ಹೊವಿಟ್ಜರ್ ಮೇಲೆ ಮೋದಿ ಸವಾರಿ
Team Udayavani, Jan 20, 2019, 1:30 AM IST
ಗಾಂಧಿನಗರ: ಮೇಕ್ ಇನ್ ಇಂಡಿಯಾ ಅಡಿಯಲ್ಲಿ ದೇಶಕ್ಕೆ ಸುಧಾರಿತ ಶಸ್ತ್ರಾಸ್ತ್ರಗಳನ್ನು ತಯಾರಿಸಲು ಎಲ್ ಆ್ಯಂಡ್ ಟಿ ಸಂಸ್ಥೆಯು ಗುಜರಾತ್ನಲ್ಲಿ ಸ್ಥಾಪಿಸಿರುವ ಶಸ್ತ್ರಾಸ್ತ್ರ ತಯಾರಿಕೆ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಲೋಕಾರ್ಪಣೆ ಮಾಡಿದರು. ಮೊದಲ ಹಂತದಲ್ಲಿ ಕೆ9 ವಜ್ರ ಸ್ವಯಂಚಾಲಿತ ಹೊವಿಟ್ಜರ್ ಗನ್ಗಳನ್ನು ಇಲ್ಲಿ ತಯಾರಿಸಲಾಗುತ್ತದೆ. ಮುಂದೆ ಇನ್ಫ್ಯಾಂಟ್ರಿ ಕಾಂಬ್ಯಾಟ್ ವಾಹನಗಳು ಹಾಗೂ ಯುದ್ಧ ಟ್ಯಾಂಕ್ಗಳನ್ನು ನಿರ್ಮಾಣ ಮಾಡಲಿದೆ. ಈ ಸಮಾರಂಭದ ವೇಳೆ ಪ್ರಧಾನಿ ಮೋದಿ ಅವರೂ ಹೊವಿಟ್ಜರ್ ಗನ್ ವಾಹನ ಚಲಾಯಿಸಿದರು.
ಬಿಡಿ ಭಾಗಕ್ಕೆ ಕೈಯೊಡ್ಡಬೇಕಿಲ್ಲ
ದೇಶದಲ್ಲೇ ಈ ಗನ್ಗಳನ್ನು ಅಭಿವೃದ್ಧಿಪಡಿಸುವುದರ ಪ್ರಮುಖ ಅನುಕೂಲವೆಂದರೆ ಈ ಗನ್ಗಳಿಗೆ ಅಗತ್ಯವಿರುವ ಯಾವುದೇ ಬಿಡಿಭಾಗಕ್ಕಾಗಿ ಸೇನೆ ವಿದೇಶಿ ಕಂಪೆನಿಗಳ ಮೊರೆ ಹೋಗಬೇಕಿಲ್ಲ. ಈ ಗನ್ಗಳು 40 ವರ್ಷಗಳ ಬಾಳಿಕೆ ಅವಧಿ ಹೊಂದಿದ್ದು, ಈ ವೇಳೆ ಎಲ್ ಆ್ಯಂಡ್ ಟಿ ಸ್ವತಃ ಬಿಡಿಭಾಗಗಳನ್ನು ಸೇನೆಗೆ ಒದಗಿಸಲಿದೆ.
ಅತ್ಯಾಧುನಿಕ ಕೆ9 ವಜ್ರ
ಸ್ವಯಂ ಚಾಲಿತ ಹೊವಿಟ್ಜರ್ ಗನ್ಗಳನ್ನು ನಿರ್ಮಾಣ ಮಾಡುತ್ತಿರುವ ಲಾರ್ಸನ್ ಆ್ಯಂಡ್ ಟೂಬ್ರೋ ಇಡೀ ತಂಡವನ್ನು ನಾನು ಅಭಿನಂದಿಸುತ್ತೇನೆ. ಇದು ದೇಶದ ರಕ್ಷಣಾ ಕ್ಷೇತ್ರದಲ್ಲಿ ಅತ್ಯಂತ ಗಮನಾರ್ಹ ಹೆಜ್ಜೆಯಾಗಿದೆ.
-ನರೇಂದ್ರ ಮೋದಿ, ಪ್ರಧಾನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.