ಅಡಿಲೇಡ್: ಮೇಲೆ ಬೀಳಲೇಬೇಕಿದೆ ಭಾರತ
Team Udayavani, Jan 15, 2019, 12:30 AM IST
ಅಡಿಲೇಡ್: ಆಸ್ಟ್ರೇಲಿಯ ನೆಲದಲ್ಲಿ ಮೊದಲ ಸಲ ಟೆಸ್ಟ್ ಸರಣಿ ಗೆದ್ದ ಸಂಭ್ರಮಲ್ಲಿದ್ದ ಭಾರತ ತಂಡ ಏಕದಿನದಲ್ಲಿ ನಿರಾಶೆಯ ಆರಂಭ ಪಡೆದಿದೆ. ಸಿಡ್ನಿಯ ಮೊದಲ ಪಂದ್ಯವನ್ನು 34 ರನ್ ಅಂತರದಿಂದ ಕಳೆದುಕೊಂಡು ಸರಣಿ ಹಿನ್ನಡೆ ಅನುಭವಿಸಿದೆ.
ಹೀಗಾಗಿ ಮಂಗಳವಾರ “ಅಡಿಲೇಡ್ ಓವಲ್’ನಲ್ಲಿ ನಡೆಯಲಿರುವ 2ನೇ ಮುಖಾಮುಖೀಯಲ್ಲಿ ಗೆಲ್ಲಲೇಬೇಕಾದ ಒತ್ತಡ ಕೊಹ್ಲಿ ಪಡೆಯ ಮೇಲಿದೆ. ಇಲ್ಲವಾದರೆ ಟೆಸ್ಟ್ ಸೋಲಿಗೆ ಸೇಡು ತೀರಿಸಿಕೊಳ್ಳುವ ಯೋಜನೆಯಲ್ಲಿರುವ ಕಾಂಗರೂ ಪಡೆ ಬಹಳ ಬೇಗ ಇದರಲ್ಲಿ ಯಶಸ್ಸು ಸಾಧಿಸಲಿದೆ.
ಇದು “ವಿಶ್ವಕಪ್ ವರ್ಷ’ವಾದ್ದರಿಂದ ಎಲ್ಲ ತಂಡಗಳಿಗೂ ಪ್ರತಿಯೊಂದು ಏಕದಿನ ಪಂದ್ಯವೂ ಅತ್ಯಂತ ಮಹತ್ವದ್ದಾಗಿ ಪರಿಣಮಿಸುತ್ತದೆ. ವಿಶ್ವಕಪ್‌ಗೆ ಸಶಕ್ತ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಆಟಗಾರರ ಸಾಧನೆ, ವೈಫಲ್ಯ ಪ್ರಮುಖ ಪಾತ್ರ ವಹಿಸುತ್ತದೆ. ಇಲ್ಲಿನ ಯಶಸ್ಸನ್ನೇ ಮಾನದಂಡವಾಗಿರಿಸಿ ವಿಶ್ವಕಪ್‌ಗೆ ಅಂತಿಮ ತಂಡವೊಂದನ್ನು ಕಟ್ಟುವುದು ಪ್ರತಿಯೊಂದು ರಾಷ್ಟ್ರದ ಯೋಜನೆ.
