ಭೂಮಿ ಗುಂಡಗಿದೆ !


Team Udayavani, Jan 13, 2019, 12:30 AM IST

z-8.jpg

ಯಾರೋ ತೆರಳಿದ ಹಾದಿಗೆ
ಮತ್ತಾರೋ ಹೊರಳುತ್ತಾರೆ
ಯಾರೋ ಬಿಟ್ಟು ಹೋದ ಜಾಗವನ್ನು
ಮತ್ತಾರೋ ತುಂಬುತ್ತಾರೆ
“”Bitch … she might have done it, otherwise  ತನಗೆ ಗೊತ್ತಿರಲೇಬಹುದಾದಂಥದ್ದನ್ನೂ ಮುಚ್ಚಿಡಬೇಕಿರಲಿಲ್ಲ. ಅವ್ಳು ನಿಂಗೂ ಮೋಸ ಮಾಡ್ತಿದಾಳೆ… wake up ಆರು wake up…”
ಸುನೀತಿ ಮುಲಾಜಿಲ್ಲದೆ ಮುಖದ ಮೇಲೆ ಹೊಡೆದಂತೆ “ಆರು’ ಎಂದು ಪ್ರೀತಿಯಿಂದ ಕರೆಸಿಕೊಳ್ಳುವ ಆರಾಧನಾಳಿಗೆ ಹೇಳಿ ಹೋಗಿದ್ದಳು.

ಧಡಾರನೆ ಒದ್ದ ರಭಸಕ್ಕೆ ಡೋರ್‌ ಸ್ಟಾಪರ್‌ನ‌ ಮಾತು ಕೇಳದೆ ಒಂದರೆಡು ಬಾರಿ ಹಿಂದಕ್ಕೂ ಮುಂದಕ್ಕೂ ಜೀಕಿ ಜೋರಾಗಿ ಮುಚ್ಚಿ ಕೊಂಡಿತು. ಸಂಜೆಯ ಕತ್ತಲು ಒಳ ನುಗ್ಗುತ್ತಿದ್ದರೂ ಪವರ್‌ ಆನ್‌ ಮಾಡದೆ ಬೂದು ಬೆಳಕಲ್ಲಿ ತೊಟ್ಟಿದ್ದ  ಶ್ರಗ್ಗನ್ನು ಕಿತ್ತೆಸೆದು ಹಾಸಿಗೆ ಮೇಲೆ ಅಕ್ಷರಶಃ ಬಿದ್ದಿದ್ದಳು ಆರಾಧನಾ.

ಇವತ್ತು ಕೆಮಿಸ್ಟ್ರಿ ಲ್ಯಾಬಿನಲ್ಲಿ ಲ್ಯಾಬ್‌ ಅಸಿಸ್ಟೆಂಟ್‌ ಒಡೆದ ಒಂದೇ ಒಂದು ಟೆಸ್ಟ್ ಟ್ಯೂಬಿಗೆ ನೂರು ರೂಪಾಯಿ ಫೈನ್‌ ಕಟ್ಟಿಸಿಕೊಂಡಿದ್ದ. ಅಲ್ಲಿಂದಲೇ ಅವಳು ಗರಮ… ಆಗಿದ್ದು. ಅವಳಿಗೆ ತನ್ನ ಕ್ಯಾಲ್ಕುಲೇಶನ್‌ ತಪ್ಪಿಬಿಟ್ಟರೆ ಆಗುವ ಅಸಮಾಧಾನ ಇನ್ಯಾವುದರಿಂದಲೂ ಆಗುವುದಿಲ್ಲ. ಆ ನೂರು ರೂಪಾಯಿಯನ್ನು ಅವಳು ಈ ತಿಂಗಳ ಮ್ಯಾಗ್ಸೆ„ …ಗಾಗಿ ಇಟ್ಟುಕೊಂಡಿದ್ದಳು. ಅದೀಗ ಸುಖಾಸುಮ್ಮನೆ ಇಲ್ಲವಾಗಿದ್ದು ಅವಳ ಅಸಹನೆಗೆ ಕಾರಣವಾಗಿತ್ತು. ನೂರು ರೂಪಾಯಿಯ ಬೆಲೆ ಆಫಾóಲ… ನೂರು ಅಷ್ಟೇ ಸಹ ಆಗಿರಬಹುದಿತ್ತು. ಆದರೆ, ಅವಳ ತಂದೆ ತಮ್ಮ ಕಷ್ಟಪಟ್ಟ ದುಡ್ಡಿನಲ್ಲಿ ಮಗಳ ಖರ್ಚಿಗೆಂದು ತಮ್ಮ ಕೈಲಾದಷ್ಟನ್ನೂ ಕೊಟ್ಟು ಅದು ಅವಳ ತಿಂಗಳ ಖರ್ಚಿಗೆ ಸಾಲುತ್ತಿರಲಿಲ್ಲ ಎನ್ನುವುದನ್ನು ಸಮಸ್ಯೆ ಎಂದು ಅವಳೆಂದೂ ತಿಳಿದಿರಲಿಲ್ಲ. ಅಷ್ಟೇ ಆಗಿದ್ದರೆ ಸರಿ ಇರುತ್ತಿತ್ತು. ಆದರೆ, ಇವತ್ತು ಮತ್ತೆ ರಶ್ಮಿ ಅವಳಿಗೆ ಹೇಳದೆ ಕೇಳದೆ ಅವಳ ಕಣ್ತಪ್ಪಿಸಿ ಅವನೊಂದಿಗೆ ಅವನ ಅಪಾಚಿ ಏರಿ ಹೊರಟು ಹೋಗಿದ್ದಳು. ಸಾಲದ್ದಕ್ಕೆ ತನ್ನ ಕಣ್ಣಾಮುಚ್ಚಾಲೆಯಾಟಕ್ಕೆ ಇವಳ ಹೆಸರನ್ನು ಬಳಸಿಕೊಂಡುಬಿಟ್ಟಿದ್ದಳು.

