ಕೀಟ ಜಗತ್ತಿನಲ್ಲೊಂದು ಜಿರಾಫೆ!


Team Udayavani, Jan 17, 2019, 12:30 AM IST

z-5.jpg

ತನ್ನ ನೀಳವಾದ ಕತ್ತಿನಿಂದಲೇ ಎಲ್ಲರನ್ನೂ ಆಕರ್ಷಿಸುವ, ಭೂಮಿಯ ಮೇಲಿನ ಅತಿ ಎತ್ತರದ ಪ್ರಾಣಿಯೆಂಬ ಹೆಗ್ಗಳಿಕೆಯ ಜಿರಾಫೆಯ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಆದರೆ, ಕೀಟ ಜಗತ್ತಿನ ಜಿರಾಫೆಯ ಬಗ್ಗೆ ನಿಮಗ್ಗೊತ್ತಾ? ಜಿರಾಫೆಯಂತೆಯೇ ಉದ್ದ ಕತ್ತು ಹೊಂದಿರುವ ಕಾರಣದಿಂದಲೇ ಈ ಕೀಟಕ್ಕೆ “ಜಿರಾಫೆ ಜೀರುಂಡೆ’ ಎಂದು ಹೆಸರು. 

ಇಂಗ್ಲಿಷ್‌ನಲ್ಲಿ “ಜಿರಾಫೆ ವೆಲ್‌’ಎಂದು ಕರೆಯಲ್ಪಡುವ ಈ ಜೀರುಂಡೆಗಳು, “ಟ್ರಾಕೆಲೋಫೋರಸ್‌ ಜಿರಾಫೆ’ ಎಂಬ ವೈಜ್ಞಾನಿಕ ಹೆಸರಿನಿಂದ ಗುರುತಿಸಲ್ಪಟ್ಟಿವೆ. ನೋಡಲು ಜಿರಾಫೆಯನ್ನು ಹೋಲುವುದರಿಂದ ಕೀಟತಜ್ಞರು “ಜಿರಾಫೆ ಜೀರುಂಡೆ’ ಎಂದೇ ಕರೆಯುವುದು ರೂಢಿ. ಆಫ್ರಿಕಾದ ಮಡಗಾಸ್ಕರ್‌ ನಡುಗಡ್ಡೆಯ ಉಷ್ಣಪ್ರದೇಶಗಳಲ್ಲಿ ಇವು ಹೆಚ್ಚಾಗಿ ಕಂಡುಬರುತ್ತವೆ. ಮಡಗಾಸ್ಕರ್‌ ಹೊರತುಪಡಿಸಿದರೆ ನ್ಯೂಜಿಲೆಂಡ್‌ನ‌ಲ್ಲಿ ಮಾತ್ರವೇ ಈ ಜಿರಾಫೆ ಜೀರುಂಡೆಗಳ ಸಂತತಿ ಕಂಡುಬರುತ್ತದೆ.

ಮೂರು ಪಟ್ಟು ಉದ್ದ ಕತ್ತು!
ಈ ಜೀರುಂಡೆಯ ಕತ್ತು ಜಿರಾಫೆಯಂತೆಯೇ ಅದರ ದೇಹದ ಮೂರು ಪಟ್ಟು ಉದ್ದ ಇರುತ್ತದೆ. ಕೇವಲ ಕತ್ತಷ್ಟೇ ಅಲ್ಲ, ಜೀರುಂಡೆ ನಡೆಯುವ ಶೈಲಿ, ಕತ್ತು ಬಾಗಿಸುವ, ಮೇಲಕ್ಕೆತ್ತಿ ನೋಡುವ ಭಂಗಿ ಎಲ್ಲವೂ ಜಿರಾಫೆಯ ಪಡಿಯಚ್ಚು ಎಂದರೂ ಸುಳ್ಳಲ್ಲ. ಈ ಕಾರಣದಿಂದಾಗಿಯೇ ಈ ಜೀರುಂಡೆಗೆ “ಜಿರಾಫೆ ಜೀರುಂಡೆ’ ಎಂಬ ಹೆಸರು ಬಂದಿರುವುದು. 2.5 ಸೆಂ.ಮೀ.ಗಳಿಗಿಂತಲೂ ಚಿಕ್ಕದಾಗಿರುವ ಇವುಗಳ ದೇಹವು ಕಪ್ಪು ಬಣ್ಣದ್ದಾಗಿದ್ದು, ರೆಕ್ಕೆಗಳು ಮಾತ್ರ ಕೆಂಪು ಬಣ್ಣದಲ್ಲಿರುತ್ತವೆ. 

