ಭಕ್ತಿ ಎಂದರೆ ಅರಿವು, ಭಕ್ತಿ ಎಂದರೆ ಭರವಸೆ !
Team Udayavani, Jan 19, 2019, 12:30 AM IST
ಭಕ್ತನಾದವನಿಗೆ ಗುಣದೋಷಗಳ ಅರಿವಿರಬೇಕು. ಅಂತಃಕರಣದ ಶುದ್ಧಿ ಬಹುಮುಖ್ಯ. ನಿಜವಾದ ಭಕ್ತನು ಭಗವಂತನ ಕೃಪೆಗೆ ಹೇಗೆ ಪಾತ್ರನಾಗುತ್ತಾನೆ ಎಂಬುದಕ್ಕೆ ಭಕ್ತ ಮಾರ್ಕಾಂಡೇಯ, ಶಿವಭಕ್ತ ಕಣ್ಣಪ್ಪ ಮತ್ತು ಭಕ್ತ ಪ್ರಹ್ಲಾದನ ಕಥೆಗಳು ಸಾಕ್ಷಿ. ಏಕಲವ್ಯನ ಕಥೆಯೂ ವಿಭಿನ್ನವಾಗಿ ಭಕ್ತಿ ಅಥವಾ ಭರವಸೆಯನ್ನು ಹೇಳುವ ಕಥೆ.
ಉದ್ಧವನ ಪ್ರಶ್ನೆಗೆ ಉತ್ತರಿಸುತ್ತಾ ಶ್ರೀಕೃಷ್ಣನು ಭಕ್ತನು ಹೇಗಿರುತ್ತಾನೆಂದು ಹೇಳಿದ್ದಾನೆ. ಶ್ರೀಕೃಷ್ಣ ಹೇಳಿದಂತೆ ಭಕ್ತನಾದವನು ಕೃಪೆಯ ಮೂರ್ತಿಯಾಗಿರುತ್ತಾನೆ. ಆತ ಯಾವ ಪ್ರಾಣಿಯಲ್ಲಿಯೂ ವೈರಭಾವವನ್ನು ಹೊಂದಿರುವುದಿಲ್ಲ. ಸತ್ಯವೇ ಅವನ ಜೀವಾಳವಾಗಿರುತ್ತದೆ. ಬಹುದೊಡ್ಡ ದುಃಖವನ್ನೂ ಆತ ಸಂತಸದಿಂದಲೇ ಸ್ವೀಕರಿಸುತ್ತಾನೆ. ಯಾವ ವಿಧದ ಪಾಪವಾಸನೆಯೂ ಅವನ ಮನಸ್ಸಿನಲ್ಲಿ ಹುಟ್ಟುವುದಿಲ್ಲ. ಅಲ್ಲದೆ ಆತ ಸಮದರ್ಶಿಯಾಗಿದ್ದು ಎಲ್ಲರಿಗೂ ಒಳಿತನ್ನೇ ಮಾಡುವವನಾಗಿರುತ್ತಾನೆ. ಆತನ ಬುದ್ಧಿಯನ್ನು ಕಾಮನೆಗಳು ನಿಯಂತ್ರಿಸುವುದಿಲ್ಲ. ಸಂಯಮಿಯೂ ಮೃದುಸ್ವಭಾವದವನೂ, ಆಗಿರುತ್ತಾನೆ. ಸಂಗ್ರಹಪರಿಗ್ರಹಗಳಿಂದ ದೂರವಿರುತ್ತಾನೆ. ಮಿತವಾದ ಆಹಾರ ಸೇವನೆ ಮಾಡುವವನೂ ಶಾಂತಮನದವನೂ ಸ್ಥಿರವಾದ ಬುದ್ಧಿಯವನೂ ಆಗಿರುತ್ತಾನೆ.
