ಗುರುಪುರ: ಗುತ್ತುದ ವರ್ಸೊದ ಪರ್ಬೊ; ಚಾಲನೆ
Team Udayavani, Jan 20, 2019, 6:37 AM IST
ಗುರುಪುರ: ಬ್ರಹ್ಮಶ್ರೀ ಶಿರೋಮಣಿ ಕೆ.ಎಸ್. ನಿತ್ಯಾನಂದ ಅವರ ಮಾರ್ಗದರ್ಶನದಲ್ಲಿ ಫಲ್ಗುಣಿ ನದಿ ತಟಕಾದ ಮಹಾಕಾಲೇಶ್ವರ ಪ್ರಾಂಗಣದಲ್ಲಿ ಶ್ರೀರುದ್ರ ಹೋಮ ಆರಂಭಗೊಂಡು ಬೆಳಗ್ಗೆ 10 ಗಂಟೆಗೆ ಪೂರ್ಣಾಹುತಿಯೊಂದಿಗೆ ಸಂಪನ್ನಗೊಂಡಿತು. ಪಾರಂಪರಿಕ ಶೈಲಿಯಲ್ಲಿ ಪಬೊರ್ದ ಸಿರಿಯನ್ನು ಉದ್ಘಾಟಿಸಲಾಯಿತು.
ಬಳಿಕ ವಿವಿಧ ರೀತಿಯ ಸರಕು- ಮಳಿಗೆಗಳ ಪ್ರದರ್ಶನ ಮತ್ತು ಮಾರಾಟ ಇತ್ಯಾ ದಿಗಳ ಉದ್ಘಾಟನೆ, ವಿಚಾರಗೋಷ್ಠಿಗಳು ನಡೆಯಿತು. ಅಜಿತ್ ಕುಮಾರ್ ಮಾಲಾಡಿ, ಗುರುರಾಜ ಮಾಡ ಮಾತನಾಡಿದರು.
ತುಳುನಾಡಿನಲ್ಲಿ ಸಾವಿರಕ್ಕೂ ಅಧಿಕ ಗುತ್ತುಗಳಿದ್ದು, ಉಳಿಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದೇವೆ. ಇಂದು ಗುತ್ತುಗಳು ಕೇವಲ ಮದುವೆ ಆಮಂತ್ರಣ ಪತ್ರಿಕೆಗಳಿಗಷ್ಟೇ ಸೀಮಿತವಾಗಿದ್ದು, ಅವುಗಳ ಪಾರಂಪರಿಕ ಸಂದೇಶ ನೀಡುವ ಕೆಲಸ ನಡೆಯಬೇಕು ಎಂದು ಗುತ್ತು-ಹುಟ್ಟು- ಪರಂ ಪರೆ-ಆಶಯ ವಿಷಯದಲ್ಲಿ ಸಾಮಾಜಿಕ ದೃಷ್ಟಿಕೋನದ ಬಗ್ಗೆ ವಿದ್ವಾಂಸ ಡಾ| ವೈ.ಎನ್. ಶೆಟ್ಟಿ ಪಡುಬಿದ್ರಿ ವಿಚಾರ ಮಂಡಿಸಿದರು.
ಧಾರ್ಮಿಕ ಮತ್ತು ಆಧ್ಯಾತ್ಮಿಕ ದೃಷ್ಟಿಕೋನ ಬಗ್ಗೆ ವಿದ್ವಾಂಸ ಕೆ.ಎಲ್. ಕುಂಡಂತ್ತಾಯ ವಿಚಾರ ಮಂಡಿಸಿದರು. ಗುತ್ತು ಪರಂಪರೆಗಳು ನಮ್ಮಿಂದಲೇ ನಾಶಗೊಳ್ಳುತ್ತ ಬರುತ್ತಿದೆ. ಇಂದಿನ ರಾಜಕೀಯ ಸ್ಥಿತಿಯಿಂದಾಗಿ ಧರ್ಮದ ಚಿಂತನೆ ಕಡಿಮೆಯಾಗುತ್ತಿದೆ. ನಾವೆಲ್ಲ ಏಕ ಮನಸ್ಸಿನಿಂದ ಒಗ್ಗಟ್ಟಾಗಿ ಗುತ್ತು- ಬಾವ- ಬೀಡು- ಪರಡಿಗಳನ್ನು ಉಳಿಸಿ ಇವುಗಳ ಪುನರುತ್ಥಾನಕ್ಕೆ ಶ್ರಮಿಸಬೇಕು ಎಂದು ಗುತ್ತು-ಬೀಡು-ಬಾವ-ಪರಡಿಗಳು ಒಂದು ಚಿಂತನೆ ಧಾರ್ಮಿಕ ವಿಚಾರದಲ್ಲಿ ತಿಮರೋಡಿ ಬೀಡಿನ ಮಹೇಶ್ ಶೆಟ್ಟಿ ಅಭಿಪ್ರಾಯಪಟ್ಟರು.
ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಮಾತನಾಡಿದರು. ಸಂಸದ ನಳಿನ್ ಕುಮಾರ್ ಕಟೀಲು, ಹರಿಕೃಷ್ಣ ಬಂಟ್ವಾಳ, ಜಗದೀಶ್ ಅಧಿಕಾರಿ ಮೂಡುಬಿದಿರೆ ಉಪಸ್ಥಿತರಿದ್ದರು.
