ಹೆಗ್ಗಡೆ ಸೇವಾ ಸಂಘ ಮುಂಬಯಿ ವಾರ್ಷಿಕ ಕ್ರೀಡೋತ್ಸವದ  ಸಮಾರೋಪ


Team Udayavani, Jan 13, 2019, 12:06 PM IST

1101mum15.jpg

ನವಿಮುಂಬಯಿ: ಹೆಗ್ಗಡೆ ಸೇವಾ ಸಂಘ ಇದರ ವಾರ್ಷಿಕ ಕ್ರೀಡೋತ್ಸವದ  ಸಮಾರೋಪ ಸಮಾರಂಭವು ಜ. 6 ರಂದು ಎನ್‌ಎಂಎಂಸಿ ಮೈದಾನದಲ್ಲಿ ಸಂಸ್ಥೆಯ ಅಧ್ಯಕ್ಷ ವಿಜಯ್‌ ಬಿ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ  ಜರಗಿತು.

ದಿನವಿಡೀ   ನಡೆದ ಕ್ರೀಡೋತ್ಸವದಲ್ಲಿ  ಮಕ್ಕಳ ಹಾಗೂ ಸದಸ್ಯರ ವಯೋ ಮಿತಿಗೆ ಅನುಗುಣವಾಗಿ ಹಮ್ಮಿ ಕೊಂಡಿರುವ ವಿವಿಧ  ಕ್ರೀಡೆಗಳಲ್ಲಿ ಸಮಾಜ ಬಾಂಧವರು, ಮಕ್ಕಳು  ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡೋತ್ಸವಕ್ಕೆ ಮೆರುಗನ್ನು ನೀಡಿದರು.  ವಿಜೇತರಿಗೆ ಪದಕ ಹಾಗೂ ಪ್ರಶಸ್ತಿ ಪತ್ರಗಳನ್ನು ಅತಿಥಿ- ಗಣ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಂಘದ ಹಿರಿಯ ಸದಸ್ಯರುಗಳು ವಿತರಿಸಿ ಶುಭಹಾರೈಸಿದರು. ಸಮಾರೋಪ ಸಮಾರಂಭ ಕಾರ್ಯಕ್ರಮದ ವೇದಿಕೆ ಯಲ್ಲಿ ಅತಿಥಿಯಾಗಿ ಸಂಘದ ಮಾಜಿ ಅಧ್ಯಕ್ಷ  ವಿ. ಎಸ್‌. ಹೆಗ್ಡೆ, ಪುಣೆಯ ಹೊಟೇಲ್‌ ಉದ್ಯಮಿ, ರಾಷ್ಟ್ರೀಯ ಮಟ್ಟದ ವಾಲಿಬಾಲ್‌ ಆಟಗಾರ  ಹಾಗೂ ಕ್ರಿಕೆಟ್‌ ಹಾಗೂ ತ್ರೋಬಾಲ್‌ ಪಂದ್ಯಗಳ ಪ್ರಾಯೋಜಕರಾದ ವಿನಯ್‌ ಹೆಗ್ಡೆ,  ಥಾಣೆಯ ಹೊಟೇಲ್‌ ಉದ್ಯಮಿ ಹಾಗೂ ದಾನಿ ಸಚೀಂದ್ರ ಹೆಗ್ಡೆ, ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಸಂಜೀವ ಹೆಗ್ಡೆ, ಕಾರ್ಯದರ್ಶಿ ಶಂಕರ ಹೆಗ್ಡೆ, ಕೋಶಾಧಿಕಾರಿ  ರಮೇಶ್‌ ಹೆಗ್ಡೆ, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ  ಶಶಿಧರ ಹೆಗ್ಡೆ, ಉಪಾಧ್ಯಕ್ಷ ಸುರೇಶ್‌ ಹೆಗ್ಡೆ   ಉಫ‌ಸ್ಥಿತರಿದ್ದು ವಿಜೇತ ತಂಡ ಗಳಿಗೆ ಟ್ರೋಪಿ ಹಾಗೂ ಪದಕಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ಅಪರಾಹ್ನ  ದಿವಂಗತ ನುರ್ಲಬೈಲು ಶ್ಯಾಮ್‌ ಹೆಗ್ಡೆ ಸ್ಮಾರಕ ಕ್ರಿಕೆಟ್‌ ಟೂರ್ನಮೆಂಟ್‌ ಮತ್ತು ತ್ರೋಬಾಲ್‌ ಟೂರ್ನಮೆಂಟ್‌ ಪಂದ್ಯ ಗಳು ಪುಣೆಯ ಉದ್ಯಮಿ  ವಿನಯ್‌ ಹೆಗ್ಡೆ ಇವರ ಪ್ರಾಯೋಜಕತ್ವದಲ್ಲಿ ನಡೆಯಿತು.  

ಕ್ರಿಕೆಟ್‌ ಪಂದ್ಯಾವಳಿಯಲ್ಲಿ   ನವೀನ್‌ ಹೆಗ್ಡೆ ಇವರ ರೂವಾರಿಯಲ್ಲಿ ಭಾಗವಹಿಸಿದ ಟೀಮ್‌ ತುಳುನಾಡು ಆಡಂದಾಲ್‌  ಇಲೆವೆನ್‌ ತಂಡವನ್ನು ಬಗ್ಗುಬಡಿದು ಟ್ರೋಫಿ ಮತ್ತು ಗೌರವ  ಧನವನ್ನು ತನ್ನದಾಗಿಸಿಕೊಂಡಿತು.

