ಬತ್ತಿಹೋದ ಕಂದಾವರದ ಹೇರಿಕೆರೆ: ಬೇಸಾಯಕ್ಕೆ ಸಿಗದ ನೀರು


Team Udayavani, Jan 17, 2019, 12:50 AM IST

battida-kere.png

ಬಸ್ರೂರು: ಇಲ್ಲಿನ  ಬಿ.ಎಚ್‌. ರಸ್ತೆಯಿಂದ ಒಂದು ಕಿ.ಮೀ. ಹುಣ್ಸೆಮಕ್ಕಿಗೆ ಹೋಗುವ ರಸ್ತೆಯಲ್ಲಿ ಬಲಕ್ಕೆ ಇರುವ ವಿಶಾಲ ಕೆರೆ ಈಗ ನೆನಪು ಮಾತ್ರ. ನೀರು ತುಂಬಿ ಸಮೃದ್ಧವಾಗಿ ಜನರಿಗೆ, ಕೃಷಿಭೂಮಿಗೆ, ಪ್ರಾಣಿಗಳಿಗೆ ನೀರುಣಿಸಬೇಕಿದ್ದ ಈ ಕೆರೆ ಈಗ ಉಪಯೋಗಕ್ಕೆ ಇಲ್ಲದಂತಾಗಿದೆ.  

ಕೃಷಿಗೆ ಅನುಕೂಲ
ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಈ ಕೆರೆಯು 42 ಎಕರೆ ವಿಸ್ತೀರ್ಣದಲ್ಲಿದ್ದು ನೀರು ತುಂಬಿತ್ತು. ಈ ಕೆರೆಗೆ ಎರಡು ತೂಬುಗಳಿದ್ದು ಒಂದು ಮೂಡ್ಲಕಟ್ಟೆ  ಸೇತುವೆವರೆಗೆ ಹೋಗುತ್ತದೆ. ಮತ್ತೂಂದು ತೂಬು ಬಸ್ರೂರು ಗುಂಡಿಗೋಳಿಯ ಮೂಲಕ ಸಾಂತಾವರದ ತನಕ ನೀರು ಹರಿಯುತ್ತದೆ. ಇದು ಈ ಭಾಗದ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿದ್ದು, ಸಾಕಷ್ಟು ಕಡೆ ಉತ್ತಮ ಬೆಳೆಗೆ ಅವಕಾಶ ಕಲ್ಪಿಸಿತ್ತು.  

ಕೆರೆ ಪ್ರದೇಶ ಒತ್ತುವರಿ
ಆದರೆ ಪ್ರಸ್ತುತ ಹೇರಿಕೆರೆಯ ವಿಸ್ತೀರ್ಣ ಸುಮಾರು ಆರು ಎಕರೆ ಮಾತ್ರ. ಅದರಲ್ಲೂ ನೀರಿಲ್ಲದೆ ಬತ್ತಿಹೋಗಿದೆ! ನೀರಿಲ್ಲದೆ ಒಣಗಿದ ಕೆರೆ ಪ್ರದೇಶದಲ್ಲಿ ಕೆಲವು ವರ್ಷಗಳ ಹಿಂದೆ ಅಕ್ರಮವಾಗಿ ಕಟ್ಟಿಕೊಂಡ ಮನೆ ನಿವೇಶನಗಳನ್ನು ಅಂದಿನ ತಹಶೀಲ್ದಾರ್‌ ಅವರು ತೆರವುಗೊಳಿಸಿದ್ದರು. ಸದ್ಯ ಈ ಕೆರೆಯ ನೀರು ಉಳ್ಳೂರಿನ ಗದ್ದೆಗಳಿಗೆ ಮಾತ್ರ ಹೋಗುತ್ತಿದ್ದು ಉಳಿದಂತೆ ಕೃಷಿಕರು ಬೇರೆ ನೀರಾವರಿ ವ್ಯವಸ್ಥೆಯಿಲ್ಲದೆ ಪರಿತಪಿಸುತ್ತಿದ್ದಾರೆ. ಇದರಿಂದ ಕೆಲವೆಡೆ ಕೃಷಿ ಭೂಮಿ ಹಡಿಲು ಬೀಳಲೂ ಕಾರಣವಾಗಿದೆ. 

