ಗಡಿನಾಡಿನಲ್ಲೂ ಅಂಗನವಾಡಿ ಕೇಂದ್ರ ತೆರೆಯಿರಿ

Team Udayavani, Jan 18, 2019, 11:40 AM IST

ray-1.jpg

ದೇವರಹಿಪ್ಪರಗಿ: ತ್ರಿಶಂಕು ಸ್ಥಿತಿಯಲ್ಲಿರುವ ಗಡಿನಾಡಿನ ಮಕ್ಕಳ ಶಿಕ್ಷಣದ ಬುನಾದಿಗೆ ಅಂಗನವಾಡಿಗಳ ಅವಶ್ಯಕತೆಯಿದ್ದು, ರಾಜ್ಯ ಸರಕಾರ ಈ ಕುರಿತು ಕಾಳಜಿ ವಹಿಸಬೇಕೆಂದು ಅಕ್ಕಲಕೋಟೆಯ ಮಂಗರೂಳೆ ಪ್ರೌಢಶಾಲೆ ವಿದ್ಯಾರ್ಥಿನಿ ವರ್ಷಾರಾಣಿ ಪ್ರಚಂಡೆ ಆಗ್ರಹಿಸಿದಳು.

ಪಟ್ಟಣದ ಸಿದ್ಧೇಶ್ವರ ಶಾಲೆಯಲ್ಲಿ ನಡೆದ 9ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ‘ಹೊಸ ಚಿಗುರು-ಹಳೇ ಬೇರು’ ಗೋಷ್ಠಿಯಲ್ಲಿ ‘ಗಡಿನಾಡಿನಲ್ಲಿ ಕನ್ನಡ ಮಕ್ಕಳ ಸಮಸ್ಯೆಗಳು’ ಕುರಿತು ಮಾತನಾಡಿದಳು. ಗಡಿನಾಡಿನ ಮಕ್ಕಳಾದ ನಾವು ಅನಿವಾರ್ಯವಾಗಿ ಮರಾಠಿ ಭಾಷೆಯಲ್ಲಿ ಅಂಗನವಾಡಿ ಕಲಿತು ನಂತರ ಪ್ರಾಥಮಿಕ ಹಂತದಲ್ಲಿ ಕನ್ನಡ ಕಲಿಯುವಂತಾಯಿತು. ಇದರಿಂದ ಕನ್ನಡ ಶಬ್ದಗಳ ಬಳಕೆಯಲ್ಲಿ ಸ್ವಲ್ಪ ಅಡಚಣೆಯಾಗಿ ಭಾಷಾ ದ್ವಂದ್ವತೆಗೆ ಒಳಗಾಗುವಂತಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರ ಗಡಿನಾಡಿನಲ್ಲಿಯೂ ಅಂಗನವಾಡಿಗಳನ್ನು ಆರಂಭಿಸಲಿ ಜೊತೆಗೆ ಗಡಿನಾಡಿನ ಮಕ್ಕಳಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು. ಮರಾಠಿ ಭಾಷಿಕರು ನಮ್ಮ ನೆರೆ, ಕನ್ನಡಿಗರಿಗೆ ನಾವು ಬರೆ ಕಷ್ಟದ ಹೊರೆ. ಆದ್ದರಿಂದ ಕರ್ನಾಟಕ ಸರಕಾರ ಎಳೆಯಲಿ ನಮ್ಮ ಸಮಸ್ಯೆಗಳಿಗೆ ಶಾಶ್ವತ ಬರೆ ಎಂದು ಅನಿಸಿಕೆ ವ್ಯಕ್ತಪಡಿಸಿದಳು.

ವಿಜಯಪುರ ರಾಮಕೃಷ್ಣ ವಸತಿ ವಿದ್ಯಾಲಯದ ಭೂಮಿಕಾ ಪೂಜಾರಿ ‘ಸ್ವಾಮಿ ವಿವೇಕಾನಂದರ ತತ್ವಾದರ್ಶಗಳು’, ಅಕ್ಕಲಕೋಟೆ ಮಂಗರೂಳೆ ಪ್ರೌಢಶಾಲೆಯ ಸೃಷ್ಟಿ ಚಂಡಕಿ ‘ವಿವಿಧತೆಯಲ್ಲಿ ಏಕತೆ’, ಸ್ಥಳೀಯ ಸಿದ್ಧೇಶ್ವರ ಶಾಲೆಯ ಸಂಗಮ್ಮ ಬಿರಾದಾರ ‘ನಾನೇನಾಗ ಬಯಸುವೆ’, ಗೌರಿ ಮಸಬಿನಾಳ ‘ಮನೆಯೆ ಮೊದಲ ಪಾಠಶಾಲೆ’, ಮೇಘಾ ಹುಲ್ಲೂರ ‘ಪರಿಸರ ಸಂರಕ್ಷಣೆಯಲ್ಲಿ ಮಕ್ಕಳ ಪಾತ್ರ’, ನಮ್ಮ ಮಕ್ಕಳ ಧಾಮದ ಪರಶುರಾಮ ಬಾಗಡಿ ‘ಮಕ್ಕಳ ಹಕ್ಕುಗಳು’ ಕುರಿತಾಗಿ ಉಪನ್ಯಾಸ ನೀಡಿದರು.

‘ಹಳೇಬೇರು’ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ, ‘ಮಕ್ಕಳ ಮೇಲಿನ ಒತ್ತಡಗಳು’ ಹಾಗೂ ಮಕ್ಕಳ ಸಾಹಿತಿ ಕೆ.ಸುನಂದಾ ‘ಮಕ್ಕಳಿಗೇಕೆ ಬೇಕು ಸಾಹಿತ್ಯ’ ಹಾಗೂ ಸಾಹಿತಿ ಗುರುಸ್ವಾಮಿ ಗಣಾಚಾರಿ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ‌ರು. ಸುನೀಲ ಸಾವಳಗಿ ನಿರೂಪಿಸಿದರು. ಕವಿತಾ ಸಣ್ಣಕ್ಕಿ ವಂದಿಸಿದರು.

ಟಾಪ್ ನ್ಯೂಸ್

Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ

Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

Siddu-Somanna

MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Siddu–Muniyappa

Ration Card: ಬಡವರಿಗೆ ಬಿಪಿಎಲ್‌ ಕಾರ್ಡ್‌ ತಪ್ಪದಂತೆ ನೋಡಿಕೊಳ್ಳಿ: ಸಿಎಂ ಸೂಚನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ

Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

1-eweweq

Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು

18-muddebihal

Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು

6-muddebihala

Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ

Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

Siddu-Somanna

MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.