ಮತ್ತೆ ಆರಂಭಿಕರ ವೈಫಲ್ಯ
ವಿಶ್ವಕಪ್ ಹಿನ್ನೆಲೆಯಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯದೆದುರಿನ ಸರಣಿ ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ. ಆದರೆ ಸಿಡ್ನಿ ಸೋಲು ಈ ಯೋಜನೆಗೆ ಹಿನ್ನಡೆ ಉಂಟುಮಾಡಿರುವುದು ಸುಳ್ಳಲ್ಲ. ಪ್ರಸಕ್ತ ಸರಣಿಯಲ್ಲಿ ಭಾರತ ಅನುಭವಿಸಿದ ಸೋಲುಗಳಲ್ಲಿ ಆರಂಭಿಕರ ವೈಫಲ್ಯ ಪ್ರಮುಖವಾಗಿತ್ತು. ಸಿಡ್ನಿ ಏಕದಿನದಲ್ಲಿ ಇದು ಗಂಭೀರ ರೂಪದಲ್ಲಿ ಕಾಡಿತು. 4 ರನ್ನಿಗೆ 3 ವಿಕೆಟ್ ಪತನವೆಂದರೆ ಅದೊಂದು ಘೋರ ವೈಫಲ್ಯ. ದೊಡ್ಡ ಮೊತ್ತದ ಚೇಸಿಂಗ್ ವೇಳೆ ಇಂಥದೊಂದು ಕುಸಿತ ಸಂಭವಿಸಿದರೆ ಎಷ್ಟೇ ಬಲಿಷ್ಠ ತಂಡಕ್ಕೂ ಚೇತರಿಕೆ ಅಸಾಧ್ಯ. ಆದರೆ ರೋಹಿತ್ ಶರ್ಮ ಇಂಥ ಸ್ಥಿತಿಯಲ್ಲೂ ದಿಟ್ಟ ಹೋರಾಟವೊಂದನ್ನು ನಡೆಸಿ ತಂಡವನ್ನು ಗೆಲುವಿನ ಬಾಗಿಲ ತನಕ ಕೊಂಡೊಯ್ದದ್ದು ನಿಜಕ್ಕೂ ಅಸಾಮಾನ್ಯ ಸಾಧನೆ.
ಒಮ್ಮೆ ಕ್ರೀಸ್ ಆಕ್ರಮಸಿಕೊಂಡರೆ ರೋಹಿತ್ ಶರ್ಮ ಅವರನ್ನು ಅಲುಗಾಡಿಸುವುದು ಕಷ್ಟ ಎಂಬುದು ಮತ್ತೂಮ್ಮೆ ಅರಿವಿಗೆ ಬಂತು. ರೋಹಿತ್ ಕೊನೆಯ ತನಕ ಕ್ರೀಸಿನಲ್ಲಿ ಉಳಿದದ್ದೇ ಆದರೆ ಸಿಡ್ನಿ ಪಂದ್ಯದ ಫಲಿತಾಂಶ ಬೇರೆಯೇ ಆಗಿರುತ್ತಿತ್ತು. ಅವರಿಗೆ ಇನ್ನೊಂದು ತುದಿಯಲ್ಲಿ ಸೂಕ್ತ ಬೆಂಬಲ ಸಿಗಲಿಲ್ಲ. 4ನೇ ಓವರಿನಲ್ಲೇ ಕ್ರೀಸ್ ಇಳಿಯಬೇಕಾದ ಒತ್ತಡಕ್ಕೆ ಸಿಲುಕಿದ ಧೋನಿ ಒಂದೆಡೆ ನಿಂತರಾದರೂ ಅವರ ಆಟದಲ್ಲಿ ಮೊದಲಿನ ಜೋಶ್ ಇರಲಿಲ್ಲ. ಇದು ಭಾರತಕ್ಕೆ ಹಿನ್ನಡೆಯಾಗಿ ಕಾಡಿತು. ಹಾಗೆಯೇ ದಿನೇಶ್ ಕಾರ್ತಿಕ್ ಬದಲು ಕೇದಾರ್ ಜಾಧವ್ ಇದ್ದಿದ್ದರೆ… ಎಂಬ ಪ್ರಶ್ನೆ ಎದುರಾದದ್ದೂ ಸುಳ್ಳಲ್ಲ. ಅಡಿಲೇಡ್‌ನಲ್ಲಿ ಜಾಧವ್ ಅವಕಾಶ ಪಡೆಯುವ ಸಾಧ್ಯತೆ ಇದೆ.
ಅಡಿಲೇಡ್‌ನಲ್ಲೂ ರೋಹಿತ್ ಶರ್ಮ ದೊಡ್ಡ ಇನ್ನಿಂಗ್ಸ್ ಕಟ್ಟುತ್ತಾರೆ ಎಂದಲ್ಲ, ಅವರೊಬ್ಬರನ್ನೇ ನಂಬಿ ಕೂರುವುದೂ ಸರಿಯಲ್ಲ. ಧವನ್, ಕೊಹ್ಲಿ, ರಾಯುಡು ಸಿಡಿದರೆ ಟೀಮ್ ಇಂಡಿಯಾಕ್ಕೆ ಸರಣಿ ಸಮಬಲ ಅಸಾಧ್ಯವಲ್ಲ.
