ಮೊಬೈಲ್‌ ಕೊಳ್ಳಬೇಕೆ? ಬೆಸ್ಟ್‌ ಆಫ‌ರ್ ಬಂದಿದೆ ನೋಡಿ!


Team Udayavani, Jan 21, 2019, 12:30 AM IST

amazon-flipkart.jpg

ವರ್ಷಕ್ಕೆ ನಾಲ್ಕೈದು ಬಾರಿ ಮಾತ್ರ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಗಳು ರಿಯಾಯಿತಿ ಮಾರಾಟ ಮಾಡುತ್ತವೆ. ಅದರಲ್ಲಿ ಗಣರಾಜ್ಯೋತ್ಸವ ಆಫ‌ರ್‌ ಸಹ ಒಂದು. ಈ ಬಾರಿ ಜ. 20 ರಿಂದ 23 ರವರೆಗೆ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಆಫ‌ರ್‌ಗಳನ್ನು ನೀಡಿವೆ. ಮಾಮೂಲಿ ದಿನಗಳಿಗಿಂತ ಕಡಿಮೆ ದರದಲ್ಲಿ ಮೊಬೈಲ್‌ ಮತ್ತಿತರ ಗ್ಯಾಜೆಟ್‌ ದೊರಕುತ್ತವೆ. ಅದರ ಬಗ್ಗೆ ಸಣ್ಣ ಮಾಹಿತಿ ಇಲ್ಲಿದೆ.

ಸಾಮಾನ್ಯವಾಗಿ ಸ್ಮಾರ್ಟ್‌ ಫೋನ್‌ಗಳ ದರ ಆಫ್ಲೈನ್‌ (ಅಂಗಡಿಗಳಲ್ಲಿ ಮಾರಾಟ) ಗಿಂತ ಆನ್‌ಲೈನ್‌ ನಲ್ಲಿ ಕಡಿಮೆ ಇರುತ್ತದೆ. ಕೆಲವೊಂದು ಕಂಪೆನಿಗಳು ಆನ್‌ಲೈನ್‌ ಮಾರಾಟವನ್ನೇ ಮುಖ್ಯ ಗುರಿಯಾಗಿರಿಸಿಕೊಂಡಿರುತ್ತವೆ. ಆಫ್ಲೈನ್‌ ಮಾರಾಟಕ್ಕಾಗಿ ತಯಾರಿಸಿರುವ ಮೊಬೈಲ್‌ ದರ ಆನ್‌ಲೈನ್‌ಗಿಂತ  ಶೇ. 50ರಷ್ಟು ಹೆಚ್ಚಿರುತ್ತದೆ. ಹಂಚಿಕೆದಾರರ, ಮಾರಾಟಗಾರರ ಕಮಿಷನ್‌ ಅನ್ನು ಕೊಡಬೇಕಾಗಿರುವುದರಿಂದ ಕಂಪೆನಿಗಳು ಗ್ರಾಹಕನ ಮೇಲೆಯೇ ಆ ಭಾರ ಹಾಕಿರುತ್ತವೆ. ಆನ್‌ಲೈನ್‌ ಮಾರಾಟದ ಮೊಬೈಲ್‌ಗ‌ಳ ದರ ಮೊದಲೇ ಕಡಿಮೆ ಇರುತ್ತದೆ ಅಂತ ಹೇಳಿದೆನಲ್ಲ, ಆ ದರ ಮತ್ತಷ್ಟು ಕಡಿಮೆಯಾಗುವ ಸಂದರ್ಭಗಳು ವರ್ಷದಲ್ಲಿ ನಾಲ್ಕೈದು ಬಾರಿ ಬರುತ್ತದೆ. ಆನ್‌ಲೈನ್‌ ಮಾರಾಟ ದೈತ್ಯರಾದ ಅಮೆಜಾನ್‌, ಫ್ಲಿಪ್‌ಕಾರ್ಟ್‌, ಪೇ ಟಿಎಂ ಗಳು ಕೆಲವಾರು ಸಂದರ್ಭಗಳಲ್ಲಿ ವಿಶೇಷ ಆಫ‌ರ್‌ ನೀಡುತ್ತವೆ. ಈಗ ಗಣರಾಜ್ಯೋತ್ಸವದ ಅಂಗವಾಗಿ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌  ಜ. 20 ರಿಂದ 23ರವರೆಗೆ ವಿಶೇಷ ಮಾರಾಟ ಮೇಳ ಹಮ್ಮಿಕೊಂಡಿವೆ. ಅಮೆಜಾನ್‌  ಗ್ರೇಟ್‌ ಇಂಡಿಯನ್‌ ಸೇಲ್‌, ಜ. 20 ರಿಂದ 23ರವರೆಗೆ ನಡೆದರೆ, ಫ್ಲಿಪ್‌ಕಾರ್ಟ್‌ ದಿ ರಿಪಬ್ಲಿಕ್‌ ಡೇ ಸೇಲ್‌ ಅನ್ನು ಜ. 20 ರಿಂದ 22ರವರೆಗೆ ಹಮ್ಮಿಕೊಂಡಿದೆ. ಈ ಸೇಲ್‌ಗ‌ಳಲ್ಲಿ ಮೊಬೈಲ್‌ ಸೇರಿದಂತೆ ಎಲೆಕ್ಟ್ರಾನಿಕ್ಸ್‌ ಗ್ಯಾಜೆಟ್‌ಗಳಿಗೆ ನೈಜ ರಿಯಾಯಿತಿ ದೊರಕುತ್ತದೆ. ಈ ಮಾರಾಟ ಮೇಳದಲ್ಲಿ ಅನೇಕ ಮೊಬೈಲ್‌ ಫೋನ್‌ಗಳ ಮಾರಾಟ ದರವನ್ನು ಕಡಿತಗೊಳಿಸಲಾಗುತ್ತದೆ. ಅಲ್ಲದೇ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳನ್ನು ಬಳಸಿ  ಕೊಂಡರೆ ಇನ್ನಷ್ಟು ರಿಯಾಯಿತಿ ದೊರಕುತ್ತದೆ. 

