ಸ್ಮಾರ್ಟ್‌ಆಗಿದೆ ಕುಕ್ಕರ್
Team Udayavani, Jan 19, 2019, 7:18 AM IST
ಅಡುಗೆ ಕೆಲಸ ಕಾರ್ಯಗಳನ್ನು ಸುಲಭಗೊಳಿಸಲು ಕುಕ್ಕರ್ ಗಳು ಮಾರುಕಟ್ಟೆಗೆ ಬಂದು ಹಲವು ವರ್ಷಗಳಾದರೂ ಇದರಲ್ಲಿ ಹೊಸ ಹೊಸ ವಿಧಾನಗಳು, ಅತ್ಯಾಧುನಿಕ ತಂತ್ರಜ್ಞಾ ನಗಳು ಪರಿಚಯವಾಗುತ್ತವೇ ಇವೆ. ಇವುಗಳಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವುದು ಸ್ಮಾರ್ಟ್ ಸ್ಲೋ ಕುಕ್ಕರ್ ಗಳು. ಭಾರತದಲ್ಲಿ ಇದು ಸದ್ಯಕ್ಕೆ ಬಳಕೆಯ ಲ್ಲಿಲ್ಲ. ಆದರೆ ಚೀನ, ಅಮೆರಿಕಾದಲ್ಲಿ ಇದನ್ನು ಬಳಸಲಾಗುತ್ತಿದೆ. ಅಲ್ಲದೇ ಆನ್ ಲೈನ್ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆಯನ್ನೂ ಪಡೆದಿದೆ.
ಮನೆಯಲ್ಲೇ ಅಡುಗೆ ಮಾಡುವುದೇ ಬಹುದೊಡ್ಡ ಕಲೆ. ತುಂಬ ಜನ ಮನೆಯಲ್ಲಿದ್ದಾಗ ಅವರೆಲ್ಲರಿಗೆ ಪ್ರಿಯವಾದ ತಿಂಡಿ- ತಿನಿಸು ರೆಡಿ ಮಾಡುವುದೇ ಬಹುದೊಡ್ಡ ಸವಾಲು. ಅದರಲ್ಲಿಯೂ ಮನೆ ಕೆಲಸ ತುಂಬಾ ಇರುವಾಗ ಅಥವಾ ಕಚೇರಿ ಕೆಲಸದಲ್ಲಿ ಇರುವಾಗ ಅಡುಗೆ ಕೆಲಸ ಮಾಡುವುದೆಲ್ಲ ಕಿರಿಕಿರಿ. ಇದನ್ನೆಲ್ಲ ನಿಭಾಯಿಸುವುದೇ ಹೇಗೆ ಎಂಬುದೇ ಈಗ ಕಾಡುತ್ತಿರುವ ಕೆಲವು ಪ್ರಶ್ನೆ.
ಇದಕ್ಕಾಗಿಯೇ ಮಾರುಕಟ್ಟೆಯಲ್ಲಿ ಹೊಸ ಹೊಸ ನಾವೀನ್ಯದ ತಂತ್ರಜ್ಞಾನಗಳು ಪ್ರಚಲಿತಕ್ಕೆ ಬಂದಿದೆ. ಅಡುಗೆ ಕೆಲಸವನ್ನು ಸುಲಭಗೊಳಿಸಲು ಹೊಸ ಹೊಸ ಸಾಧನಗಳ ಪರಿಚಯವಾಗುತ್ತಲೇ ಇದೆ. ಒಂದೊಂದು ಅಡುಗೆಗೆ ಅಥವಾ ಬೇರೆ ಬೇರೆ ಅಡುಗೆಯ ವಿಧಾನಗಳಿಗೆ ಬೇರೆ ಬೇರೆ ರೀತಿಯ ಆಧುನಿಕ ಪಾತ್ರೆಗಳು, ಯಂತ್ರೋಪಕರಣಗಳು ಮಾರುಕಟ್ಟೆಯನ್ನು ಪ್ರವೇಶಿಸುತ್ತಲೇ ಇವೆ.