ಇಲಾಖೆಯ ಮೌನ
ಸ್ಥಳೀಯಾಡಳಿತ ಅಥವಾ ಸಣ್ಣ ನೀರಾವರಿ ಇಲಾಖೆ ಈ ಹೇರಿಕೆರೆಯನ್ನು ಹೂಳೆತ್ತಿದರೆ ಬೇಸಗೆಯ ಈ ದಿನಗಳಲ್ಲಿ ಮೂಡ್ಲಕಟ್ಟೆ, ಸಾತಾವರ, ಗುಂಡಿಗೋಳಿ ಮತ್ತಿತರ ಪ್ರದೇಶದ ಬೇಸಾಯಗಾರರಿಗೆ ನೀರಿನ ಸೆಲೆ ಸಿಕ್ಕು ಉತ್ತಮ ಬೆಳೆಯಲು ಸಾಧ್ಯ. ಆದರೆ ನೀರಾವರಿ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ಮೌನವಾಗಿ ಕುಳಿತಿರುವುದು ರೈತರ ಪಾಲಿಗೆ ಸಂಕಟವಾಗಿ ಪರಿಣಮಿಸಿದೆ.  

ಅನುದಾನದ ಕೊರತೆ
ಗ್ರಾ.ಪಂ.ನಿಂದ ಹೂಳೆತ್ತಲು ಅನುದಾನದ ಕೊರತೆ ಇದೆ. ಪಂ. ಸಾಮಾನ್ಯ ಸಭೆಯಲ್ಲಿ ಈ ವಿಚಾರ ಮಂಡಿಸಿ ಸಣ್ಣ ನೀರಾವರಿ ಇಲಾಖೆಗೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗುವುದು. 
– ಗಣಪ ಮೊಗವೀರ, ಪಿಡಿಒ, ಕಂದಾವರ ಗ್ರಾ.ಪಂ.

ಸಂಬಂಧಪಟ್ಟ ಇಲಾಖೆ  ಗಮನ ಹರಿಸಲಿ
ಹೇರಿಕೆರೆ ಈಗ ನೀರು ತುಂಬಿದ್ದರೆ ನಮಗೆ ಸುಗ್ಗಿ ಬೆಳೆ ಬೆಳೆಯಲು ಅನುಕೂಲವಾಗುತ್ತಿತ್ತು. ಆದರೆ ಕೆರೆಯನ್ನು ಹೂಳೆತ್ತದೆ ಕೆರೆ ನೀರು ಕೇವಲ ಉಳ್ಳೂರಿನ ಗದ್ದೆಗಳಿಗೆ ಮಾತ್ರ ಹೋಗುತ್ತಿದೆ. ವಾರಾಹಿ ಕಾಲುವೆ ನೀರನ್ನು ಹೇರಿಕೆರೆಗೆ ಬಿಟ್ಟರೂ ಮೂಡ್ಲಕಟ್ಟೆ, ಸಾತಾವರದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ. ಸಂಬಂಧಪಟ್ಟ ಇಲಾಖೆ ಇನ್ನಾದರೂ ಗಮನ ಹರಿಸಿ ತಕ್ಷಣ ಕಾರ್ಯಪ್ರವೃತ್ತರಾಗಬೇಕಾಗಿದೆ.
– ನಾರಾಯಣ ಪೂಜಾರಿ, ಸಾತಾವರದ ಕೃಷಿಕ

– ದಯಾನಂದ ಬಳ್ಕೂರು

ಟಾಪ್ ನ್ಯೂಸ್

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

3

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

8

Kundapura: ಬೋಟ್‌ ರೈಡರ್‌ ನಾಪತ್ತೆ; ಸಿಗದ ಸುಳಿವು

13

Kundapura: ಮನೆಗೆ ನುಗ್ಗಿ ಚಿನ್ನಾಭರಣ ಕಳವು

POlice

Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

9

Dr MC Sudhakar: ‘ಹೈಕಮಾಂಡ್‌ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’

3

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.