ವಾವ್ ಚಾಟ್ಸ್ !
Team Udayavani, Jan 18, 2019, 12:30 AM IST
ಹುಳಿ-ಸಿಹಿ ಮತ್ತು ಖಾರ ಮಿಶ್ರಿತ ರುಚಿಯ ಚಾಟ್ಸ್ ಎಂದರೆ ಎಲ್ಲರಿಗೂ ಬಹಳ ಪ್ರಿಯ. ವಿವಿಧ ಹಣ್ಣು, ತರಕಾರಿಗಳನ್ನು ಸೇರಿಸಿ ಆರೋಗ್ಯಕರ ಚಾಟ್ಸ್‌ನ್ನು ಮನೆಯಲ್ಲಿಯೇ ತಯಾರಿಸಿ ಸವಿಯಬಹುದು. ಇಲ್ಲಿವೆ ಕೆಲವು ರಿಸಿಪಿಗಳು.
ತುಕ್ಕುಡಿ ಚಾಟ್
ಬೇಕಾಗುವ ಸಾಮಗ್ರಿ: ಬಟಾಣಿಗಸಿ- ಅರ್ಧ ಕಪ್, ತುಕ್ಕುಡಿ- ಹತ್ತು, ಹುರಿದ ಕಾರ್ನ್- ಒಂದು ಹಿಡಿ, ಬ್ಲೇಕ್‌ಸಾಲ್ಟ್ ರುಚಿಗೆ ಬೇಕಷ್ಟು, ಹಸಿಮೆಣಸು, ಕೊತ್ತಂಬರಿಸೊಪ್ಪು, ಶುಂಠಿ, ಬೆಳ್ಳುಳ್ಳಿ, ಎರಡು ಲವಂಗ ಮತ್ತು ಪುದಿನಾ ಸೇರಿಸಿ ರುಬ್ಬಿದ ಚಟ್ನಿ – ನಾಲ್ಕು ಚಮಚ, ಹುಣಸೆ, ಖರ್ಜೂರ ಮತ್ತು ಬೆಲ್ಲ ಸೇರಿಸಿ ರುಬ್ಬಿ ಕುದಿಸಿದ ಚಟ್ನಿ – ಎರಡು ಚಮಚ, ಕ್ಯಾರೆಟ್‌ತುರಿ- ನಾಲ್ಕು ಚಮಚ, ಹೆಚ್ಚಿದ ಈರುಳ್ಳಿ – ನಾಲ್ಕು ಚಮಚ, ಹೆಚ್ಚಿದ ಟೊಮೆಟೋ- ನಾಲ್ಕು ಚಮಚ, ಚಾಟ್ ಪೌಡರ್- ಒಂದು ಚಮಚ, ಮೂಂಗ್‌ದಾಲ್- ಆರು ಚಮಚ, ಲೇಸ್- ಅಲಂಕಾರಕ್ಕೆ.
ತಯಾರಿಸುವ ವಿಧಾನ: ಒಂದು ಕಪ್ ಮೈದಾಹುಡಿಗೆ ಒಂದು ಕಪ್ ಬಾಂಬೆರವೆ, ರುಚಿಗೆ ಬೇಕಷ್ಟು ಉಪ್ಪು ಮತ್ತು ಮೆಣಸಿನಪುಡಿ ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಅರ್ಧ ಗಂಟೆ ನೆನೆಸಿಡಿ. ನಂತರ ಸ್ವಲ್ಪ ದಪ್ಪಕ್ಕೆ ಲಟ್ಟಿಸಿ ತುಕ್ಕುಡಿ ತಯಾರಿಸಿ ಎಣ್ಣೆಯಲ್ಲಿ ಕರಿದಿಡಿ. ಬಟಾಣಿಗೆ ಸ್ವಲ್ಪ ಅರಸಿನಶಿಣ ಸೇರಿಸಿ ಬೇಯಿಸಿ. ನಂತರ ಇದಕ್ಕೆ ರುಬ್ಬಿದ ಪುದಿನ ಚಟ್ನಿ ಮತ್ತು ಉಪ್ಪು ಸೇರಿಸಿ ಕುದಿಸಿ ಗಸಿ ಮಾಡಿಟ್ಟುಕೊಳ್ಳಿ. ಈಗ ಸರ್ವಿಂಗ್ ಪ್ಲೇಟ್‌ಗೆ ಸ್ವಲ್ಪ ತುಕ್ಕುಡಿ ಹಾಕಿ ಅದರ ಮೇಲೆ ಬಟಾಣಿಗಸಿ ಹಾಕಿ ಅದರ ಮೇಲೆ ಮಂಡಕ್ಕಿ, ನೀರುಳ್ಳಿ ಮತ್ತು ಟೊಮೆಟೋ ಹರಡಿ ಅದರ ಮೇಲೆ ಬ್ಲೇಕ್‌ಸಾಲ್ಟ್, ಚಾಟ್‌ಮಸಾಲ, ಪುದಿನ ಚಟ್ನಿ, ಖರ್ಜೂರ ಚಟ್ನಿ, ಹೀಗೆ ಎಲ್ಲವನ್ನೂ ಹರಡಿ ಮೇಲಿನಿಂದ ದಾಳಿಂಬೆ ಮತ್ತು ಕೊತ್ತಂಬರಿಸೊಪ್ಪು ಮತ್ತು ತುಕ್ಕುಡಿ ಹರಡಿ ಲೇಸ್‌ನಿಂದ ಅಲಂಕರಿಸಿದರೆ ಚಾಟ್ ಸವಿಯಲು ರೆಡಿ.
