ಫ‌ಸ್ಟ್‌ ಆಪರೇಷನ್‌ ಸಕ್ಸಸ್‌


Team Udayavani, Jan 16, 2019, 12:30 AM IST

w-14.jpg

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಎಂಟು ತಿಂಗಳ ಪಯಣದಲ್ಲಿ ಜತೆಯಾಗಿದ್ದ ಪಕ್ಷೇತರ ಶಾಸಕರಾದ ಆರ್‌.ಶಂಕರ್‌ ಹಾಗೂ ಎಚ್‌.ನಾಗೇಶ್‌ ತಮ್ಮ ಬೆಂಬಲ ವಾಪಸ್‌ ಪಡೆದು ಬಿಜೆಪಿಗೆ ಬೆಂಬಲ ಘೋಷಿಸಿದ್ದು ರಾಜ್ಯ ರಾಜಕಾರಣ ಕುತೂಹಲ ಘಟ್ಟ ತಲುಪಿದೆ. ಈ ಮೂಲಕ ಮೊದಲ ಹಂತದ ಆಪರೇಷನ್‌ ಕಮಲ ಸಕ್ಸಸ್‌ ಆಗಿದೆ. ಆಪರೇಷನ್‌ ಕಮಲ ಕಾರ್ಯಾಚರಣೆಯ ಮಾಸ್ಟರ್‌ ಪ್ಲಾನ್‌ ಸಿದಟಛಿವಾಗುತ್ತಿರುವ ಮುಂಬೈನಿಂದಲೇ ಮಂಗಳವಾರ ಮಧ್ಯಾಹ್ನ ಇಬ್ಬರೂ ಶಾಸ  ಕರು ರಾಜ್ಯಪಾಲರಿಗೆ ಪತ್ರ ಬರೆದು ಸಮ್ಮಿಶ್ರ ಸರ್ಕಾರಕ್ಕೆ ತಮ್ಮ ಬೆಂಬಲ ವಾಪಸ್‌ ಘೋಷಣೆ ಮಾಡಿ ಬಿಜೆಪಿಗೆ ಬೆಂಬಲ ನೀಡುವುದಾಗಿ ತಿಳಿಸಿದರು. ಮುಂಬೈನಿಂದ ಬುಧವಾರ ಬೆಂಗಳೂರಿಗೆ ಬಂದು ರಾಜ್ಯಪಾಲರನ್ನು ಭೇಟಿ ಮಾಡಿ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ವಾಪಸ್‌ ಪಡೆದು ಬಿಜೆಪಿ  ಬೆಂಬಲಿಸುತ್ತಿರುವುದಾಗಿ ತಿಳಿಸಲಿದ್ದಾರೆ ಎಂದು ಹೇಳಲಾಗಿದೆ.

