ಬೃಹತ್ ದತ್ತಾಂಶ ಕಳ್ಳತನ!
Team Udayavani, Jan 19, 2019, 12:30 AM IST
ಹೊಸದಿಲ್ಲಿ: ಈ ಹಿಂದೆ ಹಲವು ಬಾರಿ ಫೇಸ್ಬುಕ್ ಖಾತೆಗಳು ಹ್ಯಾಕ್ ಆಗಿ ಡೇಟಾ ಸೋರಿಕೆಯಾಗಿರುವ ಬೆನ್ನಲ್ಲೇ, ಬೃಹತ್ ಡೇಟಾ ಸೋರಿಕೆ ಆನ್ಲೈನ್ನಲ್ಲಿ ನಡೆದಿದೆ. ಸುಮಾರು 77 ಕೋಟಿ ಇಮೇಲ್ಗಳು ಮತ್ತು 21 ಕೋಟಿ ಪಾಸ್ವರ್ಡ್ಗಳನ್ನು ಅಂತರ್ಜಾಲದಲ್ಲಿ ಮುಕ್ತವಾಗಿ ಹರಿಬಿಡಲಾಗಿದೆ. ಇದನ್ನು ಕಲೆಕ್ಷನ್ 1 ಎಂದು ಕರೆಯಲಾಗಿದ್ದು, ಇನ್ನೂ ಹಲವು ಡೇಟಾ ಸೆಟ್ಗಳು ಆನ್ಲೈನ್ನಲ್ಲಿ ಸೋರಿಕೆಯಾಗುವ ಸಾಧ್ಯತೆಯಿದೆ.
ಇದು ಯಾವುದೇ ಒಂದು ಇಮೇಲ್ ಸೇವೆ ಪೂರೈಕೆದಾರರ ಮೂಲದಿಂದ ಸೋರಿಕೆಯಾದ ದ್ದಲ್ಲ. ಬದಲಿಗೆ ಹಲವು ಮೂಲಗಳಿಂದ ಅಂದರೆ, ಫೇಸ್ಬುಕ್, ಟ್ವಿಟರ್, ಜಿಮೇಲ್ ಸೇರಿೆ ವಿವಿಧ ವೆಬ್ಸೈಟ್ಗಳಲ್ಲಿ ಜನ ಹೊಂದಿ ರುವ ಖಾತೆ ಹ್ಯಾಕ್ ಆಗಿ, ಪಾಸ್ವರ್ಡ್ಗಳು ಬಹಿರಂಗಗೊಂಡಿವೆ. ಇದನ್ನು ಮೊದಲು ಐ ಬೀನ್ ಪಾವ್°ಡ್ ಎಂಬ ಸೈಟ್ನಲ್ಲಿ ಟೋರಿ ಹಂಟ್ ಎಂಬವರು ಕಂಡು ಹಿಡಿದಿದ್ದಾರೆ. ಈ ಕಲೆಕ್ಷನ್ 1 ದತ್ತಾಂಶವು 87ಗಿಗಾಬೈಟ್ ಇದ್ದು, 12 ಸಾವಿರ ಫೈಲ್ಗಳಲ್ಲಿ ಸಂಗ್ರಹವಾಗಿದೆ.
ಇಮೇಲ್ ಹ್ಯಾಕ್: ಚೆಕ್ ಮಾಡಿ!
ಹ್ಯಾವ್ ಐ ಬೀನ್ ಪಾವ್°ಡ್ (https://haveibeenpwned.com) ವೆಬ್ಸೈಟ್ನಲ್ಲಿ ಯಾವ ಇಮೇಲ್ ಐಡಿ ಗಳು ಹ್ಯಾಕ್ ಆಗಿವೆ ಎಂಬುದನ್ನು ಜನರು ತಿಳಿದುಕೊಳ್ಳಬಹುದು. ಈ ವೆಬ್ಸೈಟ್ಗೆ ಭೇಟಿ ನೀಡಿ, ಇಮೇಲ್ ಐಡಿ ಟೈಪ್ ಮಾಡಿದರೆ, ಇದು ಹ್ಯಾಕ್ ಆಗಿದೆಯೇ ಎಂಬುದನ್ನು ಇದು ತಿಳಿಸುತ್ತದೆ. ಅಷ್ಟೇ ಅಲ್ಲ, ಈ ಹಿಂದೆ ಎಷ್ಟು ಬಾರಿ ಹ್ಯಾಕ್ ಆಗಿತ್ತು ಎಂಬುದನ್ನೂ ಇದು ಸೂಚಿಸುತ್ತದೆ. ಇದರೊಂದಿಗೆ ನಿಮ್ಮ ಇಮೇಲ್ ವಿಳಾಸ, ಪಾಸ್ವರ್ಡ್, ಬಳಕೆ ದಾರರ ಹೆಸರು, ಐಪಿ ವಿಳಾಸ ಸೇರಿದಂತೆ ಯಾವ ಮಾಹಿತಿ ಹ್ಯಾಕ್ ಆಗಿದೆ ಎಂಬುದನ್ನೂ ಇದು ಸೂಚಿಸುತ್ತದೆ. ಒಂದು ವೇಳೆ ಹ್ಯಾಕ್ ಆಗಿದ್ದರೆ, ತಕ್ಷಣವೇ ಆ ಖಾತೆಗಳ ಪಾಸ್ವರ್ಡ್ ಅನ್ನು ಬದಲಿಸಿ ಕೊಳ್ಳಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
PM Modi ಭೇಟಿಯಾಗಿ ವಿಶೇಷ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ
Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು
Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ
ಚಂದ್ರಶೇಖರ ಶ್ರೀ ವಿರುದ್ಧ ಕೇಸ್; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!
Udupi: ಎಂಜಿಎಂ ವಿದ್ಯೆ ಎಂಬ ಅಮೃತ ನೀಡುತ್ತಿದೆ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.