ಕುತ್ತಿಗೆಯೇ ಆಯುಧ 
ಜೀವ ವಿಕಾಸ ಸಿದ್ಧಾಂತದ ಪ್ರಕಾರ ಜಿರಾಫೆಯು, ಎತ್ತರದ ಗಿಡ-ಮರಗಳ ಎಲೆಗಳನ್ನು ತಿನ್ನಲು ಪ್ರಯತ್ನಿಸಿದ ಕಾರಣ ಅದರ ಕತ್ತು ಉದ್ದವಾಯ್ತು ಎಂದು ನಂಬಲಾಗಿದೆ. ಆದರೆ, ಜಿರಾಫೆ ಜೀರುಂಡೆಯ ಕತ್ತು ಉದ್ದವಾಗಲು ಕಾರಣವೇನೆಂದು ಸ್ಪಷ್ಟವಾಗಿ ತಿಳಿದಿಲ್ಲ. ಈ ಜೀರುಂಡೆಗಳು ಸಂಗಾತಿಯನ್ನು ಆಯ್ದುಕೊಳ್ಳುವ ಸಂದರ್ಭದಲ್ಲಿ ಗಂಡುಗಳೆರಡೂ ತಮ್ಮ ನೀಳ ಕತ್ತುಗಳನ್ನು ಬಳಸಿ ಗುದ್ದಾಡುತ್ತವೆ. ಆ ಸೆಣಸಾಟದಲ್ಲಿ ಜಯಿಸಿದ ಬಲಶಾಲಿಗೆ, ಹೆಣ್ಣುಜೀರುಂಡೆ ಒಲಿಯುತ್ತಾಳೆ. ವಿಶೇಷವೆಂದರೆ ಹೆಣ್ಣು ಜಿರಾಫೆ ಜೀರುಂಡೆಗಳ ಕತ್ತು ಗಂಡುಗಳಷ್ಟು ಉದ್ದ ಇರುವುದಿಲ್ಲ. ಗಂಡು ಜೀರುಂಡೆಗಳು ಸಂಗಾತಿಯ ಆಯ್ಕೆಯ ಸಂದರ್ಭದಲ್ಲಿ ಪರಸ್ಪರ ಕಾದಾಡುವುದನ್ನು ಹೊರತುಪಡಿಸಿದರೆ, ಅವು ಮತ್ತೆಲ್ಲೂ ಇತರೆ ಜೀವಿಗಳ ಮೇಲೆ ಆಕ್ರಮಣ ಮಾಡುವುದು ಕಂಡುಬರುವುದಿಲ್ಲ. ಸದಾಕಾಲ ಮರದಲ್ಲಿಯೇ ಹೆಚ್ಚು ಇರಲು ಬಯಸುವ ಇವು ಶಾಂತಿಪ್ರಿಯ ಜೀವಿಗಳು.

ಸುರುಳಿಯೊಳಗೆ ಮೊಟ್ಟೆ
ಜಿರಾಫೆ ಜೀರುಂಡೆಗಳು ಮೊಟ್ಟೆ ಇಟ್ಟು, ಮರಿ ಮಾಡುವ ಪ್ರಕ್ರಿಯೆಯೂ ಕುತೂಹಲಕಾರಿ. ಮರದ ಎಲೆಯನ್ನು ಕುತ್ತಿಗೆಯ ಸಹಾಯದಿಂದ ಬೀಡಿಯ ಸುರುಳಿಯಂತೆ ಸುತ್ತಿ, ಅದರೊಳಗೆ ಒಂದೇ ಒಂದು ಮೊಟ್ಟೆಯನ್ನಿಡುವ ತಾಯಿ, ಮೊಟ್ಟೆ ಇಟ್ಟ ನಂತರ ಆ ಸುರುಳಿ ಎಲೆಯನ್ನು ಮರದಿಂದ ಕೆಳಕ್ಕೆ ಬೀಳಿಸುತ್ತದೆ. ಮೊಟ್ಟೆಗೆ ಯಾವುದೇ ರೀತಿಯ ಅಪಾಯವಾಗಬಾರದು ಎಂದು ಸುರುಳಿಯೊಳಗೆ ಮೊಟ್ಟೆಗಳನ್ನಿಟ್ಟು ರಕ್ಷಿಸುವ ತಂತ್ರವನ್ನು ಪಾಲಿಸಲಾಗುತ್ತದೆ. ಮೊಟ್ಟೆಯೊಡೆದು ಹೊರಬರುವ ಮರಿಗಳ ಪಾಲನೆ ತಾಯಿ ಜೀರುಂಡೆಯದ್ದು. ಮರಿ ಬೆಳೆದು ದೊಡ್ಡದಾಗುವವರೆಗೂ, ಸುರುಳಿಯೊಳಕ್ಕೇ ಆಹಾರವನ್ನು ಒದಗಿಸುತ್ತದೆ. 

ಪ.ನಾ.ಹಳ್ಳಿ.ಹರೀಶ್‌ ಕುಮಾರ್‌

ಟಾಪ್ ನ್ಯೂಸ್

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

Horoscope new-1

Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.