ಆನರ್‌ ವ್ಯೂ 20: ಹಲವು ಪ್ರಥಮಗಳ ಹೊಸ ಫೋನ್‌


Team Udayavani, Jan 14, 2019, 12:30 AM IST

honor-view-20.jpg

ಹುವಾವೇ ಆನರ್‌ ಕಂಪೆನಿ ಜನವರಿ 29ರಂದು ಆನರ್‌ ವ್ಯೂ 20 ಎಂಬ ಹೊಸ ಫ್ಲಾಗ್‌ಶಿಪ್‌ ಫೋನ್‌ ಬಿಡುಗಡೆ ಮಾಡುತ್ತಿದೆ. ಜಗತ್ತಿನ ಮೊದಲ 48 ಮೆಗಾಪಿಕ್ಸಲ್‌ ಸೋನಿ ಕ್ಯಾಮರಾ ಮತ್ತು 3ಡಿ ಕ್ಯಾಮರಾ ಹೊಂದಿರುವ ಎರಡು ಲೆನ್ಸಿನ ಹಿಂಬದಿ ಕ್ಯಾಮರಾ ಇದರ ಹೆಗ್ಗಳಿಕೆ. ಜೊತೆಗೆ ಸೆಲ್ಫಿà ಕ್ಯಾಮರಾವನ್ನು ಪರದೆಯ ಮೇಲೆಯೇ ಅಳವಡಿಸಿರುವ ಮೊದಲ ಫೋನ್‌ ಎಂಬುದು ಸಹ ಇದರ ವಿಶೇಷಣ. ಇದರ ಜೊತೆಗೆ ಅನೇಕ ಪ್ರಥಮಗಳು ಇದರಲ್ಲಿವೆ..

ಜಗತ್ತಿನಲ್ಲಿ ಮೊಬೈಲ್‌ ಫೋನ್‌ ಮಾರಾಟದಲ್ಲಿ ಎರಡನೇ ಸ್ಥಾನದಲ್ಲಿರುವ ಹುವಾವೇ-ಆನರ್‌ ಭಾರತದ ಮಾರುಕಟ್ಟೆಯನ್ನು ಈಗಂತೂ ತುಂಬಾ ಗಂಭೀರವಾಗಿ ಪರಿಗಣಿಸಿದೆ. ಈ ಕಂಪನಿ, 2018ರಲ್ಲಿ  ವಿವಿಧ ಸೆಗ್‌ಮೆಂಟ್‌ಗಳಲ್ಲಿ ಫೋನ್‌ಗಳನ್ನು ಬಿಡುಗಡೆ ಮಾಡಿತ್ತು. 2019ರಲ್ಲಿ ಇನ್ನೂ ಅಗ್ರೆಸಿವ್‌ ಆಗಿ ಫೋನ್‌ಗಳನ್ನು ಬಿಡುಗಡೆ ಮಾಡುವ ಮುನ್ಸೂಚನೆ ನೀಡಿದೆ. ಅದಕ್ಕೆ ನಿದರ್ಶನವೆಂಬಂತೆ ಜನವರಿ ತಿಂಗಳಲ್ಲಿ ಮೂರು ಫೋನ್‌ಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.  ಅವುಗಳೆಂದರೆ, ಆನರ್‌ ವ್ಯೂ 20, ಆನರ್‌ 10 ಲೈಟ್‌ ಮತ್ತು  ಹುವಾವೇ  ವೈ 9. 