ಮಿಕ್ಸೆಡ್ ಫ್ರೂಟ್ಸ್ ಚಾಟ್
ಬೇಕಾಗುವ ಸಾಮಗ್ರಿ : ಕಲ್ಲಂಗಡಿ, ಸೇಬು, ಸೀಬೆ, ಬಾಳೆಹಣ್ಣು, ಅನನಾಸ್, ಖರಬೂಜ ಇತ್ಯಾದಿ ಹಣ್ಣುಗಳ ಮಿಶ್ರಣ- ಎರಡು ಕಪ್, ದಾಳಿಂಬೆ, ದ್ರಾಕ್ಷಿ – ಅರ್ಧ ಕಪ್, ಚಾಟ್‌ಮಸಾಲ ಮತ್ತು ಬ್ಲೇಕ್‌ಸಾಲ್ಟ್ – ರುಚಿಗೆ ಬೇಕಷ್ಟು, ಪುದಿನ ಚಟ್ನಿ- ಒಂದು ಚಮಚ.
ತಯಾರಿಸುವ ವಿಧಾನ: ಕಲ್ಲಂಗಡಿ, ಸೀಬೆ, ಬಾಳೆಹಣ್ಣು, ಅನನಾಸ್, ಖರಬೂಜ ಇತ್ಯಾದಿ ಹಣ್ಣುಗಳನ್ನು ಉದ್ದಕ್ಕೆ ಸ್ವಲ್ಪ$ದೊಡ್ಡ ಪೀಸ್ ಮಾಡಿಕೊಳ್ಳಿ. ದ್ರಾಕ್ಷಿಯನ್ನು ಅರ್ಧ ಮಾಡಿಕೊಳ್ಳಿ. ಇವುಗಳನ್ನು ಸರ್ವಿಂಗ್ ಕಪ್‌ಗೆ ಹಾಕಿ ಮೇಲಿನಿಂದ ಬ್ಲೇಕ್‌ಸಾಲ್ಟ್, ಚಾಟ್‌ಮಸಾಲ ಹಾಗೂ ಸ್ವಲ್ಪ ಪುದಿನ ಚಟ್ನಿ ಇತ್ಯಾದಿಗಳನ್ನು ಹಾಕಿ ಸರ್ವ್ ಮಾಡಬಹುದು.
ಫ್ರೆ„ಡ್ ಕಾಬೂಲ್ ಚೆನ್ನಾ ಚಾಟ್
ಬೇಕಾಗುವ ಸಾಮಗ್ರಿ: ಮೊಳಕೆಕಟ್ಟಿದ ಹೆಸರು ಕಾಳು- ನಾಲ್ಕು ಚಮಚ, ಕ್ಯಾರೆಟ್‌ತುರಿ- ಆರು ಚಮಚ, ಹೆಚ್ಚಿದ ಸೇಬು- ನಾಲ್ಕು ಚಮಚ, ದಾಳಿಂಬೆ- ನಾಲ್ಕು ಚಮಚ, ಸೌತೆಕಾಯಿ- ನಾಲ್ಕು ಚಮಚ, ಹೆಚ್ಚಿದ ಈರುಳ್ಳಿ – ನಾಲ್ಕು ಚಮಚ, ಹೆಚ್ಚಿದ ಟೊಮೆಟೋ- ಒಂದು, ಪುದಿನ ಚಟ್ನಿ- ಒಂದು ಚಮಚ, ಸ್ವೀಟ್ ಚಟ್ನಿ- ಒಂದು ಚಮಚ, ಬ್ಲೇಕ್‌ಸಾಲ್ಟ್ ರುಚಿಗೆ, ಚಾಟ್‌ಮಸಾಲಾ- ಒಂದು ಚಮಚ, ಸ್ವೀಟ್‌ಕಾರ್ನ್- ಆರು ಚಮಚ, ಖರ್ಜೂರ- ಎರಡು ಚಮಚ, ಕೊತ್ತಂಬರಿಸೊಪ್ಪು- ಎರಡು ಚಮಚ.