ಅವರಿಬ್ಬರೂ ಬಿಎಸ್ಸಿ ಫೈನಲ್‌ ಇಯರ್‌ ಪಿಸಿಎಮ… ಸ್ಟೂಡೆಂಟ್ಸ್‌. ಹಾಸ್ಟೆಲ್‌ನಲ್ಲಿ ರೂಮ… ಮೇಟ್ಸ್‌. ಒಂದೇ ದಿನ ಕಾಲೇಜಿನಲ್ಲೂ ಹಾಸ್ಟೆಲ್ಲಿನಲ್ಲೂ ಅಡ್ಮಿಷನ್‌ ಆಗಿದ್ದರು. ಇಬ್ಬರದ್ದೂ ಕೆಳ ಮಧ್ಯಮ ವರ್ಗದ ಕುಟುಂಬ. ಮತ್ತೆ ಈ ಸಿಟಿಗೆ ಇಬ್ಬರೂ ಹೊಸಬರಿದ್ದರು. ಒಟ್ಟಾಗಿ ಅಡ್ಮಿಷನ್‌ ಆದಾಗಿನ ಪರಿಚಯವಿಟ್ಟುಕೊಂಡು ಇಬ್ಬರೂ ಒಂದೇ ರೂಮನ್ನು ಅಲಾಟ… ಮಾಡಿಸಿಕೊಂಡಿದ್ದರು. ಅದು ಒಳ್ಳೆಯದೇ ಆಗಿತ್ತು ಸಹ. ಇಬ್ಬರೂ ಓದಿನಲ್ಲಿ ಬುದ್ಧಿವಂತೆಯರು. ಮೇಲಾಗಿ ಇಬ್ಬರೂ ಶೋಕಿ ಮಾಡಲಾಗದವರು. ಇದ್ದುದರಲ್ಲೇ ಇಬ್ಬರೂ ಒಬ್ಬರದ್ದನ್ನೊಬ್ಬರು ಶೇರ್‌ ಮಾಡಿಕೊಳ್ಳುತ್ತ ಸ್ವಲ್ಪ ದಿನಗಳಲ್ಲೇ ಪ್ರಾಣಸ್ನೇಹಿತೆಯರಾಗಿಬಿಟ್ಟಿದ್ದರು. ಈ ಸಣ್ಣ ಊರುಗಳಿಂದ ಬಂದ ಹುಡುಗಿಯರಿಗೆ ದೊಡ್ಡ ಸಿಟಿಗಳು ಮತ್ತು ಅಲ್ಲಿನ ತಳುಕು ಬಳುಕಿನ ಬಗ್ಗೆ ಇರುವಂತಹ ಸಹಜ ಆಕರ್ಷಣೆ ಇಬ್ಬರಲ್ಲೂ ಇತ್ತು ಮತ್ತು ಅದನ್ನು ಬಹುಬೇಗ ರೂಢಿಸಿಕೊಂಡೂ ಬಿಟ್ಟರು. ಅದೊಂದು ಸಮಸ್ಯೆ ಅಂತ ಆಗಲೇ ಇಲ್ಲ ಈ ಹುಡುಗಿಯರಿಗೆ. ಬಳಸುವ ಇಂಗ್ಲಿಷ್‌ನಿಂದ ಹಿಡಿದು ತೊಡುವ ಜೀನ್ಸ್ವರೆಗೂ.

