ರಾಜಸ್ಥಾನದಲ್ಲಿ ಸಂಭ್ರಮೋಲ್ಲಾಸದ 2 ದಿನಗಳ ಒಂಟೆ ಉತ್ಸವ ಆರಂಭ
Team Udayavani, Jan 12, 2019, 12:25 PM IST
ಬಿಕಾನೇರ್ : ಇಂದಿಲ್ಲಿ ಆರಂಭಗೊಂಡ 2 ದಿನಗಳ ವಿಶ್ವ ಪ್ರಸಿದ್ಧ ಒಂಟೆ ಉತ್ಸವದ ಮೊದಲ ದಿನ ನೂರಾರು ವಿದೇಶೀಯರು ಸೇರಿದಂತೆ ಅಪಾರ ಸಂಖ್ಯೆಯ ದೇಶೀಯ ಪ್ರವಾಸಿಗರು ಭಾಗಿಗಳಾಗಿ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳ ಸವಿಯನ್ನು ಆಸ್ವಾದಿಸಿದರು.
ಇಂದು ಬೆಳಗ್ಗೆ ಜುನಾಗಢ ಕೋಟೆಯಿಂದ ಆರಂಭವಾದ ಮೆರವಣಿಗೆಗೆ ಜಿಲ್ಲಾಧಿಕಾರಿ ಹಸಿರು ನಿಶಾನೆ ತೋರಿದರು. ಮೆರವಣಿಗೆಯು ಕರಣಿ ಸಿಂಗ್ ಸ್ಟೇಡಿಯಂ ತಲುಪಿದಾಗ ಅನೇಕ ಕಾರ್ಯಕರ್ತರು ರಾಜಸ್ಥಾನಿ ಜಾನಪದ ನೃತ್ಯ ಪ್ರದರ್ಶಿಸಿದರೆ ಆರ್ಮಿ ಬ್ಯಾಂಡ್ ನವರು ಉತ್ಸಾಹದಾಯಕ ವಾದ್ಯಗೋಷ್ಠಿ ಪ್ರಸ್ತುತಪಡಿಸಿದರು.
ಒಂಟೆ ತುಪ್ಪಳ ತೆಗೆಯುವುದು, ವಿನ್ಯಾಸ ರೂಪಿಸುವುದು ಮತ್ತು ಒಂಟೆ ಅಲಂಕಾರವೇ ಮೊದಲಾದ ಆಕರ್ಷಕ ಕಾರ್ಯಕ್ರಮಗಳು ನಡೆದವು. ವಿದೇಶಿ ಪ್ರವಾಸಿಗರು ರಾಜಸ್ಥಾನೀ ಸಾಂಪ್ರದಾಯಿಕ ವೇಷಭೂಷಣಗಳಲ್ಲಿ ಸಂಭ್ರಮಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.