ಆಧ್ಯಾತ್ಮಿಕ ಸಂಪತ್ತಿನಲ್ಲಡಗಿದೆ ಆತ್ಮ ಸಂತೋಷ


Team Udayavani, Jan 14, 2019, 10:23 AM IST

14-january-19.jpg

ಹಾವೇರಿ: ಮಹಾತ್ಮರ ಸ್ಮರಣೆ ಮಾಡುವುದರಿಂದ ಪ್ರತ್ಯಕ್ಷ ಜ್ಯೋರ್ತಿಲಿಂಗ ಮಾಡಿದಷ್ಟು ಆತ್ಮ ಅನುಸಂಧಾನವಾಗುತ್ತದೆ. ಇಂಥ ಆತ್ಮ ಸಂತೋಷ ನಾಡಿನ ಮಠ ಮಾನ್ಯಗಳ ಆಧ್ಯಾತ್ಮಿಕ ಸಂಪತ್ತಿನಲ್ಲಿ ಅಡಗಿದೆ ಎಂದು ಶಿರಸಿ ಬಣ್ಣದಮಠದ ಶಿವಲಿಂಗ ಸ್ವಾಮೀಜಿ ನುಡಿದರು. ನಗರದ ಹುಕ್ಕೇರಿಮಠದಲ್ಲಿ ಹಮ್ಮಿಕೊಂಡಿರುವ ಲಿಂ| ಶಿವಬಸವ ಸ್ವಾಮಿಗಳ 73ನೇ ಮತ್ತು ಲಿಂ| ಶಿವಲಿಂಗ ಶ್ರೀಗಳ 10ನೇ ಪುಣ್ಯ ಸ್ಮರಣೋತ್ಸವದ ‘ನಮ್ಮೂರ ಜಾತ್ರೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸ್ವಾಮೀಜಿ ಮಾತನಾಡಿದರು.

ಈಗ ಮಾನವನ ಬದುಕಿನಲ್ಲಿ ಭೌತಿಕ ಸಂಪತ್ತು ಹೆಚ್ಚಾಗಿದೆ. ಆದರೆ, ಅಂತರಂಗದ ಆಧ್ಮಾತ್ಮಿಕ ಸಂಪತ್ತು ಕಡಿಮೆಯಾಗಿದೆ. ನೈತಿಕ ಮೌಲ್ಯಗಳ ಕೊರತೆಯೇ ಇದಕ್ಕೆ ಕಾರಣವಾಗಿದೆ. ಧಾರ್ಮಿಕ ಆಚರಣೆಗಳಾದ ಪಂಚಾಚಾರಗಳು, ಅಷ್ಟಾವರಣಗಳು ಮನುಷ್ಯನಲ್ಲಿ ನೈತಿಕ ಮೌಲ್ಯಗಳನ್ನು ಹೆಚ್ಚುಸುತ್ತವೆ ಎಂದು ಹೇಳಿದರು.

ಸಮ್ಮುಖ ವಹಿಸಿದ್ದ ಜಡೆಯ ಸಂಸ್ಥಾನಮಠದ ಡಾ| ಮಹಾಂತ ಸ್ವಾಮೀಜಿ ಮಾತನಾಡಿ, ಜಾತ್ರೆ ಎಂದರೆ ಅದು ಬೆಂಡು ಬತ್ತಾಸಗಳ ಮಾರಾಟವಲ್ಲ. ಮನದ ಮಲಿನತೆ ತೊಡೆದು ಹಾಕುವ, ಕಲೆಗೆ ಬೆಲೆ ಹಾಗೂ ಬದುಕಿನ ಸಾರ್ಥಕತೆ ಜೀವನ ನಡೆಸುವುದಕ್ಕಾಗಿ ಇರುವ ಮಾರ್ಗವಾಗಿದೆ ಎಂದು ಹೇಳಿದರು.

