜಯದಲ್ಲಿ ಮುಂಚೂಣಿಯಲ್ಲಿದ್ದಾರೆ. ಐದು ದಿನಗಳ ಟೆಸ್ಟ್‌ಗೆ ಇವರಿಬ್ಬರೂ ಉತ್ತಮ ಸೇವೆ ನೀಡುತ್ತಿದ್ದಾರೆ’ ಎಂದು ಎಸ್‌ಸಿಜಿ ಅಧ್ಯಕ್ಷ ಟೋನಿ ಶೆಫರ್ಡ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.