ಪತ್ನಿಯಲ್ಲಿ ಅಮ್ಮನ ಕಂಡೆ …


Team Udayavani, Jan 14, 2019, 6:17 AM IST

ammana-mane.jpg

ಅದು “ಅಮ್ಮನ ಮನೆ’ ಚಿತ್ರ ಟೀಸರ್‌ ಬಿಡುಗಡೆ ಕಾರ್ಯಕ್ರಮ. ರಾಘವೇಂದ್ರ ರಾಜಕುಮಾರ್‌ ಚಿತ್ರದ ಹೈಲೈಟ್‌. ಅವರ ಸಿನಿಮಾ ಕಾರ್ಯಕ್ರಮ ಅಂದಮೇಲೆ, ಸಹಜವಾಗಿಯೇ ಜನಜಾತ್ರೆ ಇದ್ದೇ ಇರುತ್ತೆ. ಅಂದೇಕೋ ರಾಘವೇಂದ್ರ ರಾಜಕುಮಾರ್‌ ತುಂಬಾನೇ ಭಾವುಕರಾಗಿದ್ದರು. ಅದಕ್ಕೆ ಕಾರಣ, ವೇದಿಕೆ ಮೇಲಿದ್ದ ಅವರ ಅತ್ತೆ ನಾಗಮ್ಮ ಹಾಗೂ ಪತ್ನಿ ಮಂಗಳಾ.

ಹೌದು, ವೇದಿಕೆಗೆ ಬಂದ ನಾಗಮ್ಮ, ಮಂಗಳಾ ಅವರ ಬಗ್ಗೆ ರಾಘವೇಂದ್ರ ರಾಜಕುಮಾರ್‌, ಗುಣಗಾನ ಮಾಡುತ್ತಲೇ ಭಾವುಕರಾದರು. ಈ ವೇಳೆ, ಅತ್ತೆ ನಾಗಮ್ಮನ ಕಾಲಿಗೆ ನಮಸ್ಕರಿಸಿದ ರಾಘವೇಂದ್ರ ರಾಜಕುಮಾರ್‌ ಪತ್ನಿ ಮಂಗಳಾ ಅವರ ಕಾಲಿಗೂ ನಮಸ್ಕರಿಸಿದರು. ಹಣೆಗೊಂದು ಪ್ರೀತಿಯ ಮುತ್ತನಿಟ್ಟು, “ಅಮ್ಮನ ಮನೆ’ ಚಿತ್ರದ ಬಗ್ಗೆ ಹೇಳುತ್ತಾ ಹೋದರು.

“ನಾನು ಪತ್ನಿ ಮಂಗಳಾ ಅವರಲ್ಲಿ ನನ್ನ ತಾಯಿಯನ್ನು ನೋಡುತ್ತಿದ್ದೇನೆ. ಅಮ್ಮ ನನ್ನ ಚಿಕ್ಕ ವಯಸ್ಸಿನಲ್ಲಿ ಪಾಲನೆ ಮಾಡಿದರೆ, ಕೆಲ ವರ್ಷಗಳ ಹಿಂದೆ ನಾನು ಅನಾರೋಗ್ಯದಲ್ಲಿದ್ದಾಗ ಪತ್ನಿ ಸಾಕಷ್ಟು ಸಾಥ್‌ ಕೊಟ್ಟರು. ನನ್ನ ಪತ್ನಿ ಮಂಗಳಾ ನನ್ನ ಬದುಕಿನ ಮತ್ತೂಬ್ಬ ತಾಯಿ. ಇನ್ನು, ನನ್ನ ತಂದೆಯ ಸಹೋದರಿ ಅತ್ತೆ ನಾಗಮ್ಮ ಅವರು ಸಹ ತಾಯಿ ಸ್ವರೂಪದಂತೆ ಇದ್ದಾರೆ.

ನಾನು ಹುಟ್ಟಿದ್ದ ಸಂದರ್ಭದಲ್ಲಿ ನನ್ನ ತಾಯಿ ಚಿತ್ರೀಕರಣ ಸೇರಿದಂತೆ ವಜ್ರೆಶ್ವರಿ ಕಂಬೈನ್ಸ್‌ ಸಂಸ್ಥೆಯ ಜವಾಬ್ದಾರಿ ಹೊತ್ತುಕೊಂಡಿದ್ದರು. ಆ ಒತ್ತಡದ ಕೆಲಸಗಳ ಮಧ್ಯೆ ನನ್ನನ್ನು ಸರಿಯಾಗಿ ನೋಡಿಕೊಳ್ಳಲು ಆಗುತ್ತಿರಲಿಲ್ಲ. ಆ ಸಂದರ್ಭದಲ್ಲಿ ನನ್ನ ಅತ್ತೆ ನಾಗಮ್ಮ ಕೂಡ ಅವರ ಮಗಳಿಗೆ ಜನ್ಮ ನೀಡಿದ್ದರು. ಆ ವೇಳೆ ನನಗೂ ಎದೆ ಹಾಲು ಉಣಿಸುವ ಮೂಲಕ ನನ್ನನ್ನು ಸಾಕಿ ಸಲುಹಿದ್ದಾರೆ’ ಎಂದು ನೆನಪು ಮೆಲುಕು ಹಾಕುತ್ತಲೇ ಭಾವುಕರಾದರು.