ಪ್ರಶ್ನೋತ್ತರದ ವೇಳೆ ಸಭಿಕರ ಪ್ರಶ್ನೆಗಳಿಗೆ ಬ್ರಹ್ಮಶ್ರೀ ಶಿರೋಮಣಿ ಕೆ.ಎಸ್. ನಿತ್ಯಾನಂದ ಅವರು ಉತ್ತರಿಸಿದರು. ಗುತ್ತುಗಳ ಗಡಿಕಾರರ ಗಡಿ ನಿರ್ವಹಣೆ ಮತ್ತು ನಡೆ ನುಡಿ ವಿಷಯದಲ್ಲಿ ಸಾಮಾಜಿಕ ದೃಷ್ಟಿಕೋನದ ಬಗ್ಗೆ ತಿಂಗಳೆ ಮನೆತನ ಹೆಬ್ರಿಯ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಧಾರ್ಮಿಕ ಮತ್ತು ಆಧ್ಯಾತ್ಮಿಕ ದೃಷ್ಟಿಕೋನದ ಬಗ್ಗೆ ವೇದ ವಿದ್ವಾಂಸ ಡಾ| ಯಾಜಿ ನಿರಂ ಜನ್ ಭಟ್ ವಿಚಾರ ಮಂಡಿಸಿದರು. ಸುನಿಲ ಪ್ರಭಾಕರ ಶೆಟ್ಟಿ ವಂದಿಸಿದರು.
ಗೌರವಾರ್ಪಣೆ
ವಿಚಾರ ಗೋಷ್ಠಿಯಲ್ಲಿ ಉಪಸ್ಥಿ ತರಿರುವ ಗುತ್ತು- ಬೀಡು-ಬಾವ- ಬಾರಿಕೆ- ಮತ್ತು ಪರಡಿ ಮನೆತನಗಳ ಗಡಿಕಾರರಿಗೆ, ಮುಕ್ಕಾ ಲ್ದಿಗಳಿಗೆ, ಪ್ರತಿನಿಧಿಗಳಿಗೆ ಕೆ.ಎಸ್. ನಿತ್ಯಾನಂದ ಅವರು ಗೌರವ ಸಮರ್ಪಿಸಿದರು.
ಮಧ್ಯಾಹ್ನ ಅನ್ನಸಂತರ್ಪಣೆಯ ಜತೆಗೆ ಆಗಮಿಸಿದವರಿಗೆ ಒಂದೊಂದು ಕಲ್ಲಂಗಡಿ ಹಣ್ಣನ್ನು ವಿತರಿಸಲಾಯಿತು. ಈ ವೇಳೆ ಗೋಳಿದಡಿಗುತ್ತು ವರ್ಧಮಾನ ಶೆಟ್ಟಿ, ಜಗದೀಶ್ ಅಧಿಕಾರಿ, ವಿದ್ವಾಂಸ ಡಾ| ವೈ.ಎನ್. ಪಡುಬಿದ್ರಿ, ಕೆ.ಎಲ್. ಕುಂಡಂತ್ತಾಯ, ಜಯ ಶೆಟ್ಟಿ ಯಾನೆ ಸದಾಶಿವ ಶೆಟ್ಟಿ, ದಿವಾಕರ ಸಾಮಾನಿ ಮತ್ತಿತರರು ಉಪಸ್ಥಿತರಿದ್ದರು. ಪರಮಾನಂದ ಸಾಲ್ಯಾನ್, ನವೀನ್ ಶೆಟ್ಟಿ ಎಡ್ಮೆಮಾರು ಕಾರ್ಯಕ್ರಮ ನಿರೂಪಿಸಿದರು.
ವಿಚಾರಗೋಷ್ಠಿ
ಬ್ರಿಟಿಷರ ಆಳ್ವಿಕೆ, ಪುರೋಹಿತಶಾಹಿ ನೀತಿ, ಸಾಮಾಜಿಕ ಸ್ಥಿತಿಗತಿ ಮುಂತಾದ ವ್ಯವಸ್ಥೆಗಳಿಂದ ಗುತ್ತು-ಬಾವ-ಬಾರಿಕೆ-ಪರಡಿ ವ್ಯವಸ್ಥೆ ಸೊರಗುತ್ತಾ ಬರುತ್ತಿದೆ. ಅದನ್ನು ಮತ್ತೆ ಆರಂಭಿಸಿ ಸತ್ಯ-ಧರ್ಮ-ನ್ಯಾಯ ವ್ಯವಸ್ಥೆ ಪುನಃಸ್ಥಾಪಿಸುವ ಉದ್ದೇಶದಿಂದ ಗುತ್ತು ನಿಮಗೆಷ್ಟು ಗೊತ್ತು ಎನ್ನುವ ಚಿಂಥನ ಮಂಥನ ನಡೆಸಲಾಗಿದೆ. ಈ ವ್ಯವಸ್ಥೆ ಇಲ್ಲಿಂದಲ್ಲೇ ಹುಟ್ಟಿ ಹೆಮ್ಮರವಾಗಿ ಬೆಳೆದು ಸಮಾಜಕ್ಕೆ ನೆಮ್ಮದಿಯನ್ನು ನೀಡುವಂತಾಗಬೇಕು ಎಂದು ಗುತ್ತು ನಿಮಗೆಷ್ಟು ಗೊತ್ತು ವಿಚಾರಗೋಷ್ಠಿಯಲ್ಲಿ ಗುರುಪುರ ಗೋಳಿದಡಿಗುತ್ತಿನ ಗಡಿಕಾರ ವರ್ಧಮಾನ ದುರ್ಗಪ್ರಸಾದ್ ಶೆಟ್ಟಿ ಅಭಿಪ್ರಾಯ ಮಂಡಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.