ಇಸ್ಕಾನ್‌ನಲ್ಲಿ ಶ್ರೀಕೃಷ್ಣಬಲರಾಮ ರಥಯಾತ್ರೆ
Team Udayavani, Jan 20, 2019, 6:36 AM IST
ಬೆಂಗಳೂರು: ರಾಜಾಜಿನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಇಸ್ಕಾನ್ ದೇವಸ್ಥಾನದಲ್ಲಿ ಶನಿವಾರ ಶ್ರೀಕೃಷ್ಣ ಬಲರಾಮ ರಥಯಾತ್ರೆ ಸಂಭ್ರಮ ಭಕ್ತಿಪೂರ್ವಕವಾಗಿ ನಡೆಯಿತು. 34ನೇ ವಾರ್ಷಿಕ ಉತ್ಸವಕ್ಕೆ ಮಂತ್ರಾಲಯ ಮಠಾಧೀಶರಾದ ಸುಬುಧೇಂದ್ರ ತೀರ್ಥರು ಚಾಲನೆ ನೀಡಿದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದು, ಹರೇ ಕೃಷ್ಣ ಮಹಾಮಂತ್ರವನ್ನು ಜಪಿಸುತ್ತಾ ಆನಂದ ಸಾಗರದಲ್ಲಿ ಮಿಂದೆದ್ದರು.
ಶ್ರೀಕೃಷ್ಣಬಲರಾಮರ ಮೂರ್ತಿಯನ್ನು ಮಂದಿರದಿಂದ ಭವ್ಯ ಮೆರವಣಿಗೆಯಲ್ಲಿ ಕರೆತಂದು, ರಥದಲ್ಲಿ ಇರಿಸಿ, ಮಂದಿರದ ಸುತ್ತಲಿನ ರಸ್ತೆಯಲ್ಲಿ ರಥ ಸಾಗಿ ಬಂದಿದ್ದು, ಹಾದಿಯೂದ್ಧಕ್ಕೂ ಸಂಕೀರ್ತನೆ ಮತ್ತು ಪ್ರಸಾದ ವಿತರಣೆ ನಡೆಯಿತು. ರಥವನ್ನು ವರ್ಣರಂಜಿತವಾಗಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಸುಮಾರು ಐನೂರು ಜನರು ಒಮ್ಮೆಗೆ ರಥವನ್ನು ಎಳೆಯಬಹುದಾದ ವ್ಯವಸ್ಥೆ ಮಾಡಲಾಗಿದ್ದು, 26 ಅಡಿ ಎತ್ತರದ ಆಧೂನಿಕ ಹಾಗೂ ಸಾಂಪ್ರದಾಯಿಕ ಶೈಲಿಯ ರಥ ನಿರ್ಮಾಣ ಮಾಡಲಾಗಿತ್ತು. ರಥಯಾತ್ರೆಯ ನಂತರ ಪ್ರಸಾದ ವಿತರಣೆ ನಡೆಯಿತು. ಇಸ್ಕಾನ್ ಬೆಂಗಳೂರು ಅಧ್ಯಕ್ಷ ಮಧು ಪಂಡಿತ್ ದಾಸ, ಶಾಸಕ ಕೆ.ಗೋಪಾಲಯ್ಯ, ಉಪ ಮೇಯರ್ ಭದ್ರೇಗೌಡ ಮೊದಲಾದವರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.