ಆರಾಧನಾ ಕೊಂಚ ಗಂಭೀರೆ. ಆದರೆ, ರಶ್ಮಿಗೆ ಸ್ವಲ್ಪ ಹುಡುಗುತನ. ಅದಕ್ಕೇ ಕಾಣುತ್ತದೆ- ಆರಾಧನಾ ಒಮ್ಮೊಮ್ಮೆ ಅಕ್ಕನಂತೆ, ರಶ್ಮಿ ತಂಗಿಯಂತೆ ಅನಿಸಿಬಿಡುತ್ತಿದ್ದರು. ಟಾಯ್ಲಿಟ್ಟಿನಿಂದ ಹಿಡಿದು ಸ್ನಾನ-ತಿಂಡಿ-ಕಾಲೇಜು- ಓದು-ಮಲಗು-ಏಳು ಅನ್ನುವಲ್ಲಿಯವರೆಗೂ ಇಬ್ಬರೂ ಒಟ್ಟೊಟ್ಟಿಗೇ ಕಾಣಿಸಿಕೊಳ್ಳುತ್ತಿದ್ದರು. ಇಬ್ಬರಲ್ಲಿ ಯಾರ ಬಗ್ಗೆಯೇ ಆಗಲಿ, ಯಾರಾದರೂ ಚಾಡಿ ಮಾತಾಡಿದರೆ ಇನ್ನೊಬ್ಬರು ಸಿಡಿದೇಳುತ್ತಿದ್ದರು. ಇವರಿಬ್ಬರ ಅನ್ಯೋನ್ಯತೆ ಕೆಲವರ ಹೊಟ್ಟೆ ಉರಿಸಿದ್ದೂ ಇದೆ. ಇಂಥ ಚಂದದ ಗೆಳತಿಯರ ಮಧ್ಯೆ ಸಣ್ಣಗೆ ಬಿರುಕು ಮೂಡಲಾರಂಭಿಸಿದ್ದು ಒಂದಷ್ಟು ಜನಕ್ಕೆ ಖುಷಿಯಾಗಿತ್ತು ಕಾಣುತ್ತದೆ. ಹೇಳದೆಯೇ ಅವರ ಮುಖದ ಮೇಲಿನ ಕೊಂಕು ಆರಾಧನಾಳನ್ನು ಕಂಗೆಡಿಸುತ್ತಿತ್ತು.

“”ಇವ್ನಿದ ಏನ್‌ ಪ್ರಯೋಜ°… ಅವಾ°ದ್ರೆ ಬೈಕ್ನಲ್ಲಿ ಸುತ್ತುಸ್ತಾನೆ, ಸಿನೆಮಾ-ಪಾರ್ಕು-ಹೊಟೇಲ್ಲು. ಮೊನ್ನೆ ರಾತ್ರಿ ಅವನ್‌ ಜೊತೆನೆ ಇದ್ದಿದ್ದಂತೆ… ಅದಕ್ಕೆ ಅವ್ಳು ಹಾಸ್ಟೆಲ್ಲಿಗೆ ಬಂದಿರ್ಲಿಲ್ವಂತೆ. ಇವ್ಳು ಸುಮ್ನೆ ತಿಪ್ಪೆ ಸಾಸ್ತಾಳೆ. ಇವ್ಳು ಯಾವನ್‌ ಹುಡ್ಕೊತಾಳ್ಳೋ. ಯಪ್ಪಾ ಏನ್‌ ಫ್ರೆಂಡ್ಸ್ಪ್ಪು ಏನ್‌ ಕತೆ. ಇವ್‌ ಸಹವಾಸ ನಗಂತೂ  ಬೇಡ”

“”ಮೈಂಡ್‌ ಯುವರ್‌ ಬಿಸ್ನೆಸ್‌…. ಯು ಫ್ರೀಕ್‌”
ಉರಿದು ಬೀಳುವ ಆರುಗೆ ಯಾರ ಮೇಲಂತ ಉರಿದು ಬೀಳಲಿ ತಿಳಿಯುತ್ತಿರಲಿಲ್ಲ. ಮತ್ತೆ ರಶ್ಮಿಯ ಬಗ್ಗೆಯೂ ಅದೇ ಅಸಹನೆ. ಬೆನ್ನ ಹಿಂದೆ ಗಾಸಿಪ್‌ ಮಾಡುವ ಹಾಸ್ಟೆಲ್ಲಿನ ಗೆಳತಿಯರ ಮಾತುಗಳಿಗೆ ಕಡಿವಾಣ ಹಾಕುವುದು ಸಾಧ್ಯವಿರಲಿಲ್ಲ. ಎಷ್ಟಂತ ಸತ್ಯವನ್ನು ಮರೆಮಾಚುವುದು. ಅಸಲಿಗೆ ರಶ್ಮಿಗಂತೂ ಮುಚ್ಚಿಡುವುದು ಬೇಕಿರಲಿಲ್ಲ. ಏನೋ ದೇವಾªಸ್‌ ಪಾರೂ ಲವ್‌ ಸ್ಟೋರಿ ತಮುª ಎನ್ನುವ ಹಾಗೆ. ನೀಲ… ಕಮಿಟ… ಆಗುವ ಹುಡುಗ ಅಂತ ಅವಳಿಗೆ ಯಾವತ್ತೂ ಅನಿಸಿರಲಿಲ್ಲ.

