ಐಎಡಿಯ ಸಾಧನೆ ಜಿಲ್ಲೆಯ ಹೆಮ್ಮೆ: ಎನ್‌.ಎ. ನೆಲ್ಲಿಕುನ್ನು


Team Udayavani, Jan 15, 2019, 7:04 AM IST

15-january-9.jpg

ಮಧೂರು : ಸಾಮಾಜಿಕ ಕಳಕಳಿ ಮತ್ತು ಸೇವಾ ತತ್ಪರತೆಯಿಂದ ಸಂಯೋಜಿತ ಚಿಕಿತ್ಸಾ ವ್ಯವಸ್ಥೆಯೊಂದನ್ನು ಜಗತ್ತಿಗೆ ಮೊತ್ತಮೊದಲು ಪರಿಚಯಿಸಿದ ಕೀರ್ತಿ ಹೊಂದಿರುವ ಐಎಡಿ(ಇನ್‌ಸ್ಟಿಟ್ಯೂಟ್ ಆಫ್‌ ಅಪ್ಲೈಡ್‌ ಡರ್ಮಟೋಲಜಿ) ಜಾಗತಿಕ ಮಟ್ಟದಲ್ಲೇ ಜಿಲ್ಲೆಯನ್ನು ಗುರುತಿಸುವಂತೆ ಮಾಡಿರುವುದು ಹೆಮ್ಮೆಯಾಗಿದೆ. ವ್ಯಾವಹಾ ರಿಕವಾಗಿ ಲಾಭಗಳಿಲ್ಲದೆ ದೀನರ ಆರೋಗ್ಯ ಪರ ಸೇವೆ, ಕರ್ತವ್ಯ ನಿಷ್ಠೆಗಳ ಮೂಲಕ ಐಎಡಿ ನೊಂದವರ ಪಾಲಿನ ಭರವಸೆಯ ಬೆಳಕಿಂಡಿ ಎಂದು ಕಾಸರಗೋಡು ಶಾಸಕ ಎನ್‌.ಎ.ನೆಲ್ಲಿಕುನ್ನು ತಿಳಿಸಿದರು.

