ಅಜ್ಜನ ಜಾತ್ರೆಗೆ ವಿದೇಶಿ ದಂಪತಿಯಿಂದ ಚಾಲನೆ
Team Udayavani, Jan 12, 2019, 10:31 AM IST
ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳವೆಂದೇ ಖ್ಯಾತಿ ಪಡೆದ ಇಲ್ಲಿಯ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ವಿದೇಶಿ ದಂಪತಿ ಚಾಲನೆ ನೀಡಲಿದ್ದಾರೆ. ಕೆನಡಾದ ಮ್ಯಾಥ್ಯೂಪೌರ್ಟಿಯರ್ ದಂಪತಿ ಕರ್ನಾಟಕದಲ್ಲಿ ಸಂಗೀತ ಶಾಲೆಯೊಂದನ್ನು ತೆರೆದು 300ಕ್ಕೂ ಹೆಚ್ಚು ಮಕ್ಕಳಿಗೆ ಊಟ-ವಸತಿಯೊಂದಿಗೆ ಉಚಿತ ಶಿಕ್ಷಣ ನೀಡಿ ಹೆಸರು ಮಾಡಿದ್ದಾರೆ.
ಈ ದಂಪತಿ ಭಾರತಕ್ಕೆ ಬಂದು ರಾಮಕೃಷ್ಣ ಮಿಷನ್‌ನಲ್ಲಿ ಕೆಲ ದಿನಗಳ ಕಾಲ ಅಧ್ಯಾತ್ಮ ಮತ್ತು ಯೋಗ ಕಲಿತಿದ್ದಾರೆ. ಎರಡು ವರ್ಷಗಳ ಕಾಲ ಪಶ್ಚಿಮ ಬಂಗಾಳದ ರವೀಂದ್ರನಾಥ ಠ್ಯಾಗೋರ ಅವರ ಶಾಂತಿನಿಕೇತನದಲ್ಲಿ ಪತ್ನಿ ಹಾಗೂ ತಾವು ವಿದ್ಯಾರ್ಥಿಗಳಾಗಿದ್ದರು. ಕಾಶಿಯಲ್ಲಿ ಕೆಲ ದಿನ ಸಂಗೀತ ಅಭ್ಯಾಸ ಮಾಡಿದ ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಮಲ್ಲಿಕಾರ್ಜುನ ಮನ್ಸೂರ ಅವರ ಪುತ್ರ ರಾಜಶೇಖರ ಮನ್ಸೂರ ಅವರಲ್ಲಿ ಶಾಸ್ತ್ರೀಯ ಸಂಗೀತದ ಅಭ್ಯಾಸ ಮಾಡಿದ್ದಾರೆ.
ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕೆಂಬ ಆಸೆ ಮ್ಯಾಥ್ಯೂ ಪೌರ್ಟಿಯರ್ ಅವರಿಗೆ ಮೊಳಕೆಯೊಡೆದು ತಮ್ಮ ಸಹೋದರನ ಸಹಾಯದಿಂದ ಧಾರವಾಡ ಹತ್ತಿರ ಕಲಕೇರಿ ಗ್ರಾಮದ 5 ಎಕರೆ ಸ್ಥಳದಲ್ಲಿ 2003ರಲ್ಲಿ ಒಂದು ಸಂಗೀತ ವಿದ್ಯಾಲಯ ಆರಂಭಿಸಿದ್ದಾರೆ. ಅಲ್ಲಿ ಶಾಸ್ತ್ರೀಯ ಸಂಗೀತ, ತಬಲಾ, ಹಾರ್ಮೋನಿಯಂ, ಬಾನ್ಸೂರಿ, ಸಿತಾರ ಜೊತೆಗೆ ಕನ್ನಡ ಶಾಲೆ ಆರಂಭಿಸಿದರು. ಈಗ ಅಲ್ಲಿ ಸುಮಾರು 300 ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ ಸೇರಿದಂತೆ ಎಲ್ಲ ಸೌಲಭ್ಯ ಕಲ್ಪಿಸಿದ್ದಾರೆ. ಇದಕ್ಕಾಗಿ ಅವರು ಪ್ರತಿ ವರ್ಷ ಲಕ್ಷಾಂತರ ರೂಪಾಯಿ ವಿನಿಯೋಗಿಸುತ್ತಿದ್ದಾರೆ. ತಮ್ಮ ದೇಶದಲ್ಲಿ ದೇಣಿಗೆ ಸಂಗ್ರಹಿಸಿಕೊಂಡು ಬಂದು ಇಲ್ಲಿ ಶಾಲೆ ನಡೆಸುತ್ತಿರುವುದು ವಿಶೇಷ. ವಿದ್ಯಾರ್ಥಿಗಳಿಗೆ ಸೂಕ್ತ ವಾತಾವರಣ ಇರಬೇಕು ಎನ್ನುವ ಕಾರಣಕ್ಕೆ ಕಲಕೇರಿ ಗ್ರಾಮದ ಕೆರೆಯ ದಡದಲ್ಲಿ ಜನರ ಸಹಯೋಗದಲ್ಲಿ ಕಟ್ಟಡ ನಿರ್ಮಿಸಿದ್ದಾರೆ.
