ಸಾಹಿತ್ಯ ಸಂಭ್ರಮದಲ್ಲಿ “ಸೈನ್ಯದ ಅವಹೇಳನ’ ಗದ್ದಲ
Team Udayavani, Jan 20, 2019, 12:45 AM IST
ಧಾರವಾಡ: ಗಡಿಗಳಲ್ಲಿ ನಮ್ಮ ಸೈನಿಕರು ಮಹಿಳೆಯರ ಮೇಲೆ ನಿರಂತರ ಅತ್ಯಾಚಾರ ಮಾಡು ತ್ತಿದ್ದಾರೆ. ಇದರಿಂದಾಗಿ ಗಡಿಭಾಗದ ಜನರು ಸೇನೆ ಯನ್ನು ವಿರೋ ಧಿಸುತ್ತಾರೆ. ಗಡಿ ಭಾಗದ ಜನ ರೊಂದಿಗೆ ಕ್ರೂರವಾಗಿ ವರ್ತಿಸುತ್ತಾರೆ ಎಂಬ ಹಿರಿಯ ಸಾಹಿತಿ ಡಾ| ಶಿವ ವಿಶ್ವನಾಥನ್ ಹೇಳಿಕೆ ಸಾಹಿತ್ಯ ಸಂಭ್ರಮದಲ್ಲಿ ವಾಗ್ವಾದಕ್ಕೆ ಕಾರಣವಾಯಿತು.
ಸಾಹಿತ್ಯ ಸಂಭ್ರಮದ “ರಾಷ್ಟ್ರೀಯತೆ: ಸಮಕಾಲೀನ ಸಂದರ್ಭದಲ್ಲಿನ ವಾಗ್ವಾದಗಳು’ ಗೋಷ್ಠಿಯಲ್ಲಿ ಮಾತನಾಡಿ, ಕಾಶ್ಮೀರ, ಅಸ್ಸಾಂ ಸೇರಿ ಮಹಿಳೆಯರ ಮೇಲೆ ಸೈನಿಕರು ಅತ್ಯಾಚಾರಗೈಯುತ್ತಿರುವ ಘಟನೆಗಳು ನಡೆಯುತ್ತಿವೆ. ಕಾಶ್ಮೀರ ಗಲಭೆಯ ಒಂದು ಮುಖದ ದರ್ಶನ ಮಾತ್ರ ನಮಗೆ ಆಗುತ್ತಿದೆ. ಹಿಂದಿನ ಸತ್ಯಗಳನ್ನು ಮುಚ್ಚಿಡಲಾಗುತ್ತಿದೆ ಎಂದರು.
ಇದಕ್ಕೆ ಕೆಲ ಪ್ರೇಕ್ಷಕರು ಆಕ್ಷೇಪ ವ್ಯಕ್ತಪಡಿಸಿ, ಕೇವಲ ಭಾರತೀಯ ಸೈನ್ಯದ ಲೋಪಗಳನ್ನಷ್ಟೇ ಹೇಳಿ, ಪಾಕ್‌ನ ಯಾವುದೇ ತಪ್ಪಿನ ಕುರಿತು ಮಾತನಾಡದಿರುವುದು ಸರಿಯಲ್ಲ ಎಂದು ಆಕ್ಷೇಪಿಸಿ ಮಾತನಾಡದಂತೆ ತಡೆದರು. ಮೇಜರ್ ಸಿದ್ಧಲಿಂಗಯ್ಯ ಸಹ ಶಿವ ವಿಶ್ವನಾಥನ್ ಹೇಳಿಕೆ ಖಂಡಿಸಿದರು. ಭಾರತೀಯ ಸೈನ್ಯಕ್ಕೆ ಅಪಮಾನವಾಗಿದೆ. ಇಂತಹ ಹೇಳಿಕೆಗಳಿಂದ ಜನರಿಗೆ ತಪ್ಪು ಸಂದೇಶ ರವಾನಿಸಲಾಗುತ್ತಿದೆ ಎಂದು ವಿರೋ ಧಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.