ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದಿಂದ ಗೆಜ್ಜೆ ಹಬ್ಬ
Team Udayavani, Jan 14, 2019, 11:28 AM IST
ಹುಬ್ಬಳ್ಳಿ: ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ 23ನೇ ವಾರ್ಷಿಕೋತ್ಸವ ಪ್ರಯುಕ್ತ ‘ಗೆಜ್ಜೆ ಹಬ್ಬ’ ಇಲ್ಲಿನ ನ್ಯೂ ಕಾಟನ್ ಮಾರ್ಕೆಟ್‌ನ ಸಾಂಸ್ಕೃತಿಕ ಭವನದಲ್ಲಿ ರವಿವಾರ ನಡೆಯಿತು.
ಕಲಾ ಕೇಂದ್ರದಿಂದ ರವಿದಾತಾರ ಪ್ರಶಸ್ತಿ ಸ್ವೀಕರಿಸಿ ದ ವಿದುಷಿ ವಾರಿಜಾ ನಲಿಗೆ ಮಾತನಾಡಿ, ನೃತ್ಯದಿಂದ ಆಧ್ಯಾತ್ಮ ಜ್ಞಾನ ಬೆಳೆಯುತ್ತದೆ. ಪುರಾಣ ಶಾಸ್ತ್ರ ಅಧ್ಯಯನ ಮಾಡುವುದರಿಂದ ನಾಟ್ಯ ಶಾಸ್ತ್ರಜ್ಞಾನ ಬೆಳೆಯುತ್ತದೆ. ನಾಟ್ಯಶಾಸ್ತ್ರ ತರಬೇತಿ ಪಡೆದ ತಕ್ಷಣ ಮಕ್ಕಳು ಕಾರ್ಯಕ್ರಮ ನೀಡಬೇಕು ಎನ್ನುವ ಮನಸ್ಥಿತಿಯನ್ನು ಪಾಲಕರು ಬೆಳೆಸಿಕೊಳ್ಳಬಾರದು. ನೃತ್ಯ ಒಂದು ತಪಸ್ಸು ಇದ್ದಂತೆ. ಕೆಲ ತಿಂಗಳ ತರಬೇತಿ ಪಡೆದಾಕ್ಷಣ ನೃತ್ಯ ಕರಗತವಾಗಿದೆ ಎನ್ನುವ ಭಾವನೆ ಬೇಡ ಎಂದರು.
ಡಾ| ಗಂಗೂಬಾಯಿ ಹಾನಗಲ್ಲ ಮ್ಯೂಸಿಕ್ ಫೌಂಡೇಶನ್ ಅಧ್ಯಕ್ಷ ಮನೋಜ ಹಾನಗಲ್ಲ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಸಂಗೀತ, ಸಾಹಿತ್ಯ, ನೃತ್ಯ ಕ್ಷೇತ್ರದಲ್ಲಿ ದೊಡ್ಡ ಪ್ರತಿಭೆಗಳಿವೆ. ಆದರೆ ಈ ಭಾಗದ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಬೇಕಾಗಿದೆ. ಸರಕಾರ ಕೂಡ ಈ ಭಾಗದ ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿ ನೀಡಬೇಕು. 30-40 ವರ್ಷಗಳ ಹಿಂದೆ ಈ ಭಾಗವನ್ನು ತೊರೆದು ಕಳೆದವರನ್ನು ಉತ್ತರ ಕರ್ನಾಟಕ ಕೋಟಾದಡಿ ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಈ ಭಾಗದ ಪ್ರತಿಭೆಗಳನ್ನು ವಂಚಿತರನ್ನಾಗಿಸುತ್ತಿದೆ. ಸರಕಾರ ಈ ಕುರಿತು ಸೂಕ್ತ ಗಮನ ಹರಿಸಬೇಕು ಎಂದು ಹೇಳಿದರು.
ಕಲಾ ಕೇಂದ್ರದ ನೃತ್ಯ ಗುರು ವಿದುಷಿ ಡಾ| ಸಹನಾ ಭಟ್ಟ ಮಾತನಾಡಿ, ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರ 23 ವಸಂತಗಳಲ್ಲಿ ರಾಜ್ಯ ಹಾಗೂ ದೇಶದ ಗಮನ ಸೆಳೆದಿದೆ. ಕೇಂದ್ರದಲ್ಲಿ ನೃತ್ಯ ತರಬೇತಿ ಪಡೆದ ವಿದ್ಯಾರ್ಥಿಗಳು ವಿವಿಧ ಭಾಗದಲ್ಲಿ ನೃತ್ಯ ಪ್ರದರ್ಶನ ನೀಡುತ್ತಿದ್ದಾರೆ ಎಂದರು.ಡಾ| ಕಿರಣ ಕುಲಕರ್ಣಿ, ಅನಿಲ ಬಾಸಗಿ, ಕಾಡಪ್ಪ ಮೈಸೂರು, ದಿನೇಶ ವಾಗ್ಮೋಡೆ, ಸತೀಶ ಭಟ್ಟ ಇನ್ನಿತರರಿದ್ದರು.
ಪ್ರಶಸ್ತಿ ಪ್ರದಾನ: ವಿದುಷಿ ವಾರಿಜಾ ನಲಿಗೆ ಅವರಿಗೆ ರವಿದಾತಾರ ಪ್ರಶಸ್ತಿ ಹಾಗೂ ಕಲಾ ಕೇಂದ್ರದ ಹಿರಿಯ ವಿದ್ಯಾರ್ಥಿಗಳಾದ ವಿದ್ವಾನ್ ಮಂಜುನಾಥ ಗೋರ್ಕಲ್ ಹಾಗೂ ವಿದುಷಿ ಮೇಘನಾ ರಾವ್ ಅವರಿಗೆ ಪ್ರಸಕ್ತ ಸಾಲಿನ ರವಿದಾತಾರ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಗಮನ ಸೆಳೆದ ನೃತ್ಯ ರೂಪಕ: ಕಲಾ ಕೇಂದ್ರದ ಬಾಲ ಪ್ರತಿಭೆಗಳು ಹಾಗೂ ಹಿರಿಯ ವಿದ್ಯಾರ್ಥಿಗಳ ವಿವಿಧ ನೃತ್ಯಗಳು ಪ್ರೇಕ್ಷಕರನ್ನು ರಂಜಿಸಿದವು. ಡಾ| ಸಹನಾ ಭಟ್ಟ ಅವರು ನಿರ್ದೇಶಿಸಿ ಪ್ರಸ್ತುತ ಪಡಿಸಿದ ಶಾಕುಂತಲಾ ನೃತ್ಯ ರೂಪಕ ಗಮನ ಸಳೆಯಿತು. ಕಲಾ ಕೇಂದ್ರದ ವಿದ್ಯಾರ್ಥಿಗಳು ನೃತ್ಯರೂಪಕ ಪ್ರಸ್ತುತ ಪಡಿಸಿದರು. ಪ್ರದೀಪ ಭಟ್ಟ ಅವರ ಸಾಹಿತ್ಯ ಹಾಗೂ ಬಾಲಸುಬ್ರಹ್ಮಣ್ಯ ಶರ್ಮ ಅವರು ಸಂಗೀತ ನಿರ್ದೇಶನ ಇಂಪು ನೀಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.