ಜಾಗತಿಕ ಮಟ್ಟದಲ್ಲಿ ಗಡಿನಾಡು ಕಾಸರಗೋಡನ್ನು ಗುರುತಿಸುವಂತೆ ಮಾಡಿ ರುವ ಹಲವು ಸಾಧನೆಗಳ ಪಟ್ಟಿಯಲ್ಲಿ ಕನ್ನಡಿಗರದೇ ಸಂಸ್ಥೆಯಾಗಿರುವ ಇನ್‌ಸ್ಟಿ ಟ್ಯೂಟ್ ಆಫ್‌ ಅಫ್ಲೈಡ್‌ ಡರ್ಮಟೋಲಜಿ (ಐಎಡಿ) ಆಯೋಜಿಸಿರುವ ‘ಆನೆಕಾಲು ರೋಗ ಮತ್ತು ಲಿಂಪೋಡೆಮಾದ ಬಗ್ಗೆ ಖಂಡಿತಾ ಭಯ ಬೇಡ-ನಾವು ನಿಮ್ಮ ನೋವಿಗೆ ಧ್ವನಿಯಾಗಲು ಸದಾ ತತ್ಪರರಾಗಿದ್ದೇವೆ’ ಎಂಬ (ನೆವರ್‌ ಫಿಯರ್‌ ಫೈಲೇರಿಯಾಸಿಸ್‌ ನೋರ್‌ ಲಿಂಪೋಡೆಮಾ-ವಿ ಕೇರ್‌ ಪೋರ್‌ ಯು) ಘೋಷಣೆಯೊಂದಿಗೆ ಉಳಿಯ ತ್ತಡ್ಕದ ಐಎಡಿ ಸಭಾಂಗಣದಲ್ಲಿ ಆಯೋಜಿಸಿ ರುವ ರಾಷ್ಟ್ರೀಯ ಮಟ್ಟದ 9ನೇ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆನೆಕಾಲು ಸಹಿತ ವಿವಿಧ ಚರ್ಮ ವ್ಯಾಧಿಗಳ ಸುಲಲಿತ ನಿರ್ವಹಣೆಯಲ್ಲಿ ಹೊಸ ದೃಷ್ಟಿಕೋನದ ಸಂಯೋಜಿತ ಚಿಕಿತ್ಸಾ ಕ್ರಮವನ್ನು ಪರಿಚಯಿಸಿದ ಐಎಡಿ ನಿರ್ದೇಶಕ ಡಾ.ಎಸ್‌.ಆರ್‌.ನರಹರಿಯವರ ದೂರದೃಷ್ಟಿಯ ಚಿಂತನೆಗಳು ಭರವಸೆ ಮೂಡಿಸಿವೆ. ಮಿತಿಗೊಳಪಟ್ಟ ಆರ್ಥಿಕ ನಿರ್ವಹಣೆಯ ಸವಾಲಿನ ಮಧ್ಯೆ ರೋಗಿಗಳ ಪಾಲಿಗೆ ಆಶಾಕಿರಣವಾಗಿರುವ ಐಎಡಿಯ ಸಾಧನೆಗಳು, ಕೊಡುಗೆಗಳು ಇನ್ನಷ್ಟು ಬಲಗೊಳ್ಳಲಿ ಎಂದು ಅವರು ಈ ಸಂದರ್ಭ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಇಗ್ಲೆಂಡ್‌ನ‌ ಆಕ್ಸ್‌ಫ‌ರ್ಡ್‌ ವಿವಿಯ ಚರ್ಮರೋಗ ವಿಭಾಗದ ಮುಖ್ಯಸ್ಥ ಪ್ರೊ| ಟೆರೆನ್ಸ್‌ ಜೆ. ರೆಯಾನ್‌ ಅವರು ಮಾತನಾಡಿ, ಪ್ರಾಚೀನ ಇತಿಹಾಸ ಹಿನ್ನೆಲೆ ಹೊಂದಿರುವ ಭಾರತದ ಪರಂಪರೆಯ ಚಿಕಿತ್ಸೆಯಾದ ಆಯುರ್ವೇದವನ್ನೂ ಅಳವಡಿಸಿ ಸಂಯೋಜಿತ ಕ್ರಮವನ್ನು ಬಳಸಿ ವಿವಿಧ ವಿಭಾಗಗಳ ಆನೆಕಾಲು ರೋಗ ನಿಯಂತ್ರಣದಲ್ಲಿ ಐಎಡಿ ದಾಖಲಿಸುತ್ತಿರುವ ಸಾಧನೆ ಅತ್ಯಪೂರ್ವವಾಗಿ ಸ್ತುತ್ಯರ್ಹವೆನಿಸಿದೆ ಎಂದು ತಿಳಿಸಿದರು.

ಗುಜರಾತ್‌ನ ಜಾಮ್‌ ನಗರ ಆಯು ರ್ವೇದ ಸಂಶೋಧನೆ ಮತ್ತು ವೈದ್ಯಕೀಯ ವಿವಿಯ ಮುಖ್ಯಸ್ಥ ಡಾ| ಎಂ.ಎಸ್‌. ಭಗೇಲ್‌ ಅವರು ಮಾತನಾಡಿ ಆಯುರ್ವೇದ ಚಿಕಿತ್ಸೆಗೆ ಮಹತ್ವಪೂರ್ಣ ಕೊಡುಗೆ ನೀಡುತ್ತಿರುವ ಕೇರಳ ರಾಜ್ಯದ ಉತ್ತರದ ಗಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರೋಗ ನಿಯಂತ್ರಣದಲ್ಲಿ ಅಭೂತಪೂರ್ವ ಯಶಸ್ಸುಗಳಿಸಿರುವ ಐಎಡಿ ಮನುಕುಲದ ಆಸ್ತಿ ಎಂದು ತಿಳಿಸಿದರು. ರಾಜ್ಯ ಸರಕಾರ ಸಹಿತ ವಿವಿಧ ಆಡಳಿತ ಸಂಸ್ಥೆಗಳು ಐಎಡಿಯೊಂದಿಗೆ ಕೈಜೋಡಿಸುವ ಮೂಲಕ ಜೀವ ಕಲ್ಯಾಣಕ್ಕೆ ಮುಂದಾಗಬೇಕು ಎಂದು ಕರೆನೀಡಿದರು. ಸಮಾರಂಭದಲ್ಲಿ ಜಿಲ್ಲೆಯ ಹಿರಿಯ ವೈದ್ಯ ಡಾ| ಎ.ಸಿ. ಪದ್ಮನಾಭನ್‌ ಅವರನ್ನು ವೈದ್ಯಕೀಯ ಕ್ಷೇತ್ರದ ನಿಡುಗಾಲದ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ಗೌರವಾಭಿ ನಂದನೆಗಳೊಂದಿಗೆ ಸಮ್ಮಾನಿಸಲಾಯಿತು.

ಐಎಡಿ ನಿರ್ದೇಶಕ ಡಾ| ಎಸ್‌.ಆರ್‌. ನರಹರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಆಡಳಿತಾಧಿಕಾರಿ ಪ್ರಜ್ವಲ್‌ ಆರ್‌.ಕೆ. ವಂದಿಸಿದರು.ನಿರ್ದೇಶಕಿ ಡಾ| ಕೆ.ಎಸ್‌. ಪ್ರಸನ್ನ ಸಮ್ಮಾನಿತರ ಅಭಿನಂದನ ಭಾಷಣಗೈದರು. ಪ್ರಸನ್ನದುರ್ಗಾ ಸಿ. ಪ್ರಾರ್ಥನಾಗೀತೆ ಹಾಡಿದರು. ಉದ್ಘಾಟನಾ ಸಮಾರಂಭದ ಮೊದಲು ಆನೆಕಾಲು ರೋಗ ನಿಯಂತ್ರಣ-ಐಎಡಿ ವಿಷಯಗಳ ಬಗ್ಗೆ ಕಿರು ವಿಚಾರ ಸಂಕಿರಣ ನಡೆಯಿತು.

ಲಂಡನ್‌ನ ಸೈಂಟ್ ಜೋರ್ಜ್‌ ವೈದ್ಯಕೀಯ ವಿವಿಯ ಮುಖ್ಯಸ್ಥ ಪ್ರೊ| ಪೀಟರ್‌ ಮೋರ್ಟಿಮರ್‌ ಅವರಿಂದ ಲಿಂಪೋಡೆಮಾ ರೋಗದ ವಿವಿಧ ವಿಭಾಗಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಪ್ರೊ| ಟೆರೆನ್ಸ್‌ ಜೆ. ರೆಯಾನ್‌ ಸಂಯೋಜಕರಾಗಿ ಸಹಕರಿಸಿದರು. ಪ್ರೊ|ಎಸ್‌. ಭಗೇಲ್‌ ಅವರು ಚರ್ಮರೋಗ ನಿರ್ವಹಣೆ, ವಿವಿಧ ಚರ್ಮರೋಗಗಳು, ಆಯುರ್ವೇದ ಸಂಶೋಧನೆ-ಚಿಕಿತ್ಸೆಯ ಬಗ್ಗೆ ಉಪನ್ಯಾಸ ನೀಡಿದರು.