ಭಗವಂತನ ಮೇಲೆ ಭರವಸೆಯನ್ನಿರಿಸಿಕೊಂಡು ಆತ್ಮತಣ್ತೀ ಚಿಂತನೆಯಲ್ಲಿ ಕಾಲ ಕಳೆಯುತ್ತಾನೆ. ಕಾಮ, ಕ್ರೋಧ, ಮದ, ಮೋಹ, ಲೋಭ ಮತ್ತು ಮತ್ಸರವೆಂಬ ಆರು ವೈರಿಗಳನ್ನು ಗೆದ್ದವನಾಗಿರುತ್ತಾನೆ. ಪರರಿಂದ ಸನ್ಮಾನವನ್ನು ಬಯಸದವನೂ ಪರರನ್ನು ಸ್ವತಃ ಸನ್ಮಾನಿಸುವವನೂ ಆಗಿರುತ್ತಾನೆ. ಎಲ್ಲರ ಜೊತೆಗೂ ಮಿತ್ರತೆಯ ವ್ಯವಹಾರವನ್ನು ಮಾಡುವವನಾಗಿರುತ್ತಾನೆ. ಗುಣ ಯಾವುದು? ದೋಷ ಯಾವುದು? ಎಂಬುದನ್ನು ಅರಿತವನಾಗಿರುತ್ತಾನೆ. ಅವನ ಅಂತಃಕರಣವು ಶುದ್ಧವಾಗಿರುತ್ತದೆ. ಸದಾ ಭಕ್ತಿಯ ಪ್ರವಾಹ ಅವನಲ್ಲಿ ಹೆಚ್ಚುತ್ತಲೇ ಇರುತ್ತದೆ.
ಎಲ್ಲ ಕರ್ಮಗಳನ್ನು ಭಗವಂತನಿಗೆ ಅರ್ಪಿಸಿ, ಶರಣಾಗತನಾಗುತ್ತಾನೆ. ಭಗವಂತನು ಯಾರು? ಎಷ್ಟು ದೊಡ್ಡವನು? ಹೇಗಿದ್ದಾನೆ? ಎಂಬುದನ್ನು ತಿಳಿಯಲಿ ಅಥವಾ ತಿಳಿಯದೇ ಇರಲಿ, ಆದರೆ ಅನನ್ಯ ಭಾವದಿಂದ ಭಗವಂತನನ್ನು ಭಜಿಸುವವರೇ ಪರಮಭಕ್ತರಾಗಿರುತ್ತಾರೆ. ಇವು ಭಕ್ತನು ಹೇಗಿರಬೇಕು? ನಿಜವಾದ ಭಕ್ತಿ ಯಾರಲ್ಲಿ ಇರುತ್ತದೆ ಎಂಬುದನ್ನು ಹೇಳುತ್ತವೆ. ಹೀಗೆ ಪರಮಾತ್ಮನು ಭಕ್ತನ ರೂಪವನ್ನು ಹೇಳಿದ್ದಾನೆ.
ಹಾಗಾಗಿ, ಭಕ್ತನಾಗುವುದು ಅಷ್ಟು ಸುಲಭವಲ್ಲ. ಭಕ್ತಿ ಎಂಬುದು ಒಂದು ಬಗೆಯ ಭರವಸೆಯೂ ಹೌದು; ಅರಿವೂ ಹೌದು. ಏಕೆಂದರೆ, ಭಕ್ತನಾದವನಿಗೆ ಗುಣದೋಷಗಳ ಅರಿವಿರಬೇಕು. ಅಂತಃಕರಣದ ಶುದ್ಧಿ ಬಹುಮುಖ್ಯ. ನಿಜವಾದ ಭಕ್ತನು ಭಗವಂತನ ಕೃಪೆಗೆ ಹೇಗೆ ಪಾತ್ರನಾಗುತ್ತಾನೆ ಎಂಬುದಕ್ಕೆ ಭಕ್ತ ಮಾರ್ಕಾಂಡೇಯ, ಶಿವಭಕ್ತ ಕಣ್ಣಪ್ಪ ಮತ್ತು ಭಕ್ತ ಪ್ರಹ್ಲಾದನ ಕಥೆಗಳು ಸಾಕ್ಷಿ$. ಏಕಲವ್ಯನ ಕಥೆಯೂ ವಿಭಿನ್ನವಾಗಿ ಭಕ್ತಿ ಅಥವಾ ಭರವಸೆಯನ್ನು ಹೇಳುವ ಕಥೆ. ದ್ರೋಣಾಚಾರ್ಯರು ಏಕಲವ್ಯನಿಗೆ ಗುರುವಾಗಲು ಒಪ್ಪದಿದ್ದಾ ಗ, ಅವರ ಮಣ್ಣಿನಮೂರ್ತಿಯನ್ನು ಮಾಡಿಕೊಂಡು ಅದನ್ನೇ ಭಕ್ತಿಯಿಂದ ಪೂಜಿಸಿ, ಅವರ ಕೃಪೆಯಿಂದಲೇ ಬಿಲ್ಲುವಿದ್ಯೆಯನ್ನು ಕಲಿತುಕೊಂಡ ಕಥೆ. ಇದು ಭಕ್ತಿಯ ಪರಾಕಾಷ್ಠೆಯನ್ನು ಸೂಚಿಸುತ್ತದೆ. ದ್ರೋಣರು ಅಲ್ಲಿ ಇಲ್ಲದೇ ಇದ್ದರೂ, ಇದ್ದಾರೆ ಎಂಬ ಅವನ ಶ್ರದ್ಧೆಭಕ್ತಿಯಿಂದಾಗಿಯೇ ಆತ ಅರ್ಜುನನನ್ನೂ ಮೀರಿಸುವ ಬಿಲ್ಲುಗಾರನಾಗಿಬಿಟ್ಟಿದ್ದ. ಇಂಥ ಏಕಾಗ್ರತೆಯ ಭಕ್ತಿ ನಮ್ಮಲ್ಲಿ ಹುಟ್ಟಬೇಕು. ಏಕಲವ್ಯನಂತೆ ನಾವು ಕೂಡ ಮೂರ್ತಿಗಳÇÉೇ ದೇವರನ್ನು ಕಂಡವರು. ಹಾಗಾಗಿ, ಭಕ್ತಿ ಹುಟ್ಟಬೇಕಾದರೆ ಮೊತ್ತಮೊದಲು ಆ ಮೂರ್ತಿಯಲ್ಲಿ ನಮ್ಮಿಷ್ಟದ ದೇವರು ಇ¨ªಾನೆಂಬುದನ್ನು ನಮ್ಮ ಮನಸ್ಸು ನಂಬಬೇಕು. ಆಗ ಭಕ್ತಿ ಹುಟ್ಟುತ್ತದೆ.
ಇನ್ನು ಭಕ್ತನಾಗುವುದೆಂದರೆ ಶೀಕೃಷ್ಣ ಹೇಳಿದಂತೆ ದುರ್ಗುಣಗಳನ್ನು ಬಿಡಬೇಕು, ಚಿತ್ತಶುದ್ಧಿಯಾಗಬೇಕು. ಇಡಿಯ ಜಗತ್ತನ್ನೇ ಪ್ರೀತಿಸಬೇಕು. ಕಾಮನೆಗಳನ್ನು ತೊರೆದು ಯಾವುದನ್ನೂ ಬಯಸದ ಭಕ್ತಿ ನಮ್ಮದಾಗಬೇಕು. ಭಜಿಸು ಎಂದರೆ ತ್ಯಜಿಸು ಎಂದೇ ಅರ್ಥ. ಶರಣಾಗತನಾಗುವಾಗ ನಮ್ಮೊಳಗಿನ ಎÇÉಾ ಬಯಕೆಗಳನ್ನು ತ್ಯಜಿಸಿ ನೋವಿಗೆ ಕುಗ್ಗದೆ, ನಲಿವಿಗೆ ಹಿಗ್ಗದೆ ಸಮಭಾವ ಮತ್ತು ಚರಾಚರ ಜೀವಿಗಳಲ್ಲಿ ಸಮಾನತೆಯನ್ನು ಕಾಣುವುದರಿಂದ ಮನಸ್ಸು ಶಾಂತವಾಗಿದ್ದು ನಿಜಭಕ್ತನಾಗಲು ಸಾಧ್ಯ. ಅಂಥ ಭಕ್ತಿ, ಜಗತ್ತಿನ ಶಕ್ತಿಯೂ ಆಗಿ ಮಾರ್ಪಡುವುದರಲ್ಲಿ ಸಂದೇಹವಿಲ್ಲ.
ವಿಷ್ಣು ಭಟ್ ಹೊಸ್ಮನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.