ಈ ಪೈಕಿ ಆನರ್‌ ವ್ಯೂ 20 ಮೊಬೈಲ್‌ ಬಗ್ಗೆ ಈ ವಾರ ನೋಡೋಣ. ಆನರ್‌ ವ್ಯೂ 20 ಕಂಪೆನಿಯ ಫ್ಲಾಗ್‌ಶಿಪ್‌ ಫೋನ್‌ ಆಗಿದೆ. ಅಂದರೆ ಅತ್ಯುನ್ನತ ದರ್ಜೆಯ ಫೋನ್‌.  ಆನರ್‌ ವ್ಯೂ 20, ಅನೇಕ ತಂತ್ರಜ್ಞಾನಗಳನ್ನು ಮೊದಲು  ಅಳವಡಿಸಿಕೊಂಡಿರುವ ಫೋನ್‌ ಆಗಿದೆ. ಪರದೆಯ ಮೇಲೆಯೇ 25 ಮೆಗಾಪಿಕ್ಸಲ್‌ ಸೆಲ್ಫಿà ಕ್ಯಾಮರಾ ಹೊಂದಿದ ಮೊದಲ ಫೋನ್‌, 48 ಮೆಗಾಪಿಕ್ಸಲ್‌ ಮತ್ತು 3ಡಿ ಕ್ಯಾಮರಾ ಹೊಂದಿರುವ ಜಗತ್ತಿನ ಮೊದಲ ಫೋನ್‌, 7ನ್ಯಾನೋ ಮೀಟರ್‌ನ ಪ್ರಥಮ ಚಿಪ್‌ಸೆಟ್‌, (ಕಿರಿನ್‌ 980 ಎರಡು ಎನ್‌ಪಿಯು), ಕಾರ್ಟೆಕ್ಸ್‌ ಎ76 ಆಧಾರಿತ ಸಿಪಿಯು ಹೊಂದಿದ ಮೊದಲ ಫೋನ್‌, ಮಲಿ ಜಿ76 ಜಿಪಿಯು (ಗೇಮಿಂಗ್‌ಗಾಗಿ) ಹೊಂದಿದ ಮೊದಲ ಫೋನ್‌, 1.4 ಜಿಬಿಪಿಎಸ್‌ ಕ್ಯಾಟ್‌ 21 ಮೋಡೆಮ್‌ ಹೊಂದಿದ ವಿಶ್ವದ ಮೊದಲ ಫೋನ್‌, (ಅಪ್‌ಲೋಡಿಂಗ್‌, ಡೌನ್‌ಲೋಡ್‌ ವೇಗಕ್ಕಾಗಿ), 2133 ಮೆಗಾಹಟ್ಜ್ ಎಲ್‌ಪಿಡಿಡಿಆರ್‌ 4ಎಕ್ಸ್‌ ರ್ಯಾಮ್‌ ಹೊಂದಿರುವ ಮೊದಲ ಫೋನ್‌ ಎಂಬ ಹೆಗ್ಗಳಿಕೆಗಳನ್ನು ಈ ಫೋನ್‌ ಒಳಗೊಂಡಿದೆ.

ಈ ಮೊದಲುಗಳಲ್ಲಿ ಹೆಚ್ಚು ಆದ್ಯತೆ ಪಡೆದಿರುವ ವಿಶೇಷಣ ಎಂದರೆ 48 ಮೆಗಾಪಿಕ್ಸಲ್‌ ಹೈ ಡೆಫಿನೇಷನ್‌ ಕ್ಯಾಮರಾ, ಇದು ಸೋನಿ ಐಎಂಎಕ್‌ 586 ಕ್ಯಾಮರಾ ಆಗಿದ್ದು, ಅರ್ಧ ಇಂಚಿನ ಸಿಮೋಸ್‌ ಸೆನ್ಸರ್‌ ಹೊಂದಿದೆ. ಮತ್ತು ಇದರ ಜೋಡಿ ಟಿಓಎಫ್ 3ಡಿ ಕ್ಯಾಮರಾ ಸಹ ಇದೆ. ಅತ್ಯಂತ ಸ್ಪಷ್ಟ ಫೋಟೋಗಳನ್ನು ಮೂಡಿಸುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. 4ಕೆ ವಿಡಿಯೋ ರೆಕಾರ್ಡಿಂಗ್‌ ಸೌಲಭ್ಯ ಸಹ ಇದೆ.

ಇಷ್ಟಲ್ಲದೇ 25 ಮೆಗಾಪಿಕ್ಸಲ್‌ ಸೆಲ್ಪಿà ಕ್ಯಾಮರಾ ಇದೆ. ಸೆಲ್ಫಿà ಕ್ಯಾಮರಾವನ್ನು ಮೊಬೈಲ್‌ ಪರದೆಯ ಮೇಲೆ ಇರಿಸುವ ಸಲುವಾಗಿ ನಾಚ್‌ ಡಿಸೈನ್‌, ವಾಟರ್‌ಡ್ರಾಪ್‌ ನಾಚ್‌ ವಿನ್ಯಾಸಗಳನ್ನು ಕಂಪೆನಿಗಳು ಕಂಡುಕೊಂಡವು. ಪರದೆ ಪೂರ್ತಿ ಇರಲಿ, ಅಲ್ಲಿ ಸೆಲ್ಫಿà ಕ್ಯಾಮರಾವೇ ಬೇಡ ಎಂದು ಫೋನಿನ ಹಿಂಭಾಗದಿಂದ ಕ್ಯಾಮರಾ ಮೇಲೆ ಬರುವ ಸ್ಲೆ„ಡಿಂಗ್‌ ವಿನ್ಯಾಸವನ್ನೂ ವಿವೋ ಮತ್ತು ಇದೇ ಆನರ್‌ ಮ್ಯಾಜಿಕ್‌ ಮೊಬೈಲ್‌ ನಲ್ಲಿ ಮಾಡಲಾಯಿತು. ಆದರೆ ಗ್ರಾಹಕರಿಗೆ ಸ್ಲೆ„ಡಿಂಗ್‌ ಎಂದರೆ ಕಿರಿಕಿರಿ. ಇದನ್ನರಿತು ಆನರ್‌ ಕಂಪೆನಿ ಈಗ ಪರದೆಯ ಮೇಲೆಯೇ ಫೋನಿನ ಮೇಲ್ಭಾಗದ  ಎಡ ಮೂಲೆಯಲ್ಲಿ  ಸೆಲ್ಫಿà ಕ್ಯಾಮರಾ ಇರಿಸಿದೆ. 

