ಸಂತಾನ ನಿರೋಧಕ್ಕೆ ಹೊಸ ಕ್ರಮ
Team Udayavani, Jan 17, 2019, 12:30 AM IST
ವಾಷಿಂಗ್ಟನ್: ಸದ್ಯ ಲಭ್ಯವಿರುವ ಸಂತಾನ ನಿರೋಧಕ ಕ್ರಮಗಳು ಶೇ. 100 ರಷ್ಟು ಫಲಿತಾಂಶ ನೀಡುವುದಿಲ್ಲ. ಹೀಗಾಗಿಯೇ ದೀರ್ಘಕಾಲೀನ ಇಂಪ್ಲಾಂಟ್ ಮತ್ತು ಇಂಟ್ರಾಯೂಟರಿನ್ ಸಾಧನಗಳು ಮಾರುಕಟ್ಟೆಗೆ ಬಂದವಾದರೂ, ಇವುಗಳನ್ನು ಅಳವಡಿಸಿಕೊಳ್ಳಲು ಆಸ್ಪತ್ರೆಗೆ ತೆರಳಬೇಕಿರುವುದರಿಂದ ಅಷ್ಟೇನೂ ಜನಪ್ರಿಯವಾಗಿಲ್ಲ. ಇದೇ ಕಾರಣಕ್ಕೆ ಅಮೆರಿಕದ ಜಾರ್ಜಿಯಾ ಟೆಕ್ ತಂಡವು ವಿಶಿಷ್ಟವಾದ ಸಂಶೋಧನೆ ಮಾಡಿದ್ದು, ಕೈ ಅಥವಾ ಕಾಲಿಗೆ ಅಂಟಿಸಿಕೊಂಡು ಬೇಕಾದಾಗ ಸಕ್ರಿಯಗೊಳಿಸಿ ಕೊಳ್ಳಬಹುದಾದ ಪ್ಯಾಚ್ ಒಂದನ್ನು ಅಭಿವೃದ್ಧಿ ಪಡಿಸಿದೆ. ಇದಕ್ಕೆ ವೈದ್ಯರ ನೆರವು ಬೇಕಾಗುವುದಿಲ್ಲ. ಒಮ್ಮೆ ಪ್ಯಾಚ್ ಬಳಸಿದರೆ ಒಂದು ತಿಂಗಳದವರೆಗೆ ಇದು ಸಂತಾನ ನಿರೋಧಕತೆ ಸಕ್ರಿಯವಾಗಿ ನೆರವು ನೀಡುತ್ತದೆ.
ಇದು ಕೆಲಸ ಮಾಡುವ ವಿಧಾನ ಸ್ವಲ್ಪ ಭಿನ್ನವಾಗಿದ್ದು, ಕೇವಲ 1 ಡಾಲರ್ ಅಂದರೆ ಸುಮಾರು 70 ರೂ. ತಗುಲಲಿದೆ. ಈ ಪ್ಯಾಚ್‌ನಲ್ಲಿ ಒಂದು ಅತಿ ಸೂಕ್ಷ್ಮ ಸೂಜಿ ಇದ್ದು, ಇದರಿಂದ ನೋವಾಗದಂತೆ ದೇಹದೊಳಕ್ಕೆ ಸಂತಾನ ನಿರೋಧಕ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಈ ಹಾರ್ಮೋನ್ ದೇಹದ ಪೂರ್ತಿ ಸಂಚರಿಸಲು ಸ್ವಲ್ಪ ಸಮಯ ತೆಗೆದು ಕೊಳ್ಳಲಿದ್ದು, ಶೇ 100ರಷ್ಟು ಪರಿಣಾಮ ಕಾರಿಯಾಗಿರಲಿದೆ. ಈ ವಿಧಾನವನ್ನು ಇಲಿಗಳ ಮೇಲೆ ಯಶಸ್ವಿಯಾಗಿ ಪ್ರಯೋಗಿಸಲಾಗಿದೆ. ಮನುಷ್ಯರ ಬಳಕೆಗೆ ಇನ್ನಷ್ಟೇ ಪ್ರಯೋಗ ನಡೆಯಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.