ನೇತೃತ್ವ ವಹಿಸಿದ್ದ ಕೂಡಲದ ಗುರುಮಹೇಶ್ವರ ಸ್ವಾಮೀಜಿ ಮಾತನಾಡಿ, ಕನ್ನಡ ನಾಡಿನಲ್ಲಿ ಪುಣ್ಯಕ್ಷೇತ್ರಗಳು ಹಲವು. ತಪೋಕ್ಷೇತ್ರಗಳು ಕೆಲವೇ ಕೆಲವು. ಅಂತಹ ತಪೋಕ್ಷೇತ್ರಗಳಲ್ಲಿ ಹುಕ್ಕೇರಿಮಠವೂ ಒಂದಾಗಿದೆ. ಸಮಾಜಮುಖೀ ಚಿಂತನೆಗಳ ಮೂಲಕ ಭಕ್ತರ ಬದುಕಿನ ತಲ್ಲಣ, ಚಂಚಲತೆ, ವಿಪ್ಲವಗಳನ್ನು ನಿವಾರಿಸಿ ಸನ್ಮಾರ್ಗದಲ್ಲಿ ನಡೆಯಲು ಇಲ್ಲಿನ ಧರ್ಮ ಸಂಸ್ಕಾರ ಕಾರಣವಾಗುತ್ತಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಹುಕ್ಕೇರಿಮಠ ಕಬಡ್ಡಿ ಚಾಂಪಿಯನ್‌ ಟ್ರೋಫಿ ಗೆದ್ದ ತಂಡಗಳಿಗೆ ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಯಿತು. ಹಾರನಹಳ್ಳಿ ಚೌಕಿಮಠದ ನೀಲಕಂಠ ಸ್ವಾಮೀಜಿ ಅವರಿಗೆ ಶ್ರೀಮಠದಿಂದ ಗೌರವಾರ್ಪಣೆ ಸಲ್ಲಿಸಲಾಯಿತು. ಖ್ಯಾತ ವ್ಯಂಗಚಿತ್ರಕಾರ ನಾಮದೇವ ಕಾಗದಗಾರ ಮತ್ತು ಹಿರಿಯ ಕ್ರೀಡಾಪಟು ಚಂದ್ರಶೇಖರ ಕೋಡಿಹಳ್ಳಿ ಅವರನ್ನು ಸನ್ಮಾನಿಸಲಾಯಿತು. ಕಲಬುರ್ಗಿ ಸಂಗಮೇಶ ಪಾಟೀಲ ಸುಗಮ ಸಂಗೀತ ಪ್ರಸ್ತುತ ಪಡಿಸಿದರು.

ಸಮಾರಂಭದಲ್ಲಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಶಿವಣ್ಣ ಶಿರೂರ, ತಮ್ಮಣ್ಣ ಮುದ್ದಿ, ಪಿ.ಡಿ. ಶಿರೂರ, ಆರ್‌.ಡಿ. ಹಾವನೂರ, ಸಿ.ವೈ. ಅಂತರವಳ್ಳಿ, ಎಸ್‌.ಎಸ್‌. ಮುಷ್ಠಿ, ಜಗದೀಶ ತುಪ್ಪದ, ವೀರಣ್ಣ ಅಂಗಡಿ, ಬಿ.ಬಸವರಾಜ, ರಾಚಣ್ಣ ಲಂಬಿ, ಮಹೇಶ ಚಿನ್ನಿಕಟ್ಟಿ ಇದ್ದರು. ರಾಜಣ್ಣ ಮಾಗನೂರ ಸ್ವಾಗತಿಸಿದರು. ಎಸ್‌.ಎನ್‌. ಮಳೆಪ್ಪನವರ ಮತ್ತು ಶಿವಬಸವ ಮರಳಿಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಎಸ್‌. ಶಿವಣ್ಣ ವಂದಿಸಿದರು.

ಟಾಪ್ ನ್ಯೂಸ್

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ

12

Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್‌; ತನಿಖೆ ಚುರುಕು

delhi air

Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ

CM DCM

Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

vijayen

BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫ‌ಲ: ವಿಜಯೇಂದ್ರ ಮೇಲೂ ಪರಿಣಾಮ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ

Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ

1-bbb

Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ

ajjamper-Qadri

Adi Jambava Samavesha: ಅಂಬೇಡ್ಕರ್‌ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ

12

Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್‌; ತನಿಖೆ ಚುರುಕು

delhi air

Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ

CM DCM

Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.