ಲಂಡನ್‌ನ ಸೈಂಟ್ ಜಾರ್ಜ್‌ ವೈದ್ಯಕೀಯ ವಿವಿಯ ಉಪನ್ಯಾಸಕ ಪ್ರೊ| ಸಹರ್‌ ಮನ್ಸೋರ್‌ ಸಂಯೋಜಕರಾಗಿ ಸಹಕರಿಸಿದರು. ಬಳಿಕ ಐಎಡಿ ಸಾಗಿಬಂದ ದಾರಿ-ಸಾಧನಾ ಪಥದ ಬಗ್ಗೆ ಸಾಕ್ಷ್ಯ ಚಿತ್ರ ಪ್ರದರ್ಶನ ನಡೆಯಿತು. ಉದ್ಘಾಟನಾ ಸಮಾರಂಭದ ಬಳಿಕ ಪ್ರೊ| ಟೆರೆನ್ಸ್‌ ರೆಯಾನ್‌, ಪ್ರೊ| ಪೀಟರ್‌ ಮೋರ್ಟಿಮರ್‌, ಪ್ರೊ| ಎಂ.ಎಸ್‌. ಭಗೇಲ್‌, ಡಾ| ರಿಸೈಲಿನ್‌ ಯೋಟ್ಸು ಸಹಿತ ಜಾಗತಿಕ ಅಗ್ರ ಕ್ರಮಾಂಕದ ಚರ್ಮ ರೋಗ ಶಾಸ್ತ್ರಜ್ಞರ ನೇತೃತ್ವದಲ್ಲಿ ಲಿಂಪೋಡೆಮಾ ವೈದ್ಯಕೀಯ ಶಿಬಿರ, ವೈದ್ಯಕೀಯ ತರಗತಿಗಳು ನಡೆದವು.ಜ.15 ರಂದು ವಿವಿಧ ವಿಚಾರಗೋಷ್ಠಿಗಳು, ಪ್ರಾತ್ಯಕ್ಷಿಕೆ ಮತ್ತು ಚಿಕಿತ್ಸೆಗಳು ನಡೆಯಲಿವೆೆ.

ಐಎಡಿ ಮುಂಚೂಣಿಯಲ್ಲಿ
ಬಹುಮುಖಿ  ವಿಜ್ಞಾನ ತಂತ್ರಜ್ಞಾನ ಸೌಕರ್ಯಗಳು ವೃದ್ಧಿಸಿದ್ದರೂ ಆರೋಗ್ಯ ಕ್ಷೇತ್ರದಲ್ಲಿ ದಿನನಿತ್ಯ ಭಯದ ವಾತಾವರಣ ಉಲ್ಬಣಗೊಳ್ಳುತ್ತಿರುವುದು ಆತಂಕಕಾರಿಯಾಗಿದೆ. ಜನಸಾಮಾನ್ಯರಿಗೆ ಚಿಕಿತ್ಸಾ ಸೌಕರ್ಯಗಳನ್ನು ವ್ಯವಸ್ಥಿತ ವಾಗಿ ತಲಪಿಸುವಲ್ಲಿ ತೊಡಕುಗಳಾಗುತ್ತಿದೆ. ಆದರೆ ಗ್ರಾಮೀಣ ಪ್ರದೇಶವೊಂದನ್ನು ಕೇಂದ್ರವಾಗಿಸಿ ರಾಷ್ಟ್ರದ ವಿವಿಧೆಡೆಗಳಿಂದ ಚಿಕಿತ್ಸೆಗಳಿಗಾಗಿ ಐಎಡಿ ಮುಂಚೂಣಿಯಲ್ಲಿ ಸೇವೆಯೊದಗಿಸುತ್ತಿರುವುದು ಅಚ್ಚರಿಯನ್ನುಂಟುಮಾಡಿದೆ ಎಂದು ಶಾಸಕ ಎನ್‌.ಎ. ನೆಲ್ಲಿಕುನ್ನು ಅವರು ತಿಳಿಸಿದರು.

ಟಾಪ್ ನ್ಯೂಸ್

BGT 2024: Aussie squad announced for remaining two matches: Aussies make three changes

BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್‌ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ

Parcel: ಮಹಿಳೆಯ ಮನೆಗೆ ಬಂದ ಪಾರ್ಸೆಲ್ ನಲ್ಲಿತ್ತು ಮೃತದೇಹ… 1.3 ಕೋಟಿ ರೂ.ಗೆ ಬೇಡಿಕೆ

Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

25-kota

CT Ravi ಬಂಧನ ಪ್ರಕರಣ; ಗೃಹ ಸಚಿವರು ಸ್ಪಷ್ಟನೆ ನೀಡಲಿ: ಕೋಟ

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ

Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ

ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

Sandalwood: ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ

Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ

International Conference ಅತ Buntakal Technical College: Student Symposium

Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ

Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ

Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.