120 ಬಲದ ಸಮ್ಮಿಶ್ರ ಸರ್ಕಾರಕ್ಕೆ ಇಬ್ಬರು ಪಕ್ಷೇತರ ಶಾಸಕರ ಬೆಂಬಲ ವಾಪಸ್‌ನಿಂದ ಧಕ್ಕೆ ಇಲ್ಲವಾದರೂ ಕಾಂಗ್ರೆಸ್‌ನ 17 ರಿಂದ 18 ಶಾಸಕರು ಬಿಜೆಪಿಗೆ ಹೋಗಲಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿಬರು 
ತ್ತಿರುವುದರಿಂದ ಇಬ್ಬರ ರಾಜೀನಾಮೆ ಮುಂದಿನ ರಾಜಕೀಯ ದಿಕ್ಸೂಚಿ ಎಂದು ಹೇಳಲಾಗುತ್ತಿದೆ. ಈ ಮಧ್ಯೆ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ನಾನು ಸಂಪೂರ್ಣ ನಿರಾಳವಾಗಿದ್ದೇನೆ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಇಬ್ಬರು ಪಕ್ಷೇತರ ಶಾಸಕರು ಬೆಂಬಲ ವಾಪಸ್‌ ಪಡೆಯಲು ಸರ್ವ ಸ್ವತಂತ್ರರು. ನನ್ನ ಸಂಖ್ಯಾಬಲ ನನಗೆ ಗೊತ್ತಿದೆ ಎಂದು ಹೇಳಿದ್ದಾರೆ. ಸರ್ಕಾರ ಉಳಿಸಿಕೊಳ್ಳಲು
ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ಕಸರತ್ತಿನಲ್ಲಿ ತೊಡಗಿದ್ದಾರೆ. ಈ ಮಧ್ಯೆ, ಇಬ್ಬರು ಪಕ್ಷೇತರ ಶಾಸಕರ ಬೆಂಬಲ ವಾಪಸಾತಿಯಿಂದ ಸಮ್ಮಿಶ್ರ ಸರ್ಕಾರದ ಬಲ 120 ರಿಂದ 118 ಕ್ಕೆ ಕುಸಿದಿದೆ. ಬಿಜೆಪಿ ಬಲ 104 ರಿಂದ 106 ಕ್ಕೆ ಏರಿಕೆಯಾಗಿದೆ. ಕಾಂಗ್ರೆಸ್‌-ಜೆಡಿಎಸ್‌ನ 118 ಬಲ 103 ಕ್ಕೆ ಇಳಿಸುವುದು ಬಿಜೆಪಿ ಗುರಿ. ಇನ್ನೂ 15 ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಮತ್ತೂಂದೆಡೆ ಬಿಜೆಪಿ ಬಳಿ ಇರುವ ಕಾಂಗ್ರೆಸ್‌ ಅತೃಪ್ತ ಶಾಸಕರ ಸಂಖ್ಯೆ 5 ರಿಂದ 8 ಏರುತ್ತಿಲ್ಲ. ಆ ಎಂಟು ಜನರನ್ನು ತೋರಿಸಿ ಇತರೆ ಶಾಸಕರನ್ನು ಸೆಳೆಯಲಾಗುತ್ತಿದೆ. ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ 113 ಕ್ಕಿಂತ ಕಡಿಮೆಯಾದರೆ ವಿಶ್ವಾಸಮತಯಾಚನೆಗೆ ಒತ್ತಾಯಿಸಬಹುದು. ಹೀಗಾಗಿ, 6 ಜನ ಶಾಸಕರನ್ನು ರಾಜೀನಾಮೆ ಕೊಡುವ ಪ್ರಯತ್ನದಲ್ಲಿ ಬಿಜೆಪಿ ಇದೆ ಎಂದು ಹೇಳಲಾಗಿದೆ.

ದಿನವಿಡೀ ಚರ್ಚೆ: ಸೋಮವಾರ ರಾತ್ರಿ ದಿಢೀರ್‌ ನಗರಕ್ಕೆ ಆಗಮಿಸಿದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಆವರು ಕುಮಾರಕೃಪ ಅತಿ  ಥಿ ಗೃ ಹದಲ್ಲಿ ಕಾಂಗ್ರೆಸ್‌ ನಾಯಕರ ಜತೆ ಸಮಾಲೋಚನೆ ನಡೆಸಿದರು. ಮುಖ್ಯಮಂತ್ರಿ ಎಚ್‌.ಡಿ. 
ಕುಮಾರಸ್ವಾಮಿ ಸಹ ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಇಲ್ಲಿಗೇ ಕಾಂಗ್ರೆಸ್‌ ಶಾಸಕ ಆನಂದ್‌ ಸಿಂಗ್‌ ಕೂಡ ಆಗಮಿಸಿದ್ದರು.

