ಖೇಲೋ ಇಂಡಿಯಾದಲ್ಲಿ ಚಿನ್ನ ಬಾಚಿದ ಬೆಳಗಾವಿ ಬಾಲೆಯರು
Team Udayavani, Jan 15, 2019, 11:46 AM IST
ಬೆಳಗಾವಿ: ಬೆಳಗಾವಿಯ ಮೂವರು ಕುವರಿಯರು ಪುಣೆಯಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾದಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ಕರ್ನಾಟಕಕ್ಕೆ ಹೆಸರು ತಂದಿದ್ದಾರೆ.
ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ದಾನೇಶ್ವರಿ ಅಶೋಕ ಠಕ್ಕನವರ 100 ಮೀ. ಹಾಗೂ 200 ಮೀಟರ್ ಓಟದಲ್ಲಿ ಎರಡು ಚಿನ್ನ, ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ಅಕ್ಷತಾ ಕಮತಿ ವೇಟ್ ಲಿಫ್ಟಿಂಗ್ ನಲ್ಲಿ ಚಿನ್ನ ಹಾಗೂ ಕುಸ್ತಿಯಲ್ಲಿ ತಾಲೂಕಿನ ಕಿಣಯೇ ಗ್ರಾಮದ ಪೂಜಾ ದಳವಿ ಚಿನ್ನ ಗಳಿಸಿದ್ದಾರೆ.
ರೈತ ಕುಟುಂಬದ ಕುಡಿ: ನದಿ ಇಂಗಳಗಾಂವದ ಕೃಷಿ ಕುಟುಂಬದಲ್ಲಿ ಜನಿಸಿದ ದಾನೇಶ್ವರಿ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲೇ ಮುಗಿಸಿ ಎಂಟನೇ ತರಗತಿಯಿಂದ ಬೆಂಗಳೂರಿನ ವಿದ್ಯಾನಗರದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಹಾಸ್ಟೆಲ್‌ನಲ್ಲಿ ಓದುತ್ತಿದ್ದಾಳೆ. ಮುಂಚೆಯಿಂದಲೂ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ದಾನೇಶ್ವರಿ ಈಗ ರಾಷ್ಟ್ರಮಟ್ಟದಲ್ಲಿಯೇ ಉತ್ತಮ ಸ್ಥಾನ ಪಡೆದುಕೊಂಡಿದ್ದಾಳೆ.
21 ವರ್ಷದ ಒಳಗಿನ ವಿಭಾಗದಲ್ಲಿ ದಾನೇಶ್ವರಿ 11.99 ಸೆಕೆಂಡ್‌ನಲ್ಲಿ 100 ಮೀ. ಹಾಗೂ 24.58 ಸೆಕೆಂಡ್‌ನಲ್ಲಿ 200 ಮೀ. ಓಡಿ ಚಿನ್ನ ಗಳಿಸಿದ್ದಾಳೆ. ಈಕೆಗೆ ಅಶೋಕ ಮಂಟೂರ ತರಬೇತಿ ನೀಡಿದ್ದಾರೆ. ಸದ್ಯ ಬಿ.ಕಾಂ. ಮೊದಲನೇ ವರ್ಷದಲ್ಲಿರುವ ದಾನೇಶ್ವರಿ ಎರಡು ಚಿನ್ನದ ಪದಕ ಪಡೆದಿದ್ದು ಹೆಮ್ಮೆಯ ವಿಷಯ. ತಂದೆ ಅಶೋಕ, ತಾಯಿ ಸುಧಾ ರೈತರಾಗಿದ್ದು, ಮಗಳ ಸಾಧನೆಗೆ ಹೆಮ್ಮೆ ಪಡುತ್ತಿದ್ದಾರೆ.
