ಧರ್ಮಸ್ಥಳ ಮೇಳದ ಚೌಕಿಗೆ ಡಾ| ಹೆಗ್ಗಡೆ ಭೇಟಿ
Team Udayavani, Jan 21, 2019, 12:50 AM IST
ಕೋಟ: ಸಾರ್ವಜನಿಕ ಕಾರ್ಯಕ್ರಮದ ನಿಮಿತ್ತ ಜ.19ರಂದು ಕುಂದಾಪುರಕ್ಕೆ ಭೇಟಿ ನೀಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ರಾತ್ರಿ ಹಿಂದಿರುಗುವ ಸಂದರ್ಭ ಯಾವುದೇ ಅನಿರೀಕ್ಷಿತವಾಗಿ ಕೋಟ ಹಾಡಿಕೆರೆ ಶನೀಶ್ವರ ದೇಸ್ಥಾನದ ಸಮೀಪ ನಡೆಯುತ್ತಿದ್ದ ಧರ್ಮಸ್ಥಳ ಮೇಳದ ಯಕ್ಷಗಾನ ಪ್ರದರ್ಶನ ಸ್ಥಳಕ್ಕೆ ಭೇಟಿ ನೀಡಿದರು.ನೇರವಾಗಿ ಯಕ್ಷಗಾನ ಮೇಳದ ಚೌಕಿಗೆ ತೆರಳಿದ ಹೆಗ್ಗಡೆಯವರು ಗಣಪತಿಗೆ ವಂದಿಸಿ, ಮೇಳದ ಕಲಾವಿದರಾದ ಕುಂಬ್ಳೆ ಶ್ರೀಧರ ರಾವ್, ಗೋವಿಂದ ಭಟ್ ಸೇರಿದಂತೆ ಎಲ್ಲ ಕಲಾವಿದರನ್ನು ಮಾತನಾಡಿಸಿ. ಯೋಗಕ್ಷೇಮ ಹಾಗೂ ಪ್ರದರ್ಶನದ ಕುರಿತು ವಿಚಾರಿಸಿದರು. ಅನಂತರ ಭಕ್ತರನ್ನು ಆಶೀರ್ವದಿಸಿದರು. ಸೇವಾಕರ್ತರ ಮನವಿಯ ಮೇರೆಗೆ ಅಲ್ಲೇ ಪಕ್ಕದಲ್ಲಿದ್ದ ಶನೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಸೇವಾಕರ್ತರಾದ ರಾಮಸ್ವಾಮಿ ಹಾಗೂ ಕುಟುಂಬದವರು ಮತ್ತು ಮೇಳದ ಪ್ರಬಂಧಕರಾದ ಪುಷ್ಪರಾಜ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ
Sagara: ಕಾಶಿಯಾತ್ರೆಯ ಪ್ಯಾಕೇಜ್ ರೂವಾರಿ ಇನ್ನಿಲ್ಲ; ಮನೆ ಮಾಡಿನಿಂದ ಬಿದ್ದು ಸಾವು
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.