ಈ ಚಿತ್ರ ಗಂಡಸಿನ ಬದುಕಿನಲ್ಲಿ ಬರುವ ಮೂವರು ತಾಯಂದಿರ ಕುರಿತ ಕಥೆ ಹೇಳುತ್ತದೆ. ಹಾಗಾಗಿ, ಅಂದು ವೇದಿಕೆಗೆ ರಾಘವೇಂದ್ರ ರಾಜಕುಮಾರ್‌ ಅವರ ಅತ್ತೆ ನಾಗಮ್ಮ, ಪತ್ನಿ ಮಂಗಳಾ ಹಾಗೂ ಸೊಸೆ ಶ್ರೀದೇವಿ ಅವರನ್ನು ಆಹ್ವಾನಿಸಿ, ಅವರ ಮೂಲಕವೇ “ಅಮ್ಮನ ಮನೆ’ ಚಿತ್ರದ ಟೀಸರ್‌ ಬಿಡುಗಡೆ ಮಾಡಿಸಲಾಯಿತು.

ನಿಖೀಲ್‌ ಮಂಜು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈಗಾಗಲೇ ಚಿತ್ರ ಸೆನ್ಸಾರ್‌ ಆಗಿದ್ದು, ಫೆಬ್ರವರಿ ಮೊದಲ ವಾರದಲ್ಲಿ ರಾಜ್ಯಾದ್ಯಂತ ತೆರೆಗೆ ಬರಲಿದೆ. ಅಂದಹಾಗೆ, ರಾಘವೇಂದ್ರ ರಾಜಕುಮಾರ್‌ ಅವರು 14 ವರ್ಷಗಳ ಬಳಿಕ ಈ ಚಿತ್ರದ ಮೂಲಕ ನಟನೆ ಇಳಿದಿದ್ದಾರೆ. ಟೀಸರ್‌ ಬಿಡುಗಡೆ ಕಾರ್ಯಕ್ರಮಕ್ಕೆ ಪುನೀತ್‌ರಾಜಕುಮಾರ್‌, ವಿನಯರಾಜಕುಮಾರ್‌, ತಬಲಾನಾಣಿ, ಸುಚೇಂದ್ರಪ್ರಸಾದ್‌, ರೋಹಿಣಿ, ಶೀತಲ್‌ ಹೇಮಂತ್‌, ನಿರ್ಮಾಪಕ ಆರ್‌.ಎಸ್‌. ಕುಮಾರ್‌ ಸೇರಿದಂತೆ ಹಲವರು ಸಾಕ್ಷಿಯಾದರು.

ಪುನೀತ್‌ರಾಜಕುಮಾರ್‌ ಅವರಿಗೆ ರಾಘವೇಂದ್ರ ರಾಜಕುಮಾರ್‌ ಅವರನ್ನು ತೆರೆಯ ಮೇಲೆ ನೋಡಲು ಸಾಕಷ್ಟು ನಿರೀಕ್ಷೆ ಇದೆಯಂತೆ. ರಾಘವೇಂದ್ರ ರಾಜಕುಮಾರ್‌ ಇಲ್ಲಿ, ರಾಜೀವ ಪಾತ್ರದ ಮೂಲಕ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, “ಬಂಗಾರದ ಮನುಷ್ಯ’ ಚಿತ್ರದಲ್ಲಿ ಡಾ.ರಾಜಕುಮಾರ್‌ ಪಾತ್ರದ ಹೆಸರು ಕೂಡ ರಾಜೀವ ಎಂಬುದು ವಿಶೇಷ. ಈಗ ರಾಘವೇಂದ್ರ ರಾಜಕುಮಾರ್‌ ಕೂಡ “ರಾಜೀವ’ ಹೆಸರಿನ ಪಾತ್ರದ ಮೂಲಕ ಮೋಡಿ ಮಾಡಲಿದ್ದಾರೆ.

ಟಾಪ್ ನ್ಯೂಸ್

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Daali dhananjay starrer Zebra movie

Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್‌ ಸಾಥ್‌

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Gowri Shankara: ಸೆಟ್ಟೇರಿತು ಹೊಸಬರ ಗೌರಿ ಶಂಕರ

Gowri Shankara: ಸೆಟ್ಟೇರಿತು ಹೊಸಬರ ಗೌರಿ ಶಂಕರ

Maryade Prashne movie trailer out

Maryade Prashne: ಪ್ರಶ್ನೆ ಕೇಳಲು ಬಂದ ಮರ್ಯಾದಸ್ತರು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.