ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
Team Udayavani, Jan 18, 2019, 6:05 AM IST
ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಬೆಳಗಿನ ಜಾವ ದಟ್ಟ ಮಂಜು ಕವಿದ ಪರಿಣಾಮ ವಿಮಾನಗಳ ಹಾರಾಟದಲ್ಲಿ ಮತ್ತೆ ವ್ಯತ್ಯಯ ಉಂಟಾಗಿತ್ತು. ಗುರುವಾರ ಬೆಳಗ್ಗೆ 4.20ರಿಂದ 8.47ರವರೆಗೆ ಮಂಜು ಕವಿದ ವಾತಾವರಣವಿತ್ತು. ಇದರಿಂದ, ವಿಮಾನಗಳ ಆಗಮನ ಮತ್ತು ನಿರ್ಗಮನದಲ್ಲಿ ವ್ಯತ್ಯಯವುಂಟಾಗಿ ಸಾವಿರಾರು ಪ್ರಯಾಣಿಕರು ಪರದಾಡಿದರು.
ಮಾರ್ಗ ಬದಲಾವಣೆ: ಮಂಜು ಕವಿದ ಪರಿಣಾಮ 44 ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿತ್ತು. 18 ವಿಮಾನಗಳ ಆಗಮನದ ಸಮಯ ತಡವಾದರೆ, 4 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿತ್ತು. ಎರಡು ಬ್ಲೂ ಡಾರ್ಟ್ ವಿಮಾನಗಳು ಮತ್ತು ಒಂದು ಇಂಡಿಗೋ ವಿಮಾನ ಚೆನ್ನೈಗೆ ಹಾಗೂ ಮತ್ತೂಂದು ವಿಮಾನದ ಮಾರ್ಗ ಬದಲಾಯಿಸಿ ಹೈದರಾಬಾದ್‌ಗೆ ತೆರಳುವಂತೆ ಸೂಚಿಸಲಾಯಿತು ಎಂದು ಕೆಐಎಎಲ್ ತಿಳಿಸಿದೆ.
ಇನ್ನೊಂದೆಡೆ ದೇವನಹಳ್ಳಿ ಸುತ್ತಮುತ್ತಲ ಭಾಗಗಳಲ್ಲಿ ಬೆಳಗ್ಗೆ 4 ಗಂಟೆಯಿಂದ 8.30ರವರೆಗೆ ಮಂಜು ಕವಿದಿತ್ತು. ಜತೆಗೆ ಕೊಂಚ ಹೆಚ್ಚೇ ಇದ್ದ ಚಳಿ, ಮುಂಜಾನೆ ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಹಾಗೂ ಕ್ಯಾಬ್ ಚಾಲಕರನ್ನು ನಡುಗಿಸಿತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಎದುರಿದ್ದ ವಾಹನ ಕಾಣದಷ್ಟು ಮಂಜು ಕವಿದಿದ್ದರಿಂದ ಚಾಲಕರು ಹರಸಾಹಸ ಪಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.