ಬಬಿಯಾ ಸುರಕ್ಷಿತ: ಜಾಲತಾಣ ಸುದ್ದಿ ಸುಳ್ಳು
Team Udayavani, Jan 13, 2019, 9:12 AM IST
ಕುಂಬಳೆ : ಸರೋವರ ಕ್ಷೇತ್ರವೆಂದೇ ಪ್ರಸಿದ್ಧ್ದವಾಗಿರುವ ಜಿಲ್ಲೆಯ ಪ್ರಸಿದ್ಧ ದೇವಾಲಯವಾದ ಅನಂತಪುರ ಶ್ರೀ ಅನಂತಪದ್ಮನಾಭ ದೇವಾಲಯದ ಪ್ರಧಾನ ಆಕರ್ಷಣೆಯಾದ ‘ಬಬಿಯಾ’ ಮೊಸಳೆ ನಿಧನವಾಗಿದೆ ಎಂದು ಶುಕ್ರವಾರದಿಂದ ಸಾಮಾಜಿಕ ಜಾಲತಾಣ ಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಸುದ್ದಿಗಳು ಪ್ರಸಾರವಾಗುತ್ತಿದ್ದು, ಇದು ಸುಳ್ಳು ಎಂದು ತಿಳಿದುಬಂದಿದೆ.
ಶ್ರೀ ಕ್ಷೇತ್ರ ಅನಂತಪುರದ ಆಡಳಿತ ಮಂಡಳಿ ನೂತನ ಅಧ್ಯಕ್ಷ ಎಂ.ವಿ. ಮಹಾಲಿಂಗೇಶ್ವರ ಭಟ್ ಅವರು ಈ ಬಗ್ಗೆ ಪ್ರಕಟನೆಯೊಂದನ್ನು ಹೊರಡಿಸಿದ್ದು, ಶ್ರೀ ಕ್ಷೇತ್ರದ ಮೊಸಳೆ ಆರೋಗ್ಯಪೂರ್ಣವಾಗಿದೆ. ವೃಥಾ ಸುಳ್ಳು ಮಾಹಿತಿಗಳನ್ನು ಆಧುನಿಕ ಮಾಧ್ಯಮಗಳ ಮೂಲಕ ಹಬ್ಬಿಸಿ ಭಕ್ತರ ಭಾವನೆಗಳನ್ನು ಗೊಂದಲಗೊಳಿಸುವ ಹುನ್ನಾರ ಸುಳ್ಳು ಮಾಹಿತಿಯ ಹಿಂದೆ ಅಡಗಿದೆ. ಈ ಬಗ್ಗೆ ಸೈಬರ್ ಕ್ರೈಂ ವಿಭಾಗಕ್ಕೆ ದೂರು ದಾಖಲಿಸಲಾಗುವುದೆಂದು ತಿಳಿಸಿದ್ದಾರೆ.
ಜಾಲ ತಾಣದ ಸುಳ್ಳು ಪ್ರಸಾರಕರು
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಕಪೋಲಕಲ್ಪಿತ ಸುದ್ದಿಗಳನ್ನು ಪ್ರಸಾರಗೊಳಿಸುವ ಹುಚ್ಚು ತೀವ್ರ ಸ್ವರೂಪ ಪಡೆಯುತ್ತಿರುವುದು ಜನಸಾಮಾನ್ಯರ ಭೀತಿಗೆ ಕಾರಣವಾಗಿದೆ. ಉನ್ನತ ತಂತ್ರಜ್ಞಾನ ಆಧಾರಿತ ಇಂದಿನ ಸ್ಮಾರ್ಟ್ ಫೋನ್ ಯುಗದಲ್ಲಿ ಬೇಕಾದಂತೆ ಬೇಕಾದಲ್ಲಿ ಮನಸ್ಸಿನೊಳಗೆ ಬಂದಿರುವುದನ್ನು ಹಂಚುವ ಹುಚ್ಚು ಮನಸ್ಸುಗಳಿಂದ ತೊಂದರೆಗಳಾಗುತ್ತಿರುವುದು ಸಾಮಾಜಿಕ ಅಸಂತುಷ್ಟಿಗೆ ಕಾರಣವಾಗುತ್ತಿದೆ. ಸುದ್ದಿ, ಸುದ್ದಿಯ ಮಹತ್ವ, ಪ್ರಸಾರಗೊಳಿಸುವ ಕನಿಷ್ಠ ಅರಿವುಗಳಿಲ್ಲದ ಯುವ ಸಮೂಹ ಏನನ್ನೋ ಸಾಧಿಸುವ ಛಲವೆಂಬಂತೆ ಜಾಲ ತಾಣಗಳ ದುರುಪಯೋಗದಲ್ಲಿ ನಿರತವಾಗಿರುವುದು ಸೈಬರ್ ಕ್ರೈಂ ವಿಭಾಗದ ನಿದ್ದೆಗೆಡಿಸುತ್ತಿದೆ. ಈ ನಿಟ್ಟಿನಲ್ಲಿ ಸೈಬರ್ ಕ್ರೈಂ ವಿಭಾಗ ವ್ಯಾಪಕ ಪ್ರಮಾಣದ ಕಾನೂನು ಕಟ್ಟಳೆಗಳ ನಿರ್ವಹಣೆಗೆ ಮುಂದಾಗಿದೆ. ಹೊಸ ತಲೆಮಾರು ಜಾಗೃತವಾದಲ್ಲಿ ಭವಿಷ್ಯ ಸುಲಲಿತವಾದೀತು ಎಂಬುದಾಗಿ ಸೈಬರ್ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ
Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್ ದೀಪಗಳಿಂದ ಶೃಂಗಾರ
Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.