ಅಮೆಜಾನ್‌ ಮಾರಾಟದಲ್ಲಿ ಎಚ್‌ಡಿಎಫ್ಸಿ ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ ಮೂಲಕ ಕೊಂಡರೆ ಶೇ. 10ರಷ್ಟು ತಕ್ಷಣದ ರಿಯಾಯಿತಿ ದೊರಕಲಿದೆ. ಫ್ಲಿಪ್‌ಕಾರ್ಟ್‌ ಮೂಲಕ ಕೊಂಡರೆ ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ಗೆ ಶೇ. 10ರಷ್ಟು ತಕ್ಷಣವೇ ರಿಯಾಯಿತಿ ದೊರಕಲಿದೆ. (ಗಮನಿಸಿ ಶೇ. 10ರಷ್ಟು ರಿಯಾಯಿತಿ 2 ಸಾವಿರ ಅಥವಾ 1500  ರೂ.ಗಳಷ್ಟು ಮಾತ್ರ ಸೀಮಿತವಾಗಿರುತ್ತದೆ. 10 ಸಾವಿರದ ಮೊಬೈಲ್‌ಗೆ 1 ಸಾವಿರ, 20 ಸಾವಿರದ ಮೊಬೈಲ್‌ಗೆ 2 ಸಾವಿರ. 30 ಸಾವಿರ ರೂ. ಮೊಬೈಲ್‌ಗ‌ೂ 2 ಸಾವಿರವೇ. 1500 ರೂ. ರಿಯಾಯಿತಿ ಇದ್ದರೆ 1500.  ಆಫ‌ರ್‌ ಸಂದರ್ಭದಲ್ಲಿ ಗಮನಿಸಿ) ಉದಾಹರಣೆಗೆ: ಆನರ್‌ ಪ್ಲೇ ಮೊಬೈಲ್‌ಗೆ ಅಮೆಜಾನ್‌ನಲ್ಲಿ ಆಫ‌ರ್‌ ಇಲ್ಲದ ದಿನಗಳಲ್ಲಿ 20 ಸಾವಿರ ರೂ. ದರವಿದೆ. ಅದು ಜ. 20 ರಿಂದ 23 ರವರೆಗೆ 14 ಸಾವಿರ ರೂ.ಗಳಿಗೆ ದೊರಕಲಿದೆ. ಅಲ್ಲದೇ ಇದನ್ನು ಎಚ್‌ಡಿಎಫ್ಸಿ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಬಳಸಿ ಕೊಂಡರೆ, ಶೇ. 10ರಷ್ಟು ರಿಯಾಯಿತಿಯಂತೆ 1400 ರೂ. ಕಡಿತವಾಗಿ, 12600 ರೂ.ಗೇ ದೊರಕಲಿದೆ! ಹೇಳಬೇಕೆಂದರೆ 12600 ರೂ.ಗೆ ಇದು ನಿಜಕ್ಕೂ ಬೆಸ್ಟ್‌ ಆಫ‌ರ್‌. ಇದರಲ್ಲಿರುವುದು 35 ಸಾವಿರ ರೂ.ಗಳ ಫೋನ್‌ನಲ್ಲಿ ಬಳಸುವ ಕಿರಿನ್‌ 970 ಪ್ರೊಸೆಸರ್‌. ಅಂದರೆ ಗೇಮಿಂಗ್‌ ತುಂಬಾ ಸ್ಪೀಡ್‌ ಇರುತ್ತದೆ. ಇದರಲ್ಲಿ 16+2 ಮೆ.ಪಿ.ಹಿಂಬದಿ ಕ್ಯಾಮರಾ ಹಾಗೂ 16 ಮೆ.ಪಿ. ಮುಂಬದಿ ಕ್ಯಾಮರಾ ಇದೆ. 3750 ಎಂಎಎಚ್‌ ಭರ್ಜರಿ ಬ್ಯಾಟರಿ ಇದೆ.ಇನ್ನೊಂದು ವಿಶೇಷವೆಂದರೆ  ಯುಎಸ್‌ಬಿ ಟೈಪ್‌ ಸಿ, ಫಾಸ್ಟ್‌ ಚಾರ್ಜಿಂಗ್‌ (9ವಿ 2ಎ) ಸೌಲಭ್ಯವಿದೆ. 64 ಜಿಬಿ ಆಂತರಿಕ ಮೆಮೊರಿ, 4 ಜಿಬಿ ರ್ಯಾಮ್‌ ಇದೆ. 6.3 ಇಂಚ್‌ ಪರದೆ, ಎಫ್ಎಚ್‌ಡಿಪ್ಲಸ್‌ ಫ‌ೂಲ್‌ ವ್ಯೂ ನಾಚ್‌ ಡಿಸ್‌ಪ್ಲೇ ಇದೆ. ಇಷ್ಟೆಲ್ಲಾ ಫೀಚರ್‌ಗಳು 12600 ರೂ.ಗೆ ದೊರಕುವುದು ಬಹಳ ಅಪರೂಪ.

