ಮೋರ್ಟು-ಬೆಳ್ಳಾಲ-ಕೆರಾಡಿ ರಸ್ತೆ: ದುರಸ್ತಿ ಎಂದು?
Team Udayavani, Jan 20, 2019, 1:00 AM IST
ಆಜ್ರಿ: ಮೋರ್ಟು – ಬೆಳ್ಳಾಲ- ನಂದ್ರೋಳ್ಳಿ – ಕೆರಾಡಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಡಾಮರು ಕಿತ್ತು ಹೋಗಿ ಸಂಚಾರವೇ ದುಸ್ತರವೆನಿಸಿದೆ. ಸುಮಾರು 7 ಕಿ.ಮೀ. ಉದ್ದದ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಈ ಭಾಗದ ಜನ ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ.
ಸುಮಾರು 6 ವರ್ಷಗಳ ಹಿಂದೆ ಡಾಮರೀಕರಣ ವಾದ ರಸ್ತೆಯಲ್ಲಿ ಈಗ ಡಾಮರೇ ಇಲ್ಲದೇ ಮಣ್ಣಿನ ರಸ್ತೆಯಂತಾಗಿದೆ. ವಾಹನಗಳೆಲ್ಲ ಹೋಗುವಾಗ ಧೂಳಿ ನಿಂದಾಗಿ ಹಿಂದಿನಿಂದ ಚಲಿಸುವ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ.
ಪ್ರಮುಖ ರಸ್ತೆ
ಈ ರಸ್ತೆ ಮೋರ್ಟು ಹಾಗೂ ಬೆಳ್ಳಾಲದಿಂದ ಕೆರಾಡಿ, ನಂದ್ರೋಳ್ಳಿ, ವಂಡ್ಸೆ, ಮಾರಣಕಟ್ಟೆ ಕಡೆಗೆ ತೆರಳಲು ಪ್ರಮುಖವಾದ ರಸ್ತೆಯಾಗಿದೆ. ನೂರಾರು ಮಂದಿ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ.
ಬಸ್ ಬರುತ್ತದೆ
ಈ ರಸ್ತೆ ಇಷ್ಟೊಂದು ಹದಗೆಟ್ಟಿದ್ದರೂ ಇದೇ ಮಾರ್ಗವಾಗಿ ಕುಂದಾಪುರದಿಂದ ಬಸ್‌ವೊಂದು ಬರುತ್ತದೆ. ಕುಂದಾಪುರ – ನಂದ್ರೋಳ್ಳಿ – ವಂಡ್ಸೆ – ಬೆಳ್ಳಾಲ – ಮೂಡುಮಂದವಾಗಿ ಈ ಬಸ್ ಸಂಚರಿಸುತ್ತದೆ.
ದುರಸ್ತಿಯೇ ಆಗಿಲ್ಲ
ಈ ರಸ್ತೆ 6 ವರ್ಷಗಳ ಹಿಂದೆ ಮೊದಲ ಬಾರಿಗೆ ಡಾಮರೀಕರಣವಾಗಿತ್ತು. ಆ ಬಳಿಕ ಈ ವರೆಗೆ ಮರು ಡಾಮರೀಕರಣವೇ ಆಗಿಲ್ಲ. ಕನಿಷ್ಠ ಪಕ್ಷ ಹೊಂಡ – ಗುಂಡಿಗಳಿಗೆ ತೇಪೆ ಹಾಕುವ ಕಾರ್ಯ ಕೂಡ ಯಾರೂ ಮಾಡಿಲ್ಲ ಎನ್ನುವುದು ಇಲ್ಲಿನ ಜನರ ಆರೋಪ.
ಈ ಸಲವಾದರೂ ದುರಸ್ತಿಯಾಗಲಿ
ನಾವು ನಿತ್ಯ ಇದೇ ರಸ್ತೆಯಿಂದ ಸಂಚರಿಸುತ್ತಿದ್ದು, ಮೋರ್ಟು – ಬೆಳ್ಳಾಲ ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಇದೇ ಮಾರ್ಗವನ್ನು ಹೆಚ್ಚಿನವರು ಅವಲಂಬಿಸಿದ್ದಾರೆ. ಈ ಬಾರಿಯಾದರೂ ಈ ರಸ್ತೆಯನ್ನು ದುರಸ್ತಿ ಮಾಡಿದರೆ ತುಂಬಾ ಪ್ರಯೋಜನವಾಗಲಿದೆ. ಪ್ರತಿ ವರ್ಷ ಸಂಬಂಧಪಟ್ಟ ಎಲ್ಲ ಜನಪ್ರತಿನಿಧಿಗಳಿಗೂ ಈ ರಸ್ತೆ ಸರಿಪಡಿಸಲು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.
-ಮೋರ್ಟು, ಬೆಳ್ಳಾಲ ಗ್ರಾಮಸ್ಥರು
ಮರು ಡಾಮರು ಕಾಮಗಾರಿಗೆ ಪ್ರಯತ್ನ
ಮೋರ್ಟು- ಬೆಳ್ಳಾಲ- ಕೆರಾಡಿ ರಸ್ತೆ ಅಭಿವೃದ್ಧಿ ಕುರಿತಂತೆ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ, ಮುಂದಿನ ದಿನಗಳಲ್ಲಿ ಅನುದಾನ ಮೀಸಲಿಡಲಾಗುವುದು. ಈ ರಸ್ತೆಯ ಮರು ಡಾಮರೀಕರಣಕ್ಕೆ ಆದ್ಯತೆ ಮೇರೆಗೆ ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು.
-ಬಿ.ಎಂ. ಸುಕುಮಾರ್ ಶೆಟ್ಟಿ, ಬೈಂದೂರು ಶಾಸಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kadalekai Parishe: ಇಂದಿನಿಂದ ಬಸವನಗುಡಿ ಕಡಲೆಕಾಯಿ ಪರಿಷೆ
Parliament Winter Session: ಇಂದಿನಿಂದ ಸಂಸತ್ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.