ಮತ್ತೆ ಎರಡು ಸಾವಿರ ಚೈಲ್ಡ್ ಲಾಕ್ ತೆರವು
Team Udayavani, Jan 15, 2019, 6:39 AM IST
ಬೆಂಗಳೂರು: ಕ್ಯಾಬ್‌ಗಳಲ್ಲಿರುವ ಚೈಲ್ಡ್ ಲಾಕ್ ತೆರವು ಕಾರ್ಯಾಚರಣೆ ಮುಂದುವರಿಸಿರುವ ಸಾರಿಗೆ ಇಲಾಖೆ ಸಿಬ್ಬಂದಿ, ಸೋಮವಾರ ಎರಡು ಸಾವಿರ ವಾಹನಗಳ ಚೈಲ್ಡ್‌ಲಾಕ್ ವ್ಯವಸ್ಥೆ ನಿಷ್ಕ್ರಿಯಗೊಳಿಸಿದ್ದಾರೆ.
ಚೈಲ್ಡ್ ಲಾಕ್ ತೆರವುಗೊಳಿಸಲಾದ ಎರಡು ಸಾವಿರ ಕ್ಯಾಬ್‌ಗಳ ಪೈಕಿ ನಗರದಲ್ಲೇ 1,500 ಕ್ಯಾಬ್‌ಗಳಿವೆ. ಜ್ಞಾನಭಾರತಿ, ಯಶವಂತಪುರ, ದೇವನಹಳ್ಳಿ ಸುತ್ತಲಿನ ಪ್ರದೇಶಗಳಲ್ಲಿ ಸೂಚನೆ ನೀಡಿದ ನಂತರವೂ ಈ ವ್ಯವಸ್ಥೆ ಅಳವಡಿಸಿಕೊಂಡಿದ್ದ ಕ್ಯಾಬ್‌ಗಳನ್ನು ತಡೆದು, ಯಂತ್ರವನ್ನು ನಿಷ್ಕ್ರಿಯಗೊಳಿಸಲಾಯಿತು.
ಈಗಾಗಲೇ ರಾಜ್ಯಾದ್ಯಂತ ಎಲ್ಲ ಸಾರಿಗೆ ಪ್ರಾದೇಶಿಕ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ. ಚೈಲ್ಡ್‌ಲಾಕ್ ತೆರವುಗೊಳಿಸಲು ಇಲಾಖೆಯು ಜ.16ರ ಗಡುವು ವಿಧಿಸಿದೆ. ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ. ಕರ್ನಾಟಕ ಮೋಟಾರು ವಾಹನ ನಿಯಮ 1988ರ ಕಲಂ 2 (25)ರ ಪ್ರಕಾರ ಸಾರಿಗೆ ವಾಹನಗಳಲ್ಲಿ (ಕ್ಯಾಬ್‌ಗಳು) ಚೈಲ್ಡ್ ಲಾಕ್ ಸಿಸ್ಟ್‌ಂ ಅಳವಡಿಸುವಂತಿಲ್ಲ.
ಅಂತಹ ವಾಹನಗಳಿಗೆ ರಹದಾರಿ ಕೂಡ ನೀಡುವಂತಿಲ್ಲ. ಹೈಕೋರ್ಟ್ ಕೂಡ ಈಚೆಗೆ ಟೂರಿಸ್ಟ್ ಟ್ಯಾಕ್ಸಿ ಮತ್ತು ಆ್ಯಪ್ ಆಧಾರಿತ ಟ್ಯಾಕ್ಸಿಗಳಲ್ಲಿರುವ ಚೈಲ್ಡ್ ಲಾಕ್ ನಿಷ್ಕ್ರಿàಯಗೊಳಿಸಬೇಕು. ದೃಢೀಕರಣ ಇಲ್ಲದ ಯಾವುದೇ ವಾಹನಗಳಿಗೆ ಕಾರ್ಯಾಚರಣೆಗೆ ಅವಕಾಶ ನೀಡಬಾರದು ಎಂದು ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.