ಬೆಟ್ಟದ ದಾರಿ ಸಿದ್ಧ: ರಜಾದಿನಕ್ಕೆ ಮಕ್ಕಳ ಚಿತ್ರ
Team Udayavani, Jan 12, 2019, 6:14 AM IST
“ಬೆಟ್ಟದ ದಾರಿ’ ಚಿತ್ರವನ್ನು ಮಕ್ಕಳ ಚಿತ್ರ ಎಂದು ಪರಿಗಣಿಸಿ, ಸೆನ್ಸಾರ್ ಮಂಡಳಿ ಯಾವುದೇ ಕಟ್ ಹೇಳದೆ “ಯು’ ಪ್ರಮಾಣ ಪತ್ರ ನೀಡಿದೆ. ಚಿತ್ರವನ್ನು ಮಾರ್ಚ್ ಅಂತ್ಯ ಅಥವಾ ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಇದು ಸಂಪೂರ್ಣ ಮಕ್ಕಳ ಕಥೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ನಡೆದ ಚಿತ್ರಣ ಇಲ್ಲಿದೆ. ಹಳ್ಳಿಯಲ್ಲಿ ತಲೆದೋರಿರುವ ನೀರಿನ ಸಮಸ್ಯೆಯನ್ನು ಆ ಹಳ್ಳಿ ಒಂದಷ್ಟು ಮಕ್ಕಳೆಲ್ಲರೂ ಸೇರಿಕೊಂಡು ನೀರಿನ ಸಮಸ್ಯೆಯನ್ನು ಬಗೆಹರಿಸಲು ಮುಂದಾಗುತ್ತಾರೆ.
ಸರ್ಕಾರಕ್ಕೇ ತಲೆನೋವಾಗಿರುವ ನೀರಿನ ಸಮಸ್ಯೆಗೆ ಆ ಊರ ಮಕ್ಕಳು ಹೇಗೆ ನೀರಿನ ಸಮಸ್ಯೆ ಬಗೆಹರಿಸುತ್ತಾರೆ ಎಂಬುದೇ ಕಥೆಯ ಸಾರಾಂಶ. ಮಾ.ಚಂದ್ರು ಈ ಚಿತ್ರದ ನಿರ್ದೇಶಕರು. ಬಹುತೇಕ ವಿಜಯಪುರ ಸುತ್ತಮುತ್ತಲ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಉಳಿದಂತೆ ಸಾಗರ ಸಮೀಪದ ಕಮಲಶಿಲೆ, ಶಿವಗಂಗೆ ಇತರೆಡೆ ಚಿತ್ರೀಕರಿಸಲಾಗಿದ್ದು, ಚಿತ್ರಕ್ಕೆ ವೀರ್‌ಸಮರ್ಥ್ ಅವರ ಸಂಗೀತವಿದೆ. ಚಿತ್ರದ ನಾಲ್ಕು ಹಾಡುಗಳಿದ್ದು, ನಾಗೇಂದ್ರ ಪ್ರಸಾದ್, ಕೆ.ಕಲ್ಯಾಣ್ ಅವರು ಹಾಡುಗಳನ್ನು ಬರೆದಿದ್ದಾರೆ. ಅರ್ಜುನ್ ಕಿಟ್ಟು ಅವರ ಸಂಕಲನ ಚಿತ್ರಕ್ಕಿದೆ.
ನಂದಕುಮಾರ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಇನ್ನು, ಚಂದ್ರಕಲಾ ಟಿ.ಆರ್. ಅವರು ಚಿತ್ರದ ನಿರ್ಮಾಪಕರು. ಇವರಿಗೆ ಇದು ಎರಡನೇ ಚಿತ್ರ. ಈ ಹಿಂದೆ “ಮೂಕ ಹಕ್ಕಿ’ ಚಿತ್ರ ನಿರ್ಮಾಣ ಮಾಡಿದ್ದರು. “ಬೆಟ್ಟದ ದಾರಿ’ ಮೂಲಕ ಮಕ್ಕಳ ಚಿತ್ರ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಮಾಸ್ಟರ್ ನಿಶಾಂತ್ ಟಿ.ರಾಥೋಡ್, ಬೇಬಿ ಲಕ್ಷ್ಮೀಶ್ರೀ, ಮಾ. ರಂಗನಾಥ್ ಯಾದವ್, ಮಾ. ಅಲೋಕ್, ಮಾ. ವಿಘ್ನೇಶ್, ಮಾ. ರೋಹಿತ್‌ಗೌಡ, ರಮೇಶ್ ಭಟ್, ಮನದೀಪ್ ರಾಯ್, ಮೈಸೂರ್ ಮಲ್ಲೇಶ್, ಆರ್. ನಾಗೇಶ್, ಮಂಜುಳಾ ರೆಡ್ಡಿ ಸೇರಿದಂತೆ ಇತರರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.