ಸ್ಮಾರ್ಟ್ ನಗರಿಗೂ ಬರಲಿ ಹೋವರ್ ಬೈಕ್
Team Udayavani, Jan 13, 2019, 7:23 AM IST
ತುರ್ತು ಸಂದರ್ಭದಲ್ಲಿ ಟ್ರಾಫಿಕ್ ಸಮಸ್ಯೆ ಎದುರಾದರೆ ಏನು ಮಾಡುವುದು, ಹೇಗೆ ಹೋಗುವುದು ಎಂಬ ಚಿಂತೆ. ಅದರಲ್ಲೂ ಮುಖ್ಯವಾಗಿ ರಕ್ಷಣೆ, ಆರೋಗ್ಯ ವಿಷಯದಲ್ಲಿ ಒಂದು ಕ್ಷಣವೂ ವಿಳಂಬ ಮಾಡುವಂತಿಲ್ಲ. ಹೀಗಿರುವಾಗ ಸಮಯಕ್ಕೆ ಸರಿಯಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತೆರಳಲು ಏನು ಮಾಡಬಹುದು ಎಂಬ ಗೊಂದಲ ಎಲ್ಲರಲ್ಲೂ ಉಂಟಾಗುವುದು ಸಹಜ. ಅದರಲ್ಲೂ ಪೊಲೀಸರು, ವೈದ್ಯರು, ಅಗ್ನಿ ಶಾಮಕ ದಳ, ಸೇನಾ ಸಿಬಂದಿ ಈ ಸಂದರ್ಭದಲ್ಲಿ ಏನು ಮಾಡಬೇಕು? ಹೆಲಿಕಾಪ್ಟರ್ ವ್ಯವಸ್ಥೆ ಎಂದರೆ ಅದು ಬರುವುದು ವಿಳಂಬವಾಗುತ್ತದೆ. ಜತೆಗೆ ಲ್ಯಾಂಡಿಂಗ್ ಸಮಸ್ಯೆಯೂ ಎದುರಾಗುತ್ತದೆ. ಆದರೆ ಈ ಸಮಸ್ಯೆಗೆ ದುಬಾಯಿ ಪೊಲೀಸರು ಸರಳ ಪರಿಹಾರವೊಂದನ್ನು ಕಂಡುಹುಡುಕಿದ್ದಾರೆ.
ವಿದೇಶದಲ್ಲಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದವರನ್ನು ಪತ್ತೆ ಹಚ್ಚಲು ಅಲ್ಲಿನ ಸರಕಾರ ಅನೇಕ ಕ್ರಮಗಳನ್ನು ಹೊರತರುತ್ತಲೇ ಇದೆ. ಇತ್ತೀಚೆಗೆ ಅಪರಾಧಿಗಳನ್ನು ಕಂಡು ಹಿಡಿಯಲು ದುಬಾಯಿ ಪೋಲಿಸರು ತಂದಿರುವ ತಂತ್ರಜ್ಞಾನಕ್ಕೆ ಜಗತ್ತಿನೆಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ. ಹೌದು ದುಬಾಯಿ ಪೊಲೀಸರು ಹೊರ ತಂದಿರುವ ಹೊಸ ತಂತ್ರಜ್ಞಾನದ ಹೆಸರು ಹೋವರ್ ಬೈಕ್. ಪೋಲಿಸರ ಕಣ್ತಪ್ಪಿಸುವ ಅಪರಾಧಿಗಳ ಆಟಕ್ಕೆ ಬ್ರೇಕ್ ಬೀಳಿಸಲು ಈ ವಿನೂತನ ಪ್ರಯೋಗಕ್ಕೆ ಅವರು ಮುಂದಾಗಿದ್ದಾರೆ.
ಏನಿದು ಹೋವರ್ ಬೈಕ್
ದುಬಾೖ ಪೋಲಿಸರು ವೇಗವಾದ ವಾಹನಗಳು ಚಲಾಯಿಸುವಲ್ಲಿ ಮುಂಚೂಣಿಯಲ್ಲಿದ್ದವರು. ಈ ವರ್ಷದ ಆರಂಭದಲ್ಲಿ ತಂದಂತಹ ಐ ಟೆಕ್ಸ್ ತಂತ್ರಜ್ಞಾನ ಹೊಂದಿರುವ ಹಾರುವ ಬೈಕ್ ಗಳನ್ನು ಅಲ್ಲಿನ ಪೋಲಿಸರಲ್ಲಿದೆ. ಇದಕ್ಕಾಗಿ ಪ್ರಸ್ತುತ ಅಲ್ಲಿನ ಪೋಲಿಸರಿಗೆ ಹಾರುವ ಹೋವರ್ ಬೈಕ್‌ನ ತರಬೇತಿಯನ್ನು ನೀಡಲಾಗುತ್ತದೆ. ಹೋವರ್ ಬೈಕ್‌ನ ಮೂಲ ಕ್ಯಾಲಿಫೋರ್ನಿಯ. ಇದರ ಆರಂಭಿಕ ಬೆಲೆ 1.09 ಕೋಟಿ ರೂ. 40 ಹೋವರ್ ಬೈಕ್‌ಗಳನ್ನು ವರ್ಷದ ಅಂತ್ಯದೊಳಗೆ ನೀಡಲು ಕಂಪೆನಿ ಜತೆ ಒಪ್ಪಂದವಾಗಿದೆ. ಹೋವರ್ ಬೈಕ್ ಗಳು ಹಾರುವ ಬೈಕ್‌ಗಳಾಗಿದ್ದು ಇದು 20 ರಿಂದ 30 ನಿಮಿಷದವರೆಗೆ ಹಾರುತ್ತವೆ. ಅಪರಾಧಿಗಳನ್ನು ಬೇಗನೆ ಪತ್ತೆ ಹಚ್ಚಲು ಅವರ ಅಡಗು ತಾಣಗಳನ್ನು ಕಂಡು ಹಿಡಿಯಲು ಈ ಹಾರುವ ರೋವರ್ ಬೈಕ್ ಸೂಕ್ತವಾಗಿದೆ. ಸ್ಮಾರ್ಟ್ ನಗರಿಯಾಗಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿರುವ ಮಂಗಳೂರಿನಲ್ಲೂ ಇದನ್ನು ಆರೋಗ್ಯ, ರಕ್ಷಣಾ ಸೇವೆಗೆ ಬಳಸಿಕೊಳ್ಳಬಹುದು.
ವಿಶ್ವಾಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.