ತಯಾರಿಸುವ ವಿಧಾನ: ಬಾಣಲೆಯಲ್ಲಿ ಒಂದು ಚಮಚ ಬೆಣ್ಣೆ ಹಾಕಿ ಸ್ವೀಟ್‌ಕಾರ್ನ್ನ್ನು ಉಪ್ಪು ಮತ್ತು ಕಾಳುಮೆಣಸಿನ ಪುಡಿ ಹಾಕಿ ಬಾಡಿಸಿಕೊಳ್ಳಿ. ಮೇಲೆ ತಿಳಿಸಿದ ಎಲ್ಲ ಸಾಮಗ್ರಿಗಳನ್ನು ಒಂದೊಂದಾಗಿ ಮಿಕ್ಸಿಂಗ್‌ಬೌಲ್‌ಗೆ ಹಾಕಿ ಮಿಶ್ರಮಾಡಿ ಸರ್ವಿಂಗ್ ಪ್ಲೇಟ್‌ಗೆ ಹಾಕಿ ಮೇಲಿನಿಂದ ಸ್ವೀಟ್‌ಕಾರ್ನ್ ಮತ್ತು ಹುರಿದ ಕಾಬೂಲ್‌ಕಡ್ಲೆಯನ್ನು ಹರಡಿ ಕೊತ್ತಂಬರಿಸೊಪ್ಪಿನಿಂದ ಅಲಂಕರಿಸಿ.
ಚಕೋತಾ ಪಾಪಡ್ ಚಾಟ್
ಬೇಕಾಗುವ ಸಾಮಗ್ರಿ: ಚಕೋತಾ ಎಸಳುಗಳು- ನಾಲ್ಕು ಚಮಚ, ಸಣ್ಣಗೆ ಹೆಚ್ಚಿದ ಸೇಬು ಮತ್ತು ಖರ್ಜೂರ- ನಾಲ್ಕು ಚಮಚ, ಬೂಂದಿಕಾಳು- ಆರು ಚಮಚ, ಹುರಿದ ಕಡ್ಲೆಬೀಜ- ನಾಲ್ಕು ಚಮಚ, ಚಾಟ್‌ಮಸಾಲ- ಒಂದು ಚಮಚ, ಸಕ್ಕರೆ- ಎರಡು ಚಮಚ, ಟೂಟುಟಿಫ್ರೂಟಿ- ಎರಡು ಚಮಚ, ಸುಟ್ಟಹಪ್ಪಳ- ನಾಲ್ಕು, ಕ್ಯಾರೆಟ್‌ತುರಿ- ಎರಡು ಚಮಚ, ನೀರುಳ್ಳಿ- ನಾಲ್ಕು ಚಮಚ, ಪುದಿನ- ಎರಡು ಚಮಚ, ಸಕ್ಕರೆ- ನಾಲ್ಕು ಚಮಚ, ಬ್ಲೇಕ್‌ಸಾಲ್ಟ್ ರುಚಿಗೆ.
ತಯಾರಿಸುವ ವಿಧಾನ: ಹಪ್ಪಳ ಮತ್ತು ಬೂಂದಿಕಾಳನ್ನು ಹೊರತುಪಡಿಸಿ ಮೇಲೆ ತಿಳಿಸಿದ ಎಲ್ಲ ಸಾಮಗ್ರಿಗಳನ್ನು ಮಿಕ್ಸಿಂಗ್‌ಬೌಲ್‌ಗೆ ಹಾಕಿ ಮಿಶ್ರಮಾಡಿ. ನಂತರ, ಇದನ್ನು ಹಪ್ಪಳದ ಮೇಲೆ ಹರಡಿ ಮೇಲಿನಿಂದ ಟೂಟಿಫೂಟಿ ಮತ್ತು ಬೂಂದಿಕಾಳುಗಳನ್ನು ಹರಡಿ ಸರ್ವ್ ಮಾಡಬಹುದು.
ಗೀತಸದಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.