ಸ್ವಾಮೀಜಿ ಆರೋಗ್ಯ: ಭಕ್ತರಲ್ಲಿ ಆತಂಕ;14 ಹೆಲಿಪ್ಯಾಡ್ ನಿರ್ಮಾಣ
Team Udayavani, Jan 18, 2019, 12:40 AM IST
ತುಮಕೂರು: ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಆರೋಗ್ಯದಲ್ಲಿ ಕ್ಷಣ ಕ್ಷಣಕ್ಕೂ ಬದಲಾವಣೆಯಾಗುತ್ತಿರುವುದರಿಂದ ಭಕ್ತ ರಲ್ಲಿ ಆತಂಕ ಮನೆಮಾಡಿದೆ. ಸಿದ್ಧಗಂಗಾ ಮಠ ದಲ್ಲಿ ಮುಖಂಡರು ಮತ್ತು ಮಠಾಧಿಕಾರಿಗಳ ಸಭೆ ನಿರಂತರ ನಡೆಯುತ್ತಿದೆ. ಮಠ ದಲ್ಲಿ ಏನಾಗುತ್ತಿದೆ ಎನ್ನುವ ಆತಂಕ ಭಕ್ತರಲ್ಲಿ ಹೆಚ್ಚುತ್ತಿದೆ. ಹೀಗಾಗಿ ಸ್ವಾಮೀಜಿ ಯವರ ದರ್ಶನ ಪಡೆ ಯಲು ಅವಕಾಶ ನೀಡ ಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಶ್ರೀಗಳ ಭೇಟಿಗಾಗಿ ರಾಷ್ಟ್ರಮಟ್ಟದ ನಾಯಕರು ಮಠಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಸಮೀಪ 14 ಹೆಲಿಪ್ಯಾಡ್‌ಗಳ ನಿರ್ಮಾಣ ಕಾರ್ಯ ಭರದಿಂದ ನಡೆದಿದೆ. ಮಠಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚುತ್ತಿರುವಂತೆಯೇ ಪೊಲೀಸ್ ಭದ್ರತೆಯನ್ನೂ ಹೆಚ್ಚಿಸಲಾಗಿದೆ. ಮಠದ ಸುತ್ತಲೂ ಬ್ಯಾರಿಕೇಡ್ ಹಾಕಲಾಗಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಸುತ್ತೂರು ಶ್ರೀಗಳು ಶುಕ್ರವಾರ ಮಠಕ್ಕೆ ಭೇಟಿ ನೀಡಲಿದ್ದಾರೆ.
ಸಿದ್ಧಗಂಗಾ ಮಠದ ಹಿರಿಯ ಶ್ರೀಗಳ ಆರೋಗ್ಯ ವೈದ್ಯರು ನಿರೀಕ್ಷಿಸಿದಂತೆ ಗುಣಮುಖವಾಗುತ್ತಿಲ್ಲ. ಶ್ರೀಗಳು ಒಂದು ಬಾರಿ ತೀರಾ ಅನಾರೋಗ್ಯಕ್ಕೆ ಒಳಗಾದವರಂತೆ ಕಾಣುತ್ತಾರೆ. ಅನಂತರ ಚೇತರಿಸಿಕೊಳ್ಳುತ್ತಿದ್ದಾರೆ. ವೆಂಟಿಲೇಟರ್ ಮೂಲಕ ಕೆಲವು ಗಂಟೆಗಳ ಕಾಲ ಉಸಿರಾಡಿದರೆ ಮತ್ತೆ ಕೆಲವು ಗಂಟೆ ಸ್ವಯಂ ಉಸಿರಾಟ ಮಾಡುತ್ತಿದ್ದಾರೆ.
ಸಭೆ ಮೇಲೆ ಸಭೆ
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಬೆಳಗ್ಗೆಯಿಂದ ಮಠದಲ್ಲಿಯೇ ಇದ್ದು ಸಭೆಗಳ ಮೇಲೆ ಸಭೆ ನಡೆಸಿದ್ದಾರೆ. ಸಿದ್ಧಗಂಗಾ ಶ್ರೀ ಅವರಿಗೆ ಭಾರತ ರತ್ನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಅಗತ್ಯ ಬಿದ್ದರೆ ಸಂಸದರ ನಿಯೋಗದ ಜತೆಗೆ ತೆರಳಿ ಮನವಿ ಮಾಡಿಕೊಳ್ಳಲಾಗುತ್ತದೆ ಎಂದಿದ್ದಾರೆ. ಶುಕ್ರವಾರ ಸುತ್ತೂರು ಶ್ರೀಗಳು ಮಠಕ್ಕೆ ಆಗಮಿಸಲಿದ್ದಾರೆ. ಅವರು ಬಂದ ಮೇಲೆ ಮುಂದೆ ಯಾವ ನಿರ್ಣಯ ಕೈಗೊಳ್ಳಬೇಕು ಎಂದು ನಿರ್ಧಾರವಾಗಲಿದೆ.
ಭಕ್ತರ ಪ್ರತಿಭಟನೆ
ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಯಾರೂ ಮಠಕ್ಕೆ ಬರಬೇಡಿ. ಶ್ರೀಗಳನ್ನು ನೋಡಲು ಅವಕಾಶವಿಲ್ಲ, ಶ್ರೀಗಳಿಗೆ ಸೋಂಕು ತಗಲುತ್ತದೆ ಎಂದು ಹೇಳಿ ದರೂ ಭಕ್ತರು ತಂಡೋಪತಂಡವಾಗಿ ಬರು ತ್ತಿದ್ದಾರೆ. ಶ್ರೀಗಳನ್ನು ನಾವು ನೋಡ ಬೇಕು, ಅವಕಾಶ ನೀಡಿ ಎಂದು ಅಪರಾಹ್ನ ಭಕ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಭಕ್ತರ ಆಕ್ರೋಶ ಹೆಚ್ಚಾದ ಹಿನ್ನೆಲೆಯಲ್ಲಿ ಮಧ್ಯಾಹ್ನ ಹಳೆಯ ಮಠದಲ್ಲಿ ಕಿಟಿಕಿಯ ಮೂಲಕ ನೋಡಲು ಅವಕಾಶ ಕಲ್ಪಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.