ರಾತ್ರಿ ಎಂಟೂವರೆ ಕಳೆದಿದ್ದರೂ ರಶ್ಮಿ ಇನ್ನೂ ರೂಮಿಗೆ ಬಂದಿರಲಿಲ್ಲ. ಅದೇ ಕೋಪದಲ್ಲಿ ಇವಳೂ ಪವರ್‌ ಆನ್‌ ಮಾಡದೆ ಊಟಕ್ಕೂ ಹೋಗದೆ ಕಣ್ತೆರೆದು, ಈ ಹುಡ್ಗಿ ಹೀಗ್ಯಾಕಾದಳು, ಎರಡು ವರ್ಷದ ತಮ್ಮ ಗೆಳೆತನ ಎಷ್ಟು ಚಂದವಿತ್ತು ಎಂದೆಲ್ಲ ಯೋಚಿಸುತ್ತ ಧ್ಯಾಸ ಕಳೆದುಕೊಂಡಿದ್ದಳು. ಆಗ ಬಾಗಿಲು ಬಡಿದ ಸದ್ದಾಯಿತು.

ಬಾಗಿಲು ತೆರೆದವಳಿಗೆ ಕಂಡವಳು ಅಲಂಕಾರ ಕೆಟ್ಟ ದಣಿದಂತಿದ್ದ ರಶ್ಮಿ. ಇವಳನ್ನು ಎದುರಿಸಲಾಗದೆ ಸುಮ್ಮನೇ ಒಳಬಂದು ಮಲಗಿಬಿಟ್ಟಳು. ಸದ್ದಾಗುವಂತೆ ಬಾಗಿಲೆಳೆದುಕೊಂಡು ಊಟಕ್ಕೆ ಹೋದಳು ಆರಾಧನಾ. ಅವಳನ್ನು ಮಾತಾಡಿಸುವ ಗೋಜಿಗೆ ಹೋಗಲಿಲ್ಲ.

ಈ ಹುಡ್ಗಿ ಯಾಕೋ ಸ್ವಲ್ಪ ದಾರಿ ತಪ್ತಿದೆ ಅಂತ ಆರುಗೆ ಅನ್ಸಿದ್ದೆ ಆರು ತಿಂಗಳ ಕೆಳಗೆ. ಅದು ಸುನೀಲ್ ಸರ್‌ ವಿಷಯದಲ್ಲಿ. ಸುನೀಲ… ಸರ್‌ ರಶ್ಮಿ ಓದಿನಲ್ಲಿ ಬುದ್ಧಿವಂತೆ ಎನ್ನುವ ಕಾರಣಕ್ಕೆ ಪಾಠ ಮಾಡುವಾಗ ಒಂದೆರಡು ಬಾರಿ ಹೆಚ್ಚೇ ಇವಳ ಕಡೆ ನೋಡಿದ್ದನ್ನೇ ಪ್ರೀತಿಗೀತಿ ಅಂತ ತನಗೆ ತಾನೇ ಅಂದುಕೊಂಡು ಹುಚ್ಚುಚ್ಚಾಗಿ ಒನ್‌ ಸೈಡೆಡ್‌ ಲವ್‌ ಶುರುಮಾಡಿಕೊಂಡುಬಿಟ್ಟಿದ್ದಳು. ಒಂದಿನ ಆರಾಧನಾಗೂ ಹೇಳದೆ ಅವರಿಗೊಂದು ಲವ್‌ ಲೆಟರ್‌ ಬರೆದು ಮತ್ತದನ್ನವರಿಗೆ ಪೋಸ್ಟೂ ಮಾಡಿಬಿಟ್ಟಿದ್ದಳು.

ಪತ್ರ ತಲುಪಿದ ದಿನ ಗರಂ ಆಗಿದ್ದ ಸುನಿಲ್ ಸರ್‌ ಪತ್ರವನ್ನು ಹಿಡಿದೇ ಕ್ಲಾಸಿಗೆ ಬಂದಿದ್ದರು. ಅಲ್ಲದೆ ಎಲ್ಲರೆದುರೇ ಅವಳನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡುಬಿಟ್ಟಿದ್ದರು. “ರೂಮ…ಮೇಟ್‌ ಆಗಿರೋ ನೀನಾದ್ರೂ ಅವಳಿಗೆ ಬುದ್ಧಿ ಹೇಳ್ಳೋಕಾಗಲ್ವ?’ ಎಂದು ನನ್ನ ಬಗ್ಗೆ ಹೇಳಿದ್ದರು. ಅವಳೊಟ್ಟಿಗೆ ಆರೂವಿಗೂ ನಿಂತ ನೆಲ ಕುಸಿದಂತಾಗಿ ಎಲ್ಲರ ಮುಂದೆ ತಲೆಎತ್ತಲು ಸಾಧ್ಯವಾಗಿರಲಿಲ್ಲ. ಅದಾಗಿ ಸ್ವಲ್ಪ$ದಿನದಲ್ಲಿ ಸರಿ ಹೋಗಿದ್ದಳು. ಆದರೆ, ಈ ನೀಲ್‌ ಎನ್ನುವ ಕೆಂಪನೆ ಕೆಂಜೀರಿಗೆ ಹುಡುಗ ಅದೆಲ್ಲಿ ಗಂಟು ಬಿದ್ದನೋ ದೇವರೇ ಬಲ್ಲ. ಅವನೇ ಬಿದ್ದನೋ ಇವಳೇ ಬೀಳಿಸಿಕೊಂಡಳ್ಳೋ… ರಶ್ಮಿ ಮಾತ್ರ ಅವನೇ ತನ್ನ ಹಿಂದೆ ಅಲೆದಲೆದು ಒಲಿಸಿಕೊಂಡ ಎನ್ನುತ್ತಾಳೆ.

