ತಿಂಗಳ ಬಳಿಕ ಅಸ್ಥಿ ದರ್ಶನ
Team Udayavani, Jan 18, 2019, 12:30 AM IST
ಶಿಲ್ಲಾಂಗ್: ತಿಂಗಳ ಹಿಂದೆ ನಡೆದಿದ್ದ ಇಲ್ಲಿನ ರ್ಯಾಟ್ ಹೋಲ್ ಗಣಿ ದುರಂತದಲ್ಲಿ ಸಿಲುಕಿದವರ ರಕ್ಷಣೆಯಲ್ಲಿ ತೊಡಗಿರುವ ನೌಕಾ ಪಡೆಯ ಸಿಬಂದಿ, ಗುರುವಾರ ಗಣಿಯೊಳಗಿನ ಕಾರ್ಯಾಚರಣೆ ವೇಳೆ ವ್ಯಕ್ತಿಯೊಬ್ಬನ ಅಸ್ಥಿಪಂಜರವೊಂದು ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ.
ಡಿ. 13ರಂದು ನಡೆದಿದ್ದ ಈ ಗಣಿ ದುರಂತದಲ್ಲಿ ಸುಮಾರು 20 ಕಾರ್ಮಿಕರು 370 ಅಡಿ ಆಳದಲ್ಲಿ ಸಿಲುಕಿದ್ದರು. ಲಿಟೇನ್ ನದಿ ಹಾದು ಹೋಗುವ ಬೆಟ್ಟ ಗುಡ್ಡಗಳಲ್ಲಿ ಈ ಗಣಿಗಾರಿಕೆ ನಡೆಸುತ್ತಿದ್ದರಿಂದ ಡಿ. 13ರ ಮುಂಜಾನೆ, ಗಣಿಯೊಳಗೆ ನದಿ ನೀರು ನುಗ್ಗಿತ್ತು. ಈ ದುರ್ಘಟನೆಯಲ್ಲಿ ಐವರು ಈಜಿ ಮೇಲೆ ಬಂದಿದ್ದರೂ, ಉಳಿದವರು ಒಳಗಡೆಯೇ ಸಿಲುಕಿದ್ದರು.
ನೌಕಾಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ವಾಯು ಪಡೆಯ ತಜ್ಞರು ಈ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಆರ್‌ಒವಿ (ರಿಮೋಟ್‌ಲೀ ಆಪರೇಟೆಡ್ ವೆಹಿಕಲ್ಸ್) ಮೂಲಕ ನೀರು ತುಂಬಿರುವ ಗಣಿಯೊಳಗೆ ಸರ್ವೇಕ್ಷಣೆ ನಡೆಸುತ್ತಿರುವ ನೌಕಾಪಡೆಯ ತಂಡಕ್ಕೆ 160ರಿಂದ 210 ಅಡಿ ಆಳದ ಅಂತರದಲ್ಲಿ ಭಾಗಶಃ ಅಸ್ಥಿಪಂಜರವಾಗಿರುವ ಕಳೇಬರವೊಂದು ಪತ್ತೆಯಾಗಿದೆ. ಇದರ ಜತೆಗೆ ಇನ್ನೂ ಕೆಲವು ಅಸ್ಥಿಪಂಜರಗಳು ಕಾಣಿಸಿವೆ ಎಂದು ಹೇಳಲಾಗಿದೆ. ಕಾರ್ಯಾಚರಣೆ ತಿಂಗಳು ದಾಟಿದ್ದರಿಂದ ಕಾರ್ಮಿಕರು ಬದುಕಿರಲಾರರು ಎಂಬ ಅನುಮಾನಗಳಿಗೆ ಇದು ಪುಷ್ಟಿ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಚಾಲಕ ಸಾವು
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.