ಹಾಗೆಯೇ, ಮುಖ್ಯವಾಗಿ  ಕೆಲವು ಸ್ಮಾರ್ಟ್‌ಫೋನ್‌ಗಳಿಗೆ ನೀಡಿರುವ ಆಫ‌ರ್‌ಗಳನ್ನು ಇಲ್ಲಿ ನೀಡಿದ್ದೇನೆ. ರೆಡ್‌ಮಿ ನೋಟ್‌ 5 ಪ್ರೊ 4 + 64 ಜಿಬಿ 13 ಸಾವಿರ ದರವಿದ್ದು,  ಆಫ‌ರ್‌ನಲ್ಲಿ 11 ಸಾವಿರಕ್ಕೆ ದೊರಕಲಿದೆ. ಇದಕ್ಕೆ ಎಚ್‌ಡಿಎಫ್ಸಿ ಕಾರ್ಡ್‌ ಮೂಲಕ ಖರೀದಿಸಿದರೆ 10 ಸಾವಿರಕ್ಕೇ ಸಿಗಲಿದೆ. ಸ್ಯಾಮ್ಸಂಗ್‌ ಗೆಲಾಕ್ಸಿ ನೋಟ್‌ 8 ಗೆ 44 ಸಾವಿರ ರೂ. ದರವಿದ್ದು, ಆಫ‌ರ್‌ನಲ್ಲಿ 40 ಸಾವಿರಕ್ಕೆ ದೊರಕಲಿದೆ. ಸ್ಯಾಮ್‌ಸಂಗ್‌ ಗೆಲಾಕ್ಸಿ ಎ8 ಪ್ಲಸ್‌ಗೆ 30ಸಾವಿರ ದರವಿದ್ದು, ಆಫ‌ರ್‌ನಲ್ಲಿ 24 ಸಾವಿರಕ್ಕೆ ದೊರಕಲಿದೆ. 