ಇದರ ವಾಸನೆ ಹೇಗೋ ಅವಳಮ್ಮನಿಗೆ ಬಡಿದು ಪರೀಕ್ಷೆ ವೇಳೆಯಲ್ಲಿ ಹಾಸ್ಟೆಲ್ಲಿಗೆ ಬಂದವರು ರೂಮ… ಬಾಗಿಲು ಜಡಿದು ಬಾರುಕೋಲಿನಂತಹ ಹಗ್ಗದಲ್ಲಿ ಚರ್ಮ ಕಿತ್ತು ಬಾಸುಂಡೆ ಬರುವಂತೆ ಹೊಡೆದಿದ್ದರು. ಅವತ್ತೇ ಓದು ಬಿಡಿಸಿ ಮನೆಗೆ ಕರೆದೊಯ್ಯುವವರಿದ್ದರು. ಆರಾಧನಾಳ ಮೇಲಿನ ನಂಬಿಕೆಯಿಂದ ಮತ್ತು ಇನ್ನು ಮುಂದೆ ಹೀಗೆಲ್ಲ ಮಾಡೋದಿಲ್ಲ ಎಂದು ಕಾಲು ಹಿಡಿದು ಗೋಗರೆದ ಮಗಳ ಮಾತಿಗೆ ಕರಗಿ ಅವಳನ್ನಿಲ್ಲಿ ಬಿಟ್ಟು ಊರಿಗೆ ಹೋಗಿದ್ದರು.

ಈಗ ನೋಡಿದರೆ ಮತ್ತೆ ತನ್ನ ಹಳೆ ಚಾಳಿ ಮುಂದುವರಿಸಿದ್ದಾಳೆ ಅದೂ ತನ್ನ ಹೆಸರನ್ನೇ ಬಳಸಿಕೊಂಡು. ಊಟ ಮುಗಿಸಿ ಬಂದ ಆರಾಧನಾಳಿಗೆ ನೆಮ್ಮದಿಯಾಗಿ ಮಲಗಲಾಗಲಿಲ್ಲ.

“”ನೋಡು ರಶ್ಮಿ, ಸುಮ್ನೆ ನನ್‌ ಕಣ್ಣು ತಪ್ಸಿ ನನ್‌ ಬೆನ್‌ ಹಿಂದೆ ಸುಮ್ನೆ ಇಂಥವೆಲ್ಲ ಮಾಡ್ಬೇಡ. ನೀನು ನನಗೊಬ್ಬ ಒಳ್ಳೆ ಫ್ರೆಂಡ್‌ ನಿಜ. ಹಾಗಂತ ನೀನ್‌ ಏನ್‌ ಮಾಡಿದ್ರು ಸುಮ್ನಿರ್ತೀನಿ ಅಂತಲ್ಲ.  ಐ ಕಾಂಟ… ಟಾಲರೇಟ್‌ ಇಟ್‌ ಎನಿಮೋರ್‌” ಎಂದು ಖಡಾಖಂಡಿತವಾಗಿ ಹೇಳಿದಳು.

ರಶ್ಮಿ ವಿರೋಧಿಸಲಿಲ್ಲ. ನೇರ ಎದ್ದು ಬಂದವಳೇ ಆರುವಿನ ಹಣೆಯ ಮೇಲೊಂದು ಮುತ್ತನಿಟ್ಟಳು. ಸುಮ್ಮನೆ ನಸುನಗುತ್ತ “ನಿನ್‌ ಸಮಸ್ಯೆಯನ್ನು ಖಂಡಿತ ಸಾಲ್ವ… ಮಾಡ್ತೀನಿ ಆಯ್ತಾ’ ಅಂತೆØàಳಿ ಮಲಗಿಬಿಟ್ಟಳು.