ಅವುಗಳ ಪೈಕಿ ಕುಕ್ಕರ್ ಇಂದು ಎಲ್ಲ ಮನೆಗಳಲ್ಲಿ ನೆಚ್ಚಿನ ಸಂಗಾತಿಯಾಗಿದೆ. ಅವಸರದಲ್ಲಿ ಅನ್ನ, ಸಾಂಬಾರ್, ಪಲಾವ್, ಉಪ್ಪಿಟ್ಟು, ಇಡ್ಲಿ ಮಾಡಲು ಕುಕ್ಕರ್ ಬಹೂಪಯೋಗಿ ಎಂದೆನಿಸಿ ಬಿಟ್ಟಿದೆ. ಕುಕ್ಕರ್ ಇಲ್ಲದೆ ಅಡುಗೆ ಕೆಲ ಸವೇ ನಡೆಯುವುದಿಲ್ಲ ಎಂಬಂಥ ಪರಿಸ್ಥಿತಿ ಇದೆ. ಮನೆಯಲ್ಲಿ ಏನೂ ನಡೆಯಲಾಗದ ಪರಿಸ್ಥಿತಿಯಿದೆ. ಹೀಗಾಗಿ ಅತ್ಯಾಧುನಿಕ ಮಾದರಿಯ ಕುಕ್ಕರ್ ಗಳು ಮಾರುಕಟ್ಟೆಯನ್ನು ಪ್ರವೇಶಿಸುತ್ತಲೇ ಇದೆ. ಎಲೆಕ್ಟ್ರಿಕ್ ಕುಕ್ಕರ್‌ನಿಂದ ಆರಂಭವಾಗಿ ಬಗೆ ಬಗೆಯ ಕುಕ್ಕರ್‌ಗಳು ಮನೆ ಇಂದು ಬಹುತೇಕ ಎಲ್ಲರ ಮನೆ ಸೇರಿವೆ.
ಇಂತಹ ಕಾಲದಲ್ಲಿಯೇ ಈಗ ಸ್ಮಾರ್ಟ್ ಕುಕ್ಕರ್‌ಗಳು ಮಾರುಕಟ್ಟೆಗೆ ಪರಿಚಿತವಾಗಿವೆ. ಎಲ್ಲವೂ ಆಟೊಮ್ಯಾಟಿಕ್ ರೀತಿಯಲ್ಲಿ ಬಳಸಬಹುದಾದ ವಿಧಾನವಿದು. ಅದರಲ್ಲಿಯೂ
ಈಗ ಸ್ಮಾರ್ಟ್ ಸ್ಲೋ ಕುಕ್ಕರ್‌ಗಳು ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿವೆ. ಕರಾವಳಿ ಮಾರುಕಟ್ಟೆಗೆ ಇದೊಂದು ವಿಭಿನ್ನ ಹಾಗೂ ಹೊಸ ಪರಿಚಯ. ಬೇರೆ ಬೇರೆ ಕಂಪೆನಿಯ ಹಾಗೂ ಬೇರೆ ಬೇರೆ ಶೈಲಿಯ ಕುಕ್ಕರ್‌ಗಳನ್ನು ಮಾರಾಟ ಮಾಡುತ್ತಿರುವ ಮಂಗಳೂರು ಮಾರುಕಟ್ಟೆಗೆ ಇದೊಂದು ಹೊಸ ಹೆಸರು. ಸದ್ಯ ಇದು ಮಂಗಳೂರು ಮಾರುಕಟ್ಟೆಯಲ್ಲಿ ಇಲ್ಲ. ಆನ್ ಲೈನ್ ನಲ್ಲಷ್ಟೇ
ದೊರೆಯು ತ್ತಿದೆ. ಮುಂದೊಂದು ದಿನ ಬರಬಹುದು ಎನ್ನುವುದು ಮಾರುಕಟ್ಟೆ ಪ್ರವೀಣರ ಅಭಿಪ್ರಾಯ.
