ಗುರುಗ್ರಾಮದಲ್ಲಿ ರಾಜ್ಯ ಬಿಜೆಪಿ ಶಾಸಕರು
Team Udayavani, Jan 15, 2019, 6:44 AM IST
ಬೆಂಗಳೂರು: ಬಿಜೆಪಿ ಕಾರ್ಯಕಾರಿಣಿ ನಿಮಿತ್ತ ದೆಹಲಿಗೆ ಹೋಗಿದ್ದ ಬಿಜೆಪಿ ಶಾಸಕರು ಇನ್ನೂ ಎರಡು ಮೂರು ದಿನ ಗುರುಗ್ರಾಮದಲ್ಲಿಯೇ ವಾಸ್ತವ್ಯ ಹೂಡುವ ಸಾಧ್ಯತೆಯಿದೆ.
ಸೋಮವಾರ ಸಂಜೆ ಇವರೆಲ್ಲರೂ ಗುರುಗ್ರಾಮಕ್ಕೆ ತೆರಳಿದ್ದು, ಅಲ್ಲಿಯೇ ಇರಲಿದ್ದಾರೆ. ‘ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಸಭೆ ನಡೆಸಲಿದ್ದಾರೆಂದು ಹೇಳಿದ್ದರಿಂದ ದೆಹಲಿಯಲ್ಲೇ ವಾಸ್ತವ್ಯ ಹೂಡಿದ್ದೆವು. ಇದೀಗ ಇನ್ನೂ 2-3 ಮೂರು ದಿನ ದೆಹಲಿಯ ಸುತ್ತಮುತ್ತಲ ಪ್ರದೇಶದಲ್ಲೇ ವಾಸ್ತವ್ಯ ಮುಂದುವರಿಸಬೇಕಾಗುತ್ತದೆ ಎಂದು ನಾಯಕರು ಸೂಚಿಸಿದ್ದಾರೆ. ಹಾಗಾಗಿ ಈ ಬಾರಿ ಸಂಕ್ರಾಂತಿ ಹಬ್ಬವನ್ನು ಗುರುಗ್ರಾಮದಲ್ಲೇ ಆಚರಿಸುವಂತಾಗಿದೆ. ಕೆಲವರು ಸಿಹಿ ಸುದ್ದಿ ಬರಲಿದೆ ಎಂದು ಪಿಸುಗುಡುತ್ತಿದ್ದಾರೆ. ಆದರೆ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ ಎಂದು ಹಿರಿಯ ಶಾಸಕರೊಬ್ಬರು ‘ಉದಯವಾಣಿ’ಗೆ ತಿಳಿಸಿದರು.
ಅನಾರೋಗ್ಯದಿಂದ ಬಳಲುತ್ತಿರುವ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಆರೋಗ್ಯ ವಿಚಾರಿಸಲು ಬಿ.ಎಸ್.ಯಡಿಯೂರಪ್ಪ ಅವರು ತುಮಕೂರಿಗೆ ಭೇಟಿ ನೀಡಲಿದ್ದಾರೆಂಬ ಮಾಹಿತಿಯಿದ್ದರೂ ಕೊನೆಯ ಕ್ಷಣದಲ್ಲಿ ಅವರೂ ಗುರುಗ್ರಾಮದಲ್ಲೇ ವಾಸ್ತವ್ಯ ಹೂಡಲು ನಿರ್ಧರಿಸಿದರು.