ಮರುದಿನ ಆರೂ ಕಾಲೇಜಿಗೆ ಹೊರಟರೂ ರಶ್ಮಿ ಹೊರಡಲಿಲ್ಲ. ಹುಷಾರಿಲ್ಲ ಎಂದು ಹೇಳಿ ರೂಮಿನಲ್ಲೇ ಉಳಿದುಕೊಂಡಳು. ಆರೂ ಕಾಲೇಜಿಂದ ಹಾಸ್ಟೆಲ್ಲಿಗೆ ಬಂದಾಗ ದಿಗ್ಭ್ರಾಂತಳಾದಳು. ಎಲ್ಲಿದ್ದಾಳೆ ರಶ್ಮಿ! ಅವಳ ವಸ್ತುಗಳೂ ಕಾಣೆಯಾಗಿದ್ದವು. ಆಫೀಸ್‌ಗೆ ಓಡಿದಳು ಆರು. ರಶ್ಮಿ ರೂಮ್‌ ವೆಕೇಟ್‌ ಮಾಡಿ ಹೊರಟುಹೋದಳು ಎಂಬ ಉತ್ತರ ಸಿಕ್ಕಿತು. ಏನು ಮಾಡುವುದೆಂದು ತೋಚದೆ ಅತ್ತಳು.

ಸಂಜೆ ಪ್ರತಿದಿನದಂತೆ ರಶ್ಮಿಯ ಅಮ್ಮ ಕಾಲ… ಮಾಡಿದಾಗ ಆರು ಎಲ್ಲವನ್ನೂ ಚಾಚೂತಪ್ಪದೆ ಅವರಿಗೆ ಹೇಳಿದಳು. ಮರುದಿನ ಹಾಸ್ಟೆಲ್ಲಿಗೆ ಓಡಿಬಂದ ರಶ್ಮಿಯ ಅಮ್ಮ ಹಾಸ್ಟೆಲ್ ವಾರ್ಡನ್ನರೊಂದಿಗೆ ಜಗಳವಾಡಿದರು. ಮೊದಲೇ ಇದನ್ನೆಲ್ಲ ನನಗೆ ಏಕೆ ತಿಳಿಸಲಿಲ್ಲ ಎಂದು ಆರಾಧನಾಳನ್ನು ಬೈದರು. ಪೋಲೀಸ್‌ ಕಂಪ್ಲೆಂಟಾಯಿತು. ಏನೂ ಪ್ರಯೋಜನವಾಗಲಿಲ್ಲ. ರಶ್ಮಿ ಸಿಗಲಿಲ್ಲ. ನೀಲ… ಎನ್ನುವ ನೀಲನ ಬಗ್ಗೆ ಅವನ ಹೆಸರೊಂದನ್ನು ಹೊರತುಪಡಿಸಿ ಅಡ್ರೆಸ್ಸಾಗಲೀ ಫೋಟೋವಾಗಲೀ ಏನೊಂದೂ ಮಾಹಿತಿ ಸಿಗದೆ ಪೊಲೀಸರು ಕೈಚೆಲ್ಲಿದರು.

ನಂತರ ಏನಾಯಿತೋ ಗೊತ್ತಿಲ್ಲ. ರಶ್ಮಿ ಏನಾದಳ್ಳೋ. ಅವಳ ಅಪ್ಪ-ಅಮ್ಮ ಏನಾದರೋ. ಒಂದೂ ತಿಳಿಯಲಿಲ್ಲ. ಆರುವಿನ ಒಂದಷ್ಟು ದಿನಗಳು ದಾರುಣವಾಗಿಬಿಟ್ಟಿದ್ದವು. ರಶ್ಮಿ ನೀಲನ ಸಹವಾಸಕ್ಕೆ ಬೀಳಲು ಇವಳೇ ಕಾರಣ, ಇದರಲ್ಲಿ ಇವಳ ಕುಮ್ಮಕ್ಕೂ ಇದೆ, ಎಲ್ಲ ಗೊತ್ತಿದ್ದೂ ಇವಳೇ ಏನೂ ಹೇಳದೆ ಮುಚ್ಚಿಡುತ್ತಿ¨ªಾಳೆ, ಚೆನ್ನಾಗಿ ಅವಳ ತಲೆಕೆಡಿಸಿಬಿಟು ಎಂದೆಲ್ಲ ಗೆಳತಿಯರು ಆಡಿಕೊಳ್ಳತೊಡಗಿದ್ದರು. ಪೊಲೀಸರೂ ಒಂದೆರಡು ಬಾರಿ ಎನ್‌ಕ್ವಾಯರಿಯ ಹೆಸರಲ್ಲಿ ಸ್ಟೇಶನ್ನಿಗೆ ಕರೆಸಿಕೊಂಡದ್ದು ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲು ಕಾರಣವಾಗಿತ್ತು. ಆದರೆ, ಆರು ಮಾತ್ರ ತನ್ನ ಆತ್ಮಸಾಕ್ಷಿಗೆ ಬದ್ಧಳಾಗಿದ್ದಳು. ಮೌನಿಯಾಗಿದ್ದುಬಿಟ್ಟಳು. ರಶ್ಮಿಯ ನೆನಪಾದರೆ ಕುದಿಯುವ ಹಾಲಾಗಿ ಬಿಡುತ್ತಿದ್ದಳು.

