ಬೇಡಿಕೆ ಈಡೇರಿಕೆಗೆ ನೇಕಾರರ ಧರಣಿ


Team Udayavani, Jan 18, 2019, 9:24 AM IST

18j-anuary-16.jpg

ಬೀಳಗಿ: ಮೂಲ ಸೌಕರ್ಯ ಒದಗಿಸದೆ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮವು ಕೈಮಗ್ಗ ನೇಕಾರರಿಗೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಸಲ್ಲದು. ನೂಲು ಇಲ್ಲದೆ, ಯೋಗ್ಯ ಮಜೂರಿ ಇಲ್ಲದೆ ನೇಕಾರರ ಬದುಕು ಬೀದಿಪಾಲಾಗಿದೆ. ಕೂಡಲೇ ನಿಗಮದವರು ನೇಕಾರರ ಸಮಸ್ಯೆ ಪರಿಹರಿಸಬೇಕೆಂದು ಒತ್ತಾಯಿಸಿ ತಾಲೂಕಿನ ಕೈಮಗ್ಗ ನೇಕಾರ ಸಂಘಟನೆಯವರು ಕೆಎಚ್‌ಡಿಸಿ ಕಚೇರಿ ಎದುರು ಗುರುವಾರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದರು.

ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ (ಕೆಎಚ್‌ಡಿಸಿ) ಕಚೇರಿ ಎದುರು ಕೈಮಗ್ಗ ನೇಕಾರರ ಸಂಘಟನೆಯಲ್ಲಿ ನೂರಾರು ಜನ ಪ್ರತಿಭಟಿಸುವ ಮೂಲಕ, ರಾಜ್ಯ ಸರ್ಕಾರ ಹಾಗೂ ಕೈಮಗ್ಗ ನಿಗಮದ ಎಂಡಿ ವಿರುದ್ಧ ಧಿಕ್ಕಾರದ ಘೋಷಣೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಕೈಮಗ್ಗ ನೇಕಾರರ ಸಂಘದ ಮುಖಂಡ ದೇವೇಂದ್ರ ಕೋಟಿ ಮಾತನಾಡಿ, ನಮ್ಮ ಬದುಕಿಗೆ ನೇಯ್ಗೆ ಕಾಯಕವೇ ಆಧಾರ. ಆದರೆ, ನಿಗಮದವರು ಕಳೆದ ನಾಲ್ಕು ತಿಂಗಳಿಂದ ನೇಕಾರರಿಗೆ ನೂಲು ಒದಗಿಸುತ್ತಿಲ್ಲ. ಆರು ತಿಂಗಳಿಂದ ಸೂಟಿಂಗ್‌-ಕಾಟನ್‌ ಮಗ್ಗಗಳು ಸಂಪೂರ್ಣ ಸ್ಥಗಿತಗೊಂಡಿವೆ ಎಂದು ಅಳಲು ತೋಡಿಕೊಂಡರು.

ನೇಕಾರರಿಗೆ ಇನ್‌ಸೆಂಟಿವ್‌ ಕೊಡುವುದನ್ನು ನಿಲ್ಲಿಸಿದ್ದಾರೆ. ಪ್ರಸಕ್ತ ಕಾಲಕ್ಕನುಗುಣವಾಗಿ ಮಜೂರಿ ಏರಿಕೆಯಾಗಿಲ್ಲ. ಕಳೆದ ಆರು ತಿಂಗಳಿಂದ ನೇಕಾರರ ಮಕ್ಕಳಿಗೆ ಸಿಗುವ ಸ್ಕಾಲರ್‌ಶಿಪ್‌ ತಡೆಹಿಡಿಯಲಾಗಿದೆ. ಕಳೆದ ಮೂರು ತಿಂಗಳಿಂದ ಮಗ್ಗಗಳು ಬಂದ್‌ ಆಗಿವೆ. ಮಗ್ಗಗಳು ಬಂದ್‌ ಆದಾಗಿನಿಂದ ನೇಕಾರರಿಗೆ ವೇತನವೇ ನೀಡಿಲ್ಲ ಎಂದು ಆರೋಪಿಸಿದ ಅವರು, ಕೂಡಲೇ ಸರ್ಕಾರ, ನಿಗಮ ಎಚ್ಚೆತ್ತು ನೇಕಾರರ ಸಮಸ್ಯೆ ಪರಿಹರಿಸಬೇಕು. ಇಲ್ಲದಿದ್ದರೆ ಧರಣಿ ಸತ್ಯಾಗ್ರಹ ಹಿಂಪಡೆಯುವುದಿಲ್ಲವೆಂದು ಎಚ್ಚರಿಸಿದರು.