ನಡೆಯಲಿಲ್ಲ ಸಭೆ: ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಶನಿವಾರ ಮುಕ್ತಾಯವಾದರೂ ರಾಜ್ಯದ ಬಿಜೆಪಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರೊಂದಿಗೆ ವರಿಷ್ಠರು ಪ್ರತ್ಯೇಕವಾಗಿ ಸಭೆ ನಡೆಸಲಿದ್ದಾರೆಂಬ ಕಾರಣಕ್ಕೆ ಎರಡು ದಿನ ದೆಹಲಿಯಲ್ಲೇ ವಾಸ್ತವ್ಯ ಮುಂದುವರಿಸಿದ್ದರು. ಆದರೆ ಭಾನುವಾರ ಯಾವುದೇ ವರಿಷ್ಠರು ಸಭೆ ನಡೆಸಲಿಲ್ಲ. ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್ ಔಪಚಾರಿಕವಾಗಿ ಸಭೆಯನ್ನು ಉದ್ಘಾಟಿಸಿ ಒಂದಿಷ್ಟು ಸಲಹೆ, ಸೂಚನೆ ನೀಡಿದರು. ಸೋಮವಾರ ಅಮಿತ್ ಶಾ ಅವರು ಸಭೆ ನಡೆಸಿ ಚರ್ಚಿಸಲಿದ್ದಾರೆಂದು ಕೆಲ ನಾಯಕರು ಹೇಳಿದ್ದರು. ಆದರೆ ಭಾನುವಾರ ಸಂಜೆಯೇ ಅಮಿತ್ ಶಾ ದೆಹಲಿ ತೊರೆದಿದ್ದರು.
ಶಾಸಕರಲ್ಲೂ ಗೊಂದಲ: ಸೋಮವಾರ ಬೆಳಗ್ಗೆ 11.30ಕ್ಕೆ ಸಭೆ ನಡೆಯಲಿದೆ ಎಂದು ಹೇಳಿದರೂ ಯಾವುದೇ ಸಭೆ ನಡೆಯಲಿಲ್ಲ. ಬಳಿಕ ಯಡಿಯೂರಪ್ಪನವರೇ ಔಪಚಾರಿಕವಾಗಿ ಶಾಸಕರೊಂದಿಗೆ ಮಾತನಾಡಿದರು. ಇದರಿಂದ ಗೊಂದಲಕ್ಕೆ ಸಿಲುಕಿದ ಹಲವು ಶಾಸಕರಿಗೆ ತಾವು ದೆಹಲಿಯಲ್ಲೇ ವಾಸ್ತವ್ಯ ಮುಂದುವರಿಕೆಗೆ ಸಕಾರಣವೇ ಗೊತ್ತಾಗಲಿಲ್ಲ. ಈ ನಡುವೆ ಕೆಲ ನಾಯಕರು ಅಗತ್ಯವಿದ್ದವರು ಬೆಂಗಳೂರಿಗೆ ತೆರಳಬಹುದೆಂಬ ಸೂಚನೆ ನೀಡಿದರು. ಆದರೆ ಕೆಲ ಹೊತ್ತಿನಲ್ಲೇ ಯಾರೂ ತೆರಳಬಾರದೆಂಬ ಸಂದೇಶ ರವಾನೆಯಾಯಿತು. ಅಂತಿಮವಾಗಿ ಸಂಜೆ ಸುಮಾರು 90 ಶಾಸಕರು ಗುರುಗ್ರಾಮದ ಖಾಸಗಿ ಹೋಟೆಲ್‌ಗೆ ಸ್ಥಳಾಂತರಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
MUST WATCH
ಹೊಸ ಸೇರ್ಪಡೆ
CID Crime Serial ಪ್ರಭಾವ…ಅಣ್ಣನನ್ನು ಯಾಮಾರಿಸಲು ಅಪಹರಣದ ನಾಟಕವಾಡಿ ಸಿಕ್ಕಿಬಿದ್ದ ತಮ್ಮ!
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Oscar: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಆಸ್ಕರ್ ನಾಮಿನೇಷನ್ ವೋಟಿಂಗ್ ವಿಸ್ತರಣೆ
ಆರ್ಯಭಟ ಗಣಿತ ಪರೀಕ್ಷೆ; ಸಾಧನೆಗೈದ ಡಿ.ಪಿ.ಎಸ್. ಶಾಲೆಯ ವಿದ್ಯಾರ್ಥಿಗಳು
Koratagere: ಕಾರು-ಬೈಕ್ ಭೀಕರ ಅಪಘಾತ: ಓರ್ವ ಸವಾರ ಸ್ಥಳದಲ್ಲೇ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.