ಅಂತೂ ಇಲ್ಲಿನ ಎಲ್ಲ ಕಹಿ ಅನುಭವಗಳನ್ನೂ ಕೊಡವಿ ಹೊರಡುವ ದಿನವೂ ಬಂತು. ತಾನಾಯಿತು ತನ್ನ ಓದಾಯಿತು ಎಂದು ಇದ್ದದ್ದರ ಫ‌ಲವಾಗಿ ಆರಾಧನಾ ಪದವಿಯಲ್ಲಿ ಯೂನಿವರ್ಸಿಟಿ ಟಾಪರ್‌ ಆಗಿದ್ದಳು. ಎಮ್ಮೆಸ್ಸಿಗೆಂದು ಜ್ಞಾನಭಾರತಿಗೆ ಹೊರಟುಹೋದಳು. ಅವಳಿಗೆ ಸಿಕ್ಕ ಈ ಬಿಡುಗಡೆಗಾಗಿ ಅವಳು ಜಾತಕಪಕ್ಷಿಯಂತೆ ಕಾದಿದ್ದಳೆಂದರೆ ಸುಳ್ಳಲ್ಲ. ಇವೆಲ್ಲ ದುರಂತ ಕಥೆಯ ಭಾಗವಾದದ್ದಕ್ಕೆ ಸಾಕ್ಷಿಯಾದರೂ ನೆನಪುಗಳನ್ನು ಕೊಲ್ಲುವ ಹುಕಿಗೆ ಬಿದ್ದಳು. ದಿನಗಳು ವರ್ಷಗಳಾದವು. ಆರೂ ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ಬೆಂಗಳೂರಿನ ಕಾಲೇಜೊಂದರಲ್ಲಿ ನೌಕರಿ ಹಿಡಿದಳು. ಅಲ್ಲಿಯೇ ತನ್ನ ಜೊತೆ ಕೆಲಸ ಮಾಡುತ್ತಿದ್ದ ನವೀನನೊಂದಿಗೆ ಏನೋ ಸೆಳೆತ ಆರಂಭವಾಯಿತು !

ನವೀನನೊಂದಿಗಿನ ಒಡನಾಟ ಶುರುವಾದಾಗಲೂ ಆರಾಧನಾಳಿಗೆ ಎಂತದೋ ಅಳುಕಿತ್ತು. ನವೀನ ಪ್ರಪೋಸ್‌ ಮಾಡಿದಾಗಲಂತೂ ರಶ್ಮಿ ಪದೇ ಪದೇ ನೆನಪಾಗಿದ್ದಳು. ತಾನೀಗ ಆರ್ಥಿಕವಾಗಿ ಸ್ವತಂತ್ರಳಾಗಿದ್ದೇನೆ, ನವೀನ ಸಭ್ಯನೂ ಇದ್ದಾನೆ ಎಂದು ಅವಳಿಗೂ ಅನಿಸುತ್ತಿತ್ತು. ಆದರೂ ಯಾವೊಂದು ನಿರ್ಧಾರಕ್ಕೂ ಬಾರದಾಗಿದ್ದಳು. ನವೀನ, ದೊಡ್ಡಪ್ಪ, ಚಿಕ್ಕಪ್ಪಮತ್ತವರ ಮಕ್ಕಳು ಎಂದು ಇಪ್ಪತ್ತು ಜನರಿದ್ದ ದೊಡ್ಡ ಕುಟುಂಬದಲ್ಲಿ ಹುಟ್ಟಿ ಬೆಳೆದವನಿದ್ದ. ಓದು ಮುಗಿದ ಮೇಲೆ ನೌಕರಿಯ ಸಲುವಾಗಿ ಬೆಂಗಳೂರು ಸೇರಿದ್ದ. ಸಂಪ್ರದಾಯಸ್ಥ ಕುಟುಂಬದಿಂದ ಬಂದಿದ್ದ ನವೀನ ಹಿರಿಯರೊಂದಿಗೆ ಮಾತನಾಡಿ ಎಲ್ಲರನ್ನೂ ಮದುವೆಗೆ ಒಪ್ಪಿಸಿದ್ದ. ಆರಾಧನಾ ಅವನನ್ನು ಸಂತಸದಿಂದ ಒಪ್ಪಿ ಮದುವೆಯಾಗಿದ್ದಳು.