ಡೆತ್ ಓವರ್ ಬೌಲಿಂಗ್ ಚಿಂತೆ
ಬೌಲಿಂಗ್ ವಿಭಾಗದಲ್ಲಿ ಎದುರಾದ ಸಮಸ್ಯೆಯೆಂದರೆ ಡೆತ್ ಓವರ್‌ಗಳಲ್ಲಿ ರನ್ ಸೋರಿಹೋದದ್ದು. ಅಂತಿಮ 10 ಓವರ್‌ಗಳಲ್ಲಿ 90 ರನ್ ನೀಡಿದ್ದು ಚೇಸಿಂಗ್ ವೇಳೆ ದುಬಾರಿಯಾಗಿ ಪರಿಣಮಿಸಿತು. ಭಾರತದ ಯಾವ ಬೌಲರ್ ಕೂಡ ಪರಿಣಾಮಕಾರಿ ದಾಳಿ ಸಂಘಟಿಸಲಿಲ್ಲ. ಭುವನೇಶ್ವರ್, ಶಮಿ, ಖಲೀಲ್, ಕುಲದೀಪ್ ಎಲ್ಲರೂ ವಿಫಲರಾದರು. ಹೀಗಾಗಿ ಲೆಗ್‌ಸ್ಪಿನ್ನರ್ ಚಾಹಲ್ ದ್ವಿತೀಯ ಪಂದ್ಯದಲ್ಲಿ ಆಡಲೂಬಹುದು. ಚಾಹಲ್ ಸೋಮವಾರ ನೆಟ್ಸ್‌ನಲ್ಲಿ ಬಹಳ ಸಮಯ ಕಳೆದಿದ್ದರು.
ಆ ಮಟ್ಟಿಗೆ ಭಾರತಕ್ಕಿಂತ ದುರ್ಬಲ ಎಂದೇ ಭಾವಿಸಲಾದ ಆಸ್ಟ್ರೇಲಿಯದ ಬೌಲಿಂಗ್ ಹೆಚ್ಚು ಘಾತಕವಾಗಿ ಗೋಚರಿಸಿತು. ಅನನುಭವಿ ಜೇ ರಿಚರ್ಡ್‌ಸನ್ ಬರೀ 26 ರನ್ನಿಗೆ 4 ವಿಕೆಟ್ ಕಿತ್ತು ಭಾರತಕ್ಕೆ ಸೋಲಿನ ಹಾದಿ ತೋರಿಸಿದ್ದೊಂದು ಹೆಚ್ಚುಗಾರಿಕೆ.
ಆಸೀಸ್ ಬ್ಯಾಟಿಂಗ್ ಕೂಡ ದಿಢೀರ್ ಚೇತರಿಕೆ ಕಂಡಿತು. ಟೆಸ್ಟ್ ಸರಣಿಯಲ್ಲಿ ಕೈಕೊಟ್ಟ ಶಾನ್ ಮಾರ್ಷ್, ಖ್ವಾಜಾ, ಹ್ಯಾಂಡ್ಸ್‌ಕಾಂಬ್ ಅವರೆಲ್ಲ ಇಲ್ಲಿ ಕೈ ಹಿಡಿದರು. ಫಿಂಚ್ ಸಿಡಿದರೆ ಆಸ್ಟ್ರೇಲಿಯ ಹೆಚ್ಚು ಘಾತಕವಾಗಿ ಪರಿಣಮಿಸುವುದರಲ್ಲಿ ಅನುಮಾನವಿಲ್ಲ.
ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಅಂಬಾಟಿ ರಾಯುಡು, ಮಹೇಂದ್ರ ಸಿಂಗ್ ಧೋನಿ, ಕೇದಾರ್ ಜಾಧವ್/ದಿನೇಶ್ ಕಾರ್ತಿಕ್, ರವೀಂದ್ರ ಜಡೇಜ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ಖಲೀಲ್ ಅಹ್ಮದ್, ಮೊಹಮ್ಮದ್ ಶಮಿ.
ಆಸ್ಟ್ರೇಲಿಯ: ಆರನ್ ಫಿಂಚ್ (ನಾಯಕ), ಅಲೆಕ್ಸ್ ಕ್ಯಾರಿ, ಉಸ್ಮಾನ್ ಖ್ವಾಜಾ, ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್‌ಕಾಂಬ್, ಮಾರ್ಕಸ್ ಸ್ಟೋಯಿನಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಪೀಟರ್ ಸಿಡ್ಲ್, ಜೇ ರಿಚರ್ಡ್‌ಸನ್, ನಥನ್ ಲಿಯೋನ್, ಜಾಸನ್ ಬೆಹೆÅಂಡಾಫ್ì.