ತಾಲೂಕು ನೇಕಾರ ಸಮುದಾಯ ಒಕ್ಕೂಟದ ಮುಖಂಡರಾದ ಶರಣು ಅಗ್ನಿ, ಸಂತೋಷ ಜಂಬಗಿ, ಶೇಖರ ಗೊಳಸಂಗಿ, ಕಾಶೀನಾಥ ಸೋಮನಕಟ್ಟಿ, ಪಾಂಡು ಸೋಮನಕಟ್ಟಿ ಧರಣಿಗೆ ಬೆಂಬಲ ಸೂಚಿಸಿ ಮಾತನಾಡಿ, ಹಸಿವಿನ ನೋವು, ಹಸಿದಿದ್ದವರಿಗೆ ಮಾತ್ರ ಗೊತ್ತು. ನಿಗಮದ ಎಂಡಿಗೆ ಮಾನವೀಯತೆಯಿಲ್ಲ. ಜನಸಮುದಾಯಕ್ಕೆ ಬಟ್ಟೆ ಒದಗಿಸಿ ಮಾನ ಮುಚ್ಚುವ ನೇಕಾರರ ಬದುಕೇ ಇಂದು ಬೆತ್ತಲಾಗಿದೆ ಎಂದು ಅಸಮಾಧಾನ ಹೊರಹಾಕಿದರು. ನಿಗಮದ ಎಂಡಿ ತೆಗೆದು ಹಾಕುವ ಮೂಲಕ ತಕ್ಷಣ ನೇಕಾರರ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು.

ಶಿವಲಿಂಗಪ್ಪ ಬಾದರದಿನ್ನಿ, ಗಂಗಪ್ಪ ಬಾಡಗಿ, ಶೇಖಪ್ಪ ಕುಂದರಗಿ, ಭಾಗವ್ವ ಮಾದರ, ಇಂದ್ರವ್ವ ಚಲವಾದಿ, ಶಂಕ್ರಪ್ಪ ಕೊಣ್ಣೂರ, ನಾಗಪ್ಪ ಬಾಡಗಿ, ಶಿವಪ್ಪ ಬಾಳಿಗಿಡದ, ಸುರೇಶ ಕೊಪ್ಪಳ, ಮಲ್ಲವ್ವ ಸಿಂಹಾಸನ, ಗೀತಾ ಚಲವಾದಿ, ಮಂಜುಳಾ ಮಾದರ, ಚಂದ್ರಕಲಾ ಚಲವಾದಿ, ಶಂಕ್ರಪ್ಪ ಜಾಡಗೌಡರ ಇತರರು ಇದ್ದರು.

ಟಾಪ್ ನ್ಯೂಸ್

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ

ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ

ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ

ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ

ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ

ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ

3-

Mahalingpur: 2020ರ ಪುರಸಭೆ ಗಲಾಟೆ ಪ್ರಕರಣ: ಮರು ತನಿಖೆಗೆ ಕೋರ್ಟ್ ಆದೇಶ

ಬಾಗಲಕೋಟೆ: ಸರ್ಕಾರಿ ಕಚೇರಿ-ಆಶ್ರಯ ಮನೆಗಳೂ ವಕ್ಫ್ ಆಸ್ತಿ!

ಬಾಗಲಕೋಟೆ: ಸರ್ಕಾರಿ ಕಚೇರಿ-ಆಶ್ರಯ ಮನೆಗಳೂ ವಕ್ಫ್ ಆಸ್ತಿ!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Suside-Boy

Brahamavara: ಹಾರಾಡಿ: ಬಾವಿಗೆ ಹಾರಿ ಆತ್ಮಹ*ತ್ಯೆ

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Accident-logo

Bantwala: ಶಾಲಾ ವಾಹನ ಢಿಕ್ಕಿ; ಸ್ಕೂಟರ್‌ ಸವಾರ ಸಾವು

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.