ಜೆಡಿಎಸ್‌ ನಡೆ: ಜೆಡಿಎಸ್‌ ಶಾಸಕರು ಯಾರೂ ಬಿಜೆಪಿ ಸಂಪರ್ಕದಲ್ಲಿ ಇಲ್ಲದ ಕಾರಣ ಆಪರೇಷನ್‌ ಬಗ್ಗೆ ಜೆಡಿಎಸ್‌ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಆಪರೇಷನ್‌ ಕಮಲ ಕಾರ್ಯಾಚರಣೆಗೆ ಕಾಂಗ್ರೆಸ್‌ ಶಾಸಕರೇ ಒಳಗಾಗುತ್ತಿರುವುದರಿಂದ ಆ ಪಕ್ಷದ ನಾಯಕರೇ ತಮ್ಮ ಶಾಸಕರನ್ನು ಕರೆತರಲಿ ಎಂಬ ನಿಲುವು ತಾಳಿದೆ. ಕಾಂಗ್ರೆಸ್‌ ಶಾಸಕರನ್ನು ಸಂಪರ್ಕಿಸಿದರೆ ಅವರ
ಬೇಡಿಕೆ ಈಡೇರಿಸುವ ಭರವಸೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಲು ಸಾಧ್ಯವಿಲ್ಲ. ಕಾಂಗ್ರೆಸ್‌ ಹೈಕಮಾಂಡ್‌ ಆ ಬಗ್ಗೆ ಗಮನ ಹರಿಸಬೇಕು ಎಂದು ದೇವೇಗೌಡರು ಸಹ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಭೇಟಿಗೆ ನಿರಾಕರಣೆ?:
ರಾಜಕೀಯ ಬೆಳವಣಿಗೆಗಳ ಬಗ್ಗೆ ಬೇಸರಗೊಂಡ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಂಗಳವಾರ ಜೆಪಿ ನಗರ ನಿವಾಸದಲ್ಲೇ ಇದ್ದು ಯಾರ ಭೇಟಿಗೂ ಅವಕಾಶ ಕೊಡಲಿಲ್ಲ. ಮಧ್ಯಾಹ್ನದವರೆಗೂ ಮನೆಯಲ್ಲೇ ಇದ್ದ ಅವರು ತಮ್ಮ ಆಪ್ತರ ಜತೆ ದೂರವಾಣಿ ಮೂಲಕ ಚರ್ಚಿಸಿ ಮಾಹಿತಿ ಪಡೆದುಕೊಂಡರು. ಕಾಂಗ್ರೆಸ್‌ ಶಾಸಕ ಮುನಿರತ್ನ ಸೇರಿ ಹಲವು ಶಾಸಕರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಲು ಬಂದರಾದರೂ ಮಾತನಾಡುವುದಿಲ್ಲ ಎಂದು ವಾಪಸ್‌ ಕಳುಹಿಸಿದರು.

ರಾಹುಲ್‌ ಜತೆ ಚರ್ಚೆ: ಪ್ರಸಕ್ತ ಬೆಳವಣಿಗೆಗಳ ಬಗ್ಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿವರ ಜತೆ ದೂರವಾಣಿ ಮೂಲಕ ಚರ್ಚಿಸಿದರು. ಸರ್ಕಾರ ಉಳಿಸಿಕೊಳ್ಳುವುದು ಕಾಂಗ್ರೆಸ್‌ ಮೇಲೆ ನಿಂತಿದೆ, ಬಿಜೆಪಿ ಸಂಪರ್ಕದಲ್ಲಿರುವ ಶಾಸಕರನ್ನು ಕರೆತನ್ನಿ, ಲೋಕಸಭೆ ಚುನಾವಣೆ ದೃಷ್ಟಿಯಿಂದ ಮೈತ್ರಿ ಅಗತ್ಯ. ರಾಜ್ಯದ ನಿಮ್ಮ ಪಕ್ಷದ ನಾಯಕರಿಗೆ ಸೂಕ್ತ
ನಿರ್ದೇಶನ ನೀಡಿ, ಹಿರಿಯ ಸಚಿವರಿಗೆ ಹೊಣೆಗಾರಿಕೆ ನೀಡಿ ಎಂದು ಹೇಳಿದರು ಎಂದು ತಿಳಿದುಬಂದಿದೆ. 

