ಖೇಲೋ ಇಂಡಿಯಾ ಈಜು: ಕಿನ್ನಿಗೋಳಿ ಮೂಲದ ಅಪೇಕ್ಷಾಗೆ ಚಿನ್ನ
Team Udayavani, Jan 14, 2019, 1:05 AM IST
ಪುಣೆ: ಇಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಕ್ರೀಡಾಕೂಟದ ಅಂಡರ್-17 ವಿಭಾಗದ ಬಾಲಕಿಯರ 400 ಮೀ. ಮಿಡ್ಲೆ ಈಜು ಸ್ಪರ್ಧೆಯಲ್ಲಿ ಮಹಾರಾಷ್ಟ್ರವನ್ನು ಪ್ರತಿನಿಧಿಸಿದ, ಕಿನ್ನಿಗೋಳಿ ಮೂಲದ ಅಪೇಕ್ಷಾ ಫೆರ್ನಾಂಡಿಸ್ ಚಿನ್ನದ ಪದಕ ಜಯಿಸಿದ್ದಾರೆ. ಈ ಕೂಟದಲ್ಲಿ ಚಿನ್ನ ಗೆದ್ದ ಅತೀ ಕಿರಿಯ ಸಾಧಕಿ ಎಂಬುದು ಇವರ ಹೆಗ್ಗಳಿಕೆ. ಸೋಮವಾರ ನಡೆಯುವ 200 ಮೀ. ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲೂ ಅಪೇಕ್ಷಾ ಸ್ಪರ್ಧಿಸಲಿದ್ದಾರೆ.
ಕೊನ್ನಿಗೋಳಿ ದಾಮಸ್ಕಟ್ಟೆ ಸಮೀಪದ ಅರಸರಗುತ್ತಿನ ಬಳಿಯ ಡಾ| ಪ್ರೋ. ಬೇಲನ್ ಫೆರ್ನಾಂಡೀಸ್-ಶ್ಯಾಲೆಟ್ ಫೆರ್ನಾಂಡೀಸ್ ದಂಪತಿಯ ಪುತ್ರಿಯಾಗಿರುವ ಅಪೇಕ್ಷಾ ಮುಂಬಯಿಯ ಪೊವಾಯಿಯ “ಬಾಂಬೆ ಸ್ಕಾಟಿಷ್ ಸ್ಕೂಲ್’ನಲ್ಲಿ 8ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ.
ಕಳೆದ ವರ್ಷಾಂತ್ಯ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಹೊಸದಿಲ್ಲಿಯಲ್ಲಿ ನಡೆದ ರಾಷ್ಟ್ರೀಯ ಈಜು ಕೂಟದ 200 ಮೀ. ಬಟರ್ಫ್ಲೈ, 200 ಮೀ. ಮಿಡ್ಲೆ ಹಾಗೂ 200 ಮೀ. ಬ್ರೆಸ್ಟ್ ಸ್ಟ್ರೋಕ್ ಸ್ಪರ್ಧೆಗಳಲ್ಲಿ ನೂತನ ದಾಖಲೆಯೊಂದಿಗೆ ಚಿನ್ನ ಗೆದ್ದ ಸಾಧನೆ ಅಪೇಕ್ಷಾ ಅವರದ್ದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PCB: ಒಂದು ವರ್ಷದಲ್ಲಿ ಐದು ಕೋಚ್; ಪಾಕಿಸ್ತಾನ ವೈಟ್ ಬಾಲ್ ಕೋಚ್ ಆಗಿ ಆಖಿಬ್ ಜಾವೇದ್ ಆಯ್ಕೆ
T20 series: ಪಾಕಿಸ್ಥಾನಕ್ಕೆ ವೈಟ್ವಾಶ್ ಟಿ20: ಆಸ್ಟ್ರೇಲಿಯ 3-0 ಜಯಭೇರಿ
BGT 2024: ಐಪಿಎಲ್ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್!
BGT Series: ವಿರಾಟ್ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್ ಜಾನ್ಸನ್
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
MUST WATCH
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ-98: ಮೋಹ ಸಹಜ, ಬಿಡದಿರುವುದು ಮಾತ್ರ ತಪ್ಪು
BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ
Maharashtra Elections: ವಿಪಕ್ಷ ನಾಯಕ ರಾಹುಲ್ ಛೋಟಾ ಪೋಪಟ್: ಬಿಜೆಪಿ ವಕ್ತಾರ ಲೇವಡಿ
Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ
Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.