ಅಂದಹಾಗೆ ಸದ್ಯ ಚೀನ ಸಹಿತ ಹೊರದೇಶದಲ್ಲಿ ಬಳಕೆಯಲ್ಲಿದೆ ಸ್ಮಾರ್ಟ್ ಸ್ಲೋ ಕುಕ್ಕರ್. ಇದರ ಬಳಕೆ ಬಗ್ಗೆ ಇಂಟರ್ನೆಟ್‌ನಲ್ಲಿ ಸಾಕಷ್ಟು ಮಾಹಿತಿ ಇದೆ. ಕುಕ್ಕರ್‌ಗೆ ಸಂಬಂಧಪಟ್ಟಂತೆ ಮೊಬೈಲ್ ಆ್ಯಪ್ ಬಳಸಿಕೊಂಡು ನಿಯಂತ್ರಿಸಬಹುದಾದ ವ್ಯವಸ್ಥೆ ಇದರಲ್ಲಿರುತ್ತದೆ. ಹೀಗಾಗಿ ಮನೆಯ ಯಾವುದೇ ಕೋಣೆಯಲ್ಲಿದ್ದರೂ ಕುಕ್ಕರ್ ಸೀಟಿ ಹೊಡೆದ ತತ್ ಕ್ಷಣ ಅಡುಗೆ ಮನೆಗೆ ಓಡಿ ಹೋಗಬೇಕಿಲ್ಲ.
ಬದ ಲಾಗಿ ಹತ್ತಿರ ಮೊಬೈಲ್ ಇಟ್ಟು ಕೊಂಡಿದ್ದರೆ ಸಾಕು ಆ ಮೂಲಕವೇ ಕುಕ್ಕರ್‌ನ ಸಮಗ್ರ ಚಟುವಟಿಕೆಯನ್ನು ನಿಯಂತ್ರಿಸಬಹುದು.
ಇದೆಲ್ಲದರ ಮಧ್ಯೆ ಇಕೋಸಿಸ್ಟಂ ಉದ್ಯಮಕ್ಕೆ ಹೊಸ ಕೊಡುಗೆಯಾಗಿ ಕ್ಸಿಯೋಮಿ ಹೊಸ ಉಪಬ್ರ್ಯಾಂಡ್ ಆಗಿರುವ ಎಂಐ ಇಕೋಸಿಸ್ಟಂ ಅನ್ನು ಪರಿಚಯಿಸುತ್ತಿದೆ. ಎಂಐ ಇಕೋಸಿಸ್ಟಂನಲ್ಲಿ ಕ್ಸಿಯೋಮಿ ಇಕೋಸಿಸ್ಟಂ ಸಹಯೋಗದಲ್ಲಿ ತಯಾರಿಸಿದ ಹಲವು ಉತ್ಪನ್ನಗಳಿವೆ. ಕಂಪೆನಿಯ ಮೊದಲ ಉತ್ಪನ್ನವನ್ನು ಎಂಐ ಇಂಡಕ್ಷನ್ ಹೀಟಿಂಗ್ ಪ್ರಶರ್ ರೈಸ್ ಕುಕ್ಕರ್ ಹೆಸರಿನಲ್ಲಿ ಇದು ಪರಿಚಯವಾಗಿದೆ.
ಇದರ 10,200 ರೂ. ಗೆ ಸಿಗುವ ಹೊಸ ರೈಸ್ ಕುಕ್ಕರ್ ಹೈ ಆ್ಯಂಡ್ ಜಪಾನೀ ಇಂಡಕ್ಷನ್ ಹೀಟಿಂಗ್ ಪ್ರಶರ್ ರೈಸ್ ಕುಕ್ಕರ್‌ಗಿಂತ ಶೇ.40ರಷ್ಟು ಕಡಿಮೆ ಬೆಲೆಯಲ್ಲಿ ಸಿಗಲಿದೆ. ವೆಬ್ ತಾಣದಲ್ಲಿ ಚೀನಾದಲ್ಲಿ ದೊರೆಯುತ್ತದೆ.