ಹೆಗಲ ಮೇಲೆ ಕುಟುಂಬದ ಭಾರ: ಹಲಗಾ ಗ್ರಾಮದ ಅಕ್ಷತಾ ಕಮತಿ ಬೆಂಗಳೂರಿನ ಕೆಂಗೇರಿಯಲ್ಲಿರುವ ನ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಸಾಯ್)ದಲ್ಲಿ ವೇಟ್ ಲಿಫ್ಟಿಂಗ್ ನಲ್ಲಿ ತರಬೇತಿ ಪಡೆಯುತ್ತಿದ್ದಾಳೆ. 71 ಕೆ.ಜಿ. ವಿಭಾಗದಲ್ಲಿ ಚಿನ್ನ ಗಳಿಸಿದ್ದು, 103 ಕೆ.ಜಿ. ಹಾಗೂ 73 ಕೆ.ಜಿಯ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಳು. ಅಕ್ಷತಾಗೆ ವೀರಪಾಲ್ ಕೌರ್, ಶಾಮಲಾ ಶೆಟ್ಟಿ ಹಾಗೂ ಸದಾನಂದ ತರಬೇತಿ ನೀಡಿದ್ದಾರೆ. ಮೊದಲು ಶಾರದಾ ಪ್ರೌಢಶಾಲೆಯಲ್ಲಿ ತರಬೇತಿ ಆರಂಭಿಸಿ ಈಗ ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದಾಳೆ.
ಕುಸ್ತಿಯಲ್ಲಿ ಮಿಂಚಿದ ಪೂಜಾ: ಖೇಲೋ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡ ಬೆನ್ನಲ್ಲೇ ಬೆಳಗಾವಿ ತಾಲೂಕಿನ ಕಿಣಯೇ ಗ್ರಾಮದ ಪೂಜಾ ದಳವಿ 21 ವಯೋಮಿತಿ ಒಳಗಿನ ವಿಭಾಗದ 68 ಕೆ.ಜಿ.ಯಲ್ಲಿ ಚಿನ್ನದ ಪದಕ ಗಳಿಸಿದ್ದಾಳೆ. ತಂದೆ ರಾಜು ಕೃಷಿಕರಾಗಿದ್ದು, ಮಗಳನ್ನು ಕ್ರೀಡೆಯಲ್ಲಿಯೇ ಸಾಧನೆ ಮಾಡಿಸಬೇಕೆಂಬ ಪಣ ತೊಟ್ಟಿದ್ದಾರೆ.
ಬೆಳಗಾವಿಯ ರಾಜ್ಯ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಹಾಸ್ಟೆಲ್‌ನಲ್ಲಿಯೇ ತರಬೇತಿ ಪಡೆಯುತ್ತಿರುವ ಈಕೆ ಸದ್ಯ ಆರ್‌ಪಿಡಿ ಕಾಲೇಜಿನಲ್ಲಿ ಬಿ.ಎ. ದ್ವಿತೀಯ ವರ್ಷ ವ್ಯಾಸಂಗ ಮಾಡುತ್ತಿದ್ದಾಳೆ. ಪೂಜಾಗೆ ಕೋಚ್‌ಗಳಾದ ನಾಗರಾಜ ಎ.ಆರ್. ಕೆ ತರಬೇತಿ ನೀಡಿದ್ದಾರೆ. ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದ ಇನ್ನೋರ್ವ ಯುವತಿ ಲಕ್ಷ್ಮೀ ರೇಡೆಕರ ಕೂಡ ಕುಸ್ತಿಯಲ್ಲಿ ಕಂಚು ಪಡೆದುಕೊಂಡಿದ್ದಾಳೆ. ಮೂಡಬಿದರೆಯ ಆಳ್ವಾಸ್‌ನಲ್ಲಿ ಓದುತ್ತಿರುವ ಲಕ್ಷ್ಮೀ ಮೂಲತಃ ಬೆಳಗಾವಿಯವರು ಎನ್ನುವುದೇ ಹೆಮ್ಮೆಯ ವಿಷಯ. ಕುಸ್ತಿಯಲ್ಲಿ ಕರ್ನಾಟಕದಿಂದ 17 ಜನ ಆಯ್ಕೆಯಾಗಿದ್ದು, ಇದರಲ್ಲಿ ಇಬ್ಬರು ಯುವತಿಯರು ಹಾಗೂ ಇಬ್ಬರು ಯುವಕರು ಪದಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಡ ಕೃಷಿ ಕುಟುಂಬದಲ್ಲೇ ಬೆಳೆದ ಅಕ್ಷತಾ