ಮೊದಲು ಜನತೆಗೆ ನಿಮ್ಮ ನಿಷ್ಠೆ ತೋರಿ : ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಿಸ್ಟರ್‌ ಸಾಫ್ ನಿಯತ್‌ (ಸಾಚಾ ನಿಷ್ಠೆ) ಎಂದು ಟ್ವೀಟ್‌ ಮೂಲಕ ಕುಟುಕಿರುವ ಸಿದ್ದರಾಮಯ್ಯ, ಬಿಜೆಪಿ ರಾಜ್ಯ ನಾಯಕರ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗಿರುವುದು ಪ್ರಜಾಪ್ರಭುತ್ವದ ಬಗೆಗಿನ ನಿಷ್ಠೆಯ ಸಾಚಾತನ ತೋರಿಸುತ್ತದೆ. ನಿಮ್ಮ ಪ್ರಚಾರ ಘೋಷಣೆಗಳು ನಿಮ್ಮ
ವಾಸ್ತವದ ನಿಷ್ಠೆಯನ್ನು ಮರೆಮಾಚುವುದಿಲ್ಲ ಹಾಗೂ ನಿಮ್ಮ ಸಹಿ ವಿಕಾಸ್‌ ಘೋಷಣೆಯು ರೆಸಾರ್ಟ್‌ಗಳ ಅಭಿವೃದ್ಧಿ ನಿಟ್ಟಿನಲ್ಲಿದೆ. ಕೀಳು ನಿಷ್ಠೆಗೆ ಪ್ರತೀಕ ಎಂಬಂತೆ ರೆಸಾರ್ಟ್‌ ರಾಜಕೀಯ ನಡೆದಿದೆ. ಮೊದಲು ಜನತೆಗೆ ನಿಮ್ಮ ನಿಷ್ಠೆ ತೋರಿ ಎಂದು ಹೇಳಿದ್ದಾರೆ.

2 ದಿನದಲ್ಲಿ ಸರ್ಕಾರ ಪತನ
ಮುಂಬೈ: 2 ದಿನಗಳಲ್ಲಿ ಕರ್ನಾಟಕದಲ್ಲಿನ ಕುಮಾರ ಸ್ವಾಮಿ ನೇತೃತ್ವದ ಸರ್ಕಾರ ಪತನವಾಗಲಿದೆ ಎಂದು ಮಹಾರಾಷ್ಟ್ರದ ಸಚಿವ ರಾಮ ಶಿಂಧೆ ಹೇಳಿದ್ದಾರೆ.

ಅವಕಾಶ ನಿರಾಕರಣೆ 
ಮುಂಬೈ: ಪೊವಾಹಿಯಲ್ಲಿರುವ ಸ್ಟಾರ್‌ ಹೋಟೆಲ್‌ ನಲ್ಲಿ ಇಬ್ಬರು ಪಕ್ಷೇತರ ಶಾಸಕರು ಹಾಗೂ ಕಾಂಗ್ರೆಸ್‌ನ ನಾಲ್ವರು ಅತೃಪ್ತ ಶಾಸಕರು ವಾಸ್ತವ್ಯ ಹೂಡಿದ್ದಾರೆ ಎನ್ನಲಾಗಿದೆ. ಶಾಸಕರ ಭೇಟಿಗೆ ಕೆಲ ಪತ್ರಕರ್ತರು ಯತ್ನಿಸಿದರಾದರೂ, ಭೇಟಿಗೆ ಅವಕಾಶ ಸಿಗಲಿಲ್ಲ. ಈ ಮಧ್ಯೆ, ಸಚಿವ ಡಿ.ಕೆ.ಶಿವಕುಮಾರ್‌ ಅವರು ಹೋಟೆಲ್‌ಗೆ ಭೇಟಿ ನೀಡಿ, ಅತೃಪ್ತ ಶಾಸಕರ ಮನವೊಲಿಸಲಿದ್ದಾರೆ ಎಂಬ ಸುದ್ದಿ ಹರಡಿತ್ತಾದರೂ, ಈವರೆಗೂ ಅವರಿಗೆ ಭೇಟಿ ಸಾಧ್ಯವಾಗಲಿಲ್ಲ. 