ಹಾಗೆಯೇ  ಥ್ರೋ ಬಾಲ್‌ ಪಂದ್ಯ ದಲ್ಲಿ ಥಾಣೆಯ ವಿಜಯಲಕ್ಷ್ಮೀ ಹೆಗ್ಡೆ ತಂಡ ಜಯಗಳಿಸಿದರೆ, ಭಾರತಿ ಎಂ.  ಹೆಗ್ಡೆ ತಂಡ  ರನ್ನರ್‌ಅಪ್‌ ಪ್ರಶಸ್ತಿಯನ್ನು ಪಡೆದುಕೊಂಡಿತು.   

ಮಹಿಳೆಯರ ಹಗ್ಗ ಜಗ್ಗಾಟ ಪಂದ್ಯದಲ್ಲಿ ಸುಜಾತಾ ಹೆಗ್ಡೆ ತಂಡ ಪ್ರಥಮ ಮತ್ತು ಹರ್ಷಲಾ ಹೆಗ್ಡೆ ತಂಡ ದ್ವಿತೀಯ, ಪುರುಷರ ಹಗ್ಗ ಜಗ್ಗಾಟದಲ್ಲಿ  ದೇವದಾಸ್‌ ಹೆಗ್ಡೆ ನೇತೃತ್ವದ ಶಿರೂರು ಇಲೆವೆನ್‌ ತಂಡ  ಪ್ರಥಮ ಹಾಗೂ  ಜಯರಾಮ್‌ ಹೆಗ್ಡೆ ಕಲ್ಯಾಣ್‌ ನೇತೃತ್ವದ ಕಲ್ಯಾಣ್‌ ಇಲೆವೆನ್‌ ತಂಡ ದ್ವಿತೀಯ ಪ್ರಶಸ್ತಿಯನ್ನು ಪಡೆದುಕೊಂಡಿತು.

ದಿನವಿಡೀ ನಡೆದ ಕ್ರೀಡೋತ್ಸವವನ್ನು ಯುವ ವಿಭಾಗದ ಸದಸ್ಯರು ಹಾಗೂ ಸಮಿತಿಯ ಸದಸ್ಯರು ಮಹಿಳೆಯರು ಅಚ್ಚುಕಟ್ಟಾಗಿ ನೆರವೇರಿಸಿದರು. ಸಂಘದ ಹಿರಿಯ ಸದಸ್ಯರು, ತುಳು ಕೂಟ ಐರೊಲಿ ಇದರ ಸದಸ್ಯರು, ರಶ್ಮಿ ಕ್ಯಾಟರರ್ಸ್‌ ಇದರ ಸಿಬಂದಿ ವರ್ಗ, ಹೇಮಂತ್‌ ಸುರ್ತಾ ಮತ್ತು ಬಳಗದವರು   ಉಪಸ್ಥಿತರಿದ್ದು ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಸ್ಪರ್ಧಾಳುಗಳಿಗೆ ಸಮವಸ್ತ್ರ ಟಿಶರ್ಟ್‌ ಇದರ ವ್ಯವಸ್ಥೆಯನ್ನು ಸದಾಶಿವ ಹೆಗ್ಡೆ ಐರೋಲಿ ಇವರ ನೆರವಿನಿಂದ ಇಂಡಿಯನ್‌ ಆಯಿಲ್‌ ಕಾರ್ಪೋರೇಶನ್‌ನವರು  ಉಚಿತವಾಗಿ ನೀಡಿದ್ದರು.  

ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು  ರವಿ ಹೆಗ್ಡೆ ಹೆರ್ಮುಂಡೆ ನಿರೂಪಿಸಿದರು. ಸಂಘದ ಆಡಳಿತ ಮಂಡಳಿ, ಯುವ ವಿಭಾಗ, ಮಹಿಳಾ ವಿಭಾಗದ ಸದಸ್ಯರು ಸಹಕರಿಸಿದರು.

ಟಾಪ್ ನ್ಯೂಸ್

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ

ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ

Madikeri: ಕೊಟ್ಟಿಗೆಯಿಂದ ಹಸು ಕಳವು; ದೂರು ದಾಖಲು

Madikeri: ಕೊಟ್ಟಿಗೆಯಿಂದ ಹಸು ಕಳವು; ದೂರು ದಾಖಲು

Puttur ಸರ್ವೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

Puttur ಸರ್ವೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

Mangaluru: ಮಾದಕ ವಸ್ತು ಸೇವನೆ ಆರೋಪ; 5 ಮಂದಿ ಸೆರೆ

Mangaluru: ಮಾದಕ ವಸ್ತು ಸೇವನೆ ಆರೋಪ; 5 ಮಂದಿ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

Baharain1

ಮೊಗವೀರ್ಸ್‌ ಬಹ್ರೈನ್‌ ಪ್ರೊ ಕಬಡ್ಡಿ;ತುಳುನಾಡ್‌ ತಂಡ ಪ್ರಥಮ,ಪುನಿತ್‌ ಬೆಸ್ಟ್‌ All ರೌಂಡರ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ

ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ

Madikeri: ಕೊಟ್ಟಿಗೆಯಿಂದ ಹಸು ಕಳವು; ದೂರು ದಾಖಲು

Madikeri: ಕೊಟ್ಟಿಗೆಯಿಂದ ಹಸು ಕಳವು; ದೂರು ದಾಖಲು

ಕಾರ್ನಾಡಿನಲ್ಲಿ ನಡೆದ ಕೊ*ಲೆ ಪ್ರಕರಣ ಇಬ್ಬರಿಗೆ ಜೀವಾವಧಿ ಶಿಕ್ಷೆ

Mangaluru: ಕಾರ್ನಾಡಿನಲ್ಲಿ ನಡೆದ ಕೊ*ಲೆ ಪ್ರಕರಣ ಇಬ್ಬರಿಗೆ ಜೀವಾವಧಿ ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.