ಸಂಗೀತ ಹಾಗೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿದ್ದಾರೆ. ಹತ್ತಾರು ಶಿಕ್ಷಕರನ್ನು ನೇಮಿಸಿಕೊಂಡಿದ್ದಾರೆ. ಕೆನಡಾ ಸೇರಿದಂತೆ ನಾನಾ ದೇಶಗಳ 15 ಜನ ಸ್ವಯಂ ಸೇವಕರು ಇಲ್ಲಿ ನೆಲೆಸಿದ್ದು, ಇಲ್ಲಿಯ ಉಸ್ತುವಾರಿ ಮತ್ತು ಮಕ್ಕಳ ಪಾಲನೆ, ಪೋಷಣೆ ಮಾಡುತ್ತಿದ್ದಾರೆ. ಕಂಪ್ಯೂಟರ್ ಸೇರಿದಂತೆ ಆಧುನಿಕ ಶಿಕ್ಷಣಕ್ಕೂ ವಿದ್ಯಾರ್ಥಿಗಳನ್ನು ಅಣಿಗೊಳಿಸುತ್ತಾರೆ. ಇಲ್ಲಿ ಓದಿದ ಮತ್ತು ಸಂಗೀತ ಕಲಿತ ಅದೆಷ್ಟೋ ಮಕ್ಕಳು ಈಗ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ.
ಖರ್ಚು ವೆಚ್ಚ: ಕೇವಲ ಹತ್ತನೇ ತರಗತಿಯವರೆಗೆ ಮಾತ್ರವಲ್ಲ ಇಲ್ಲಿ ಕಲಿತ ವಿದ್ಯಾರ್ಥಿಗಳಿಗೆ ನಂತರವೂ ಪಿಯುಸಿ, ಪದವಿ ಶಿಕ್ಷಣವನ್ನು ಧಾರವಾಡದಲ್ಲಿ ಕೊಡಿಸುತ್ತಾರೆ. ಅನೇಕ ವಿದ್ಯಾರ್ಥಿಗಳು ಸ್ನಾತಕೋತ್ತರ ಶಿಕ್ಷಣವನ್ನೂ ಪಡೆಯುತ್ತಿದ್ದಾರೆ. ನಮ್ಮ ದೇಶದಲ್ಲಿಯೇ ಜನಿಸಿ, ಇಲ್ಲಿಯ ಸಂಪತ್ತನ್ನು ಅನುಭವಿಸಿದರೂ ದೇಶಕ್ಕಾಗಿ ಸೇವೆ ಮಾಡುವವರು ತುಂಬಾ ವಿರಳ. ಹೀಗಿರುವಾಗ ತನ್ನ ದೇಶದಲ್ಲಿ ದುಡಿದು ತಂದ ಸಂಪತ್ತನ್ನು ನಮ್ಮ ದೇಶದ, ವಿಶೇಷವಾಗಿ ಕನ್ನಡ ಮಕ್ಕಳಿಗಾಗಿ ಉಪಯೋಗಿಸುತ್ತಿದ್ದಾರೆ. ಈ ವಿದೇಶಿ ದಂಪತಿಗೆ ಈ ಬಾರಿ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲು ಗವಿಸಿದ್ಧೇಶ್ವರ ಶ್ರೀಗಳು ಆಹ್ವಾನಿಸಿರುವುದು ಮತ್ತಷ್ಟು ವಿಶೇಷತೆ ಪಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Kushtagi: ಬಸ್ ಸೇವೆ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Nigeria: ಮುಳುಗಿದ 200 ಪ್ರಯಾಣಿಕರಿದ್ದ ಬೋಟ್; ಮಹಿಳೆಯರು ಸೇರಿ ಹಲವರ ಸಾವು
Gujarat: 200 ರೂ ಆಸೆಗಾಗಿ ಪಾಕಿಸ್ತಾನಕ್ಕೆ ನೌಕಾಪಡೆ ಮಾಹಿತಿ ನೀಡಿದಾತನ ಬಂಧನ
Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!
Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ
Karnataka Govt.,: ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.