ಎಂಐ ಇಂಡಕ್ಷನ್ ಹೀಟಿಂಗ್ ಪ್ರಶರ್ ರೈಸ್ ಕುಕ್ಕರ್ ವೈಫೈ ಬಳಸುವ ಸ್ಮಾರ್ಟ್ ಗಜೆಟ್ ಆಗಿದ್ದು, ಎಂಐ ಹೋಮ್ ಆ್ಯಪ್ ಮೂಲಕ ನಿಯಂತ್ರಿಸಬಹುದು. ಉದಾಹರಣೆಗೆ ಅಕ್ಕಿ, ಬ್ರ್ಯಾಂಡ್ ಮತ್ತು ಮೂಲವನ್ನು ಗುರುತಿಸಲು ಬಳಕೆದಾರರು ಕುಕ್ಕರ್ ಅನ್ನು ಸ್ಕ್ಯಾನ್ ಮಾಡಬಹುದು. ಅಕ್ಕಿಯ ವಿಧಕ್ಕೆ ಅನುಗುಣವಾಗಿ ಸೂಕ್ತವಾಗಿ ಹೊಂದಿಕೊಳ್ಳುವ ಹೀಟಿಂಗ್ ವಿಧಾನವನ್ನು ಅನುಸರಿಸಬಹುದು.
ಆ್ಯಪ್ ಮೂಲಕ ಬಳಕೆದಾರರು ಖಾಸಗಿ ಆದ್ಯತೆಗಳನ್ನು ಈ ಮೂಲಕವೇ ಸೆಟ್ ಮಾಡಬಹುದು. ಆ್ಯಪ್‌ನಲ್ಲಿ ಕುಕ್ಕರ್ ಮೂಲಕ ಬಳಸಬಹುದಾದ ಇತರ ಅಡುಗೆ ವಿಧಾನಗಳೂ ಇವೆ. ಬ್ರೌನ್ ರೈಸ್, ಕ್ರಿಸ್ಪಿ ರೈಸ್ ಹಾಗೂ ಕೇಕ್‌ನ ವಿವರವೂ ಇದೆ. ಇತರ ಐಟಂಗಳನ್ನು ಬೇಯಿಸುವ ವಿಧಾನವನ್ನು ಬಳಕೆದಾರರು ಕಂಡುಕೊಳ್ಳಬೇಕಿಲ್ಲ. ಬದಲಾಗಿ ಅದನ್ನು ಆ್ಯಪ್ ಮೂಲಕ ಸೆಟ್ ಮಾಡಬಹುದು
ಬೇಕಾದಲ್ಲಿ ಸಾಗಿಸುವುದು ಸುಲಭ
ಸ್ಮಾರ್ಟ್ ಸ್ಲೋ ಕುಕ್ಕರ್ ನಲ್ಲಿ ಮಾಡಿದ ತಿಂಡಿ, ತಿನಸುಗಳನ್ನು ಬೇಕಾದಲ್ಲಿಗೆ ಸುಲಭವಾಗಿ ಒಯ್ಯಬಹುದು. ಇದರಲ್ಲಿ ಹ್ಯಾಂಡಲ್ ಇರುವುದರಿಂದ ಮತ್ತು ನೋಡಲು ಹಾಟ್ ಬಾಕ್ಸ್ ನಂತೆ ಕಾಣುವುದರಿಂದ ಬೇರೆ ಪಾತ್ರೆಗೆ ತಿಂಡಿ, ತಿನಸುಗಳನ್ನು ವರ್ಗಾಯಿಸದೇ ಇದರಲ್ಲಿಯೇ ತೆಗೆದುಕೊಂಡು ಹೋಗಬಹುದು. ಇದರಿಂದ ಅಡುಗೆ ಹೆಚ್ಚು ಹೊತ್ತು ಬಿಸಿಯಾಗಿರುವುದು. ಅಲ್ಲದೇ ಸಣ್ಣ ಗಾತ್ರದ ಕುಕ್ಕರ್ ಗಳೂ ಇದ್ದು ಇದರಲ್ಲಿ ಅಗತ್ಯಕ್ಕೆ ತಕ್ಕಷ್ಟು ಅಡುಗೆಯನ್ನು ಮಾಡಿ ಎಲ್ಲಿ ಬೇಕಾದರೂ ಕೊಂಡೊಯ್ಯಬಹುದು.
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.