ಪಾಕಿಸ್ಥಾನದಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಖರೀದಿ
Team Udayavani, Jan 20, 2019, 8:10 AM IST
ನವದೆಹಲಿ: ಇತ್ತೀಚೆಗಷ್ಟೇ ಅಮೆರಿಕಾದ ಬಳಿಯಿಂದ 145 ಎಂ177 ಹೌವಿಟ್ಜರ್ ಗನ್ ಗಳ ಖರೀದಿಗೆ ಭಾರತ ನಿರ್ಧರಿಸಿರುವ ಬೆನ್ನಲ್ಲೇ ನೆರೆ ರಾಷ್ಟ್ರ ಪಾಕಿಸ್ಥಾನವೂ ಸಹ ಭಾರೀ ಪ್ರಮಾಣದ ಮದ್ದುಗುಂಡುಗಳ ಖರೀದಿಗೆ ನಿರ್ಧರಿಸುವ ಅಂಶ ಗುಪ್ತಚರ ಇಲಾಖೆಗಳ ಮಾಹಿತಿಯಿಂದ ಹೊರಬಿದ್ದಿದೆ.
ತನ್ನ ಬಳಿಯಲ್ಲಿರುವ ಹೌವಿಟ್ಜರ್ ಗನ್ ಗಳಿಗೆ ಸುಮಾರು ಒಂದು ಲಕ್ಷ ಶೆಲ್ ಗಳನ್ನು ಖರೀದಿಸಲು ಪಾಕಿಸ್ಥಾನ ಇಟಲಿ ದೇಶದೊಂದಿಗೆ ಇತ್ತೀಚೆಗಷ್ಟೇ ಒಪ್ಪಂದ ಮಾಡಿಕೊಂಡಿದೆ ಎಂಬ ಮಾಹಿತಿ ಹೊರಬಿದ್ದಿದೆ. ಮತ್ತು ಈ ಶೆಲ್ ಗಳನ್ನು ಇಟಲಿ ಸಧ್ಯದಲ್ಲಿಯೇ ಪಾಕಿಸ್ಥಾನಕ್ಕೆ ಪೂರೈಸುವ ಸಾದ್ಯತೆಗಳಿವೆ. ಇನ್ನು ಭಾರತದ ಬಳಿಯಲ್ಲಿರುವ ಎಂ777 ಹೌವಿಟ್ಜರ್ ಗೆ ಬದಲಾಗಿ ಪಾಕ್ 121 ಹೊಸ ಹೌವಿಟ್ಜರ್ ಗನ್ ಗಳನ್ನೂ ಸಹ ಇಟಲಿಯಿಂದ ಖರೀದಿಸಿರುವ ಕುರಿತಾಗಿ ಗುಪ್ತಚರ ಇಲಾಖೆಗೆ ಮಾಹಿತಿ ಲಭ್ಯವಾಗಿದೆ. ಭಾರತ ಇತ್ತೀಚೆಗಷ್ಟೇ ಅಮೆರಿಕಾದಿಂದ 145 ಎಂ177 ಹೌವಿಟ್ಜರ್ ಗನ್ ಗಳ ಖರೀದಿಗೆ ನಿರ್ಧರಿಸಿತ್ತು.
ಭಾರತ – ಪಾಕ್ ಗಡಿಬಾಗದುದ್ದಕ್ಕೂ ಉಗ್ರರ ನುಸುಳುವಿಕೆಗೆಗೆ ಭಾರತೀಯ ಸೇನೆ ಭಾರೀ ಪ್ರತಿರೋಧ ನೀಡುತ್ತಿರುವ ಕಾರಣದಿಂದ ತನ್ನ ಸೇನಾ ಕಾರ್ಯತಂತ್ರವನ್ನು ಬದಲಿಸಿರುವಂತೆ ಕಂಡುಬಂದಿರುವ ಪಾಕಿಸ್ಥಾನ ಇದೀಗ ಈ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಖರೀದಿಗೆ ಮುಂದಾಗಿದೆ ಎಂದು ತಿಳಿದುಬಂದಿದೆ. ತನ್ನ ಪರಮಾಪ್ತ ಮಿತ್ರರಾಷ್ಟ್ರ ಚೀನಾದಿಂದ ಈ ಶಸ್ತ್ರಾಸ್ತ್ರಗಳನ್ನು ಖರೀದಿಸದೇ ಇಟಲಿಯಿಂದ ಇವುಗಳನ್ನು ಖರೀದಿಸುತ್ತಿರುವುದೂ ಸಹ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Average Income: ದೇಶದ ಗ್ರಾಮ ಪಂಚಾಯ್ತಿ ಆದಾಯ ಕೇವಲ 59 ಮಾತ್ರ
Manipur ಉದ್ವಿಗ್ನ: ಇಬ್ಬರು ಸಚಿವರು,ಐವರು ಶಾಸಕರ ಮನೆಗಳಿಗೆ ಬೆಂಕಿ!
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
MUST WATCH
ಹೊಸ ಸೇರ್ಪಡೆ
GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!
Court Judgement: ತಪ್ಪಿತಸ್ಥ ಎಂದಾದರೆ ಮಾತ್ರ ರಾಜೀನಾಮೆ ನೀಡಬೇಕು: ಜಿ.ಟಿ.ದೇವೇಗೌಡ
Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ
Average Income: ದೇಶದ ಗ್ರಾಮ ಪಂಚಾಯ್ತಿ ಆದಾಯ ಕೇವಲ 59 ಮಾತ್ರ
Ration Card: ರಾಜ್ಯದಲ್ಲಿ ಪಡಿತರ ನೀಡಲು ಹಣದ ಕೊರತೆ ಇಲ್ಲ: ಸಚಿವ ಮುನಿಯಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.