ಆರಂಭ: ಬೆಳಗ್ಗೆ 7.50
ಪ್ರಸಾರ: ಸೋನಿ ಸಿಕ್ಸ್
ಅಡಿಲೇಡ್‌ನಲ್ಲಿ ಭಾರತ-ಆಸ್ಟ್ರೇಲಿಯ
“ಅಡಿಲೇಡ್ ಓವಲ್’ನಲ್ಲಿ ಭಾರತ-ಆಸ್ಟ್ರೇಲಿಯ 5 ಸಲ ಮುಖಾಮುಖೀಯಾಗಿವೆ. ಮೊದಲ 4 ಪಂದ್ಯಗಳಲ್ಲಿ ಆಸ್ಟ್ರೇಲಿಯ ಗೆದ್ದರೆ, 2012ರಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಭಾರತ ಗೆಲುವಿನ ಖಾತೆ ತೆರೆದಿತ್ತು.
ಉಳಿದಂತೆ ವಿವಿಧ ಕ್ರಿಕೆಟ್ ಕೂಟಗಳ ವೇಳೆ ಭಾರತ ಇಲ್ಲಿ 8 ಪಂದ್ಯಗಳನ್ನಾಡಿದ್ದು, ಏಳನ್ನು ಗೆದ್ದ ಅಮೋಘ ದಾಖಲೆ ಹೊಂದಿದೆ. ಈ ಸಂದರ್ಭದಲ್ಲಿ ನ್ಯೂಜಿಲ್ಯಾಂಡ್ ಮತ್ತು ಪಾಕಿಸ್ಥಾನವನ್ನು 2 ಸಲ ಮಣಿಸಿದೆ. ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ವಿರುದ್ಧ ಒಂದೊಂದು ಜಯ ಸಾಧಿಸಿದೆ. ಶ್ರೀಲಂಕಾ ವಿರುದ್ಧ ಆಡಲಾದ 2012ರ ಪಂದ್ಯ ಟೈ ಆಗಿದೆ.
ಅಡಿಲೇಡ್‌ನಲ್ಲಿ ಭಾರತ-ಆಸ್ಟ್ರೇಲಿಯ
ವರ್ಷ ಫಲಿತಾಂಶ
1986 ಆಸ್ಟ್ರೇಲಿಯಕ್ಕೆ 36 ರನ್ ಜಯ
1991 ಆಸ್ಟ್ರೇಲಿಯಕ್ಕೆ 6 ವಿಕೆಟ್ ಜಯ
2000 ಆಸ್ಟ್ರೇಲಿಯಕ್ಕೆ 152 ರನ್ ಜಯ
2008 ಆಸ್ಟ್ರೇಲಿಯಕ್ಕೆ 50 ರನ್ ಜಯ
2012 ಭಾರತಕ್ಕೆ 4 ವಿಕೆಟ್ ಜಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PCB: ಒಂದು ವರ್ಷದಲ್ಲಿ ಐದು ಕೋಚ್; ಪಾಕಿಸ್ತಾನ ವೈಟ್ ಬಾಲ್ ಕೋಚ್ ಆಗಿ ಆಖಿಬ್ ಜಾವೇದ್ ಆಯ್ಕೆ
T20 series: ಪಾಕಿಸ್ಥಾನಕ್ಕೆ ವೈಟ್‌ವಾಶ್ ಟಿ20: ಆಸ್ಟ್ರೇಲಿಯ 3-0 ಜಯಭೇರಿ
BGT 2024: ಐಪಿಎಲ್ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್!
BGT Series: ವಿರಾಟ್ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್ ಜಾನ್ಸನ್
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
MUST WATCH
ಹೊಸ ಸೇರ್ಪಡೆ
Maharashtra Elections: ವಿಪಕ್ಷ ನಾಯಕ ರಾಹುಲ್ ಛೋಟಾ ಪೋಪಟ್: ಬಿಜೆಪಿ ವಕ್ತಾರ ಲೇವಡಿ
Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ
Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್ ಮತ್ತು ಬಾಬಾ ನಡುವಿನ ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.