ವಿವೋ ವಿ9 ಪ್ರೊ ಮೊಬೈಲ್‌ಗೆ 18 ಸಾವಿರ ದರವಿದ್ದು, ಆಫ‌ರ್‌°ಲ್ಲಿ 16 ಸಾವಿರಕ್ಕೆ ದೊರಕಲಿದೆ.  ಒಪ್ಪೋ ಆರ್‌17 ಮೊಬೈಲ್‌ಗೆ 35 ಸಾವಿರ ರೂ. ಇದ್ದು, ಆಫ‌ರ್‌ನಲ್ಲಿ 32 ಸಾವಿರಕ್ಕೆ ದೊರಕಲಿದೆ. ಅಲ್ಲದೇ ನಿಮ್ಮ  ಹಳೆಯ ಮೊಬೈಲ್‌ ಬದಲಿಸಿದರೆ ಕನಿಷ್ಠ 5 ಸಾವಿರ ರೂ. ಬೋನಸ್‌ ದೊರಕುತ್ತದೆ.

ಆನರ್‌ 8ಎಕ್ಸ್‌ ಮೊಬೈಲ್‌ಗೆ 15 ಸಾವಿರ ರೂ. ದರವಿದ್ದು, ಎಚ್‌ಡಿಎಫ್ಸಿ ಕಾರ್ಡ್‌ನಲ್ಲಿ 1500 ರೂ. ಕಡಿಮೆಯಾಗಿ 13500 ರೂ.ಗೆ ದೊರಕುತ್ತದೆ. ನಿಮ್ಮ ಹಳೆಯ ಮೊಬೈಲ್‌ಗೆ ಬದಲಿಸಿದರೆ ಅದಕ್ಕೆ 2 ಸಾವಿರ ರೂ. ಬೋನಸ್‌ ದರವಿರುತ್ತದೆ. ರೆಡ್‌ಮಿ ವೈ 2 32 ಜಿಬಿ ಮಾಡೆಲ್‌ ಮೊಬೈಲ್‌ಗೆ ಈಗ 9 ಸಾವಿರ ರೂ ದರವಿದ್ದು,ಆಫ‌ರ್‌ನಲ್ಲಿ 8 ಸಾವಿರಕ್ಕೆ ಸಿಲಿದೆ. ರೆಡ್‌ಮಿ 6 ಪ್ರೊಗೆ ಹಳೆಯ ಮೊಬೈಲ್‌ ಬದಲಿಸಿ ಕೊಂಡರೆ ಕನಿಷ್ಟ 2 ಸಾವಿರ ರೂ. ಎಕ್ಸ್‌ಟ್ರಾ ಬೋನಸ್‌ ಸಿಗಲಿದೆ. ರಿಯಲ್‌ಮಿ ಯು1 ಮೊಬೈಲ್‌ 3 ಜಿಬಿ ರ್ಯಾಮ್‌ ವರ್ಷನ್‌ಗೆ 12 ಸಾವಿರ ರೂ. ದರವಿದ್ದು, ಅದು 11 ಸಾವಿರಕ್ಕೆ ದೊರಕಲಿದೆ. ಒನ್‌ಪ್ಲಸ್‌ 6 ಟಿ ಯನ್ನು ಕೊಳ್ಳುವಾಗ ನಿಮ್ಮ ಹಳೆಯ ಫೋನ್‌ ಬದಲಿಸಿದರೆ ಹಳೆಯ ಫೋನ್‌ ದರಕ್ಕೆ ಎಕ್ಸ್‌ಟ್ರಾ 2 ಸಾವಿರ ರೂ. ನೀಡಲಾಗುತ್ತದೆ. ಇವೆಲ್ಲಾ ಅಮೆಜಾನ್‌ ನಲ್ಲಿ ದೊರಕುವ ಆಫ‌ರ್‌ಗಳು. ಇಲ್ಲಿ ನೀಡಿರುವುದು ಕೆಲವು ಮೊಬೈಲ್‌ಗ‌ಳ ಆಫ‌ರ್‌ ಮಾತ್ರ. ಇನ್ನೂ ಹಲವಾರಿವೆ. ಅಮೆಜಾನ್‌.ಇನ್‌ ನಲ್ಲಿ ಪರಿಶೀಲಿಸಿ.