ಈ ಹೊಸ ಫೋನ್‌ನಲ್ಲಿ 4000 ಎಂಎಎಚ್‌ ಬ್ಯಾಟರಿ ಇದ್ದು, ಇದಕ್ಕೆ 5ವಿ 4ಎ ಸೂಪರ್‌ ಫಾಸ್ಟ್‌ ಚಾರ್ಜರ್‌ ಸೌಲಭ್ಯ ಸಹ ನೀಡಿದೆ. ಇದರಲ್ಲಿ ಶೇ. 50ರಷ್ಟು ಬ್ಯಾಟರಿ ಕೇವಲ ಅರ್ಧಗಂಟೆಯಲ್ಲಿ ಚಾರ್ಜ್‌ ಆಗುತ್ತದೆ. ಈ ಮೊಬೈಲ್‌ ಪರದೆ 6.4 ಇಂಚು ಅಗಲ ಇದ್ದು ಮೊಬೈಲ್‌ನ ಪೂರ್ತಿ ಪರದೆ ಇದೆ. ಅಂಚು ರಹಿತವಾಗಿದೆ. 8 ಜಿಬಿ + 256 ಜಿಬಿ ಹಾಗೂ 6ಜಿಬಿ+128 ಜಿಬಿ ಎರಡು ಆವೃತ್ತಿಗಳಿವೆ. ಎರಡು ಸಿಮ್‌ ಹಾಕಬಹುದು. 3.5 ಎಂಎಂ ಆಡಿಯೋ ಜಾಕ್‌ ಹಾಕಿಕೊಳ್ಳಬಹುದು.  ಕಡು ನೀಲಿ, ತೆಳು ನೀಲಿ ಹಾಗೂ ಕಪ್ಪು ಬಣ್ಣಗಳಲ್ಲಿ ದೊರಕಲಿದೆ. ಅಮೆಜಾನ್‌.ಇನ್‌ ನಲ್ಲಿ ಜನವರಿ 15 ರಿಂದ ಮುಂಗಡ ಬುಕಿಂಗ್‌ ಇದೆ. ಹೀಗೆ ಮುಂಗಡ ಬುಕಿಂಗ್‌ ಮಾಡಿದವರಿಗೆ 3000 ರೂ. ಬೆಲೆಯ ಆನರ್‌ ನ್ಪೋರ್ಟ್‌ ಎಎಂ 61, ಬಿಟಿ ಬ್ಲೂಟೂತ್‌ ಇಯರ್‌ ಫೋನ್‌ ಉಚಿತವಾಗಿ ದೊರಕಲಿದೆ. ಈ ಫೋನ್‌ ಜನವರಿ 29ರಂದು ಬಿಡುಗಡೆಯಾಗಲಿದೆ. ಇದೆಲ್ಲಾ ಸರಿ ಇದರ ದರ ಎಷ್ಟು? ಎಂಬ ಪ್ರಶ್ನೆ ಬಂದೇ ಬರುತ್ತದೆ. ಇದುವರೆಗೂ ಆನರ್‌ ಇದರ ದರ ಎಷ್ಟೆಂದು ತಿಳಿಸಿಲ್ಲ. ಅಂದಾಜು 30 ಸಾವಿರ ರೂ.ಗಳಿಂದ 35 ಸಾವಿರ ದೊಳಗೆ ಇದರ ದರ ಇರುವ ಸಾಧ್ಯತೆಯಿದೆ.
 
– ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

3

Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ

KMC

Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ 

2

Puttur: ಚೆನ್ನಾಗಿ ಮಳೆ ಬಂದರೂ ಕುಸಿದ ಅಂತರ್ಜಲ ಮಟ್ಟ

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.