ತನ್ನ ಬದುಕು ಹೊಸ ದಿಕ್ಕಿಗೆ ಹೊರಳಿದ್ದು ಒಂದು ರೀತಿಯ ಖುಷಿಯಾದರೆ, ಹಿಂದಿನ ಕಹಿ ಘಟನೆಗಳು ಈಗ ತನ್ನನ್ನು ಹೆಚ್ಚು ನೋಯಿಸುತ್ತಿಲ್ಲ ಎನ್ನುವುದೂ ಮತ್ತೂಂದು ಆಶ್ಚರ್ಯ ಅವಳಿಗೆ. ಈಗ ರಶ್ಮಿ ನೆನಪಾದರೆ ಕೋಪ ಬರುವುದಿಲ್ಲ , ಬದಲಾಗಿ ವ್ಯಾಕುಲಗೊಳ್ಳುತ್ತಾಳೆ. ಏನಾದಳ್ಳೋ ಹೇಗಿ¨ªಾಳ್ಳೋ ಎಂದು ಚಡಪಡಿಸುತ್ತಾಳೆ. ಅವಳ ಊರಿನ ಅಡ್ರೆಸ್ಸೂ ಆರಾಧನಾಳಲ್ಲಿ ಇರಲಿಲ್ಲ. ರಶ್ಮಿ ಅವಳಿಗೆ ಕೊಟ್ಟಿದ್ದ ಆಕ್ಸಿಡೈÓx… ಜ್ಯುವೆಲ್ಲರಿಯೊಂದು ಈಗಲೂ ಅವಳ ಬಳಿ ಇದೆ.

ಹಿಂದೆಲ್ಲ ಬಹಳ ಯೋಚನೆಯಾಗುತ್ತಿತ್ತು ಅವಳಿಗೆ. ಆದರೆ ಮದುವೆಯಾದ ಈ ಹೊಸ ಜೀವನದಲ್ಲಿ ಇದೇ ಮೊದಲು ತಾವು ದಂಪತಿಗಳು ನಿಂತು ಮಾಡಬೇಕಾದ ಜವಾಬ್ದಾರಿ ಅಂತ ಹಿರಿಯರು ಒಂದು ಗುರುತರ ಕೆಲಸವನ್ನು ಅವರ ಉಡಿಗಾØಕಿದ್ದರು. ಇದೇ ಬೇಸಿಗೆಯಲ್ಲಿ ನವೀನನ ದೊಡ್ಡಪ್ಪನ ಮಗ ಸುಜಯನ ಮದುವೆ ನಿಶ್ಚಯವಾಗಿತ್ತು. ಮದುವೆ ಎಂದರೆ ಕೆಲಸಕ್ಕೆ ಬರವೇ. ಅದರಲ್ಲೂ ಹಿರಿಮಗ ಮತ್ತು ಹಿರಿ ಸೊಸೆ ಎಂದ ಮೇಲೆ ಎಷ್ಟೊಂದು ಜವಾಬ್ದಾರಿಗಳಿರುತ್ತವೆ. ಆರಾಧನಾ ಮತ್ತು ನವೀನ ಮುತುವರ್ಜಿಯಿಂದ ಓಡಾಡಿ ತಾವೇ ಮುಂದೆ ನಿಂತು ಎಲ್ಲ ಕೆಲಸಗಳನ್ನು ಮಾಡಿದ್ದರು.

ಅಂದು ಬಟ್ಟೆ ತೆಗೆಸಲು ಮತ್ತು ಇನ್ನೊಂದಿಷ್ಟು ಶಾಪಿಂಗಿಗಾಗಿ ಮೆಜೆಸ್ಟಿಕ್ಕಿಗೆ ಬಂದಿದ್ದರು. ಬಿಸಿಲಿನ ತಾಪ ತಾಳಲಾರದೆ ಎಲ್ಲರೂ ಜ್ಯೂಸ್‌ ಕುಡಿದರು. ಆಯಾಸದಲ್ಲೂ ಎಂಥದೋ ಸಂಭ್ರಮ. ಕಾಲೆಳೆದುಕೊಂಡು ಮೆಜೆಸ್ಟಿಕ್ಕಿನ ಫ‌ುಟ್‌ಪಾತಿನಲ್ಲಿ ಜನಸಂದ‌ಣಿಯ ನಡುವೆ ಪ್ರಯಾಸದಿಂದ ಈಜುತ್ತ ಹೊರಟಾಗ ಆರುವಿನ ಕೈ ಎದುರಿಂದ ವೇಗವಾಗಿ ಬರುತ್ತಿದ್ದ ಹುಡುಗಿಯ ಕೈಗೆ ಜೋರಾಗಿ ಬಡಿಯಿತು.

ಅಯಾಚಿತವಾಗಿ “ಸ್ಸಾರಿ’ ಎನ್ನುತ್ತ ಒಬ್ಬರನ್ನೊಬ್ಬರು ನೋಡಿಕೊಂಡ ಆ ಹುಡುಗಿಯರಿಬ್ಬರು ಕಲ್ಲಾಗಿ ನಿಂತುಬಿಟ್ಟರು.

ಆಶಾ ಜಗದೀಶ್‌

ಟಾಪ್ ನ್ಯೂಸ್

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.