ರಾಷ್ಟ್ರಪತಿ ಆಳ್ವಿಕೆ?
ಸಮ್ಮಿಶ್ರ ಸರ್ಕಾರ ಕೆಡವಿ ಪರ್ಯಾಯ ಸರ್ಕಾರ ರಚನೆಗೆ ಬಿಜೆಪಿ ಗಂಭೀರವಾಗಿಯೇ ಪ್ರಯತ್ನಿಸುತ್ತಿದೆ. ಒಂದೊಮ್ಮೆ ಸಂಖ್ಯಾಬಲ ಸಿಗದೆ ಸಂವಿಧಾನಾತ್ಮಕ ಬಿಕ್ಕಟ್ಟು ಸೃಷ್ಟಿಯಾಗುವ ಸನ್ನಿವೇಶ ಎದುರಾದರೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುವ ಸಾಧ್ಯತೆಯೂ ಇಲ್ಲದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಶಾಸಕರ ಖರೀದಿ ಯತ್ನ ಹಾಗೂ ರೆಸಾರ್ಟ್‌ ವಾಸ್ತವ್ಯ ಮುಂದುವರಿ
ದರೆ ಕುದುರೆ ವ್ಯಾಪಾರ ನಡೆಯುತ್ತಿರುವುದು ಮೇಲ್ನೋಟಕ್ಕೆ ಸಾಬೀತಾದರೆ ರಾಜ್ಯ ವಿಧಾನಸಭೆ ಆರು ತಿಂಗಳ ಕಾಲ ಅಮಾನತ್ತಿನಲ್ಲಿಡುವ ಅವಕಾಶವೂ ಇದೆ ಎಂದು ಕಾನೂನು ತಜ್ಞರು ಹೇಳುತ್ತಾರೆ. ಆದರೆ, ತಕ್ಷಣಕ್ಕೆ ರಾಜ್ಯಪಾಲರು ಮಧ್ಯ 
ಪ್ರವೇಶ ಮಾಡುವ ಸಾಧ್ಯತೆ ಕಡಿಮೆ, ವಿಶ್ವಾಸಮತ ಯಾಚನೆಗೆ ಸೂಚಿಸುವ ಸಾಧ್ಯತೆಯೂ ಇಲ್ಲ ಎಂದು ಹೇಳಲಾಗಿದೆ.

ಸಿಹಿ ಸುದ್ದಿ ಭರವಸೆ
ಹರ್ಯಾಣದ ಗುರುಗ್ರಾಮದಲ್ಲಿ ಸುಮಾರು 90 ಶಾಸಕರ ವಾಸ್ತವ್ಯ ಮುಂದುವರಿದಿದ್ದು, ಸದ್ಯದಲ್ಲೇ ಸಿಹಿ ಸುದ್ದಿ ನೀಡುವುದಾಗಿ ಬಿಜೆಪಿ ಹಿರಿಯ ನಾಯಕರು ಶಾಸಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಬಿಜೆಪಿ ಯಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದ್ದು, ರೋಚಕ ತಿರುವು ಪಡೆಯುವ ಲಕ್ಷಣ ಕಾಣುತ್ತಿದೆ. ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಪಕ್ಷೇತರ ಶಾಸಕರಾದ ಆರ್‌.ಶಂಕರ್‌, ನಾಗೇಶ್‌ ಹಿಂಪಡೆದು ರಾಜ್ಯಪಾಲರಿಗೆ ಮಂಗಳವಾರ ಬರೆದಿರುವ ಪತ್ರ ಬಹಿರಂಗವಾಗುತ್ತಿದ್ದಂತೆ ಬಿಜೆಪಿಯಲ್ಲಿ ರಾಜಕೀಯ
ಚಟುವಟಿಕೆ ಗರಿಗೆದರಿತು. ಮೈತ್ರಿ ಸರ್ಕಾರದ ಪತನ ಪ್ರಕ್ರಿಯೆ ಶುರುವಾಗಿದ್ದು, ಆಡಳಿತ ಪಕ್ಷದಕೆಲ ಶಾಸಕರು ರಾಜೀನಾಮೆ ನೀಡುವ
ಪ್ರಕ್ರಿಯೆಯೂ ಸದ್ಯದಲ್ಲೇ ಶುರುವಾಗಲಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ರೆಸಾರ್ಟ್‌ನತ್ತ ಕಾಂಗ್ರೆಸ್‌, ತೆನೆ ಪಕ್ಷದ ಶಾಸಕರು?
ಕಾಂಗ್ರೆಸ್‌, ಜೆಡಿಎಸ್‌ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ರೆಸಾರ್ಟ್‌ಗೆ ಕರೆದೊಯ್ಯಲು ತೀರ್ಮಾನಿಸಿದೆ. ನಾಳೆ ಮಧ್ಯಾಹ್ನದೊಳಗೆ ಬೆಂಗಳೂರಿಗೆ ಆಗಮಿಸುವಂತೆ ಎಲ್ಲ ಶಾಸಕರಿಗೆ ಸೂಚನೆ ನೀಡಲಾಗಿದೆ. ಸಂಕ್ರಾಂತಿ ಹಬ್ಬಕ್ಕಾಗಿ ತಮ್ಮ ತಮ್ಮ ಕ್ಷೇತ್ರಗಳಿಗೆ ತೆರಳಿದ್ದ ಎರಡೂ ಪಕ್ಷದ ಶಾಸಕರಿಗೆ ದಿಢೀರ್‌ ವಾಪಸ್ಸಾಗುವಂತೆ ನಿರ್ದೇಶನ ನೀಡಿದ್ದಾರೆ.

