ಅನ್ಯರ ಸದ್ಗುಣಗಳ ವರ್ಣಿಸಿ
Team Udayavani, Jan 12, 2019, 11:22 AM IST
ಹುಮನಾಬಾದ: ಸೃಷ್ಟಿಕರ್ತ ಪರಮಾತ್ಮ ನಮ್ಮೆಲ್ಲರಿಗೆ ನೀಡಿರುವ ಅಮೂಲ್ಯ ಸಮಯವನ್ನು ಅನ್ಯರ ವೈಯಕ್ತಿಕ ದೋಷಗಳ ಎಣಿಕೆಗಾಗಿ ವ್ಯಯಿಸದೇ ಅವರಲ್ಲಿನ ಸದ್ಗುಣಗಳನ್ನು ವರ್ಣಿಸಲು ಬಳಸಬೇಕು ಎಂದು ಬಸವಕಲ್ಯಾಣ ಅನುಭವ ಮಂಟಪದ ಶ್ರೀ ಸಂಗಮೇಶ್ವರ ದೇವರು ಹೇಳಿದರು.
ಪಟ್ಟಣದ ಬಸವಸೇವಾ ಪ್ರತಿಷ್ಠಾನ ಗೃಹ ನಿರ್ಮಾಣ ಮಂಡಳಿಯ ಬಯಲು ರಂಗ ಮಂಟಪದಲ್ಲಿ ಚನ್ನಬಸಪ್ಪ ವಡ್ಡನಕೇರಿ ಅವರ ಆತಿಥ್ಯದಲ್ಲಿ ನಡೆದ 192ನೇಯ ಬಸವಜ್ಯೋತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೀವನದಲ್ಲಿ ಬರುವಾಗ ಯಾರೂ ಏನನ್ನೂ ತಂದಿಲ್ಲ, ಹೋಗುವಾಗ ತೆಗೆದುಕೊಂಡೂ ಹೋಗಿಲ್ಲ. ಹೋಗುವುದು ಇಲ್ಲ. ಶಾಶ್ವತವಲ್ಲದ ಬದುಕಿನಲ್ಲಿ ನಾನು, ನನ್ನದೆಂದು ಅಹಂಕಾರಪಡದೇ ದೇಹದ ಮೇಲಿನ ವ್ಯಾಮೋಹ ತೊರೆದು ಪರಮಾತ್ಮನ ಧ್ಯಾನ ಹಾಗೂ ಸಕಲರಿಗೂ ಲೇಸನ್ನೇ ಬಯಸುವುದಕ್ಕಾಗಿ ಮೀಸಲಾಗಿಸಬೇಕು. ಎಷ್ಟು ಕಾಲ ಬದುಕಿದೆ ಎಂಬುದಕಿಂತ ಹೇಗೆ ಬದುಕಿದೆನೆಂಬುದು ಮುಖ್ಯ ಎಂದು ಹೇಳಿದರು. ಬೀದರ್ ಸಿದ್ಧಾರ್ಥ ಪದವಿ ಕಾಲೇಜು ಪ್ರಾಧ್ಯಾಪಕ ಜಗದೇವಪ್ಪ ಅಕ್ಕಿ ಮಾತನಾಡಿ, ಬಸವಣ್ಣನವರ ಕಳಬೇಡ, ಕೊಲಬೇಡ ಎನ್ನುವ ಸಪ್ತಸೂತ್ರ ಮನುಷ್ಯ ಜನ್ಮದ ಸಾರ್ಥಕತೆಯನ್ನು ತಿಳಿಸುತ್ತದೆ ಎಂದರು.