ಖೇಲೋ ಇಂಡಿಯಾದಲ್ಲಿ 21 ವಯೋಮಿತಿ ಒಳಗಿನ ವೇಟ್ ಲಿಫ್ಟಿಂಗ್ ನಲ್ಲಿ ಹಲಗಾ ಗ್ರಾಮದ ಅಕ್ಷತಾ ಕಮತಿ ಚಿನ್ನ ಗೆದ್ದಿದ್ದಾಳೆ. ಬಡ ಕೃಷಿ ಕುಟುಂಬದಲ್ಲಿ ಜನಿಸಿದ ಅಕ್ಷತಾ ಆರ್ಥಿಕವಾಗಿ ಹಿಂದುಳಿದಿದ್ದು, ತಂದೆ ಬಸವಂತ ಅಲ್ಪ ಸ್ವಲ್ಪ ಜಮೀನಿನಲ್ಲಿ ಕೃಷಿ ಹಾಗೂ ಕಟ್ಟಡ ಸೆಂಟ್ರಿಂಗ್ ಕೆಲಸ ಮಾಡುತ್ತಾರೆ. ಇದರಲ್ಲಿ ಬರುವ ಆದಾಯದಲ್ಲಿಯೇ ಮಗಳನ್ನು ಓದಿಸಿದ್ದಾರೆ. ಈಕೆಯ ಇನ್ನಿಬ್ಬರು ಸಹೋದರರು ಓದುತ್ತಿದ್ದಾರೆ. 10ನೆ ತರಗತಿ ಮುಗಿದ ಬಳಿಕ ಎರಡು ವರ್ಷ ಶಿಕ್ಷಣ ನಿಲ್ಲಿಸಿದ್ದ ಅಕ್ಷತಾ ಈಗ ದ್ವಿತೀಯ ಪಿಯುಗೆ ಪ್ರವೇಶ ಪಡೆಯಲು ಆಸಕ್ತಿ ಹೊಂದಿದ್ದಾಳೆ. ಜತೆಗೆ ಆರ್ಥಿಕ ಸಹಾಯವೂ ಈಕೆಗೆ ಅವಶ್ಯವಿದೆ ಎನ್ನುತ್ತಾರೆ ಈಕೆಯ ಕೋಚ್ ಶಾಮಲಾಶೆಟ್ಟಿ.
ಕುಸ್ತಿಯಲ್ಲಿ ಕರ್ನಾಟಕದಿಂದ 17 ಕುಸ್ತಿ ಆಟಗಾರರು ಖೇಲೋ ಇಂಡಿಯಾಕ್ಕೆ ಸ್ಥಾನ
ಪಡೆದಿದ್ದರು. ಇದರಲ್ಲಿ ಇಬ್ಬರು ಯುವತಿಯರು, ಇಬ್ಬರು ಯುವಕರು ಪದಕ ಗಳಿಸಿದ್ದಾರೆ. ಇಬ್ಬರೂ ಯುವತಿಯರು ಬೆಳಗಾವಿಯವರು ಎಂಬುದೇ ಹೆಮ್ಮೆಯ ವಿಷಯ. ಇನ್ನೂ ಹೆಚ್ಚಿನ ಸಾಧನೆ ಮಾಡುತ್ತಾರೆ ಎಂಬ ವಿಶ್ವಾಸವಿದೆ.
ನಾಗರಾಜ ಎ.ಆರ್.ಕೆ.,
ಕುಸ್ತಿ ಕೋಚ್
ನನ್ನ ತಂದೆ ಅಲ್ಪಸ್ವಲ್ಪ ಜಮೀನಿನಲ್ಲಿಯೇ ಕೃಷಿ ಮಾಡಿ ನಮ್ಮನ್ನು ಬೆಳೆಸಿದ್ದಾರೆ. ನನ್ನ ಗೆಲುವಿನ ಹಿಂದೆ ತಂದೆಯ ಶ್ರಮ ಬಹಳಷ್ಟಿದೆ. ಇಬ್ಬರು ಸಹೋದರರ ಪೈಕಿ ಒಬ್ಬ ದ್ವಿತೀಯ ಪಿಯು ಮುಗಿಸಿದ್ದು, ಇನ್ನೊಬ್ಬ ಶಾಲೆಗೆ ಹೋಗುತ್ತಾನೆ. ನ್ನನ ಹಾಗೂ ಸಹೋದರರ ಶಿಕ್ಷಣ, ಮನೆ ನಡೆಸಿಕೊಂಡು ಹೋಗುವುದು ಕಷ್ಟಕರ. ಆರ್ಥಿಕವಾಗಿ ಹಿಂದುಳಿದಿರುವ ನನ್ನ ಕುಟುಂಬಕ್ಕೆ ಸಹಾಯದ ಅಗತ್ಯವಿದೆ.
ಅಕ್ಷತಾ ಕಮತಿ,
ಚಿನ್ನದ ಹುಡುಗಿ
ಭೈರೋಬಾ ಕಾಂಬಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.