ಕಣ್ಮನ ಸೆಳೆದ ಸಾಂಪ್ರದಾಯಿಕ ರಂಗೋಲಿ ಸೊಬಗು
Team Udayavani, Jan 18, 2019, 12:50 AM IST
ಉಡುಪಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಮಹಿಳಾ ಸಂಸ್ಕೃತಿ ಉತ್ಸವದ ಅಂಗವಾಗಿ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇಗುಲದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ “ಚಿತ್ರಕಲಾ ಶಿಬಿರ ಮತ್ತು ರಂಗೋಲಿ ಸ್ಪರ್ಧೆ 2019’ರಲ್ಲಿ ಚುಕ್ಕೆ ಮತ್ತು ಫ್ರೀ ಹ್ಯಾಂಡ್ ಎರಡೂ ವಿಧದ ರಂಗೋಲಿಗಳು ಗಮನ ಸೆಳೆದವು.
ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಒಟ್ಟು 31 ಮಂದಿ, ಚಿತ್ರಕಲಾ ಸ್ಪರ್ಧೆಯಲ್ಲಿ 13 ಮಂದಿ ಪಾಲ್ಗೊಂಡರು. ಚಿತ್ರಕಲಾ ಸ್ಪರ್ಧೆ “ಮಹಿಳೆ ಮತ್ತು ಸಂಸ್ಕೃತಿ’ ವಿಷಯವನ್ನಾಧರಿಸಿ ನಡೆಯಿತು. ರಂಗೋಲಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಪಿಪಿಸಿ ಕಾಲೇಜಿನ ವಿದ್ಯಾರ್ಥಿ ಪ್ರಸನ್ನ ಎಚ್.ಚಿಟಾ³ಡಿ ಮಾತನಾಡಿ “ತಾಯಿಯಿಂದ ರಂಗೋಲಿ ಕಲೆಯ ಪ್ರಾಥಮಿಕ ಹಂತ ಕಲಿತೆ. ಅನಂತರ ಉಡುಪಿ ಗೀತಾ ಮಂದಿರದಲ್ಲಿ ಗುರುಗಳಾದ ಮಹೇಶ್ ಅವರಿಂದ ತರಬೇತಿ ಪಡೆದುಕೊಂಡಿ ದ್ದೇನೆ. ಮನೆಯಲ್ಲಿ ಪ್ರತಿದಿನ ರಂಗೋಲಿ ಬಿಡಿಸುತ್ತೇನೆ. ಅನೇಕ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಬಹುಮಾನ ಪಡೆದುಕೊಂಡಿ ದ್ದೇನೆ. ಉಳಿದವರಿಗೂ ಬಹುಮಾನ ಸಿಗಲಿ ಎಂಬ ಕಾರಣಕ್ಕೆ ಕೆಲವು ಸ್ಪರ್ಧೆಗಳಿಂದ ದೂರವುಳಿಯುತ್ತೇನೆ’ ಎಂದರು.
ಅಪರೂಪ
“ರಂಗೋಲಿ ಸ್ಪರ್ಧೆಗಳು ಅಪರೂಪ. ಮನೆಯಂಗಳದಲ್ಲಿ ರಂಗೋಲಿ ಬಿಡಿಸುವ ಸಂಪ್ರದಾಯ ಹಲವೆಡೆ ಇದೆ. ಇದರಿಂದ ಅವರ ಪ್ರತಿಭೆ ಹೊರ ಜಗತ್ತಿಗೂ ತಿಳಿಯಲು, ನಮ್ಮ ಉತ್ಕೃಷ್ಟ ಕಲಾಪ್ರಕಾರ ಉಳಿಯಲು ಇಂತಹ ಸ್ಪರ್ಧೆ ಪೂರಕ ವಾಗಿವೆ ಎಂದು ಉಡುಪಿ ಜಂಗಮಮಠ ಕಲಾ ವಿದ್ಯಾಲಯ ಚಿತ್ರಕಲಾ ಮಂದಿರದ ಪ್ರಾಂಶುಪಾಲ ರಾಜೇಂದ್ರ ತ್ರಾಸಿ ಹೇಳಿದರು.
“ನಾನು ಮನೆಯಲ್ಲಿ ಪ್ರತಿದಿನ ರಂಗೋಲಿ ಹಾಕುತ್ತೇನೆ. ಆದರೆ ಸ್ಪರ್ಧೆ ಯಲ್ಲಿ ಪಾಲ್ಗೊಳ್ಳಲು ಹಿಂಜರಿಯುತ್ತಿದ್ದೆ. ಇಲ್ಲಿ ಬಂದು ಹೊಸ ಹೊಸ ಮಾದರಿ, ವಿನ್ಯಾಸದ ರಂಗೋಲಿ ನೋಡಿ ಮತ್ತಷ್ಟು ತಿಳಿದುಕೊಳ್ಳುವಂತಾಯಿತು’ ಎಂದು ಮತ್ತೋರ್ವ ಸ್ಪರ್ಧಾಳು ಗಾಯತ್ರಿ ಬನ್ನಂಜೆ ತಿಳಿಸಿದರು.
ಅಂಬಲಪಾಡಿ ದೇಗುಲದ ಧರ್ಮದರ್ಶಿ ಡಾ| ನಿ.ಬೀ. ವಿಜಯ ಬಲ್ಲಾಳ್ ಕಾರ್ಯಕ್ರಮ ಉದ್ಘಾಟಿಸಿದರು. ಜಂಗಮಮಠ ಕಲಾ ವಿದ್ಯಾಲಯ ಚಿತ್ರಕಲಾ ಮಂದಿರದ ಯು.ಸಿ.ನಿರಂಜನ್, ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ರಾಘವೇಂದ್ರ ಅಮೀನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಚಂದ್ರಶೇಖರ್ ಸ್ವಾಗತಿಸಿ ದರು. ಹಿರಿಯ ತಾಂತ್ರಿಕ ಮೇಲ್ವಿಚಾರಕಿ ಪೂರ್ಣಿಮಾ ನಿರ್ವಹಿಸಿದರು. ತ್ರಿವರ್ಣ ವಂದಿಸಿದರು.
ಮಹಿಳೆಯಿಂದ ಸಂಸ್ಕೃತಿ ಉಳಿವು
ನಮ್ಮ ಉನ್ನತ ಸಂಸ್ಕೃತಿ ಉಳಿಯಲು ಇಂತಹ ಸ್ಪರ್ಧೆ ಅಗತ್ಯ. ಮಹಿಳೆ ಯರು ತಾವು ಸಂಸ್ಕೃತಿ ಪಾಲಿಸುವ ಜತೆಗೆ ತಮ್ಮ ಮಕ್ಕಳಿಗೂ ಹೇಳಿಕೊಟ್ಟಾಗ ಮಾತ್ರ ಅದು ಉಳಿಯು ತ್ತದೆ. ರಂಗೋಲಿ ಬಿಡಿಸುವುದು, ದೀಪದ ಬತ್ತಿ ಸಿದ್ಧಪಡಿಸುವುದು ಮೊದಲಾದ ಚಟುವಟಿಕೆಗಳಿಂದ ಕೈಗಳಿಗೆ ಉತ್ತಮ ವ್ಯಾಯಾಮವೂ ದೊರೆಯುತ್ತದೆ.
-ಡಾ| ನಿ.ಬೀ. ವಿಜಯ ಬಲ್ಲಾಳ್, ಅಂಬಲಪಾಡಿ ದೇಗುಲದ ಧರ್ಮದರ್ಶಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.