ಜಾಗತಿಕ ಲಿಂಗಾಯತ ಧರ್ಮದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಮಠಪತಿ ಮಾತನಾಡಿ, ಜನವರಿ 20ರಂದು ನಡೆಯಲಿರುವ ಸಮಾವೇಶ ಮತ್ತು ಫೆಬ್ರವರಿ 17,18 ಮತ್ತು 19ರಂದು ನಡೆಯಲಿರುವ ವಚನ ವಿಜಯೋತ್ಸವ ಕಾರ್ಯಕ್ರಮದಲ್ಲಿ ಲಿಂಗವಂತ ಅನುಯಾಯಿಗಳು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಸಂಗಮೇಶ್ವರಿ ಮಾತನಾಡಿ, ಬಸವ ಚಾನಲ್ ಪೋಷಣೆ ನಮ್ಮ ನಿಮ್ಮೆಲ್ಲರ ಜವಾಬ್ದಾರಿ. ಅದನ್ನು ಕರ್ತವ್ಯವೆಂದು ಭಾವಿಸಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಬೀದರ ಬಸವಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ಮಾತನಾಡಿ, ರಾಜಕೀಯ ಪಕ್ಷಗಳ ಕೈಗೆ ಸಿಕ್ಕು ಲಿಂಗಾಯತ ಧರ್ಮ ಒದ್ದಾಡುವ ಸ್ಥಿತಿಗೆ ತಲುಪಿರುವುದು ಮಹಾ ದುರಂತ. ಸರಿಪಡಿಸುವುದಕ್ಕಾಗಿ ಲಿಂಗವಂತರೆಲ್ಲರೂ ಸಂಘಟಿತರಾಗುವುದು ಹಿಂದೆಂದಿಗಿಂತಲೂ ಈಗ ಅನಿವಾರ್ಯವಾಗಿದೆ ಎಂದು ಹೇಳಿದರು.
ವಿಶ್ರಾಂತ ಪ್ರಾಚಾರ್ಯ ಮಹಾದೇವಯ್ಯ ಕಲ್ಯಾಣಮಠ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕಂಟೆಪ್ಪ ದಾನಾ, ಡಾ| ಸೋಮನಾಥ ಯಾಳವಾರ, ಮಡಿವಾಳಯ್ಯ ಸ್ವಾಮಿ, ಮೀನಾಕುಮಾರಿ ಬೋರಾಳ್ಕರ್, ಸರ್ವೋದಯ ಪದವಿ ಕಾಲೇಜು ಪ್ರಾಚಾರ್ಯೆ ಶಿಲ್ಪಾರಾಣಿ ಶೇರಿಕಾರ್, ಎಸ್.ಎನ್.ಯಲಾಲ್, ಎಸ್.ಎಸ್. ಪಾರಾ, ಡಾ| ಮಠಪತಿ, ಶಂಕರ ಮುಗಳಿ, ಶಾಂತಪ್ಪ ದುಬಲಗುಂಡಿ, ಶಿವಶರಣಪ್ಪ ಬುರ್ಜಿ, ಮಹಾನಂದಾ ಬಶಟ್ಟಿ ಇದ್ದರು.
ಮಹಾದೇವಮ್ಮ ಕಲ್ಯಾಣಮಠ್, ಸಾವಿತ್ರಿ ಪಾಟೀಲ ಪ್ರಾರ್ಥಿಸಿದರು. ಪ್ರತಿಷ್ಠಾನ ಅಧ್ಯಕ್ಷ ಚನ್ನಬಸಪ್ಪ ವಡ್ಡನಕೇರಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಸಂಗಮಕರ್ ನಿರೂಪಿಸಿದರು. ಬಾಬುರಾವ್ ಪಾಟೀಲ ಚಿತ್ತಕೋಟಾ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Contractor Sachin Case: ಎರಡನೇ ದಿನವೂ ತನಿಖೆ ಮುಂದುವರಿಸಿದ ಸಿಐಡಿ ತಂಡ
CID; ಸತತ 2 ಗಂಟೆಗಳ ಕಾಲ ಸಚಿನ್ ಕುಟುಂಬಸ್ಥರ ವಿಚಾರಣೆ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Bidar: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೂ ಮೊದಲು ಹೊಟೇಲ್ ನಲ್ಲಿ ಓಡಾಡಿದ ದೃಶ್ಯ ಸೆರೆ
ಗುತ್ತಿಗೆದಾರ ಸಚಿನ್ ಕೇಸ್: ಪ್ರಕರಣ ಮುಚ್ಚಿಹಾಕಲು ಸರ್ಕಾರದ ಯತ್ನ: ಸಹೋದರಿ ಆರೋಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.