ತೀರ್ಥೊಟ್ಟು ಸೇತುವೆ: ರಸ್ತೆ ಕಾಮಗಾರಿ ಪೂರ್ಣ
Team Udayavani, Jan 11, 2019, 7:35 PM IST
ಅಜೆಕಾರು: ಕಡ್ತಲ ಗ್ರಾ. ಪಂ. ಹಾಗೂ ಮರ್ಣೆ ಗ್ರಾ. ಪಂ. ನಡುವೆ ಸಂಪರ್ಕ ಕಲ್ಪಿಸುವ ತೀರ್ಥೊಟ್ಟು ಸೇತುವೆ ಹಾಗೂ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಸುಮಾರು 2.4ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿಗಳನ್ನು ನಡೆಸಲಾಗಿದೆ. 50-60 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಮುಳುಗು ಸೇತುವೆ ದುರ್ಬಲವಾಗಿ ಅಪಾಯವನ್ನು ಆಹ್ವಾನಿಸುವಂತಿದ್ದು, ಆಧಾರ ಸ್ಥಂಭಗಳು ಕುಸಿತಗೊಂಡಿದ್ದವು. ಇದನ್ನು ತೆರವುಗೊಳಿಸಿ ಶಾಶ್ವತವಾದ ಸೇತುವೆ ನಿರ್ಮಿಸುವಂತೆ ಸ್ಥಳೀಯರು ನಿರಂತರ ಮನವಿ ಸಲ್ಲಿಸುತ್ತ ಬಂದಿದ್ದರು. ಇದೀಗ ಅವರ ಮನವಿಗೆ ಸ್ಪಂದಿಸಿದ ಸ್ಥಳೀಯಾಡಳಿತ, ಶಾಸಕರು ಸರಕಾರದಿಂದ ಅನುದಾನವನ್ನೂ ಬಿಡುಗಡೆಗೊಳಿಸಿದ್ದರು. ಇದೀಗ ಕಾಮಗಾರಿ ಸಂಪೂರ್ಣಗೊಂಡ ಪರಿಣಾಮ ಸುಗಮ ಸಂಚಾರಕ್ಕೆ ತೆರೆದುಕೊಂಡಿದೆ.
ತೀರ್ಥೊಟ್ಟು ಮಾರ್ಗವಾಗಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು ಅಜೆಕಾರು, ದೊಂಡೇರಂಗಡಿ, ಕಡ್ತಲ, ಪೆರ್ಡೂರು ಪರಿಸರದ ಜನತೆಗೆ ಸೇತುವೆಯಿಂದಾಗಿ ಬಹಳಷ್ಟು ಅನುಕೂಲವಾಗಲಿದೆ. ಜೂನ್ ತಿಂಗಳಿನಲ್ಲಿ ಸೇತುವೆಯ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿತ್ತು. ಇದೀಗ ಇಕ್ಕೆಲಗಳಲ್ಲಿ ತಡೆಗೋಡೆ ನಿರ್ಮಿಸಿ ರಸ್ತೆಗೆ ಡಾಮರೀಕರಣಗೊಳಿಸುವ ಕಾಮಗಾರಿಯೂ ಮುಗಿದಿದೆ.
ಸ್ಥಳೀಯ ಜನರ ಬಹುದಿನದ ಬೇಡಿಕೆಗೆ ಶಾಸಕ ಸುನಿಲ್ ಕುಮಾರ್ ಸ್ಪಂದಿಸಿ ಅನುದಾನವನ್ನು ಒದಗಿಸಿದ್ದು ಗುತ್ತಿಗೆದಾರರಾದ ಕೆದೂರು ಸದಾನಂದ ಶೆಟ್ಟಿಯವರು ಗುಣಮಟ್ಟ ಕಾಯ್ದುಕೊಂಡು ಅತ್ಯಂತ ತ್ವರಿತವಾಗಿ ಕಾಮಗಾರಿಯನ್ನು ನಡೆಸಿಕೊಟ್ಟಿದ್ದಾರೆ ಎಂದು ಕಡ್ತಲ ಗ್ರಾಮ ಪಂಚಾಯತ್ ಅಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ ಸಂತಸ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್ ಕುಮಾರ್
Udupi: ರೈಲು ಬಡಿದು ವ್ಯಕ್ತಿ ಸಾವು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.