ರಾಜ್ಯದ 156 ತಾಲೂಕುಗಳು
ಬರಪೀಡಿತವಾಗಿದ್ದು, ಈ ವೇಳೆ ಬಿಜೆಪಿ ತನ್ನ ಶಾಸಕರನ್ನು ಉತ್ತರ ಭಾರತಕ್ಕೆ ಕಳುಹಿಸಿ ಮೋಜು ಮಸ್ತಿಯಲ್ಲಿ ತೊಡಗಿಸಿಕೊಂಡಿದೆ.
ದೇವೇಗೌಡ, ಮಾಜಿ ಪ್ರಧಾನಿ

ನಾನು ನಿರಾಳವಾಗಿದ್ದೇನೆ. ಇಬ್ಬರು ಪಕ್ಷೇತರ ಶಾಸಕರು ಬೆಂಬಲ ವಾಪಸ್‌ ಪಡೆಯಲು ಸರ್ವ ಸ್ವತಂತ್ರರು. ನನ್ನ ಸಂಖ್ಯಾಬಲ ನನಗೆ ಗೊತ್ತಿದೆ. ಬಿಜೆಪಿ ಬಳಿ ಸಂಖ್ಯಾಬಲ ಎಷ್ಟಿದೆ? 
ಎಚ್‌.ಡಿ.ಕುಮಾರಸ್ವಾಮಿ, ಸಿಎಂ

ರಾಜ್ಯದ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ತನ್ನ ಶಾಸಕರನ್ನೇ ದಿಗ್ಬಂಧನದಲ್ಲಿಟ್ಟು ಕಾಯುತ್ತಾ ಕೂತಿರುವ ಬಿಜೆಪಿ ಅಭದ್ರತೆಯಿಂದ ನರಳುತ್ತಿದೆ. 
ಸಿದ್ದರಾಮಯ್ಯ, ಮಾಜಿ ಸಿಎಂ

ಸರ್ಕಾರ 5 ವರ್ಷ ಪೂರೈಸುವುದಿಲ್ಲ. ಆಂತರಿಕ ಜಗಳದಿಂದ ಮಧ್ಯಂತರ ದಲ್ಲೇ ಪತನವಾಗಲಿದೆ. ಶಿವಕುಮಾರ್‌ ಸಿಎಂ ಆಗಲು ಹೊರಟಿರುವುದರಿಂದ ಈ ಸಮಸ್ಯೆ ಉಂಟಾಗಿದೆ.
ಮುರಳೀಧರರಾವ್‌, ಬಿಜೆಪಿ ಉಸ್ತುವಾರಿ

ಟಾಪ್ ನ್ಯೂಸ್

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ: ಮೂಲಗಳು

Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

Shimoga; Congress – Statement against Muslims: Sumoto case against KS Eshwarappa

Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ

10-thirthahalli

Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?

9-munirathna

Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್‌ ಕೇಸ್‌: ಪಿಐ ಸೆರೆ

7-r-ashok

Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್‌. ಅಶೋಕ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Organ Donation: ಸಾವಿನ ನಂತರವೂ ನೆರವಾದ ಜೀವ

Organ Donation: ಸಾವಿನ ನಂತರವೂ ನೆರವಾದ ಜೀವ

Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು

15-bng

Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್‌ ಆಯುಕ್ತರಿಗೆ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.