ಈಗ ಫ್ಲಿಪ್‌ಕಾರ್ಟ್‌ ಆಫ‌ರ್‌ಗಳ ಬಗ್ಗೆ ನೋಡೋಣ. ಫ್ಲಿಪ್‌ಕಾರ್ಟ್‌ ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ ಮೂಲಕ ಕೊಂಡರೆ ಶೇ. 10ರಷ್ಟು ತಕ್ಷಣದ ರಿಯಾಯಿತಿ ನೀಡುತ್ತದೆ. ಡೆಬಿಟ್‌ ಕಾರ್ಡ್‌ಗೆ ಆಫ‌ರ್‌ ಬಗ್ಗೆ ಆ್ಯಪ್‌ನಲ್ಲಿ ಶುಕ್ರವಾರದವರೆಗೂ ಮಾಹಿತಿ ನೀಡಿರಲಿಲ್ಲ. ಈಗೊಮ್ಮೆ ಪರಿಶೀಲಿಸಿ ನೋಡಿ. ಫ್ಲಿಪ್‌ಕಾರ್ಟ್‌ನಲ್ಲಿ ರೆಡ್‌ಮಿ ನೋಟ್‌ 6 ಪ್ರೊ ಮೊಬೈಲ್‌ಗೆ 64+4 ಜಿಬಿ ವರ್ಷನ್‌ಗೆ 14 ಸಾವಿರ ರೂ. ದರವಿದ್ದು, ಆಫ‌ರ್‌ನಲ್ಲಿ 13 ಸಾವಿರಕ್ಕೆ ದೊರಕಲಿದೆ.   ರಿಯಲ್‌ ಮಿ 2 ಪ್ರೊ 64+4 ಜಿಬಿಗೆ 14 ಸಾವಿರ ದರವಿದ್ದು, ಆಫ‌ರ್‌ನಲ್ಲಿ 13 ಸಾವಿರಕ್ಕೆ ದೊರಕುತ್ತದೆ. ಸ್ಯಾಮ್‌ಸಂಗ್‌ ಗೆಲಾಕ್ಸಿ ಆನ್‌ 6 ಮಾಡೆಲ್‌ 64+4 ಜಿಬಿ 13 ಸಾವಿರ ದರವಿದ್ದು, 10 ಸಾವಿರಕ್ಕೆ ದೊರಕಲಿದೆ. ಆನರ್‌ 9ಎನ್‌ ಮೊಬೈಲ್‌ 32ಜಿಬಿ 3 ಜಿಬಿಗೆ 10 ಸಾವಿರ ದರವಿದ್ದು, ಆಫ‌ರ್‌ನಲ್ಲಿ 8500 ರೂ.ಗೆ ದೊರಕಲಿದೆ. ಮೊಟೊರೊಲಾ ಮೋಟೋ ಒನ್‌ ಪವರ್‌ 4+64 ಜಿಬಿ 15 ಸಾವಿರ ರೂ. ದರವಿದ್ದು, 14 ಸಾವಿರಕ್ಕೆ ದೊರಕಲಿದೆ. ಆಸುಸ್‌ ಝೆನ್‌ಪೋನ್‌ ಮ್ಯಾಕ್ಸ್‌ ಎಂ2 32 ಜಿಬಿ 3 ಜಿಬಿ ರ್ಯಾಮ್‌ಗೆ 10 ಸಾವಿರ ದರವಿದ್ದು 9500 ರೂ.ಗೆ ದೊರಕಲಿದೆ. ಒಪ್ಪೋ ಎಫ್ 9ಗೆ 17 ಸಾವಿರ ದರವಿದ್ದು, ಆಫ‌ರ್‌ ನಲ್ಲಿ 13 ಸಾವಿರ ರೂ.ಗೆ  ದೊರಕುತ್ತದೆ! ಇನ್ನೂ ಅನೇಕ ಆಫ‌ರ್‌ಗಳಿವೆ ಫ್ಲಿಪ್‌ಕಾರ್ಟ್‌ ಆ್ಯಪ್‌ನಲ್ಲಿ ಚೆಕ್‌ ಮಾಡಿ.

– ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

KSRTC

Ticket Price Hike: ನಾಲ್ಕು ನಿಗಮಗಳ ಬಸ್‌ ಪ್ರಯಾಣ ದರ ಇಂದು ಮಧ್ಯರಾತ್ರಿಯಿಂದಲೇ ಹೆಚ್ಚಳ

1-asasa

Viksit Bharat ‘ಯಂಗ್‌ ಲೀಡರ್ ಡೈಲಾಗ್‌’:ಉಡುಪಿಯ ಮನು ಶೆಟ್ಟಿ ಆಯ್ಕೆ

chowta-Rajnath

Request: ಮಂಗಳೂರಿನಲ್ಲಿ ಸೈನಿಕ ಶಾಲೆ, ಮಿಲಿಟರಿ ನೆಲೆ ಸ್ಥಾಪಿಸಿ: ಕ್ಯಾ.ಬ್ರಿಜೇಶ್‌ ಚೌಟ

1-us

Dating Apps; ಯುಎಸ್ ಮಾಡೆಲ್ ಎಂದು 700ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿದವ ಕೊನೆಗೂ ಬಲೆಗೆ

1-car

Mangaluru: ಚಲಿಸುತ್ತಿದ್ದ ಕಾರಿಗೆ ಹೊತ್ತಿಕೊಂಡ ಬೆಂಕಿ

1-sdasad

Shivamogga: ಭದ್ರಾ ಜಲಾಶಯದ ಎಡದಂಡೆ ನಾಲೆಗೆ ಇಂದಿನಿಂದಲೇ ನೀರು

1-atul-subhash

Atul Subhash ಆತ್ಮಹ*ತ್ಯೆ ಪ್ರಕರಣ: ಪತ್ನಿ, ಕುಟುಂಬದವರಿಗೆ ಜಾಮೀನು ಮಂಜೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Belthangady: ಯುವತಿ ನಾಪತ್ತೆ

Belthangady: ಯುವತಿ ನಾಪತ್ತೆ

KSRTC

Ticket Price Hike: ನಾಲ್ಕು ನಿಗಮಗಳ ಬಸ್‌ ಪ್ರಯಾಣ ದರ ಇಂದು ಮಧ್ಯರಾತ್ರಿಯಿಂದಲೇ ಹೆಚ್ಚಳ

ರೈಲಿನಲ್ಲಿ ಹೃದಯಾಘಾತ ಕೇರಳ ಮೂಲದ ವ್ಯಕ್ತಿ ಸಾವು

ರೈಲಿನಲ್ಲಿ ಹೃದಯಾಘಾತ ಕೇರಳ ಮೂಲದ ವ್ಯಕ್ತಿ ಸಾವು

SA vs Pak, 2nd Test: ರಿಕಲ್ಟನ್‌ ದ್ವಿಶತಕ, ದಕ್ಷಿಣ ಆಫ್ರಿಕಾ ಬೃಹತ್‌ ಮೊತ್ತ

SA vs Pak, 2nd Test: ರಿಕಲ್ಟನ್‌ ದ್ವಿಶತಕ, ದಕ್ಷಿಣ ಆಫ್ರಿಕಾ ಬೃಹತ್‌ ಮೊತ್ತ

Vitla: ಮಹಿಳೆಗೆ ಹಿಂಸೆ; ಐದು ಮಂದಿ ವಿರುದ್ಧ ಪ್ರಕರಣ

Vitla: ಮಹಿಳೆಗೆ ಹಿಂಸೆ; ಐದು ಮಂದಿ ವಿರುದ್ಧ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.